logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Interest Rate Hike: ಅಂಚೆ ಕಚೇರಿ ಅವಧಿ ಠೇವಣಿ ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಏರಿಕೆ; ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಅನ್ವಯ

Interest rate hike: ಅಂಚೆ ಕಚೇರಿ ಅವಧಿ ಠೇವಣಿ ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಏರಿಕೆ; ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಅನ್ವಯ

Umesh Kumar S HT Kannada

Jun 30, 2023 07:53 PM IST

google News

ಅಂಚೆ ಇಲಾಖೆ ಫಿಕ್ಸೆಡ್‌ ಡೆಪಾಸಿಟ್‌ ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಏರಿಕೆ (ಸಾಂಕೇತಿಕ ಚಿತ್ರ)

  • Interest rate hike: ಅಂಚೆ ಕಚೇರಿ ಅವಧಿ ಠೇವಣಿ ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕೇಂದ್ರ ಸರ್ಕಾರ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಬಡ್ಡಿದರ ಜುಲೈನಿಂದ ಸೆಪ್ಟೆಂಬರ್‌ವರೆಗಿನ ತ್ರೈಮಾಸಿಕ ಅವಧಿಗೆ ಅನ್ವಯವಾಗಲಿದೆ. 

ಅಂಚೆ ಇಲಾಖೆ ಫಿಕ್ಸೆಡ್‌ ಡೆಪಾಸಿಟ್‌ ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಏರಿಕೆ (ಸಾಂಕೇತಿಕ ಚಿತ್ರ)
ಅಂಚೆ ಇಲಾಖೆ ಫಿಕ್ಸೆಡ್‌ ಡೆಪಾಸಿಟ್‌ ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಏರಿಕೆ (ಸಾಂಕೇತಿಕ ಚಿತ್ರ)

ಸಣ್ಣ ಉಳಿತಾಯ ಯೋಜನೆಗಳ (Small savings schemes) ಮೇಲಿನ ಬಡ್ಡಿದರವನ್ನು ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ (July-September quarter) ಅನ್ವಯವಾಗುವಂತೆ 10-30 ಮೂಲಾಂಶಗಳಷ್ಟು ಹೆಚ್ಚಿಸಲಾಗಿದೆ. ಈಗ ಈ ಬಡ್ಡಿದರ ಶೇಕಡ 4.0 ರಿಂದ ಶೇಕಡ 8.2ರ ತನಕ ಇದೆ ಎಂದು ಹಣಕಾಸು ಸಚಿವಾಲಯವು ಇಂದು (ಜೂನ್ 30) ರಂದು ತಿಳಿಸಿದೆ.

ಹಣಕಾಸು ಸಚಿವಾಲಯವು ಶುಕ್ರವಾರ ಈ ಘೋಷಣೆ ಮಾಡಿದೆ. ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಸಾಮಾನ್ಯವಾಗಿ ಪ್ರತಿ ತ್ರೈಮಾಸಿಕದಲ್ಲಿ ಸರ್ಕಾರವು ಪರಿಶೀಲಿಸಿ ಪರಿಷ್ಕರಿಸುವ ಕೆಲಸ ಮಾಡುತ್ತದೆ. ಹಿಂದಿನ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯದ ಬಡ್ಡಿದರಗಳನ್ನು ಘೋಷಿಸುವಾಗ, ಸರ್ಕಾರವು ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ 70 bps ಬಡ್ಡಿದರ ಹೆಚ್ಚಳವನ್ನು ಘೋಷಿಸಿತ್ತು ಎಂದು ಹಿಂದುಸ್ತಾನ್‌ ಟೈಮ್ಸ್‌ ಕನ್ನಡದ ಸೋದರ ತಾಣ ಲೈವ್‌ ಮಿಂಟ್‌ ವರದಿ ಮಾಡಿದೆ.

ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಸೇರಿ ಹೆಚ್ಚಿನ ಸಣ್ಣ ಉಳಿತಾಯ ಯೋಜನೆಗಳ ಮೇಲೆ ಸರ್ಕಾರವು ನೀಡುವ ಬಡ್ಡಿದರಗಳು ಈಗಾಗಲೇ ಬ್ಯಾಂಕುಗಳು ನೀಡುವ ಅವಧಿಯ ಠೇವಣಿಗಳಿಗೆ ಸಮಾನವಾಗಿವೆ.

ಸಣ್ಣ ಉಳಿತಾಯ ಬಡ್ಡಿ ದರಗಳು, ಸರ್ಕಾರವು ನಿಗದಿಪಡಿಸುವ ಸಂದರ್ಭ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ ಹೋಲಿಸಬಹುದಾದ ಜಿ-ಸೆಕ್ಯುರಿಟಿ ಮೆಚುರಿಟಿಗಳ ಮಾರುಕಟ್ಟೆಯ ಇಳುವರಿಯ ಮಂದಗತಿಯೊಂದಿಗೆ ಲಿಂಕ್ ಮಾಡಲ್ಪಟ್ಟಿವೆ. 0-100 ಬೇಸಿಸ್ ಪಾಯಿಂಟ್‌ಗಳಿಂದ ಜಿ-ಸೆಕ್ಯುರಿಟಿ ಇಳುವರಿಗಳ ಮೇಲೆ ಮತ್ತು ಅದಕ್ಕಿಂತ ಹೆಚ್ಚಿನ ಸ್ಪ್ರೆಡ್‌ನಲ್ಲಿ ತ್ರೈಮಾಸಿಕ ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ.

ಕಳೆದ ತ್ರೈಮಾಸಿಕದಲ್ಲಿ ಬಡ್ಡಿದರ ಹೆಚ್ಚಳ

ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಸರ್ಕಾರವು ಏಪ್ರಿಲ್ ನಿಂದ ಜೂನ್ ತ್ರೈಮಾಸಿಕಕ್ಕೆ ಹೆಚ್ಚಿಸಿತ್ತು. ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೇಲಿನ ಬಡ್ಡಿ ದರವನ್ನು 20 ಮೂಲ ಅಂಕಗಳು, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ 70 ಮೂಲ ಅಂಕಗಳು, ಕಿಸಾನ್ ವಿಕಾಸ್ ಪತ್ರ 30 ಮೂಲ ಅಂಕಗಳು ಮತ್ತು ಸುಕನ್ಯಾ ಸಮೃದ್ಧಿ ಯೋಜನೆ 40 ಮೂಲ ಅಂಕಗಳು ಹೆಚ್ಚಿಸಲಾಗಿತ್ತು.

ಜನವರಿಯಿಂದ ಮಾರ್ಚ್‌ ಅವಧಿಗೆ ಬಡ್ಡಿದರ ಏರಿಕೆ

ಜನವರಿ-ಮಾರ್ಚ್ ಅವಧಿಯಲ್ಲಿ ಕೇಂದ್ರವು ಕೆಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿತು. ಸರ್ಕಾರವು 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷಗಳ ಅವಧಿಯ ಠೇವಣಿಗಳ ಬಡ್ಡಿ ದರವನ್ನು ಹೆಚ್ಚಿಸಿದೆ. ಇದಲ್ಲದೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆ ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಬಡ್ಡಿ ದರವನ್ನೂ ಹೆಚ್ಚಿಸಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ