logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Covid Updates: ಕೋವಿಡ್‌ ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕವೇ ನಂಬರ್‌ 1, ಪಶ್ಚಿಮ ಬಂಗಾಳದಲ್ಲೂ ಏರಿಕೆ

Covid Updates: ಕೋವಿಡ್‌ ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕವೇ ನಂಬರ್‌ 1, ಪಶ್ಚಿಮ ಬಂಗಾಳದಲ್ಲೂ ಏರಿಕೆ

Umesha Bhatta P H HT Kannada

Jan 23, 2024 02:46 PM IST

ಕೋವಿಡ್‌ ಪ್ರಕರಣಗಳ ಸಂಖ್ಯೆ ಭಾರತದಲ್ಲಿ ಕಡಿಮೆಯಾಗಿದ್ದು. ಕರ್ನಾಟಕದಲ್ಲಿ ಸಕ್ರಿಯ ಪ್ರಕರಣ ಅಧಿಕವಾಗಿವೆ.

    • ಕೋವಿಡ್‌ ಸಕ್ರಿಯ ಪ್ರಕರಣಗಳು ಭಾರತದಲ್ಲಿ ಕಡಿಮೆಯಾಗಿದೆ. ಕರ್ನಾಟಕದಲ್ಲೂ ಇಳಿಮುಖವಾಗಿದ್ದರೂ ಅತಿ ಹೆಚ್ಚು ಪ್ರಕರಣ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕೇರಳದಲ್ಲೂ ಸಕ್ರಿಯ ಪ್ರಕರಣ ವರದಿಯಾಗಿವೆ. 
ಕೋವಿಡ್‌ ಪ್ರಕರಣಗಳ ಸಂಖ್ಯೆ ಭಾರತದಲ್ಲಿ ಕಡಿಮೆಯಾಗಿದ್ದು. ಕರ್ನಾಟಕದಲ್ಲಿ ಸಕ್ರಿಯ ಪ್ರಕರಣ ಅಧಿಕವಾಗಿವೆ.
ಕೋವಿಡ್‌ ಪ್ರಕರಣಗಳ ಸಂಖ್ಯೆ ಭಾರತದಲ್ಲಿ ಕಡಿಮೆಯಾಗಿದ್ದು. ಕರ್ನಾಟಕದಲ್ಲಿ ಸಕ್ರಿಯ ಪ್ರಕರಣ ಅಧಿಕವಾಗಿವೆ.

ದೆಹಲಿ: ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಳೆದ ಒಂದು ವಾರದಲ್ಲಿ ಕಡಿಮೆಯಾಗಿದ್ದರೂ ಕರ್ನಾಟಕದಲ್ಲಿ ಮಾತ್ರ ಇಡೀ ದೇಶದಲ್ಲೇ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು ಇವೆ. ಇದಲ್ಲದೇ ಪಶ್ಚಿಮ ಬಂಗಾಳ ರಾಜ್ಯದಲ್ಲೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ಸಾವಿನ ಸಂಖ್ಯೆಯಲ್ಲೂ ಅಲ್ಲಿ ಕಂಡು ಬರುತ್ತಿದೆ. ಉಳಿದಂತೆ ಮಹಾರಾಷ್ಟ್ರ, ಕೇರಳದಲ್ಲೂ ಸಕ್ರಿಯ ಪ್ರಕರಣಗಳು ಹೆಚ್ಚು ಇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಕರ್ನಾಟಕದಲ್ಲಿ ಸದ್ಯ 528 ಸಕ್ರಿಯ ಪ್ರಕರಣಗಳಿವೆ. ಹಿಂದಿನ ವಾರಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ 31 ಹೆಚ್ಚಾಗಿದೆ. ಇಡೀ ಕರ್ನಾಟಕದಲ್ಲಿ ನಾಲ್ಕು ವರ್ಷದಲ್ಲಿ 40,94,683 ಕೋವಿಡ್‌ ಪ್ರಕರಣ ವರದಿಯಾಗಿವೆ. ಈವರೆಗೂ 40,53,760 ಮಂದಿ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ ಈವರೆಗೂ 40,395. ದಕ್ಷಿಣ ಕನ್ನಡದಲ್ಲಿ ವ್ಯಕ್ತಿಯೊಬ್ಬ ಕೋವಿಡ್‌ನಿಂದ ಭಾನುವಾರ ಮೃತಪಟ್ಟಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಸದ್ಯ 523 ಸಕ್ರಿಯ ಪ್ರಕರಣಗಳಿವೆ. ಎರಡು ದಿನದಲ್ಲಿ ಇಬ್ಬರು ಮೃತಪಟ್ಟಿರುವುದಾಗಿ ಆರೋಗ್ಯ ಸಚಿವಾಲಯವು ಹೇಳಿದೆ. ಈವರೆಗೂ 21,27,126 ಪ್ರಕರಣಗಳು ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದ್ದು, 21,05,045 ಗುಣಮುಖರಾಗಿದ್ದಾರೆ. ಈವರೆಗೂ 21,558 ಮಂದಿ ಕೋವಿಡ್‌ಗೆ ರಾಜ್ಯದಲ್ಲಿ ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ ಸಾವಿನ ಪ್ರಮಾಣ ಶೇ. 1ಕ್ಕಿಂತ ಕಡಿಮೆ ಇದೆ. ಈವರೆಗೂ ಶೇ. 0.99 ಸಾವಿನ ಪ್ರಮಾಣ ಇರುವುದನ್ನು ತಿಳಿಸಲಾಗಿದೆ.

ನೆರೆಯ ಮಹಾರಾಷ್ಟ್ರದಲ್ಲಿ 422 ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ಈವರೆಗೂ ಇಡೀ ದೇಶದಲ್ಲೇ ಅತಿ ಹೆಚ್ಚು ಅಂದರೆ 81,74,856 ಪ್ರಕರಣ ವರದಿಯಾಗಿದೆ. ಇದರಲ್ಲಿ 80,25,853 ಮಂದಿ ಗುಣಮುಖರಾಗಿದ್ದರೆ, 1,48,581 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸಾವಿನ ಪ್ರಕರಣ ಶೇ.1.82ರಷ್ಟು ಮಹಾರಾಷ್ಟ್ರದಲ್ಲಿ ವರದಿಯಾಗಿದೆ.

ಕೇರಳದಲ್ಲಿ ಸಕ್ರಿಯ ಸಂಖ್ಯೆಗಳ ಪ್ರಮಾಣ ಗಣನೀಯವಾಗಿ ಇಳಿದಿದೆ. ಸದ್ಯ 146 ಸಕ್ರಿಯ ಪ್ರಕರಣಗಳು ಕೇರಳದಲ್ಲಿವೆ. ಈವರೆಗೂ ಕೇರಳದಲ್ಲಿ 69,17,419 ಮಂದಿಗೆ ಕೋವಿಡ್‌ ಸೋಂಕು ತಗುಲಿದ್ದರೆ, 68,45,177 ಮಂದಿ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 72,096. ಇಲ್ಲಿಯೂ ಕೋವಿಡ್‌ ಸಾವಿನ ಪ್ರಮಾಣ ಶೇ. 1.04ರಷ್ಟಿದೆ.

ತಮಿಳುನಾಡಿನಲ್ಲಿ ಸಕ್ರಿಯ ಪ್ರಕರಣ ಮೂರಂಕಿಗಿಂತ ಕಡಿಮೆಯಿದೆ. ಇಲ್ಲಿ ಸದ್ಯ 27 ಸಕ್ರಿಯ ಪ್ರಕರಣಗಳಿವೆ. ಈವರೆಗೂ ತಮಿಳುನಾಡಿನಲ್ಲಿ 36,11,500 ಪ್ರಕರಣ ವರದಿಯಾಗಿದ್ದರೆ, ಇದರಲ್ಲಿ ಗುಣಮುಖರಾದವರ ಸಂಖ್ಯೆ 35,73,387. ಇಲ್ಲಿನ ಸಾವಿನ ಸಂಖ್ಯೆ 38,086 ಇದ್ದರೆ ಪ್ರಮಾಣ ಶೇ. 1.05ರಷ್ಟಿದೆ.

ನೆರೆಯ ಆಂಧ್ರಪ್ರದೇಶದಲ್ಲಿ ಸಕ್ರಿಯ ಪ್ರಕರಣ 27 ಇದೆ. ಇಲ್ಲಿ 23,40,996 ಪ್ರಕರಣ ದಾಖಲಾಗಿ, 23,26,236ಮಂದಿ ಗುಣಮುಖರಾಗಿದ್ದಾರೆ. 14,733 ಮಂದಿ ಮೃತಪಟ್ಟಿದ್ದು,. ಸಾವಿನ ಪ್ರಮಾಣ ಅತಿ ಕಡಿಮೆ ಎಂದರೆ ಶೇ.0.63 ರಷ್ಟಿದೆ.

ತೆಲಂಗಾಣ ರಾಜ್ಯದಲ್ಲಿ ಸಕ್ರಿಯ ಪ್ರಕರಣ 29 ಇದ್ದರೆ, ಈವರೆಗೂ 8,44,710 ಪ್ರಕರಣ ವರದಿಯಾಗಿವೆ. ಇದರಲ್ಲಿ 8,40,570 ಗುಣಮುಖರಾಗಿದ್ದಾರೆ. ಈವರೆಗೂ ಸಾವಿನ ಸಂಖ್ಯೆ 4,111. ಸಾವಿನ ಪ್ರಮಾಣ ಶೇ 0.49ರಷ್ಟು ಇದೆ.

ನೆರೆಯ ಗೋವಾದಲ್ಲಿ ಸಕ್ರಿಯ ಪ್ರಕರಣ ಒಂದಂಕಿಗೆ ಇಳಿದಿದೆ. ಈವರೆಗೂ 7 ಸಕ್ರಿಯ ಪ್ರಕರಣಗಳಿವೆ. ಒಟ್ಟು 2,63,576 ಪ್ರಕರಣ ದಾಖಲಾಗಿ 2,59,555 ಮಂದಿ ಗುಣಮುಖರಾಗಿದ್ದಾರೆ. 4,014 ಮಂದಿ ಮೃತಪಟ್ಟಿದ್ದಾರೆ. ಸಾವಿನ ಪ್ರಮಾಣ ಮಹಾರಾಷ್ಟ್ರ ಬಿಟ್ಟರೆ ಅತಿ ಹೆಚ್ಚು ಅಂದರೆ ಶೇ. 1.52ರಷ್ಟು ಕಂಡು ಬಂದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ