logo
ಕನ್ನಡ ಸುದ್ದಿ  /  ಕ್ರೀಡೆ  /  Dhoni Vs Jadeja: ಎಂಎಸ್ ಧೋನಿ ಜೊತೆ ರವೀಂದ್ರ ಜಡೇಜಾ ಮುನಿಸು; ಆಲ್​ರೌಂಡರ್ ಮನವೊಲಿಕೆಗೆ ಮುಂದಾದ ಸಿಎಸ್​ಕೆ ಸಿಇಒ ಕಾಸಿ ವಿಶ್ವನಾಥನ್​

Dhoni vs Jadeja: ಎಂಎಸ್ ಧೋನಿ ಜೊತೆ ರವೀಂದ್ರ ಜಡೇಜಾ ಮುನಿಸು; ಆಲ್​ರೌಂಡರ್ ಮನವೊಲಿಕೆಗೆ ಮುಂದಾದ ಸಿಎಸ್​ಕೆ ಸಿಇಒ ಕಾಸಿ ವಿಶ್ವನಾಥನ್​

Prasanna Kumar P N HT Kannada

May 25, 2023 10:44 PM IST

ಎಂಎಸ್ ಧೋನಿ ಜೊತೆ ರವೀಂದ್ರ ಜಡೇಜಾ ಮುನಿಸು

    • ರವೀಂದ್ರ ಜಡೇಜಾ ಅವರು ಎಂಎಸ್​ ಧೋನಿ ಜೊತೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಅಭಿಮಾನಿಗಳು ಜಡೇಜಾ ತಂಡವನ್ನು ತೊರೆಯುತ್ತಾರಾ ಎಂಬ ಆತಂಕಕ್ಕೂ ಒಳಗಾಗಿದ್ದಾರೆ.
ಎಂಎಸ್ ಧೋನಿ ಜೊತೆ ರವೀಂದ್ರ ಜಡೇಜಾ ಮುನಿಸು
ಎಂಎಸ್ ಧೋನಿ ಜೊತೆ ರವೀಂದ್ರ ಜಡೇಜಾ ಮುನಿಸು

16ನೇ ಆವೃತ್ತಿಯ ಐಪಿಎಲ್ (IPL 2023)​ ಮುಕ್ತಾಯದ ಸನಿಹಕ್ಕೆ ಬಂದು ನಿಂತಿದೆ. ಎರಡು ತಿಂಗಳಿಂದ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣ ಬಡಿಸಿದ್ದ ಕಲರ್​ ಲೀಗ್​ಗೆ ಮೇ 28ರಂದು ಅದ್ಧೂರಿ ತೆರೆ ಬೀಳಲಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್​ ಫೈನಲ್ (CSK Final)​ ಪ್ರವೇಶಿಸಿದ್ದು, ತನ್ನ ಎದುರಾಳಿ ತಂಡಕ್ಕಾಗಿ ಎದುರು ನೋಡುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ; ಮೈಮೇಲೆ ಸುಟ್ಟ ಗಾಯ, ಆರೋಪಿ ಅರೆಸ್ಟ್

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ಮೇ 26ರಂದು ನಡೆಯುವ ಮುಂಬೈ ಇಂಡಿಯನ್ಸ್​ ಮತ್ತು ಗುಜರಾತ್ ಟೈಟಾನ್ಸ್​​ ತಂಡಗಳ (MI vs GT Match) ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್​ನಲ್ಲಿ ಆಡಲಿದೆ. ಇದರ ನಡುವೆಯೇ ಚೆನ್ನೈ ಸೂಪರ್ ಕಿಂಗ್ಸ್​ (Chennai Super Kings) ಕ್ಯಾಂಪ್​ನಿಂದ ಶಾಕಿಂಗ್​ ಸುದ್ದಿಯೊಂದು ಹೊರ ಬಿದ್ದಿದೆ. ಸಿಎಸ್​ಕೆ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.

ಇವುಗಳನ್ನು ಪುಷ್ಠೀಕರಿಸುವ ಕೆಲವು ಸನ್ನಿವೇಶಗಳೂ ನಡೆದಿದ್ದು, ಯಲ್ಲೋ ಆರ್ಮಿ ಫ್ಯಾನ್ಸ್​ ಆತಂಕಕ್ಕೆ ಒಳಗಾಗಿದ್ದಾರೆ. ನಿಜ, ರವೀಂದ್ರ ಜಡೇಜಾ ಅವರು ಎಂಎಸ್​ ಧೋನಿ (Ravindra Jadeja vs MS Dhoni) ಜೊತೆಗೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಅಭಿಮಾನಿಗಳು ಜಡೇಜಾ ತಂಡವನ್ನು ತೊರೆಯುತ್ತಾರಾ ಎಂಬ ಆತಂಕಕ್ಕೂ ಒಳಗಾಗಿದ್ದಾರೆ.

ಏನಾಗಿತ್ತು?

ಮೇ 20ರಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಎದುರಿನ ಪಂದ್ಯದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್​ ನಾಯಕ ಧೋನಿ ಹಾಗೂ ಆಲ್​ರೌಂಡರ್​ ರವೀಂದ್ರ ಜಡೇಜಾ ಮಧ್ಯೆ ಮೈದಾನದಲ್ಲೇ ವಾಕ್ಸಮರ ನಡೆದಿತ್ತು. ಅಂದು ಎಲ್ಲಾ ಪ್ಲೇಯರ್ಸ್​ ಪ್ಲೇ ಆಫ್​ಗೆ ಎಂಟ್ರಿಕೊಟ್ಟ ಸಂಭ್ರಮದಲ್ಲಿ ಇದ್ದರೆ, ಇತ್ತ ಜಡೇಜಾಗೆ ಧೋನಿ ತರಾಟೆ ತೆಗೆದುಕೊಂಡಿದ್ರು.

ಧೋನಿ ಮಾತುಗಳನ್ನು ಕೇಳುತ್ತಿದ್ದ ಜಡೇಜಾ, ಮುಖದಲ್ಲಿ ಮಗು ಮಾಯವಾಗಿತ್ತು. ಅಲ್ಲದೆ ಬೇಸರದಿಂದ ಜಡ್ಡು ಡಗೌಟ್​ಗೆ ತೆರಳಿದ್ದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದವು. ಅಂದು ತಂಡದಲ್ಲಿ ತೊರೆಯಬೇಕೆಂದರೆ ತೊರೆದು ಬಿಡು ಎಂದು ಧೋನಿ ಹೇಳಿರುವ ರೀತಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ಕರ್ಮ ರಿಟರ್ನ್ಸ್​ ಎಂದಿದ್ದ ಜಡೇಜಾ

ಇದರ ಬೆನ್ನಲ್ಲೇ ಮರು ದಿನವೇ ಜಡೇಜಾ ತನ್ನ ಸೋಷಿಯಲ್​ ಮೀಡಿಯಾದಲ್ಲಿ ಕರ್ಮ ಯಾರನ್ನೂ ಬಿಡಲ್ಲ ಎನ್ನುವ ಅರ್ಥದಲ್ಲಿ ಪೋಸ್ಟ್​ ಹಾಕಿದ್ದರು. ಕರ್ಮ ನಿಮಗೂ ಬರುತ್ತದೆ. ತಕ್ಷಣವೇ ಬರಬಹುದು ಅಥವಾ ತಡವೂ ಆಗಬಹುದು. ಆದರೆ ಖಂಡಿತವಾಗಿ ಬರುತ್ತದೆ ಎಂಬ ಪೋಸ್ಟ್​ ಅನ್ನು ಟ್ವಿಟರ್​ನಲ್ಲಿ ಜಡೇಜಾ ಶೇರ್​ ಮಾಡಿದ್ದರು. ಪತ್ನಿ ರಿವಾಬಾ ಈ ಪೋಸ್ಟ್​ಗ್ರ ಪ್ರತಿಕ್ರಿಯಿಸಿ, ನಿಮ್ಮ ಸ್ವಂತ ಹಾದಿಯನ್ನು ಅನುಕರಣೆ ಮಾಡಿ ಎಂದಿದ್ದರು.

ಎಲ್ಲರೂ ಇದು ಇಲ್ಲಿಗೆ ಮುಗಿಯಿತು ಎಂದುಕೊಂಡಿದ್ದರು. ಆದರೆ ಈಗ ಮತ್ತೆ ಶುರುವಾಗಿದೆ. ಮೊದಲ ಕ್ವಾಲಿಫೈಯರ್ ಪಂದ್ಯದ ಬಳಿಕ ಮತ್ತೊಂದು ಘಟನೆ ನಡೆದಿದೆ. ಕ್ವಾಲಿಫೈಯರ್​​ನಲ್ಲಿ ಗುಜರಾತ್​ ವಿರುದ್ಧ ಗೆದ್ದ ಸಂಭ್ರಮದಲ್ಲಿ ಆಟಗಾರರು ಇದ್ದರು. ಆದರೆ ರವೀಂದ್ರ ಜಡೇಜಾ ಒಬ್ಬಂಟಿಯಾಗಿ ತೆರಳಿದ್ದು ಭಾರಿ ಚರ್ಚೆಯಾಗಿತ್ತು.

ಸಿಎಸ್​ಕೆ ಸಿಇಒ ಮಾತುಕತೆ

ಇದೇ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಸಿ ವಿಶ್ವನಾಥನ್ (CSK CEO Kasi Viswanathan) ಅವರು ಆಲ್​ರೌಂಡರ್ ರವೀಂದ್ರ ಜಡೇಜಾ ಅವರನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಕೆಲ ಹೊತ್ತು ಕಾಸಿ ವಿಶ್ವನಾಥನ್ ಅವರು ಜಡೇಜಾ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕವೂ ಜಡೇಜಾ ನಿರಾಸೆಯಿಂದಲೇ ಹೊರಟರು.

ವಿಶ್ವನಾಥನ್ ಅವರು ಜಡೇಜಾರನ್ನು ಸಮಾಧಾನಪಡಿಸುತ್ತಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಹಾಗಾಗಿ ಸಿಎಸ್​ಕೆ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಜೋರಾಗಿವೆ. ಕಳೆದ ವರ್ಷವೂ ಜಡೇಜಾ, ಚೆನ್ನೈ ಫ್ರಾಂಚೈಸಿ ಜೊತೆಗೆ ಮುನಿಸಿಕೊಂಡಿದ್ದರು. ನಾಯಕತ್ವ ನೀಡಿ ಅರ್ಧಕ್ಕೆ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿದ್ದು ಇದಕ್ಕೆ ಕಾರಣ.

    ಹಂಚಿಕೊಳ್ಳಲು ಲೇಖನಗಳು