logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಾಡಿಗೆ ಮನೆ ಹುಡುಕಾಟ; ಬಾಯ್‌ಫ್ರೆಂಡ್ ಇದ್ದಾನಾ, ಸೀರಿಯಸ್ ಆಗಿ ಕೇಳ್ತಿದ್ದೇನೆ ಎಂಬ ಪ್ರಶ್ನೆಗೆ ಬೇಸ್ತು ಬಿದ್ದ ಬೆಂಗಳೂರು ಯುವತಿ

ಬಾಡಿಗೆ ಮನೆ ಹುಡುಕಾಟ; ಬಾಯ್‌ಫ್ರೆಂಡ್ ಇದ್ದಾನಾ, ಸೀರಿಯಸ್ ಆಗಿ ಕೇಳ್ತಿದ್ದೇನೆ ಎಂಬ ಪ್ರಶ್ನೆಗೆ ಬೇಸ್ತು ಬಿದ್ದ ಬೆಂಗಳೂರು ಯುವತಿ

Umesh Kumar S HT Kannada

Dec 16, 2024 02:01 PM IST

google News

ಬಾಡಿಗೆ ಮನೆ ಹುಡುಕಾಟ; ಬಾಯ್‌ಫ್ರೆಂಡ್ ಇದ್ದಾನಾ, ಸೀರಿಯಸ್ ಆಗಿ ಕೇಳ್ತಿದ್ದೇನೆ ಎಂದ ಬಾಡಿಗೆ ಮನೆ ಹಂಚಿಕೊಳ್ಳುವ ಯುವತಿಯ ಮಾತುಗಳಿಂದ ಬೇಸ್ತು ಬಿದ್ದ ಬೆಂಗಳೂರು ಯುವತಿ.(ಸಾಂಕೇತಿಕ ಚಿತ್ರ)

  • ಬಾಡಿಗೆ ಮನೆ ಹುಡುಕಾಟ ಒಂದು ರೀತಿಯ ಪರದಾಟವೂ ಆಗಬಹುದು. ಅಂತಹ ಒಂದು ಅನುಭವ ಗುರುಗ್ರಾಮದಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದ ಬೆಂಗಳೂರು ಯುವತಿಗೆ ಆಗಿದೆಯಂತೆ. ಬಾಯ್‌ಫ್ರೆಂಡ್ ಇದ್ದಾನಾ, ಸೀರಿಯಸ್ ಆಗಿ ಕೇಳ್ತಿದ್ದೇನೆ ಎಂಬ ಪ್ರಶ್ನೆ ಮತ್ತು ನಂತರದ ಮಾತುಕತೆ ಬೇಸ್ತು ಬೀಳುವಂತೆ ಮಾಡಿತು ಎಂದು ಆಕೆ ಟ್ವೀಟ್ ಮಾಡಿಕೊಂಡಿದ್ದಾರೆ.

ಬಾಡಿಗೆ ಮನೆ ಹುಡುಕಾಟ; ಬಾಯ್‌ಫ್ರೆಂಡ್ ಇದ್ದಾನಾ, ಸೀರಿಯಸ್ ಆಗಿ ಕೇಳ್ತಿದ್ದೇನೆ ಎಂದ ಬಾಡಿಗೆ ಮನೆ ಹಂಚಿಕೊಳ್ಳುವ ಯುವತಿಯ ಮಾತುಗಳಿಂದ ಬೇಸ್ತು ಬಿದ್ದ ಬೆಂಗಳೂರು ಯುವತಿ.(ಸಾಂಕೇತಿಕ ಚಿತ್ರ)
ಬಾಡಿಗೆ ಮನೆ ಹುಡುಕಾಟ; ಬಾಯ್‌ಫ್ರೆಂಡ್ ಇದ್ದಾನಾ, ಸೀರಿಯಸ್ ಆಗಿ ಕೇಳ್ತಿದ್ದೇನೆ ಎಂದ ಬಾಡಿಗೆ ಮನೆ ಹಂಚಿಕೊಳ್ಳುವ ಯುವತಿಯ ಮಾತುಗಳಿಂದ ಬೇಸ್ತು ಬಿದ್ದ ಬೆಂಗಳೂರು ಯುವತಿ.(ಸಾಂಕೇತಿಕ ಚಿತ್ರ) (Pexels)

ನವದೆಹಲಿ: ಬೆಂಗಳೂರು, ಮಂಗಳೂರು, ಮೈಸೂರು ಅಥವಾ ದೆಹಲಿ, ಗುರುಗ್ರಾಮವೇ ಇರಲಿ. ಎಲ್ಲೇ ಹೋದರೂ ಬಾಡಿಗೆ ಮನೆ ಹುಡುಕಾಟ ಹಲವು ಅನುಭವಗಳನ್ನು ಕೊಡುವಂಥದ್ದು. ಕೆಲವೊಮ್ಮೆ ಅದೊಂದು ರೀತಿಯ ಪರದಾಟವೂ ಆಗಿಬಿಡುವುದಿದೆ. ವಿಲಕ್ಷಣ ಅನುಭವವನ್ನೂ ಕೊಡುತ್ತದೆ. ಅಂಥದ್ದೇ ಒಂದು ಅನುಭವದ ಕಥೆಯನ್ನು ಬೆಂಗಳೂರಿನ ಯುವತಿ ಹಂಚಿಕೊಂಡಿದ್ದಾರೆ. ಗುರುಗ್ರಾಮದಲ್ಲಿ ಬಾಡಿಗೆ ಮನೆ ಹುಡುಕಾಟದ ವೇಳೆ ಆದ ವಿಚಿತ್ರ ಅನುಭವವನ್ನು ಬೆಂಗಳೂರಿನ ಯುವತಿಯೊಬ್ಬರು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಶೇರ್ ಮಾಡಿದ್ದಾರೆ. ಇದು ಸಾಮಾಜಿಕ ಕಟ್ಟುಪಾಡು ಮತ್ತು ವೈಯಕ್ತಿಕ ಗೌಪ್ಯತೆ ವಿಚಾರ ಚರ್ಚೆಗೆ ಒಳಗಾಗುವಂತೆ ಮಾಡಿದೆ.

ಬಾಯ್‌ಫ್ರೆಂಡ್ ಇದ್ದಾನಾ, ಸೀರಿಯಸ್ ಆಗಿ ಕೇಳ್ತಿದ್ದೇನೆ…

ಬೆಂಗಳೂರು ಮೂಲದ ಯುವತಿ ಶಿವಾಂಗಿ ಷಾ ಅವರು ಗುರುಗ್ರಾಮಕ್ಕೆ ಉದ್ಯೋಗ ನಿಮಿತ್ತ ತೆರಳಿದ್ದು, ಅಲ್ಲಿ ಬಾಡಿಗೆ ಮನೆ ಹುಡುಕಾಟ ನಡೆಸುತ್ತಿರುವಾಗ ಆದ ವಿಲಕ್ಷಣ ಅನುಭವವನ್ನು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರ ಜತೆಗೆ ಚಾಟ್‌ನ ಸ್ಕ್ರೀನ್ ಶಾಟ್‌ ಅನ್ನೂ ಶೇರ್ ಮಾಡಿದ್ದಾರೆ. ಡಿಸೆಂಬರ್ 9 ರಂದು ಈ ಪೋಸ್ಟ್ ಮಾಡಿದ್ದು, 86 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಬಹಳಷ್ಟು ಜನ ಇದಕ್ಕೆ ಪ್ರತಿಕ್ರಿಯಿಸಿದ್ದು, ಸಾಮಾಜಿಕ ಕಟ್ಟುಪಾಡು, ವೈಯಕ್ತಿಕ ಗೌಪ್ಯತೆ ವಿಚಾರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಚಾಟ್‌ನಲ್ಲಿ ಬಾಡಿಗೆಗೆ ಮನೆ ಒದಗಿಸುವ ಯುವತಿಯ ಬಳಿ ಶಿವಾಂಗಿ ಷಾ ಬಾಡಿಗೆ ಮನೆ ಬೇಕು ಎಂದಿದ್ದಾರೆ. ಆಕೆ ಡೇಟ್‌ ಇದೆಯಾ ಎಂದು ಕೇಳಿದ್ದಾರೆ. ಆಗ ಶಿವಾಂಗಿ ಷಾ, ಬಾಡಿಗೆ ಮನೆಗೆ ಶಿಫ್ಟ್ ಆಗುವುದಕ್ಕಾ, ಹಾಗಾದ್ರೆ ಡಿಸೆಂಬರ್ ಕೊನೆಯ ವಾರ ಅಥವಾ ಜನವರಿ ಮೊದಲ ವಾರದಲ್ಲಿ ಬರ್ತೇನೆ ಎಂದಿದ್ದಾರೆ. ಅದಕ್ಕೆ ಆ ಯುವತಿಯು, ಅದಲ್ಲ ಬಾಯ್‌ ಫ್ರೆಂಡ್ ಇದ್ದಾನಾ? ಎಂದು ಕೇಳಿದ್ದಾರೆ. ಅದಕ್ಕೆ ಶಿವಾಂಗಿ ಷಾ ಅವರು ಇದ್ದಾನೆ. ಆತ ಗುರುಗ್ರಾಮದಿಂದ ಹೊರಗಿದ್ದಾನೆ ಎಂದು ಉತ್ತರಿಸಿದ್ದಾರೆ. ಅದಕ್ಕೆ ಆ ಯುವತಿಯು ಆ ರಿಲೇಷನ್ ಶಿಪ್ “ಸೀರಿಯಸ್‌” ಆಗಿರುವಂಥದ್ದಾ ಎಂದು ಕೇಳಿದ್ದಾಳೆ. ಅದಕ್ಕೆ ಶಿವಾಂಗಿ ಷಾ, ಹೌದು ಎಂದು ಉತ್ತರಿಸಿದ್ದಾರೆ. ಕೂಡಲೇ ಆ ಯುವತಿಯು ನನಗೆ ಸೀರಿಯಸ್ ಆಗಿ ಪ್ರೇಮಿಸುವಂಥವರು ಫ್ಲ್ಯಾಟ್‌ಮೇಟ್ ಆಗಿ ಬೇಕಾಗಿಲ್ಲ. ಟೈಮ್ ಪಾಸ್‌ಗೆ ಲವ್ ಮಾಡ್ತಿರೋ ಯುವತಿಯರು ಫ್ಲ್ಯಾಟ್‌ಮೇಟ್ ಆಗಿ ಬೇಕಾಗಿರುವಂಥದ್ದು ಎಂದು ಹೇಳಿರುವುದು ಚಾಟ್‌ ಸ್ಕ್ರಿನ್ ಶಾಟ್‌ನಲ್ಲಿ ಕಂಡುಬಂದಿದೆ.

ಈ ಸ್ಕ್ರೀನ್ ಶಾಟ್‌ ಜತೆಗೆ ಗುರುಗ್ರಾಮದಲ್ಲಿ ಮನೆ ಹುಡುಕುವುದು ಭಯಂಕರ ಎಂದು ಶಿವಾಂಗಿ ಷಾ ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ಹೀಗಿದೆ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ಹೀಗಿದೆ

ಬೆಂಗಳೂರು ಮೂಲದ ಶಿವಾಂಗಿ ಶಾ ಅವರ ಟ್ವೀಟ್ ಅನೇಕರನ್ನು ಗೊಂದಲಕ್ಕೆ ತಳ್ಳಿದರೆ, ಹಲವರನ್ನು ದಿಗ್ಭ್ರಾಂತಿಗೀಡಾಗುವಂತೆ ಮಾಡಿದೆ. ಈ ಟ್ವೀಟ್ ಬಹುಬೇಗ ವೈರಲ್ ಆಗಿದ್ದು, ವಿಚಿತ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. 750ಕ್ಕೂ ಹೆಚ್ಚು ಬಳಕೆದಾರರು ಲೈಕ್ ಮಾಡಿದರೆ, 55ಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದು, ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್‌ ಮಾಡಿದ್ದಾರೆ. ಆ ಯುವತಿ ಹುಕ್‌ ಅಪ್ ಯಾರ ಜತೆಗೆ ಮಾಡ್ತಾರಂತೆ ನಿಮ್ಮ ಜತೆಗಾ ಅಥವಾ ನಿಮ್ಮ ಬಾಯ್‌ಫ್ರೆಂಡ್ ಜತೆಗಾ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಈ ಜಗತ್ತಿನಲ್ಲಿ ಏನೇನು ನಡೆಯುತ್ತಿದೆ ನೋಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಜಾಗೃತ ಮನಸ್ಸುಗಳು ಇದನ್ನು ಅರಿಯಬೇಕು. ಇತರರ ಬಗ್ಗೆ ಗೌರವ ಇಲ್ಲದವರು ಈ ರೀತಿ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ