logo
ಕನ್ನಡ ಸುದ್ದಿ  /  ಕ್ರೀಡೆ  /  Asian Games2023: ಏಷಿಯನ್‌ ಅಥ್ಲೆಟಿಕ್ಸ್‌: ಜಾವೆಲಿನ್ ನಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾ : ಪದಕ ಬೇಟೆಯಲ್ಲಿ ನಾಲ್ಕನೇ ಸ್ಥಾನಕೇರಿದ ಭಾರತ

Asian Games2023: ಏಷಿಯನ್‌ ಅಥ್ಲೆಟಿಕ್ಸ್‌: ಜಾವೆಲಿನ್ ನಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾ : ಪದಕ ಬೇಟೆಯಲ್ಲಿ ನಾಲ್ಕನೇ ಸ್ಥಾನಕೇರಿದ ಭಾರತ

Umesha Bhatta P H HT Kannada

Oct 05, 2023 07:54 AM IST

google News

ಚೀನಾದಲ್ಲಿ ನಡೆದಿರುವ ಏಷಿಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್‌ ಛೋಪ್ರಾ ಹಾಗೂ 4x400ಮೀಟರ್‌ ರಿಲೇ ತಂಡದ ಸಂಭ್ರಮ

    • Asian Games ಏಷಿಯನ್‌ ಗೇಮ್ಸ್‌ನಲ್ಲಿ ಈ ಬಾರಿ ಭಾರತದ ಹಿಂದಿನ ಕೂಟಗಳಿಗಿಂತ ಉತ್ತಮ ಸಾಧನೆಯನ್ನು ಮಾಡಿದೆ. ಜಾವೆಲಿನ್‌ನಲ್ಲಿ ನೀರಜ್‌ ಛೋಪ್ರಾ ಚಿನ್ನದ ಪದಕ ಮುಡಿಗೇರಿಸಿದರೆ, 4x400ಮೀಟರ್‌ ರಿಲೇಯಲ್ಲೂ ಭಾರತಕ್ಕೆ ಚಿನ್ನ ಗೆದ್ದ ಸಂಭ್ರಮ. ಗುರುವಾರವೂ ಹಲವು ಸ್ಪರ್ಧೆಗಳಲ್ಲಿ ಭಾರತ ಪದಕ ಗೆಲ್ಲುವ ವಿಶ್ವಾಸ ಹೊಂದಿದೆ. 
ಚೀನಾದಲ್ಲಿ ನಡೆದಿರುವ ಏಷಿಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್‌ ಛೋಪ್ರಾ ಹಾಗೂ 4x400ಮೀಟರ್‌ ರಿಲೇ ತಂಡದ ಸಂಭ್ರಮ
ಚೀನಾದಲ್ಲಿ ನಡೆದಿರುವ ಏಷಿಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್‌ ಛೋಪ್ರಾ ಹಾಗೂ 4x400ಮೀಟರ್‌ ರಿಲೇ ತಂಡದ ಸಂಭ್ರಮ

ಭಾರತದ ನೀರಜ್‌ ಛೋಪ್ರಾ ಈ ಬಾರಿ ಜಾವೆಲಿನ್‌ ಎಸೆದು ಚಿನ್ನದ ತಂದಿದ್ಧಾರೆ. ಜಾವೆಲಿನ್‌ನಲ್ಲಿ ಬೆಳ್ಳಿ ಪದಕವೂ ಭಾರತದ ಮುಡಿಗೇರಿದೆ.

ಚೀನಾದ ಕ್ರೀಡಾ ಗ್ರಾಮ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನೇ ಗೇಮ್ಸ್‌ನಲ್ಲಿ ಬುಧವಾರ ನಡೆದ ಜಾವೆಲಿನ್‌ ಸ್ಪರ್ಧೆಯಲ್ಲಿ ವಿಶ್ವದ ಪ್ರಮುಖ ಅಥ್ಲೀಟ್‌ ನೀರಜ್‌ಛೋಪ್ರಾ 88.88 ಮೀಟರ್‌ ದೂರ ಎಸೆಯುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಭಾರತದ ಮೊದಲ ಒಲಂಪಿಕ್‌ ಅಥ್ಲೆಟಿಕ್ಸ್‌ ಛಾಂಪಿಯನ್‌ ಕೂಡ ಆಗಿರುವ 25 ವರ್ಷದ ನೀರಜ್‌ ಛೋಪ್ರಾ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಏಷಿಯನ್‌ ಗೇಮ್ಸ್‌ನಲ್ಲಿ ತಮ್ಮ ಎಂದಿನ ಪ್ರದರ್ಶನ ಮುಂದುವರಿಸಿದರು. ಬುಡಾಪೆಸ್ಟ್‌ನಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ 88.18 ಮೀಟರ್‌ ದೂರ ಜಾವೆಲಿನ್‌ ಎಸೆದಿದ್ದರು. ಅದನ್ನು ಇನ್ನಷ್ಟು ಉತ್ತಮಗೊಳಿಸುವಂತೆ ಹಿಂದಿನ ಸಾಧನೆಯ 0.70 ಮೀಟರ್‌ ಹೆಚ್ಚಿನ ದೂರ ಎಸೆದು ನೀರಜ್‌ ಉತ್ತಮ ಸಾಧನೆ ಮಾಡಿದರು. ಇದರಿಂದ ಅವರಿಗೆ ಮೊದಲ ಸ್ಥಾನದೊಂದಿಗೆ ಚಿನ್ನದ ಪದಕ ಕೊರಳಿಗೇರಿತು.

ಇದೇ ಸ್ಪರ್ಧೆಯಲ್ಲಿ ಭಾರತದ ಕಿಶೋರ್‌ ಜೆನಾ ಕೂಡ ಉತ್ತಮ ಸಾಧನೆ ಮಾಡಿದರೂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಜೆನಾ 87.54 ಮೀಟರ್‌ ದೂರ ಎಸೆದು ಬೆಳ್ಳಿ ಪದಕ ಪಡೆದರು. ಇದರಿಂದ ಜಾವೆಲಿನ್‌ ಎಸೆತದಲ್ಲಿ ಮೊದಲೆರಡು ಸ್ಥಾನಗಳು ಭಾರತದ ಪಾಲಾದವು.

4x400ಮೀಟರ್‌ ರಿಲೇ

ಇದಲ್ಲದೇ ಬುಧವಾರ ಭಾರತ 4x400ಮೀಟರ್‌ ರಿಲೇ ಓಟದಲ್ಲೂ ಚಿನ್ನದ ಪದಕ ಗೆದ್ದು ಸಂಭ್ರಮಿಸಿತು. ಅನಸ್‌ ಮುಹಮ್ಮದ್‌ ಯಾಹಿಯಾ, ಅಮೋಜ್‌ ಜಾಕೋಬ್‌, ಮುಹಮ್ಮದ್‌ ಅಜ್ಮಲ್‌ ವರಿಯಾಥೋಡಿ ಹಾಗೂ ರಾಜೇಶ್‌ ರಮೇಶ್‌ ಅವರ ಜೋಡಿ ನೂರು ನಿಮಿಷದಲ್ಲಿ ಓಟ ಪೂರೈಸಿ ಮೊದಲ ಸ್ಥಾನ ಪಡೆದುಕೊಂಡಿದೆ.

ಪದಕ ಬೇಟೆ

ಭಾರತ ಏಷಿಯನ್‌ ಗೇಮ್ಸ್‌ನಲ್ಲಿ 81 ಮೆಡಲ್‌ಗಳನ್ನೂ ಈವರೆಗೂ ಪಡೆದುಕೊಂಡಿದೆ. ಈ ಮೂಲಕ ಐದು ವರ್ಷದ ಹಿಂದೆ ಜಕಾರ್ತದಲ್ಲಿ ನಡೆದಿದ್ದ ಹಿಂದಿನ ಏಷಿಯನ್‌ ಗೇಮ್ಸ್‌ನ ಪದಕ ಪಟ್ಟಿಯ ದಾಖಲೆಯನ್ನು ಮುರಿದಿದೆ. ಹಿಂದಿನ ಏಷಿಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಲಭಿಸಿದ್ದು70 ಪದಕ. ಇದರಲ್ಲಿ 16 ಚಿನ್ನ, 23 ಬೆಳ್ಳಿ ಹಾಗೂ 31 ಕಂಚಿನ ಪದಕ ಸೇರಿದ್ದವು.

ಈವರೆಗಿನ ಏಷಿಯನ್‌ ಗೇಮ್ಸ್‌ಗಳ ಪದಕ ಪಟ್ಟಿಯನ್ನು ಗಮನಿಸಿದರೆ ಭಾರತ ಬಹಳಷ್ಟು ಮುಂದೆ ಬಂದಿದೆ. ನಾವು ಅತಿ ಹೆಚ್ಚಿನ ಪದಕ ಪಡೆದ ಸಂಭ್ರಮದಲ್ಲಿದ್ದೇವೆ. ನಮ್ಮ ಅಥ್ಲೀಟ್‌ಗಳ ಕ್ರೀಡಾಸ್ಪೂರ್ತಿ, ಶ್ರದ್ದೆಯೂ ಇದಕ್ಕೆ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಈವರೆಗೂ ಭಾರತ 18 ಚಿನ್ನ, 31 ಬೆಳ್ಳಿ ಹಾಗೂ 32 ಕಂಚಿನ ಪದಕವನ್ನು ಪಡೆದುಕೊಂಡಿದೆ.

ಮೊದಲನೇ ಸ್ಥಾನದಲ್ಲಿರುವ ಚೀನಾ 316 ಪದಕಗಳನ್ನು ಪಡೆದಿದ್ದು ಇದರಲ್ಲಿ ಚಿನ್ನದ ಪದಕಗಳ ಸಂಖ್ಯೆಯೇ 171. ಎರಡನೇ ಸ್ಥಾನದಲ್ಲಿ ಜಪಾನ್‌ ಹಾಗೂ ಮೂರನೇ ಸ್ಥಾನದಲ್ಲಿ ಕೋರಿಯಾ ದೇಶಗಳಿವೆ. ಭಾರತವು ನಾಲ್ಕನೇ ಸ್ಥಾನದಲ್ಲಿದೆ.

ಗುರುವಾರದ ಸ್ಪರ್ಧೆಗಳು

ಗುರುವಾರ ಕೂಡ ಹಲವು ಸ್ಪರ್ಧೆಗಳಿವೆ. ಇದರಲ್ಲಿ ಟೆನ್ನಿಸ್‌ ಸಿಂಗಲ್ಸ್‌ ನಲ್ಲಿ ಸಿಂಧು ಕೂಡ ಇದ್ಧಾರೆ. ಮಹಿಳಾ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾರತ ತಂಡ ಸೆಮಿ ಫೈನಲ್‌ ತಲುಪಿದೆ. ಪುರುಷರ ಮ್ಯಾರಥಾನ್‌ನಲ್ಲಿ ಬೆಳ್ಳಿಯಪ್ಪ ಹಾಗೂ ಮನ್‌ಸಿಂಗ್‌ ಕೂಡ ಪದಕ ನಿರೀಕ್ಷೆಯಲ್ಲಿದ್ದಾರೆ. ಅಕ್ಟೋಬರ್‌ 8ವರೆಗೂ ಏಷಿಯನ್‌ ಗೇಮ್ಸ್‌ ನಡೆಯಲಿದ್ದು, ಭಾರತ ಪದಕದ ಪಟ್ಟಿಯಲ್ಲಿ 100ರ ಗಡಿ ದಾಟುವ ನಿರೀಕ್ಷೆ ಹೊಂದಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ