logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಈ ಕಂಪನಿಯ 10ಸಾವಿರ ಷೇರು ಕೈಯಲ್ಲಿದ್ದಿದ್ದರೆ ಈ ದಿನ 1.9 ಲಕ್ಷ ರೂ ಲಾಭ ಆಗಿರೋದು, ಇದು ಈಗ ಪೆನ್ನಿಸ್ಟಾಕ್ ಹೂಡಿಕೆದಾರರ ಕಣ್ಮಣಿ- Multibagger

ಈ ಕಂಪನಿಯ 10ಸಾವಿರ ಷೇರು ಕೈಯಲ್ಲಿದ್ದಿದ್ದರೆ ಈ ದಿನ 1.9 ಲಕ್ಷ ರೂ ಲಾಭ ಆಗಿರೋದು, ಇದು ಈಗ ಪೆನ್ನಿಸ್ಟಾಕ್ ಹೂಡಿಕೆದಾರರ ಕಣ್ಮಣಿ- Multibagger

Umesh Kumar S HT Kannada

Aug 13, 2024 10:41 AM IST

google News

ಐನಾಕ್ಸ್‌ ವಿಂಡ್‌ - ಈ ಕಂಪನಿಯ 10ಸಾವಿರ ಷೇರು ಕೈಯಲ್ಲಿದ್ದಿದ್ದರೆ ಈ ದಿನ 1.9 ಲಕ್ಷ ರೂ ಲಾಭ ಆಗಿರೋದು, ಇದು ಈಗ ಪೆನ್ನಿಸ್ಟಾಕ್ ಹೂಡಿಕೆದಾರರ ಕಣ್ಮಣಿಯಾಗಿಬಿಟ್ಟಿದೆ.

  • Inox wind share price; ಷೇರುಪೇಟೆ ಹೂಡಿಕೆಗೆ ವಿಶೇಷ ಪರಿಣತಿಬೇಕು. ಅಂತಹ ಪರಿಣತಿ ಪಡೆದವರು ಮಲ್ಟಿಬ್ಯಾಗರ್, ಪೆನ್ನಿಸ್ಟಾಕ್‌ಗಳ ಕಡೆಗೂ ಗಮನಹರಿಸುತ್ತಾರೆ. ಈ ದಿನ ಇಂತಹ ಹೂಡಿಕೆದಾರರ ಗಮನಸೆಳದ ಷೇರು ಇದು. ಈ ಕಂಪನಿಯ 10 ಸಾವಿರ ಷೇರು ಕೈಯಲ್ಲಿದ್ದಿದ್ದರೆ ಈ ದಿನ 1.9 ಲಕ್ಷ ರೂ ಲಾಭ ಆಗಿರೋದು! ಇದು ಈಗ ಪೆನ್ನಿ ಸ್ಟಾಕ್ ಹೂಡಿಕೆದಾರರ ಕಣ್ಮಣಿಯಾಗಿಬಿಟ್ಟಿದೆ. 

ಐನಾಕ್ಸ್‌ ವಿಂಡ್‌ - ಈ ಕಂಪನಿಯ 10ಸಾವಿರ ಷೇರು ಕೈಯಲ್ಲಿದ್ದಿದ್ದರೆ ಈ ದಿನ 1.9 ಲಕ್ಷ ರೂ ಲಾಭ ಆಗಿರೋದು, ಇದು ಈಗ ಪೆನ್ನಿಸ್ಟಾಕ್ ಹೂಡಿಕೆದಾರರ ಕಣ್ಮಣಿಯಾಗಿಬಿಟ್ಟಿದೆ.
ಐನಾಕ್ಸ್‌ ವಿಂಡ್‌ - ಈ ಕಂಪನಿಯ 10ಸಾವಿರ ಷೇರು ಕೈಯಲ್ಲಿದ್ದಿದ್ದರೆ ಈ ದಿನ 1.9 ಲಕ್ಷ ರೂ ಲಾಭ ಆಗಿರೋದು, ಇದು ಈಗ ಪೆನ್ನಿಸ್ಟಾಕ್ ಹೂಡಿಕೆದಾರರ ಕಣ್ಮಣಿಯಾಗಿಬಿಟ್ಟಿದೆ.

ಮುಂಬಯಿ: ಷೇರುಪೇಟೆಯಲ್ಲಿ ಇಂದು ಗ್ರೀನ್‌ ಎನರ್ಜಿ ಕಂಪನಿ ಐನಾಕ್ಸ್ ವಿಂಡ್‌ ಕಂಪನಿಯ ಷೇರುಗಳು ಮಲ್ಟಿಬ್ಯಾಗರ್ ಷೇರುಗಳ ಹೂಡಿಕೆದಾರರ ಗಮನಸೆಳೆದಿದೆ. ಕಾರಣ ಇಷ್ಟೆ ಅದ ಮೌಲ್ಯ ಇಂದು ಶೇಕಡ 8.63 ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟ 226.50 ರೂಪಾಯಿಗೆ ತಲುಪಿದೆ.

ಈ ಏರಿಕೆಗೆ ಕಾರಣ ಹುಡುಕುವುದಾದರೆ, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಸೇವೆ ಸಲ್ಲಿಸುವ ಪ್ರಮುಖ ಕಂಪನಿಯಾಗಿರುವ ಎವರ್‌ರಿನ್ಯೂ ಎನರ್ಜಿಯಿಂದ 51 ಮೆಗಾವ್ಯಾಟ್‌ಗೆ ಆರ್ಡರ್ ಪಡೆದಿರುವುದಾಗಿ ಕಂಪನಿ ಮಂಗಳವಾರ (ಆಗಸ್ಟ್ 13) ಘೋಷಿಸಿತು. ಹೀಗಾಗಿ ಐನಾಕ್ಸ್ ವಿಂಡ್ ಕಂಪನಿ ಷೇರು ಮೌಲ್ಯ ದಿಢೀರ್‌ ದೊಡ್ಡ ಪ್ರಮಾಣದ ಏರಿಕೆ ಕಂಡಿತು.

ಐನಾಕ್ಸ್ ವಿಂಡ್ ಷೇರುಗಳು ಇಂದು 217.89 ರೂಪಾಯಿಯೊಂದಿಗೆ ವಹಿವಾಟು ಶುರು ಮಾಡಿತ್ತು. ಕೆಲವೇ ನಿಮಿಷಗಳಲ್ಲಿ ಇದರ ಮೌಲ್ಯ ದಾಖಲೆಯ ಗರಿಷ್ಠ ಮಟ್ಟ 236.95 ರೂಪಾಯಿ ತಲುಪಿತು. ಅಂದರೆ 19 ರೂಪಾಯಿ ಚಿಲ್ಲರೆ ಅದರ ಮೌಲ್ಯ ಹೆಚ್ಚಳವಾಯಿತು. ಒಂದೊಮ್ಮೆ 10,000 ಷೇರು ಕೈಯಲ್ಲಿದ್ದಿದ್ದರೆ ಇದರ ಮೌಲ್ಯ 1.9 ಲಕ್ಷ ರೂಪಾಯಿ ಹೆಚ್ಚಾಗಿರೋದು!

ಹೆಚ್ಚಾಗುತ್ತಲೇ ಇದೆ ಐನಾಕ್ಸ್ ವಿಂಡ್ ಷೇರು ಮೌಲ್ಯ

ಐನಾಕ್ಸ್ ವಿಂಡ್‌ ಕಂಪನಿಯ ಮಾರುಕಟ್ಟೆ ಮೌಲ್ಯ ಕೂಡ 29.70 ಸಾವಿರ ಕೋಟಿ ರೂಪಾಯಿ ಆಗಿದೆ. ಕಳೆದ ಒಂದು ವರ್ಷದಲ್ಲಿ ಐನಾಕ್ಸ್ ವಿಂಡ್ ಷೇರುಗಳ ಮೌಲ್ಯ 50.29 ರೂಪಾಯಿ ಇದ್ದದ್ದು 235 ರೂಪಾಯಿಗೆ ಏರಿದೆ. ಈ ಅವಧಿಯಲ್ಲಿ ಇದು ಸುಮಾರು 370 ಪ್ರತಿಶತದಷ್ಟು ಮಲ್ಟಿಬ್ಯಾಗರ್ ಆದಾಯವನ್ನು ನೀಡಿದೆ. ಇಂದು ಬೆಳಗ್ಗೆ 9:33ರ ವೇಳೆಗೆ 236 ರೂ.ಗಳ ಮಟ್ಟವನ್ನೂ ದಾಟಿತ್ತು. ಈ ವರ್ಷ ಇದುವರೆಗೆ ಸುಮಾರು 78 ಪ್ರತಿಶತದಷ್ಟು ಆದಾಯವನ್ನು ನೀಡಿದೆ.

ಕಳೆದ ವಾರ, ಇಂಟೆಗ್ರಮ್ ಎನರ್ಜಿಯಿಂದ 201 ಮೆಗಾವ್ಯಾಟ್ ಉಪಕರಣಗಳನ್ನು ಪೂರೈಸಲು ಐನಾಕ್ಸ್ ವಿಂಡ್‌ ಕಂಪನಿ ಆರ್ಡರ್ ಸ್ವೀಕರಿಸಿತ್ತು.

ಐನಾಕ್ಸ್ ವಿಂಡ್ ಲಿಮಿಟೆಡ್ ಮಂಗಳವಾರ (ಆಗಸ್ಟ್ 13) ಎವರ್‌ರಿನ್ಯೂ ಕಂಪನಿಯಿಂದ 3 ಮೆಗಾವ್ಯಾಟ್ ಕ್ಲಾಸ್ ವಿಂಡ್ ಟರ್ಬೈನ್ ಜನರೇಟರ್‌ಗಳಿಗೆ (ಡಬ್ಲ್ಯೂಟಿಜಿ) 51 ಮೆಗಾವ್ಯಾಟ್ ಉಪಕರಣಗಳ ಪೂರೈಕೆ ಆರ್ಡರ್‌ ಪಡೆದಿರುವ ಕುರಿತು ಕಂಪನಿಯು ಷೇರುವಹಿವಾಟು ನಿಯಂತ್ರಕ ಸಂಸ್ಥೆಗಳಿಗೆ ಮಾಹಿತಿ ನೀಡಿದೆ.

ಈ ಯೋಜನೆಯನ್ನು ತಮಿಳುನಾಡಿನಲ್ಲಿ ಸ್ಥಾಪಿಸಲಾಗುವುದು. ಆದೇಶಕ್ಕೆ ಸಂಬಂಧಿಸಿದಂತೆ ಕಂಪನಿಯು ಕಾರ್ಯಾರಂಭದ ನಂತರ ಬಹು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಸೇವೆಯನ್ನು ಸಹ ನೀಡುತ್ತದೆ ಎಂದು ಹೇಳಿದೆ.

ಐನಾಕ್ಸ್ ವಿಂಡ್‌ ಷೇರು ಖರೀದಿಸಿ, ಮಾರಾಟ ಮಾಡಿ ಅಥವಾ ಉಳಿಸಬಹುದು

ಓರಿಯನ್‌ಪ್ರೊ ಸೊಲ್ಯೂಷನ್ಸ್, ಬಜಾಜ್ ಹಿಂದೂಸ್ತಾನ್ ಶುಗರ್, ಐನಾಕ್ಸ್ ಗ್ರೀನ್ ಎನರ್ಜಿ ಸರ್ವಿಸಸ್, ಹೆರಿಟೇಜ್ ಫುಡ್ಸ್, ಗಲ್ಫ್ ಆಯಿಲ್ ಲೂಬ್ರಿಕಂಟ್‌ಗಳು, ಶಕ್ತಿ ಪಂಪ್‌ಗಳು, ಐನಾಕ್ಸ್ ವಿಂಡ್ ಎನರ್ಜಿ, ಮ್ಯಾಕ್ಸ್ ಎಸ್ಟೇಟ್‌ಗಳು ಸೇರಿದಂತೆ 25 ಸ್ಟಾಕ್‌ಗಳನ್ನು ಎಂಎಸ್‌ಸಿಐ ಇಂಡಿಯಾ ಡೊಮೆಸ್ಟಿಕ್ ಸ್ಮಾಲ್‌ಕ್ಯಾಪ್ ಇಂಡೆಕ್ಸ್‌ನಲ್ಲಿ ಸೇರಿಸಲಾಗಿದೆ.

ಐನಾಕ್ಸ್ ವಿಂಡ್ ಷೇರುಗಳನ್ನು ಆರು ವಿಶ್ಲೇಷಕರಲ್ಲಿ ಐವರು ಸ್ಟಾಕ್‌ನಲ್ಲಿ "ಖರೀದಿ" ರೇಟಿಂಗ್ ಅನ್ನು ಕಾಯ್ದುಕೊಂಡಿದ್ದಾರೆ. ಬ್ರೋಕರೇಜ್ ಸಂಸ್ಥೆ ಇನ್ವೆಸ್ಟೆಕ್ ಈ ಸ್ಟಾಕ್‌ ಸಾಧಿಸಬಹುದಾದ ಗರಿಷ್ಠ ಬೆಲೆಯನ್ನು 229 ರೂಪಾಯಿ ಎಂದು ನಮೂದಿಸಿತ್ತು. ಆದರೆ, ಈ ಕಂಪನಿ ಇಂದು ಈ ಗುರಿಯನ್ನು ಸಾಧಿಸಿ ಹೂಡಿಕೆದಾರರ ಗಮನಸೆಳೆದಿದೆ.

ಗಮನಿಸಿ: ಮೇಲಿರುವ ಅಭಿಪ್ರಾಯಗಳು ಮತ್ತು ಶಿಫಾರಸುಗಳು ವಿಶ್ಲೇಷಕರು ಅಥವಾ ಬ್ರೋಕಿಂಗ್ ಕಂಪನಿಗಳ ವೈಯಕ್ತಿಕವಾಗಿದ್ದು, ಹಿಂದೂಸ್ತಾನ್ ಟೈಮ್ಸ್ ಕನ್ನಡ ವೆಬ್ ತಾಣದ್ದಲ್ಲ. ಯಾವುದೇ ಹೂಡಿಕೆ ನಿರ್ಧಾರಗಳನ್ನು ಮಾಡುವ ಮೊದಲು ಪ್ರಮಾಣೀಕೃತ ತಜ್ಞರೊಂದಿಗೆ ಪರಿಶೀಲಿಸಬೇಕು ಎಂದು ನಾವು ಹೂಡಿಕೆದಾರರಿಗೆ ಸಲಹೆ ನೀಡುತ್ತೇವೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ