logo
ಕನ್ನಡ ಸುದ್ದಿ  /  ಜೀವನಶೈಲಿ  /  ವೈರಲ್‌ ವಿಡಿಯೋ: ಮನಾಲಿ ಹಿಮದಲ್ಲಿ ಜಾರಿ ಹೋದ ಕಾರು, ಚಳಿಗಾಲದಲ್ಲಿ ವಾಹನ ಚಾಲನೆ ಹುಷಾರು, ಈ ಟಿಪ್ಸ್‌ ಪಾಲಿಸಿದ್ರೆ ಸೇಫ್‌

ವೈರಲ್‌ ವಿಡಿಯೋ: ಮನಾಲಿ ಹಿಮದಲ್ಲಿ ಜಾರಿ ಹೋದ ಕಾರು, ಚಳಿಗಾಲದಲ್ಲಿ ವಾಹನ ಚಾಲನೆ ಹುಷಾರು, ಈ ಟಿಪ್ಸ್‌ ಪಾಲಿಸಿದ್ರೆ ಸೇಫ್‌

Praveen Chandra B HT Kannada

Dec 10, 2024 01:33 PM IST

google News

ವೈರಲ್‌ ವಿಡಿಯೋ: ಮನಾಲಿ ಹಿಮದಲ್ಲಿ ಜಾರಿ ಹೋದ ಕಾರು, ಚಳಿಗಾಲದಲ್ಲಿ ವಾಹನ ಚಾಲನೆ ಮಾಡಲು ಉಪಯುಕ್ತ ಸಲಹೆಗಳು

    • How to drive better in the winter? ಇತ್ತೀಚೆಗೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಕಾರೊಂದು ಹಿಮದಲ್ಲಿ ಜಾರಿ ಹೋದ ವಿಡಿಯೋ ವೈರಲ್‌ ಆಗಿತ್ತು. ಮನಾಲಿಯಲ್ಲಿ ಈ ಘಟನೆ ನಡೆದಿತ್ತು. ಚಳಿಗಾಲದಲ್ಲಿ ಕಾರು ಚಾಲನೆ ಮಾಡುವಾಗ ವಹಿಸಬೇಕಾದ ಎಚ್ಚರಿಕೆಯನ್ನು ಈ ಘಟನೆ ನೆನಪಿಸಿದೆ. ಹಿಮವಿರುವ ಸ್ಥಳಗಳು ಸೇರಿದಂತೆ ಚಳಿಗಾಲದಲ್ಲಿ ನಿಮ್ಮ ವಾಹನ ಚಾಲನೆ ಹೀಗಿರಲಿ.
ವೈರಲ್‌ ವಿಡಿಯೋ: ಮನಾಲಿ ಹಿಮದಲ್ಲಿ ಜಾರಿ ಹೋದ ಕಾರು, ಚಳಿಗಾಲದಲ್ಲಿ ವಾಹನ ಚಾಲನೆ ಮಾಡಲು ಉಪಯುಕ್ತ ಸಲಹೆಗಳು
ವೈರಲ್‌ ವಿಡಿಯೋ: ಮನಾಲಿ ಹಿಮದಲ್ಲಿ ಜಾರಿ ಹೋದ ಕಾರು, ಚಳಿಗಾಲದಲ್ಲಿ ವಾಹನ ಚಾಲನೆ ಮಾಡಲು ಉಪಯುಕ್ತ ಸಲಹೆಗಳು (Twitter/@GoHimachal_)

ಹಿಮಾಚಲ ಪ್ರದೇಶದ ಮನಾಲಿಯ ಮಂಜು ಆವರಿಸಿದ ರಸ್ತೆಯಲ್ಲಿ ಕಾರೊಂದು ನಿಯಂತ್ರಣಕ್ಕೆ ಸಿಗದೆ ಜಾರುತ್ತ ಸಾಗಿದ ವಿಡಿಯೋವೊದು ಇತ್ತೀಚೆಗೆ ವೈರಲ್‌ ಆಗಿದೆ. ವಿಂಟರ್‌ನಲ್ಲಿ ವಾಹನ ಚಾಲನೆ ಮಾಡುವಾಗ ಎದುರಾಗಬಹುದಾದ ಅಪಾಯಗಳನ್ನು ಈ ಘಟನೆ ನೆನಪಿಸಿದೆ. ವಿಶೇಷವಾಗಿ ಹಿಮ ಬೀಳುವ ಪ್ರದೇಶಗಳಲ್ಲಿ, ಗುಡ್ಡಗಾಡುಗಳ ನಡುವಿನ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಸಾಕಾಗದು. ಚಳಿಗಾಲದಲ್ಲಿ ಅಪಘಾತಗಳನ್ನು ತಪ್ಪಿಸಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮತ್ತು ಸುರಕ್ಷಿತ ಚಾಲನೆ ಅಭ್ಯಾಸಗಳನ್ನು ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ. ಈ ಚಳಿಗಾಲದಲ್ಲಿ ನಿಮ್ಮ ಸುರಕ್ಷಿತ ಪ್ರಯಾಣಕ್ಕಾಗಿ ಈ ಸಲಹೆಗಳನ್ನು ಗಮನಿಸಿ.

ಮೆಲ್ಲಗೆ ಬ್ರೇಕ್ ಹಾಕಿ

ಹಿಮಭರಿತ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಭಯದಲ್ಲಿ ಗಟ್ಟಿಯಾಗಿ ಬ್ರೇಕ್‌ ಹಾಕುವ ತಪ್ಪನ್ನು ಸಾಕಷ್ಟು ಚಾಲಕರು ಮಾಡುತ್ತಾರೆ. ಈ ರೀತಿ ಮಾಡಿದರೆ ಹಿಮಬಿದ್ದ ರಸ್ತೆಯಲ್ಲಿ ಟೈರ್‌ಗಳು ಲಾಕ್‌ ಆಗಿ ಜಾರುತ್ತವೆ. ಈ ಸಂದರ್ಭದಲ್ಲಿ ಎಬಿಎಸ್‌ ಕೂಡ ಸಹಾಯ ಮಾಡುವುದಿಲ್ಲ. ಗಟ್ಟಿಯಾಗಿ ಬ್ರೇಕ್‌ ಹಾಕಿದಾಗ ಕಾರು ಜಾರುತ್ತ ಮುಂದೆ ಸಾಗಬಹುದು. ಇದರ ಬದಲು ನಿಧಾನವಾಗಿ ಅಥವಾ ಲಘುವಾಗಿ ಬ್ರೇಕ್‌ ಹಾಕಿ. ಅಂದಹಾಗೆ, ಮುಂಭಾಗದಲ್ಲಿರುವ ವಾಹನದಿಂದ ಸಾಕಷ್ಟು ದೂರದಲ್ಲಿ ಚಾಲನೆ ಮಾಡಿ. ಅಂದರೆ, ನಿಮ್ಮ ಮುಂದಿರುವ ವಾಹನದಿಂದ ಸಾಕಷ್ಟು ಅಂತರ ಕಾಯ್ದುಕೊಳ್ಳಿ.

ಟೈರ್ ಒತ್ತಡವನ್ನು ಕಡಿಮೆ ಮಾಡಿ

ಟೈರ್ ಒತ್ತಡವನ್ನು ಕಡಿಮೆ ಮಾಡುವುದರಿಂದ ಟೈರ್‌ನ ಕಾಂಟ್ಯಾಕ್ಟ್ ಪ್ಯಾಚ್ ಹೆಚ್ಚಿಸಲು ನೆರವಾಗುತ್ತದೆ. ಫುಲ್‌ ಗಾಳಿ ತುಂಬಿದರೆ ಜಾರುವ ಅಪಾಯ ಹೆಚ್ಚು. ಹೀಗಾಗಿ ಹಿಮಭರಿತ ರಸ್ತೆಗಳಲ್ಲಿ ಸಾಗುವಾಗ ಟೈರ್‌ನಲ್ಲಿ ಏರ್‌ ಫ್ಲೆಷರ್‌ ಕಡಿಮೆ ಇರಲಿ. ಗಾಳಿ ಒತ್ತಡ ಜಾಸ್ತಿಯಿದ್ದರೆ ವಾಹನ ಸ್ಕಿಡ್‌ ಆಗುವ ಸಾಧ್ಯತೆ ಇದೆ.

ಸ್ಮೂತ್‌ ಆಗಿ ಚಾಲನೆ ಮಾಡಿ

ಹಿಮದಲ್ಲಿ ಚಾಲನೆ ಮಾಡಲು ಗೊತ್ತಿಲ್ಲದವರು ಮೊದಲಿಗೆ ಗಮನಿಸಬೇಕಾದ ಅಂಶ ಸ್ಮೂತ್‌. ಯಾವುದೇ ಕಾರಣಕ್ಕೆ ಚಾಲಕನು ಗಟ್ಟಿಯಾಗಿ ಬ್ರೇಕ್‌ ಹಾಕಬಾರದು. ಆಕ್ರಮಣಕಾರಿಯಾಗಿ ಕಾರನ್ನು ತಿರುಗಿಸಬಾರದು. ಒಮ್ಮೆಗೆ ವೇಗ ಹೆಚ್ಚಿಸಬಾರದು. ಈ ರೀತಿ ಮಾಡಿದರೆ ಕಾರು ತನ್ನ ನಿಯಂತ್ರಣ ಕಳೆದುಕೊಳ್ಳಬಹುದು. ಇದರೊಂದಿಗೆ ಕಾರಿನ ಥ್ರೋಟಲ್‌ ಅನ್ನು ಮಾಡ್ಯುಲೇಟ್‌ ಮಾಡಲು ಕಲಿಯಬೇಕು.

ಎಂಜಿನ್ ಬ್ರೇಕಿಂಗ್ ಬಳಸಿ

ಹಿಮದ ಮೇಲೆ ಚಾಲನೆ ಮಾಡುವಾಗ ಎಂಜಿನ್ ಬ್ರೇಕಿಂಗ್ ನಿಮ್ಮ ಉತ್ತಮ ಸ್ನೇಹಿತ. ಇದು ವಾಹನವನ್ನು ನಿಧಾನಗೊಳಿಸುತ್ತದೆ. ಸುಗಮವಾಗಿ ಚಾಲನೆ ಮಾಡಲು ನೆರವಾಗುತ್ತದೆ. ಕಡಿಮೆ ಹಂತದ ಗಿಯರ್‌ನಲ್ಲಿ ಚಾಲಕನ್ನು ಕಾರನ್ನು ಸ್ಲಾಟ್‌ ಮಾಡಬೇಕಾಗುತ್ತದೆ. ಎಂಜಿನ್‌ ಬ್ರೇಕಿಂಗ್‌ ಹೇಗೆ ಮಾಡುವುದು ಎಂದು ಯೂಟ್ಯೂಬ್‌ ವಿಡಿಯೋಗಳನ್ನು ನೋಡಿ ಕಲಿಯಬಹುದು.

ಚಳಿಗಾಲದ ಟೈರುಗಳನ್ನು ಅಳವಡಿಸಿ ಮತ್ತು ಹಿಮ ಚೈನ್‌/ಸಂಕೋಲೆ ಅಳವಡಿಸಿ

ನೀವು ಹಿಮ ಪ್ರದೇಶದಲ್ಲಿ ಚಾಲನೆ ಮಾಡಲು ಹೋಗುವುದಾದರೆ ಕಾರಿನ ಟೈರ್‌ಗೆ ಹಿಮ ರಸ್ತೆಗೆ ಸೂಕ್ತವಾದ ಟೈರ್‌ಗಳನ್ನು ಅಳವಡಿಸಬಹುದು. ಇಂತಹ ಟೈರ್‌ಗಳು ಇದ್ದರೆ ಸುಲಭವಾಗಿ ವಾಹನ ನಿಲ್ಲುತ್ತದೆ. ಜಾರುವ ಅಪಾಯ ಕಡಿಮೆಯಾಗುತ್ತದೆ. ಇದರೊಂದಿಗೆ ಹೆಚ್ಚು ಹಿಮ ಇರುವಲ್ಲಿ ಟೈರ್‌ಗಳಿಗೆ ಸ್ನೋ ಚೈನ್‌ಗಳನ್ನು ಅಳವಡಿಸಬಹುದು.

ಚಳಿಗಾಲದಲ್ಲಿ ವಾಹನ ಚಾಲನೆ ಮಾಡಲು ಟಿಪ್ಸ್‌

  1. ಕಾರಿನ ಕನ್ನಡಿಗಳನ್ನು, ಕಿಟಕಿಗಳನ್ನು ಸ್ವಚ್ಛಗೊಳಿಸಿ.
  2. ನಿಧಾನವಾಗಿ ವಾಹನ ಚಾಲನೆ ಮಾಡಿ.
  3. ಲೋ ಬೀಮ್‌ ಬಳಸಿ ವಾಹನ ಚಾಲನೆ ಮಾಡಿ.
  4. ಲೇನ್‌ಗಳನ್ನು ಬದಲಾಯಿಸಿದಾಗ ಇಂಡಿಕೇಟರ್‌ಗಳನ್ನು ಬಳಸಿ.
  5. ರಸ್ತೆಯನ್ನ ಎಚ್ಚರಿಕೆಯಿಂದ ಗಮನಿಸುತ್ತ ಚಾಲನೆ ಮಾಡಿ.
  6. ಚಾಲನೆ ಮಾಡುವಾಗ ಮೊಬೈಲ್‌ ಇತ್ಯಾದಿಗಳನ್ನು ಬಳಸಬೇಡಿ.
  7. ಸೀಟ್‌ ಬೆಲ್ಟ್‌ ಧರಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ