logo
ಕನ್ನಡ ಸುದ್ದಿ  /  ಕ್ರೀಡೆ  /  Arjun Tendulkar: ಕೊಹ್ಲಿಯಂತೆ ಫಿಟ್ ಆಗಿರಲು ಅರ್ಜುನ್ ತೆಂಡೂಲ್ಕರ್ ಶ್ರಮ; ಸಿಕ್ಸ್ ಪ್ಯಾಕ್ ಆಬ್ಸ್ ಪ್ರದರ್ಶಿಸಿದ ಸಚಿನ್ ಪುತ್ರ

Arjun Tendulkar: ಕೊಹ್ಲಿಯಂತೆ ಫಿಟ್ ಆಗಿರಲು ಅರ್ಜುನ್ ತೆಂಡೂಲ್ಕರ್ ಶ್ರಮ; ಸಿಕ್ಸ್ ಪ್ಯಾಕ್ ಆಬ್ಸ್ ಪ್ರದರ್ಶಿಸಿದ ಸಚಿನ್ ಪುತ್ರ

Jayaraj HT Kannada

Jul 27, 2023 08:03 PM IST

google News

ಅರ್ಜುನ್‌ ತೆಂಡೂಲ್ಕರ್‌ ಮತ್ತು ವಿರಾಟ್‌ ಕೊಹ್ಲಿ

    • Arjun Tendulkar Six Pack Abs: ದಿಗ್ಗಜ ಕ್ರಿಕೆಟಿಗ ಸಚಿನ್‌ ಪುತ್ರ ಅರ್ಜುನ್ ತೆಂಡೂಲ್ಕರ್ ಪ್ರಸ್ತುತ ದೇವಧರ್ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಈ ನಡುವೆ ಅರ್ಜುನ್ ತಮ್ಮ ಫಿಟ್ನೆಸ್ ಕಡೆಗೂ ಗಮನ ಹರಿಸಿದ್ದಾರೆ.
ಅರ್ಜುನ್‌ ತೆಂಡೂಲ್ಕರ್‌ ಮತ್ತು ವಿರಾಟ್‌ ಕೊಹ್ಲಿ
ಅರ್ಜುನ್‌ ತೆಂಡೂಲ್ಕರ್‌ ಮತ್ತು ವಿರಾಟ್‌ ಕೊಹ್ಲಿ

ಪ್ರಸಕ್ತ ಸಾಲಿನ ಐಪಿಎಲ್‌ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ಪರ ಪದಾರ್ಪಣೆ ಮಾಡಿದ್ದ ಅರ್ಜುನ್‌ ತೆಂಡೂಲ್ಕರ್‌‌ (Arjun Tendulkar), ಇದೀಗ ತಮ್ಮ ಫೀಟ್‌ನೆಸ್‌ ಕಡೆಗೆ ಗಮನ ಕೊಡುತ್ತಿದ್ದಾರೆ. ಟೀಮ್ ಇಂಡಿಯಾದಲ್ಲಿ ಫಿಟ್‌ನೆಸ್ ವಿಷಯದಲ್ಲಿ ಮಾಜಿ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಮೈದಾನದಲ್ಲಿ ಪಂದ್ಯದ ವೇಳೆಗೆ ಚುರುಕಾಗಿ ಓಡಾಡುವ ವಿರಾಟ್‌ರಂತಹ ಫೀಟ್‌ನೆಸ್‌ ಪಡೆಯಲು ಯುವ ಕ್ರಿಕೆಟಿಗರು ಬಯಸುತ್ತಾರೆ. ಇದೀಗ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ಕೂಡಾ ಅದೆ ದಾರಿಯಲ್ಲಿ ನಡೆಯುತ್ತಿದ್ದಾರೆ.

ವಿರಾಟ್ ಕೊಹ್ಲಿ ಫಿಟ್ನೆಸ್ ಫ್ರೀಕ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಲ್ಲದೆ ಅವರು ತಮ್ಮ ಆಹಾರ ಕ್ರಮ ಹಾಗೂ ಜೀವನಶೈಲಿ ವಿಚಾರವಾಗಿಯೂ ಎಚ್ಚರಿಕೆಯಿಂದಿರುತ್ತಾರೆ. ಸಾಮಾನ್ಯವಾಗಿ ಅವರು ಜಿಮ್‌ನಲ್ಲಿ ಬೆವರು ಸುರಿಸುವುದನ್ನು ಆಗಾಗ ಕಾಣಬಹುದು. ಅವರೇ ತಮ್ಮ ವರ್ಕೌಟ್‌ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ದಿಗ್ಗಜ ಕ್ರಿಕೆಟಿನ ಸಚಿನ್‌ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ ಇದೇ ರೀತಿಯ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯ ಮೂಲಕ ಅರ್ಜುನ್ ಇತ್ತೀಚೆಗೆ ನೆಟ್ಟಿಗರ ಗಮನ ಸೆಳೆದಿದ್ದಾರೆ. ಶರ್ಟ್ ಲೆಸ್ ಮಿರರ್ ಸೆಲ್ಫಿಯನ್ನು ಸ್ಟೋರಿಯಲ್ಲಿ ಹಂಚಿಕೊಂಡು, ತಮ್ಮ ಸಿಕ್ಸ್‌ಪ್ಯಾಕ್‌ ದೇಹ ತೋರಿಸಿದ್ದಾರೆ. ಶರ್ಟ್‌ ತೆಗೆದು ತಮ್ಮ ಸಿಕ್ಸ್ ಪ್ಯಾಕ್ ಆಬ್ಸ್ ಪ್ರದರ್ಶಿಸಿರುವ ಅರ್ಜುನ್ ಫೋಟೋ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅರ್ಜುನ್‌ ತಮ್ಮ ಆಟದ ಜೊತೆಜೊತೆಗೆ ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂಬುದನ್ನು ಫೋಟೋ ಮೂಲಕ ತಿಳಿಸಿದ್ದಾರೆ.

ಅರ್ಜುನ್‌ ತೆಂಡೂಲ್ಕರ್‌ ಇನ್‌ಸ್ಟಾಗ್ರಾಮ್‌ ಸ್ಟೋರಿ

ಐಪಿಎಲ್ 2023ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಪದಾರ್ಪಣೆ ಮಾಡಿದ ಅರ್ಜುನ್ ತೆಂಡೂಲ್ಕರ್, 4 ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದರು. ತಮ್ಮ ಬೌಲಿಂಗ್ ಮೂಲಕ ಎಲ್ಲರ ಮನ ಗೆದ್ದಿದ್ದರು. ಅದರಲ್ಲೂ ಒಂದು ಪಂದ್ಯದಲ್ಲಿ ಅರ್ಜುನ್ ಡೆತ್ ಓವರ್‌ಗಳಲ್ಲಿ ಅದ್ಭುತವಾಗಿ ಬೌಲ್ ಮಾಡಿದರು. ಆ ಪಂದ್ಯದಲ್ಲಿ ತಮ್ಮ ತಂದೆ ಸಚಿನ್ ತೆಂಡೂಲ್ಕರ್ ಅವರಿಂದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಆಡಿದ ಒಟ್ಟು ನಾಲ್ಕು ಪಂದ್ಯಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆದ ಅರ್ಜುನ್‌, 92 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.

ದೇವಧರ್ ಟ್ರೋಫಿಯಲ್ಲಿ ಅರ್ಜುನ್ ತೆಂಡೂಲ್ಕರ್

23 ವರ್ಷದ ವೇಗದ ಬೌಲರ್, ಪ್ರಸ್ತುತ ದೇವಧರ್ ಟ್ರೋಫಿಯಲ್ಲಿ ದಕ್ಷಿಣ ವಲಯದ ಪರ ಆಡುತ್ತಿದ್ದಾರೆ. ಆದರೆ ಪ್ರಸ್ತುತ ಅವರಿಗೆ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ.

ರಿತಿಕಾ ತುಂಬಾ ಸರಳ ಜೀವಿ, ನಮ್ಮ ಮನೆಯಲ್ಲಿ ಕೆಳಗೆ ಕೂತು ಊಟ ಮಾಡಿದರು; ರೋಹಿತ್​ ಪತ್ನಿಯ ಸರಳತೆ ಕೊಂಡಾಡಿದ ತಿಲಕ್ ವರ್ಮಾ ತಂದೆ

ವೆಸ್ಟ್ ಇಂಡೀಸ್​​ ಎದುರಿನ ಟಿ20 ಸರಣಿಗೆ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಎಡಗೈ ಬ್ಯಾಟ್ಸ್​ಮನ್​ ತಿಲಕ್ ವರ್ಮಾ (Tilak Varma) ಅವರಿಗೆ ಅವಕಾಶ ನೀಡಲಾಗಿದೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಈಗ ತಿಲಕ್ ವರ್ಮಾ ಅವರ ತಂದೆ ನಂಬೂರಿ ನಾಗರಾಜು, ರೋಹಿತ್​ ಶರ್ಮಾ ಮತ್ತು ರಿತಿಕಾ ಸಜ್ದೇಶ್ ಕುರಿತು ಆಸಕ್ತಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ತಿಲಕ್ ವರ್ಮಾ ಟೀಮ್​ ಇಂಡಿಯಾಗೆ ಆಯ್ಕೆಯಾಗುವುದಕ್ಕೂ ಮುನ್ನ ರೋಹಿತ್​-ರಿತಿಕಾ ತಮ್ಮ ಮನೆಗೆ ಬಂದಿರುವುದಾಗಿ ಹೇಳಿದ್ದಾರೆ. ನಾನು ಒಬ್ಬ ಎಲೆಕ್ಟ್ರಿಷಿಯನ್. ಆರ್ಥಿಕವಾಗಿ ನಾವು ಸಬಲರಲ್ಲ. ಆದರೆ ಎಂತಹ ಪರಿಸ್ಥಿತಿಯಲ್ಲೂ ತಿಲಕ್ ವರ್ಮಾ ತನ್ನ ಗುರಿ, ಗಮನ ಕಳೆದುಕೊಂಡಿಲ್ಲ ಎಂದರು. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಹೆಚ್ಚಿನ ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ