logo
ಕನ್ನಡ ಸುದ್ದಿ  /  ಕ್ರೀಡೆ  /  Pkl 11: ಪ್ರೊ ಕಬಡ್ಡಿ ಲೀಗ್‌ನ 11ನೇ ಸೀಸನ್‌ನಲ್ಲಿ ಫುಲ್ ಫ್ಲಾಫ್ ಆದ 3 ಲೆಜೆಂಡರಿ ಡಿಫೆಂಡರ್‌ಗಳು

PKL 11: ಪ್ರೊ ಕಬಡ್ಡಿ ಲೀಗ್‌ನ 11ನೇ ಸೀಸನ್‌ನಲ್ಲಿ ಫುಲ್ ಫ್ಲಾಫ್ ಆದ 3 ಲೆಜೆಂಡರಿ ಡಿಫೆಂಡರ್‌ಗಳು

Raghavendra M Y HT Kannada

Oct 31, 2024 10:17 AM IST

google News

ಹೈದರಾಬಾದ್‌ನಲ್ಲಿ ನಡೆದಿದ್ದ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ಪಂದ್ಯದ ರೋಚಕ ಕ್ಷಣ. (ಪಿಟಿಐ)

    • ಪ್ರೊ ಕಬಡ್ಡಿ ಲೀಗ್‌ನ 11 ನೇ ಸೀಸನ್​ನಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದ್ದ ಕೆಲವು ಅನುಭವಿ ಆಟಗಾರರು ದಯನೀಯವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಇಲ್ಲಿಯವರೆಗೆ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗದ ಮತ್ತು ಫ್ಲಾಪ್ ಆಗಿರುವ ಲೆಜೆಂಡರಿ ಡಿಫೆಂಡರ್‌ಗಳು ಯಾರು ನೋಡೋಣ. (ವರದಿ: ವಿನಯ್ ಭಟ್)
ಹೈದರಾಬಾದ್‌ನಲ್ಲಿ ನಡೆದಿದ್ದ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ಪಂದ್ಯದ ರೋಚಕ ಕ್ಷಣ. (ಪಿಟಿಐ)
ಹೈದರಾಬಾದ್‌ನಲ್ಲಿ ನಡೆದಿದ್ದ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ಪಂದ್ಯದ ರೋಚಕ ಕ್ಷಣ. (ಪಿಟಿಐ)

ಪ್ರೊ ಕಬಡ್ಡಿ ಲೀಗ್‌ನ 11 ನೇ ಸೀಸನ್‌ ಶುರುವಾಗಿ 10 ದಿನಗಳು ಕಳೆದಿವೆ. ಇಲ್ಲಿಯವರೆಗೆ ಹಲವು ರೋಚಕ ಪಂದ್ಯಗಳು ನಡೆದಿವೆ. ಕೆಲವು ಯುವ ಆಟಗಾರರು ತಮ್ಮ ಪ್ರದರ್ಶನದಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ. ಅವರ ಪ್ರದರ್ಶನ ನೋಡಿದರೆ ಭವಿಷ್ಯದಲ್ಲಿ ಪಿಕೆಎಲ್‌ನ ದೊಡ್ಡ ಸ್ಟಾರ್ ಆಟಗಾರರಾಗಬಹುದು ಎಂದು ತೋರುತ್ತದೆ. ಆದಾಗ್ಯೂ, ಮತ್ತೊಂದೆಡೆ ಬಹಳಷ್ಟು ನಿರೀಕ್ಷೆ ಮೂಡಿಸಿದ್ದ ಕೆಲವು ಅನುಭವಿ ಆಟಗಾರರು ದಯನೀಯವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಇಲ್ಲಿಯವರೆಗೆ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗದ ಮತ್ತು ಫ್ಲಾಪ್ ಆಗಿರುವ ಅಂತಹ ಮೂವರು ಲೆಜೆಂಡರಿ ಡಿಫೆಂಡರ್‌ಗಳು ಯಾರು ಎಂಬುದನ್ನು ನೋಡೋಣ.

ಸುರೀಂದರ್ ಸಿಂಗ್ (ಬೆಂಗಳೂರು ಬುಲ್ಸ್)

ಬೆಂಗಳೂರು ಬುಲ್ಸ್‌ನ ಅನುಭವಿ ಡಿಫೆಂಡರ್ ಸುರಿಂದರ್ ಸಿಂಗ್ ಈ ಋತುವಿನಲ್ಲಿ ಇದುವರೆಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಒಟ್ಟು 5 ಪಂದ್ಯಗಳನ್ನು ಆಡಿರುವ ಅವರು ಈ ಅವಧಿಯಲ್ಲಿ ಕೇವಲ 9 ಅಂಕಗಳನ್ನು ಗಳಿಸಿದ್ದಾರೆ. ಸುರಿಂದರ್ ಸಿಂಗ್ ಮೊದಲ ಪಂದ್ಯದಲ್ಲಿ ಹೆಚ್ಚಿನ ಐದು ಅಂಕ ಗಳಿಸಿದ್ದರು. ಆದರೆ ನಂತರದ ಮೂರು ಪಂದ್ಯಗಳಲ್ಲಿ ಕೇವಲ ಮೂರು ಅಂಕಗಳನ್ನು ಗಳಿಸಲು ಸಾಧ್ಯವಾಯಿತು. ಹೀಗೆ ಸುರೀಂದರ್ ಸಿಂಗ್ ಸಂಪೂರ್ಣ ವಿಫಲವಾಗಿದ್ದು ಮತ್ತು ಅದರ ಪರಿಣಾಮ ಬೆಂಗಳೂರು ಬುಲ್ಸ್ ಮೇಲೂ ಕಂಡುಬಂದಿದೆ. ಬೆಂಗಳೂರು ಈವರೆಗೆ ಆಡಿರುವ 5 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಉಳಿದ ನಾಲ್ಕು ಪಂದ್ಯದಲ್ಲಿ ಸೋಲುಂಡಿದೆ. 6 ಅಂಕಗಳನ್ನು ಸಂಪಾದಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

2. ಸುನಿಲ್ ಕುಮಾರ್ (ಯು-ಮುಂಬಾ)

ಪ್ರೊ ಕಬಡ್ಡಿ ಲೀಗ್‌ನ 11ನೇ ಋತುವಿನ ಆರಂಭಕ್ಕೂ ಮುನ್ನ ಯು-ಮುಂಬಾದ ಆಟಗಾರ ಸುನಿಲ್ ಕುಮಾರ್ ಅವರನ್ನು ನಾಯಕರನ್ನಾಗಿ ನೇಮಿಸಿತ್ತು. ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಚಾಂಪಿಯನ್ ಮಾಡಿದ ರೀತಿಯಲ್ಲಿ ಈ ಬಾರಿಯೂ ಅದೇ ಪ್ರದರ್ಶನ ನೀಡಲಿದ್ದಾರೆ ಎಂಬ ನಿರೀಕ್ಷೆ ಅವರ ಮೇಲಿತ್ತು. ಆದರೆ, ಸುನೀಲ್ ಕುಮಾರ್ ಇದರಲ್ಲಿ ದಯನೀಯವಾಗಿ ಸೋತಿದ್ದಾರೆ. ಇದುವರೆಗೆ ಮೂರು ಪಂದ್ಯಗಳಲ್ಲಿ ಕೇವಲ 5 ಅಂಕ ಗಳಿಸಲು ಸಾಧ್ಯವಾಗಿದೆಯಷ್ಟೆ.

3. ನಿತೇಶ್ ಕುಮಾರ್ (ಬೆಂಗಾಲ್ ವಾರಿಯರ್ಸ್)

ಪ್ರೊ ಕಬಡ್ಡಿ ಲೀಗ್‌ನ ಒಂದು ಋತುವಿನಲ್ಲಿ ಅತಿ ಹೆಚ್ಚು ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ ದಾಖಲೆಯನ್ನು ನಿತೇಶ್ ಕುಮಾರ್ ಹೊಂದಿದ್ದಾರೆ. ಪಿಕೆಎಲ್​ನ ಒಂದೇ ಋತುವಿನಲ್ಲಿ 100 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ ಏಕೈಕ ಡಿಫೆಂಡರ್ ಇವರು ಆಗಿದ್ದಾರೆ. ಈ ಕಾರಣಕ್ಕಾಗಿ, ಅವರನ್ನು ಲೆಜೆಂಡರು ಡಿಫೆಂಡರ್ ಎಂದು ಕೂಡ ಕರೆಯುತ್ತಾರೆ. ಆದಾಗ್ಯೂ, ನಿತೇಶ್ ಕುಮಾರ್ ಈ ಋತುವಿನಲ್ಲಿ ಬೆಂಗಾಲ್ ವಾರಿಯರ್ಸ್ ಪರ ಕಳಪೆ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಆ ತಂಡ ಕೆಟ್ಟದಾಗಿ ಸೋತಿದೆ. ನಿತೇಶ್ ಕುಮಾರ್ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ ಕೇವಲ 9 ಅಂಕ ಗಳಿಸಲು ಮಾತ್ರ ಸಾಧ್ಯವಾಗಿದೆ. (ವರದಿ: ವಿನಯ್ ಭಟ್)

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ