logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕರ್ನಾಟಕದ್ದೂ ಸೇರಿ 41000 ಕೋಟಿ ರೂಪಾಯಿ ಮೌಲ್ಯದ 2000 ರೈಲ್ವೆ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ; 2 ಹಂತದಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ಧಿ

ಕರ್ನಾಟಕದ್ದೂ ಸೇರಿ 41000 ಕೋಟಿ ರೂಪಾಯಿ ಮೌಲ್ಯದ 2000 ರೈಲ್ವೆ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ; 2 ಹಂತದಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ಧಿ

Umesh Kumar S HT Kannada

Feb 26, 2024 02:40 PM IST

google News

ಕರ್ನಾಟಕದ್ದೂ ಸೇರಿ 41,000 ಕೋಟಿ ರೂ ಮೌಲ್ಯದ 2,000 ರೈಲ್ವೆ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. 2 ಹಂತದಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ಧಿ ನಡೆಯಲಿದೆ. ವಿಡಿಯೋ ಕಾನ್ಫರೆನ್ಸ್‌ನ ಒಂದು ನೋಟ.

  • ಕರ್ನಾಟಕದ್ದೂ ಸೇರಿ 41,000 ಕೋಟಿ ರೂ ಮೌಲ್ಯದ 2,000 ರೈಲ್ವೆ ಯೋಜನೆಗಳಿಗೆ ಪ್ರಧಾನಿ ಮೋದಿ ಸೋಮವಾರ ಚಾಲನೆ ನೀಡಿದರು. ಈ ಯೋಜನೆಯಲ್ಲಿ 2 ಹಂತದಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ಧಿ ನಡೆಯಲಿದೆ. ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇದು 'ನವ ಭಾರತದ' ಕೆಲಸದ ಸಂಸ್ಕೃತಿಯ ಸಂಕೇತವಾಗಿದೆ ಎಂದು ಬಣ್ಣಿಸಿದರು.

ಕರ್ನಾಟಕದ್ದೂ ಸೇರಿ 41,000 ಕೋಟಿ ರೂ ಮೌಲ್ಯದ 2,000 ರೈಲ್ವೆ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. 2 ಹಂತದಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ಧಿ ನಡೆಯಲಿದೆ. ವಿಡಿಯೋ ಕಾನ್ಫರೆನ್ಸ್‌ನ ಒಂದು ನೋಟ.
ಕರ್ನಾಟಕದ್ದೂ ಸೇರಿ 41,000 ಕೋಟಿ ರೂ ಮೌಲ್ಯದ 2,000 ರೈಲ್ವೆ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. 2 ಹಂತದಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ಧಿ ನಡೆಯಲಿದೆ. ವಿಡಿಯೋ ಕಾನ್ಫರೆನ್ಸ್‌ನ ಒಂದು ನೋಟ.

ನವದೆಹಲಿ/ ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸುಮಾರು 41,000 ಕೋಟಿ ರೂ.ಗಳ ಮೌಲ್ಯದ 2,000 ಕ್ಕೂ ಹೆಚ್ಚು ರೈಲ್ವೆ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು. ಕೆಲವು ರೈಲ್ವೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದರು. ಇದರಲ್ಲಿ ಕರ್ನಾಟಕದ ಕೆಲವು ರೈಲು ನಿಲ್ದಾಣ ಮತ್ತು ಯೋಜನೆಗಳು ಒಳಗೊಂಡಿವೆ.

ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇದು 'ನವ ಭಾರತದ' ಕೆಲಸದ ಸಂಸ್ಕೃತಿಯ ಸಂಕೇತವಾಗಿದೆ ಎಂದು ಬಣ್ಣಿಸಿದರು. ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 553 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.

"ಇಂದಿನ ಕಾರ್ಯಕ್ರಮವು ನವ ಭಾರತದ ಕೆಲಸದ ನೀತಿಯ ಸಂಕೇತವಾಗಿದೆ. ಈಗ, ಭಾರತವು ಅಭೂತಪೂರ್ವ ಪ್ರಮಾಣದಲ್ಲಿ ಅಭೂತಪೂರ್ವ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಣ್ಣ ಆಕಾಂಕ್ಷೆಗಳಿಂದ ಬೇರ್ಪಟ್ಟು, ಇಂದಿನ ಭಾರತವು ದೊಡ್ಡ ಕನಸುಗಳನ್ನು ಕಾಣಲು ಮತ್ತು ಆ ಕನಸುಗಳನ್ನು ಆದಷ್ಟು ಬೇಗ ಸಾಕಾರಗೊಳಿಸುವತ್ತ ಸಾಗಿದೆ" ಎಂದು ಮೋದಿ ಹೇಳಿದರು.

ಸರ್ಕಾರದ ಮೂರನೇ ಅವಧಿಗೆ ಮರಳುವ ವಿಶ್ವಾಸವಿದೆ ಎಂದು ಅವರು ಹೇಳಿದರು.

"ಇಂದು, ರೈಲ್ವೆಗೆ ಸಂಬಂಧಿಸಿದ ಎರಡು ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಅಡಿಪಾಯ ಹಾಕಲಾಗಿದೆ ಮತ್ತು ಉದ್ಘಾಟಿಸಲಾಗಿದೆ. ಇದೀಗ, ಈ ಸರ್ಕಾರದ ಮೂರನೇ ಅವಧಿ ಜೂನ್ನಲ್ಲಿ ಪ್ರಾರಂಭವಾಗಲಿದೆ. ಕಾಮಗಾರಿ ಪ್ರಾರಂಭವಾದ ಪ್ರಮಾಣ ಮತ್ತು ವೇಗವು ಎಲ್ಲರನ್ನೂ ಆಶ್ಚರ್ಯಗೊಳಿಸುತ್ತದೆ" ಎಂದು ಅವರು ಹೇಳಿದರು.

ಕರ್ನಾಟಕದ 31 ಅಮೃತ್ ಭಾರತ್ ನಿಲ್ದಾಣಗಳ ಕಾಮಗಾರಿಗೆ ಚಾಲನೆ, 801 ಕೋಟಿ ರೂ. ವೆಚ್ಚದ ಯೋಜನೆ

ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಕರ್ನಾಟಕದ 31 ಅಮೃತ ಭಾರತ್ ರೈಲ್ವೆ ನಿಲ್ದಾಣ ಮರುನಿರ್ಮಾಣ ಕಾಮಗಾರಿ, 24 ರಸ್ತೆ ಮೇಲ್ಸೇತುವೆ, ಕೆಳಸೇತುವೆಗಳ ಕಾಮಗಾರಿಗೆ ಚಾಲನೆ ಮತ್ತು ಲೋಕಾರ್ಪಣೆಯನ್ನು ನೆರವೇರಿಸಿದರು.

ಅಮೃತ್ ಭಾರತ್ ಸ್ಟೇಶನ್ ಯೋಜನೆಯಡಿಯಲ್ಲಿ ನಡೆಸಲಾಗುವ ಅಭಿವೃದ್ಧಿಗೆ ಕೆಲಸಗಳಿಗೆ ದೀರ್ಘಾವಧಿ ದೃಷ್ಟಿಕೋನವಿದ್ದು, ರೈಲ್ವೆ ಮೂಲಸೌಕರ್ಯದ ಜತೆಗೆ ಆರ್ಥಿಕ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿ 15 ರೈಲ್ವೇ ನಿಲ್ದಾಣಗಳನ್ನು ಪುನರಾಭಿವೃದ್ಧಿಗೆ 372.13 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಬೆಂಗಳೂರು ಪೂರ್ವ ನಿಲ್ದಾಣ ಬಳಿಯ ಕುಂಬಾರಿಕೆ ಪಟ್ಟಣದಲ್ಲಿ ಮೇಲ್ಲೇತುವೆ, ಲೆವೆಲ್ ಕ್ರಾಸಿಂಗ್‌ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ. ಅದೇ ರೀತಿ, ಹುಬ್ಬಳ್ಳಿ ಮತ್ತು ಮೈಸೂರು ವಿಭಾಗದ 7 ರೈಲು ನಿಲ್ದಾಣಗಳ ಅಭಿವೃದ್ಧಿಗೂ ಚಾಲನೆಯನ್ನು ಪ್ರಧಾನಿ ಕೊಟ್ಟರು.

ಯಾವೆಲ್ಲ ರೈಲು ನಿಲ್ದಾಣಗಳ ಅಭಿವೃದ್ಧಿ, ಎಷ್ಟು ಮೊತ್ತದ ಯೋಜನೆ

ಬಂಗಾರಪೇಟೆ 21.5 ಕೋಟಿ ರೂ.

ಚನ್ನಪಟ್ಟಣ 20.9 ಕೋಟಿ ರೂ.

ಧರ್ಮಪುರಿ 25.3 ಕೋಟಿ ರೂ.

ದೊಡ್ಡಬಳ್ಳಾಪುರ 21.3 ಕೋಟಿ ರೂ.,

ಹೊಸೂರು 22.3ಕೋಟಿ ರೂ.,

ಕೃಷ್ಣರಾಜಪುರಂ 21.1 ಕೋಟಿ ರೂ.,

ಕೆಂಗೇರಿ 21 ಕೋಟಿ ರೂ.,

ಕುಪ್ಪಂ 17.6 ಕೋಟಿ ರೂ.,

ಮಲ್ಲೇಶ್ವರಂ 20 ಕೋಟಿ ರೂ.,

ಮಾಲೂರು 20.4 ಕೋಟಿ ರೂ.,

ಮಂಡ್ಯ 20.1 ಕೋಟಿ ರೂ.,

ರಾಮನಗರ 21ಕೋಟಿ ರೂ.,

ತುಮಕೂರು 24.1 ಕೋಟಿ ರೂ.,

ವೈಟ್ ಫೀಲ್ಡ್ ನಿಲ್ದಾಣವನ್ನು 23.3 ಕೋಟಿ ರೂ.

ಎರಡು ಹಂತಗಳಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ಧಿ

ರೈಲ್ವೆ ನಿಲ್ದಾಣ ಅಭಿವೃದ್ಧಿ ಯೋಜನೆಯಲ್ಲಿ ಮೊದಲ ಹಂತದಲ್ಲಿ ರೈಲ್ವೇ ನಿಲ್ದಾಣದ ಪ್ರವೇಶ ದ್ವಾರ ಸುಂದರಗೊಳಿಸುವುದು, ಪ್ರಯಾಣಿಕರ ತಂಗುದಾಣ, ಶೌಚಾಲಯ ಸೌಲಭ್ಯ, ಲಿಫ್ಟ್, ಎಸ್ಕಲೇಟರ್ ಸ್ಥಾಪನೆ, ಸ್ವಚ್ಛತೆ, ಉಚಿತ ವೈ- ಫೈ ಹಾಗೂ ಒಂದು ನಿಲ್ದಾಣ ಒಂದು ಉತ್ಪನ್ನದಂತ ಉಪಕ್ರಮಗಳಡಿಯಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಕಿಯೋಸ್ಟ್ ಸ್ಥಾಪಿಸಲಾಗುತ್ತದೆ. ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಹೆಚ್ಚಳ, ಕಾರ್ಯನಿರ್ವಾಹಕ ಲಾಂಜ್‌ಗಳನ್ನು ಸ್ಥಾಪನೆ, ವ್ಯಾಪಾರ ಸಭೆಗಳಿಗೆ ಸ್ಥಳನ್ನು ಗುರುತಿಸುವುದು ಸೇರಿ ಇತರೆ ವ್ಯವಸ್ಥೆಗಳನ್ನು ರೈಲ್ವೇ ನಿಲ್ದಾಣದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ.

ಎರಡನೇ ಹಂತದಲ್ಲಿ ನಿಲ್ದಾಣಗಳನ್ನು ನವೀಕರಣ ಮಾಡಲಾಗುತ್ತದೆ. ಸುತ್ತಮುತ್ತಲಿನ ಪ್ರದೇಶಗಳನ್ನು ಸುಂದರಗೊಳಿಸುವುದು, ಮಲ್ಟಿ ಮಾಡೆಲ್ ಸಂಪರ್ಕಕ್ಕೆ ಉತ್ತೇಜನ, ಪರಿಸರ ಸ್ನೇಹಿ ಪೂರಕ ವ್ಯವಸ್ಥೆ, ವಿಶೇಷ ಚೇತನರಿಗೆ ಸೌಲಭ್ಯ, ರೂಫ್ ಆಳವಡಿಕೆ, ಅಗತ್ಯವಿದ್ದ ಕಡೆ ಪ್ಲಾಜಾಗಳನ್ನು ಹಂತ ಹಂತವಾಗಿ ನಿರ್ಮಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾಗಿ ವರದಿ ಹೇಳಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ