logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬೆಂಗಳೂರು ಮಾಲ್ಡಾ ಟೌನ್ ಬಳಿಕ 50 ಹೊಸ ಅಮೃತ್ ಭಾರತ್ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಸಜ್ಜು; ಸಚಿವ ಅಶ್ವಿನಿ ವೈಷ್ಣವ್ ಸುಳಿವು

ಬೆಂಗಳೂರು ಮಾಲ್ಡಾ ಟೌನ್ ಬಳಿಕ 50 ಹೊಸ ಅಮೃತ್ ಭಾರತ್ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಸಜ್ಜು; ಸಚಿವ ಅಶ್ವಿನಿ ವೈಷ್ಣವ್ ಸುಳಿವು

Umesh Kumar S HT Kannada

Feb 20, 2024 09:04 PM IST

google News

ಬೆಂಗಳೂರು ಮಾಲ್ಡಾ ಟೌನ್ ಬಳಿಕ 50 ಹೊಸ ಅಮೃತ್ ಭಾರತ್ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಸಜ್ಜಾಗಿದೆ. ಸಚಿವ ಅಶ್ವಿನಿ ವೈಷ್ಣವ್ ಈ ವಿಷಯವನ್ನು ದೃಢೀಕರಿಸಿದ್ದಾರೆ.

  • ಬೆಂಗಳೂರು ಮಾಲ್ಡಾ ಟೌನ್ ಬಳಿಕ 50 ಹೊಸ ಅಮೃತ್ ಭಾರತ್ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಸಜ್ಜುಗೊಂಡಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ಸುಳಿವು ನೀಡಿದ್ದು, ಎಕ್ಸ್‌ನಲ್ಲಿ ಇನ್ನಷ್ಟು ವಿವರ ಹಂಚಿಕೊಂಡಿದ್ದಾರೆ.

ಬೆಂಗಳೂರು ಮಾಲ್ಡಾ ಟೌನ್ ಬಳಿಕ 50 ಹೊಸ ಅಮೃತ್ ಭಾರತ್ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಸಜ್ಜಾಗಿದೆ. ಸಚಿವ ಅಶ್ವಿನಿ ವೈಷ್ಣವ್ ಈ ವಿಷಯವನ್ನು ದೃಢೀಕರಿಸಿದ್ದಾರೆ.
ಬೆಂಗಳೂರು ಮಾಲ್ಡಾ ಟೌನ್ ಬಳಿಕ 50 ಹೊಸ ಅಮೃತ್ ಭಾರತ್ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಸಜ್ಜಾಗಿದೆ. ಸಚಿವ ಅಶ್ವಿನಿ ವೈಷ್ಣವ್ ಈ ವಿಷಯವನ್ನು ದೃಢೀಕರಿಸಿದ್ದಾರೆ.

ನವದೆಹಲಿ: ಬೆಂಗಳೂರು ಮಾಲ್ಡಾ ಟೌನ್‌ ನಡುವೆ ಹೊಸ ಅಮೃತ ಭಾರತ್ ರೈಲು ಸೇವೆ ಪರಿಚಯಿಸಿದ ಭಾರತೀಯ ರೈಲ್ವೆಯು ಅಂಥದ್ದೇ 50 ಹೊಸ ಅಮೃತ್‌ ಭಾರತ್ ರೈಲು ಸಂಚಾರ ಆರಂಭಿಸಲು ಸಜ್ಜಾಗಿದೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರು ಈ ವಿಚಾರವನ್ನು ದೃಢೀಕರಿಸಿದ್ದು, ಭಾರತೀಯ ರೈಲ್ವೇಸ್ 50 ಹೊಸ ಅಮೃತ್ ಭಾರತ್ ರೈಲುಗಳನ್ನು ಪರಿಚಯಿಸಲು ನಿರ್ಧರಿಸಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ತಮ್ಮ ಸೂಪರ್‌ಫಾಸ್ಟ್ ಸೇವೆಗಾಗಿ ಪ್ರಶಂಸಿಸಲ್ಪಟ್ಟಿವೆ ಮತ್ತು ಹೆಚ್ಚಿನ ಪ್ರಯಾಣಿಕರ ಸೌಲಭ್ಯಗಳನ್ನು ಹೊಂದಿದೆ ಎಂದು ಸಚಿವ ವೈಷ್ಣವ್ ಹೇಳಿದ್ದಾರೆ.

ಭಾರತದ ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ 50 ಹೊಸ ಅಮೃತ್ ಭಾರತ್ ರೈಲುಗಳು

ಅಮೃತ್ ಭಾರತ್ ರೈಲುಗಳ ಪ್ರಾಯೋಗಿಕ ಸಂಚಾರಕ್ಕೆ ಸಿಕ್ಕ ಅಭೂತಪೂರ್ವ ಯಶಸ್ಸಿನ ಕಾರಣ ಅಂತಹ 50 ಹೊಸ ರೈಲುಗಳನ್ನು ಓಡಿಸುವುದಕ್ಕೆ ಭಾರತೀಯ ರೈಲ್ವೆ ಸಿದ್ಧತೆ ನಡೆಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿದ್ದಾರೆ.

ದರ್ಭಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು ಮಾಲ್ಡಾ ಟೌನ್-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ (ಬೆಂಗಳೂರು) ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಅತ್ಯಂತ ಯಸ್ವಿಯಾಗಿದೆ. ಇದನ್ನು ಪರಿಗಣನೆಗೆ ತೆಗೆದುಕೊಂಡಿರುವ ಭಾರತೀಯ ರೈಲ್ವೆ, ಅದೇ ರೀತಿಯ 50 ಹೆಚ್ಚುವರಿ ರೈಲುಗಳನ್ನು ಓಡಿಸುವುದಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.

ಕೇಂದ್ರ ರೈಲ್ವೇ ಸಚಿವ ಅಶ್ವಿನಿ ಅವರು, ಆರಂಭದ ಎರಡು ರೈಲುಗಳಿಗೆ ಸಿಕ್ಕ ಪ್ರತಿಕ್ರಿಯೆ ಅಭೂತಪೂರ್ವವಾದುದು. ಈ ಸಕಾರಾತ್ಮಕ ಪ್ರತಿಕ್ರಿಯೆ ಕಾರಣ ಭಾರತೀಯ ರೈಲ್ವೆಗೆ ಇನ್ನಷ್ಟು ಅಮೃತ್ ಭಾರತ್ ರೈಲು ಓಡಿಸುವುದಕ್ಕೆ ಉತ್ತೇಜನ ಸಿಕ್ಕಿತು ಎಂದು ಹೇಳಿದರು.

ಅಮೃತ್ ಭಾರತ್ ಎಕ್ಸ್‌ಪ್ರೆಸ್ ವಿಶೇ‍ಷ

ಅಮೃತ್ ಭಾರತ್ ರೈಲುಗಳು, ತಮ್ಮ ಸೂಪರ್‌ಫಾಸ್ಟ್ ಸೇವೆ ಮತ್ತು ಪ್ರಯಾಣಿಕರಿಗೆ ಸಂಬಂಧಿಸಿದ ವರ್ಧಿತ ಸೌಕರ್ಯಗಳಿಗಾಗಿ ಪ್ರಶಂಸಿಸಲ್ಪಟ್ಟವು. ಈ ರೈಲು ಸೇವೆ ಶುರುವಾದ ಅಂದಿನಿಂದಲೂ ವ್ಯಾಪಕ ಮೆಚ್ಚುಗೆಯನ್ನು ಗಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಈ ರೈಲು ಸಂಚಾರಕ್ಕೆ ಚಾಲನೆ ನೀಡಿದರು. ಇವು ರೈಲು ಪ್ರಯಾಣದಲ್ಲಿ ಸೌಕರ್ಯ ಮತ್ತು ದಕ್ಷತೆಗೆ ಹೊಸ ಮಾನದಂಡವನ್ನು ಹುಟ್ಟುಹಾಕಿವೆ.

ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ತಮ್ಮ ನವೀನ ವಿನ್ಯಾಸದೊಂದಿಗೆ ಹೈಸ್ಪೀಡ್ ಪ್ಯಾಸೆಂಜರ್ ರೈಲುಗಳ ಪರಿಕಲ್ಪನೆಯನ್ನು ಸಾಕಾರಗೊಳಿಸಿವೆ. ಲಿಂಕೆ ಹೋಫ್‌ಮನ್‌ ಬುಷ್‌ ( Linke Hofmann Busch (LHB)) ಎಂಬ ಪುಷ್-ಪುಲ್ ಸೆಟಪ್ ಅನ್ನು ಒಳಗೊಂಡಿರುವ ಈ ರೈಲುಗಳು ಹವಾನಿಯಂತ್ರಿತವಲ್ಲದ ಕೋಚ್‌ಗಳನ್ನು ಹೊಂದಿವೆ. ಪ್ರಯಾಣಿಕರಿಗೆ ವಿಶಿಷ್ಟವಾದ ಪ್ರಯಾಣದ ಅನುಭವವನ್ನು ಒದಗಿಸುತ್ತದೆ.

ಈ ವಿನ್ಯಾಸದ ಪ್ರಮುಖ ಮುಖ್ಯಾಂಶವೆಂದರೆ ರೈಲಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಎಂಜಿನ್‌ಗಳ ಉಪಸ್ಥಿತಿ, ವರ್ಧಿತ ದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಸಂರಚನೆಯು ಮುಂಭಾಗದ ಎಂಜಿನ್ ರೈಲನ್ನು ಎಳೆಯಲು ಅನುವು ಮಾಡಿಕೊಡುತ್ತದೆ, ಆದರೆ ಹಿಂಭಾಗದ ಎಂಜಿನ್ ಅದನ್ನು ಮುಂದಕ್ಕೆ ತಳ್ಳಲು ಸಹಾಯ ಮಾಡುತ್ತದೆ, ಸುಗಮ ಮತ್ತು ಪರಿಣಾಮಕಾರಿ ಪ್ರಯಾಣವನ್ನು ಖಚಿತಪಡಿಸುತ್ತದೆ.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ