Yoga for Hair care: ಈ ಯೋಗಾಸನ ಮಾಡೋದ್ರಿಂದ ಕೂಡಾ ನಿಮ್ಮ ಕೂದಲು ಸೊಂಪಾಗಿ ಬೆಳೆಯುತ್ತೆ..ಟ್ರೈ ಮಾಡಿ
Nov 14, 2022 11:02 PM IST
ಕೂದಲ ಆರೈಕೆಗೆ ಯೋಗಾಸನ
- ಈ ಯೋಗಾಸನಗಳೊಂದಿಗೆ ಕೆಲವೊಂದು ಆಹಾರಗಳನ್ನು ಸೇವಿಸಿದರೆ ಖಂಡಿತ ನಿಮ್ಮ ಕೂದಲ ಸಮಸ್ಯೆ ದೂರವಾಗುತ್ತದೆ. ನಿಮ್ಮ ಆಹಾರದಲ್ಲಿ ಹೆಚ್ಚು ಡ್ರೈ ಫ್ರೂಟ್ಸ್ ಸೇರಿಸಿ. ಇದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.
ಪ್ರತಿಯೊಂದು ಆರೋಗ್ಯ ಸಮಸ್ಯೆಗೂ ಒಂದೊಂದು ಪರಿಹಾರ ಇದ್ದೇ ಇರುತ್ತದೆ. ಹಾಗೇ ಯೋಗಾಸನದಿಂದ ಕೂಡಾ ಅನೇಕ ಆರೋಗ್ಯ ಸಮಸ್ಯೆಗಳನ್ನು ನಾವು ಪರಿಹರಿಸಿಕೊಳ್ಳಬಹುದು. ಕೂದಲಿಗೆ ಸಂಬಂಧಿಸಿದ ಸಮಸ್ಯೆಗೂ ಯೋಗಾಸನದಿಂದ ಪರಿಹಾರವಿದೆ.
ಬಹಳ ಜನರು ಕೂದಲ ಆರೈಕೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಉತ್ಪನ್ನಗಳನ್ನು ಖರೀದಿಸುತ್ತಾರೆ. ಅಲ್ಲದೆ, ಕೂದಲಿಗೆ ವಿವಿಧ ರೀತಿಯ ಚಿಕಿತ್ಸೆ ನೀಡುವುದು, ಸ್ಪಾಗಳಿಗೆ ಹೋಗುವುದು, ವಿವಿಧ ಎಣ್ಣೆಗಳನ್ನು ಹಚ್ಚುವುದು ಮಾಡುತ್ತಾರೆ. ಆದರೆ ಅದೆಲ್ಲಾ ವ್ಯರ್ಥ ಪ್ರಯತ್ನಗಳನ್ನು ಕಡಿಮೆ ಮಾಡುವುದು ಉತ್ತಮ. ಕೂದಲಿಗೆ ಉತ್ತಮ ಎಣ್ಣೆ ಹಚ್ಚಿ ಉತ್ತಮವಾದ ಆಹಾರಗಳನ್ನು ಸೇವಿಸುವುದರ ಜೊತೆಗೆ ಯೋಗಾಸನದತ್ತ ನೀವು ಗಮನ ನೀಡಿದರೆ ಖಂಡಿತ ನಿಮ್ಮ ಕೂದಲಿನ ಬಹುತೇಕ ಸಮಸ್ಯೆ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು.
ಉಸ್ತ್ರಾಸನ ಅಥವಾ ಒಂಟೆ ಭಂಗಿ, ಶಸಂಕಾಸನ ಅಥವಾ ಮೊಲದ ಭಂಗಿಗಳು ನಿಮ್ಮ ಕೂದಲಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಇದನ್ನು ಯೂಟ್ಯೂಬ್‌ನಲ್ಲಿ ನೋಡಿ ಕಲಿಯುವುದರ ಬದಲಿಗೆ ಪರಿಣಿತರ ಬಳಿ ತರಬೇತಿ ಪಡೆದು ಅಭ್ಯಾಸ ಮಾಡುವುದು ಸೂಕ್ತ. ಈ ಯೋಗಾಭ್ಯಾಸಗಳನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಆದರೆ ತಲೆನೋವು ಅಥವಾ ಮೈಗ್ರೇನ್ ಸಮಸ್ಯೆ ಇರುವವರು ಈ ಯೋಗಾಸನಗಳನ್ನು ಮಾಡಲೇಬೇಡಿ.
ಈ ಯೋಗಾಸನಗಳೊಂದಿಗೆ ಕೆಲವೊಂದು ಆಹಾರಗಳನ್ನು ಸೇವಿಸಿದರೆ ಖಂಡಿತ ನಿಮ್ಮ ಕೂದಲ ಸಮಸ್ಯೆ ದೂರವಾಗುತ್ತದೆ. ನಿಮ್ಮ ಆಹಾರದಲ್ಲಿ ಹೆಚ್ಚು ಡ್ರೈ ಫ್ರೂಟ್ಸ್ ಸೇರಿಸಿ. ಇದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ. ಇದು ಆರೋಗ್ಯಕರವೂ ಆಗಿದೆ. ಅದೇ ರೀತಿ ಡೈರಿ ಉತ್ಪನ್ನಗಳನ್ನು ನೇರವಾಗಿ ಸೇವಿಸುವುದನ್ನು ತಪ್ಪಿಸಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಒಳ್ಳೆಯ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ಮೈಲ್ಡ್ ಶಾಂಪೂನಿಂದ ಕೂದಲನ್ನು ತೊಳೆಯಿರಿ. ಕೂದಲನ್ನು ಒಣಗಿಸಲು ಡ್ರೈಯರ್ ಬಳಸದೆ, ಬಿಸಿಲಿನಲ್ಲಿ ಒಣಗಿಸುವ ಅಭ್ಯಾಸ ಮಾಡಿಕೊಳ್ಳಿ. ಆದಷ್ಟು ರಾಸಾಯನಿಕಯುಕ್ತ ಶಾಂಪೂ ಬಳಸುವುದನ್ನು ಕಡಿಮೆ ಮಾಡಿ ಸೀಗೆಪುಡಿ, ಅಂಟುವಾಳದಂತಹ ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ಕೂದಲನ್ನು ತೊಳೆಯಿರಿ.
ವಿಭಾಗ