logo
ಕನ್ನಡ ಸುದ್ದಿ  /  ಕ್ರೀಡೆ  /  Video: ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಮರಳಿದ ಮಗಳನ್ನು ಬಿಗಿದಪ್ಪಿ ಅತ್ತ ತಂದೆ

Video: ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಮರಳಿದ ಮಗಳನ್ನು ಬಿಗಿದಪ್ಪಿ ಅತ್ತ ತಂದೆ

Meghana B HT Kannada

Oct 12, 2023 02:46 PM IST

google News

ಚಿನ್ನ ಗೆದ್ದು ಭಾರತಕ್ಕೆ ಮರಳಿದ ಮಗಳನ್ನು ಬಿಗಿದಪ್ಪಿ ಅತ್ತ ತಂದೆ

    • Indian Kabaddi Player Snehal Shinde: ವಿಮಾನ ನಿಲ್ದಾಣದಲ್ಲಿ ಮಗಳು ಬರುವುದನ್ನೇ ಕಾಯುತ್ತಾ ಕುಳಿತಿದ್ದರು ಸ್ನೇಹಲ್ ಶಿಂಧೆ ಅವರ ತಂದೆ ಪ್ರದೀಪ್ ಶಿಂಧೆ. ಮಗಳು ಬರುತ್ತಿದ್ದಂತೆಯೇ ಚಿನ್ನದ ಪದಕ ಹಿಡಿದುಕೊಂಡು ಆಕೆಯನ್ನು ಬಿಗಿದಪ್ಪಿಕೊಂಡು ಸಂತೋಷದಿಂದ ಜೋರಾಗಿ ಅತ್ತಿದ್ದಾರೆ.
ಚಿನ್ನ ಗೆದ್ದು ಭಾರತಕ್ಕೆ ಮರಳಿದ ಮಗಳನ್ನು ಬಿಗಿದಪ್ಪಿ ಅತ್ತ ತಂದೆ
ಚಿನ್ನ ಗೆದ್ದು ಭಾರತಕ್ಕೆ ಮರಳಿದ ಮಗಳನ್ನು ಬಿಗಿದಪ್ಪಿ ಅತ್ತ ತಂದೆ

ಇತ್ತೀಚೆಗೆ ಚೀನಾದಲ್ಲಿ ನಡೆದ ಏಷ್ಯನೇ ಗೇಮ್ಸ್‌ನಲ್ಲಿ ಭಾರತಕ್ಕೆ 107 ಪದಕಗಳು ಬಂದಿರುವುದು ಎಲ್ಲರಿಗೂ ತಿಳಿದ ವಿಚಾರ. 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚಿನ ಪದಕಗಳು ಭಾರತಕ್ಕೆ ಸಿಕ್ಕಿದೆ. ಈ ಪೈಕಿ ಭಾರತೀಯ ಮಹಿಳಾ ಕಬಡ್ಡಿ ತಂಡ ಚಿನ್ನ ಗೆದ್ದಿದೆ. ಏಷ್ಯನ್ ಗೇಮ್ಸ್​ಗಾಗಿ ಕೆಲ ದಿನಗಳ ಕಾಲ ಚೀನಾದಲ್ಲಿ ಇದ್ದು ಇದೀಗ ಚಿನ್ನದೊಂದಿಗೆ ಭಾರತಕ್ಕೆ ಮರಳಿದ ಕಬಡ್ಡಿ ಆಟಗಾರ್ತಿ ಸ್ನೇಹಲ್ ಶಿಂಧೆ ಅವರನ್ನು ತಂದೆ ಬರಮಾಡಿಕೊಂಡ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನಿಮ್ಮ ಕಣ್ಣಲ್ಲೂ ನೀರು ತರಿಸುತ್ತದೆ.

ಮಹಾರಾಷ್ಟ್ರದ ವಿಮಾನ ನಿಲ್ದಾಣದಲ್ಲಿ ಮಗಳು ಬರುವುದನ್ನೇ ಕಾಯುತ್ತಾ ಕುಳಿತಿದ್ದರು ಸ್ನೇಹಲ್ ಶಿಂಧೆ ಅವರ ತಂದೆ ಪ್ರದೀಪ್ ಶಿಂಧೆ. ಮಗಳು ಬರುತ್ತಿದ್ದಂತೆಯೇ ಚಿನ್ನದ ಪದಕ ಹಿಡಿದುಕೊಂಡು ಆಕೆಯನ್ನು ಬಿಗಿದಪ್ಪಿಕೊಂಡು ಸಂತೋಷದಿಂದ ಜೋರಾಗಿ ಅತ್ತಿದ್ದಾರೆ. ಅಪ್ಪ ಅಳಲು ಆರಂಭಿಸುವ ಮೊದಲೇ ಮಗಳು ಕಣ್ಣೀರಿಟ್ಟಿದ್ದಾರೆ. ಮಾಧ್ಯಮದವರ ಫೋಟೋಗೆ ಪೋಸ್​ ನೀಡುತ್ತಿದ್ದಲೂ ಇಬ್ಬರ ಕಣ್ಣಲ್ಲಿ ನೀರು ಬರುತ್ತಲೇ ಇತ್ತು.

ಈ ಭಾವನಾತ್ಮಕ ವಿಡಿಯೋವನ್ನು ಸುದ್ದಿಸಂಸ್ಥೆ ಎಎನ್​ಐ ಎಕ್ಸ್​ (ಟ್ವಿಟರ್​)ನಲ್ಲಿ ಹಂಚಿಕೊಂಡಿದೆ. ತಂದೆ-ಮಗಳ ಕಣ್ಣಲ್ಲಿ ಆನಂದಭಾಷ್ಪ ಕಂಡ ನೆಟ್ಟಿಗರು ಭಾವನಾತ್ಮಕವಾಗಿ ಕಾಮೆಂಟ್​ ಮಾಡುತ್ತಿದ್ದಾರೆ. "ಹೆಮ್ಮೆಯ ತಂದೆ, ತನ್ನ ಮಗಳು ಮಾಡಿದ ಎಲ್ಲಾ ಕಠಿಣ ಪರಿಶ್ರಮದಿಂದ ಭಾವುಕರಾಗಿದ್ದಾರೆ " ಎಂದು ಒಬ್ಬರು, "ಸರ್ಕಾರವು ಅವರಿಗೆ ಸೂಕ್ತ ಬಹುಮಾನ ನೀಡಬೇಕು " ಎಂದು ಮತ್ತೊಬ್ಬರು, "ಎಂತಹ ಸುಂದರವಾದ ವೀಡಿಯೊ, ಶಿಂಧೆ ಕುಟುಂಬಕ್ಕೆ ಶುಭಾಶಯಗಳು. ಅವರಿಗೆ ಇನ್ನೂ ಒಳ್ಳೆಯದಾಗಲಿ " ಇನ್ನೊಬ್ಬರು ಕಾಮೆಂಟ್​ ಮಾಡಿದ್ದಾರೆ.

ಏಷ್ಯನೇ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಕಬಡ್ಡಿ ತಂಡವು ಚೈನೀಸ್ ತೈಪೆ ವಿರುದ್ಧ 26-25 ಅಂತರದಿಂದ ರೋಚಕ ಗೆಲುವು ಸಾಧಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಭಾರತವು 2010 ಮತ್ತು 2014 ಆವೃತ್ತಿಗಳಲ್ಲಿ ಚಿನ್ನ ಗೆದ್ದುಕೊಂಡಿತ್ತು. ಆದರೆ ಕಳೆದ ಬಾರಿ 2018ರಲ್ಲಿ ನಡೆದ ಟೂರ್ನಿಯಲ್ಲಿ ಇರಾನ್ ವಿರುದ್ಧ ಫೈನಲ್‌ನಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟಿತು. ಇದೀಗ ಮತ್ತೆ ತನ್ನ ಹಳೆ ಖದರ್‌ ತೋರಿಸಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ