Team India: ಭಾರತೀಯ ಆಟಗಾರರು ಇನ್ಮುಂದೆ ಫುಲ್ ಬ್ಯುಸಿ; ತವರಿನಂಗಳದ ಮುಂಬರುವ ಕ್ರಿಕೆಟ್ ಸರಣಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ
Jul 26, 2023 07:03 AM IST
ಟೀಮ್ ಇಂಡಿಯಾದ ಮುಂಬರುವ ಕ್ರಿಕೆಟ್ ಸರಣಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ
- Team India: ತವರಿನಂಗಳದಲ್ಲಿ ನಡೆಯಲಿರುವ ಟೀಮ್ ಇಂಡಿಯಾದ ಮುಂಬರುವ ಕ್ರಿಕೆಟ್ ಸರಣಿಗಳ ವೇಳಾಪಟ್ಟಿಯನ್ನು (Indian Cricket Team 2023-24 Schedule) ಬಿಸಿಸಿಐ ಬಿಡುಗಡೆ ಮಾಡಿದೆ.
ವೆಸ್ಟ್ ಇಂಡೀಸ್ ಸರಣಿ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾ (Team India), ಕ್ರಿಕೆಟ್ ಪಂದ್ಯಗಳಲ್ಲಿ ಫುಲ್ ಬ್ಯುಸಿಯಾಗಿರಲಿದೆ. ತವರಿನಲ್ಲಿ ನಡೆಯಲಿರುವ ಮುಂಬರುವ ಟೀಮ್ ಇಂಡಿಯಾ, ಸರಣಿಗಳ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಪ್ರಕಟಿಸಿದೆ. ಏಕದಿನ ವಿಶ್ವಕಪ್‌ಗೂ (ODI World Cup 2023) ಮುನ್ನ ಈ ಸರಣಿಗಳು ಶುರುವಾಗಲಿದ್ದು, 2024ರ ಮಾರ್ಚ್ವರೆಗೂ ನಡೆಯಲಿವೆ. ಆಟಗಾರರು ನಿರಂತರ ಕ್ರಿಕೆಟ್ನಲ್ಲಿ ಬ್ಯುಸಿ ಆಗಿರಲಿದ್ದಾರೆ.
ಭಾರತದಲ್ಲಿ ಸೆಪ್ಟೆಂಬರ್ನಿಂದ ಶುರುವಾಗುವ ಈ ಸರಣಿಗಳಲ್ಲಿ ಟೀಮ್ ಇಂಡಿಯಾ 5 ಟೆಸ್ಟ್, 3 ಏಕದಿನ ಮತ್ತು 8 ಟಿ20 ಒಳಗೊಂಡಂತೆ ಒಟ್ಟು 16 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಆಸ್ಟ್ರೇಲಿಯಾ (Australia), ಅಫ್ಘಾನಿಸ್ತಾನ (Afghanistan), ಇಂಗ್ಲೆಂಡ್ (England) ಎದುರು ಜರುಗುವ ಸರಣಿಗಳು ಇವಾಗಿವೆ. ವಿಶ್ವಕಪ್ಗೆ ಪೂರ್ವ ತಯಾರಿಗಾಗಿ ಆಸ್ಟ್ರೇಲಿಯಾ ತಂಡವನ್ನು ಭಾರತ ಮೊದಲು ಏಕದಿನ ಸರಣಿಯ ಮೂಲಕ ಎದುರಿಸಲಿದೆ. ಉಳಿದ ಸರಣಿಗಳು ವಿಶ್ವಕಪ್ ನಂತರ ನಡೆಯಲಿವೆ.
ಏಕದಿನ ವಿಶ್ವಕಪ್‌ಗೂ ಮೊದಲು, ಸೆಪ್ಟೆಂಬರ್ 22 ರಿಂದ 27ರವರೆಗೆ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಪ್ರಯಾಣ ಬೆಳೆಸಲಿದ್ದು, ಟೀಮ್ ಇಂಡಿಯಾ ಎದುರು 3 ಪಂದ್ಯಗಳ ಓಡಿಐ ಸರಣಿಯನ್ನು ಆಡಲಿದೆ. ವಿಶ್ವಕಪ್ ಮುಗಿದ 4 ದಿನಗಳಲ್ಲೇ ಆಸ್ಟ್ರೇಲಿಯಾ ವಿರುದ್ಧವೇ 5 ಟಿ20 ಪಂದ್ಯಗಳನ್ನಾಡಲಿದೆ ಭಾರತ. ಈ ಬ್ಲಾಕ್ ಬಸ್ಟರ್ ಚುಟುಕು ಸರಣಿಯು ನವೆಂಬರ್ 23ರಿಂದ ಪ್ರಾರಂಭವಾಗಲಿದೆ.
ಅಫ್ಘಾನಿಸ್ತಾನ ವಿರುದ್ಧ ಇದೇ ಮೊದಲ ಬಾರಿಗೆ
2024ರ ಆರಂಭದಲ್ಲೇ ಅಫ್ಘಾನಿಸ್ತಾನ ತಂಡವು ಸೀಮಿತ ಓವರ್ಗಳ ದ್ವಿಪಕ್ಷೀಯ ಸರಣಿಗಾಗಿ ಇದೇ ಮೊದಲ ಬಾರಿಗೆ ಭಾರತಕ್ಕೆ ಪ್ರಯಾಣ ಬೆಳೆಸಲು ಸಿದ್ಧವಾಗಿದೆ. ಈ ಟಿ20 ಸರಣಿಯು ಜನವರಿ 11ರಿಂದ 17ರವರೆಗೆ ಈ ಸರಣಿ ಜರುಗಲಿದೆ. ಈ ಸರಣಿಯ ಬೆನ್ನಲ್ಲೇ ಭಾರತ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ. ಇಂಗ್ಲೆಂಡ್-ಭಾರತ ತಂಡಗಳ ನಡುವೆ ಐದು ಟೆಸ್ಟ್ ಪಂದ್ಯಗಳು ನಡೆಯಲಿವೆ.
ಆಸ್ಟ್ರೇಲಿಯಾ ಎದುರಿನ ಟಿ20 ಸರಣಿ ಬಳಿಕ ಟೀಮ್ ಇಂಡಿಯಾ, ಸೌತ್ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಟೆಸ್ಟ್ ಸರಣಿಯಲ್ಲಿ ಕಾದಾಟ ನಡೆಸಲಿದೆ. ಕಳೆದ ಬಾರಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಸೋಲು ಕಂಡಿತ್ತು. ಇದೀಗ ಆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಭಾರತೀಯ ಆಟಗಾರರಿಗೆ ಬಿಡುವಿಲ್ಲದ ವೇಳಾಪಟ್ಟಿ ಇದಾಗಿದ್ದು, ಪ್ರಮುಖ ಆಟಗಾರರು ಹೆಚ್ಚು ಇಂಜುರಿಗೆ ಒಳಗಾದರೂ ಅಚ್ಚರಿ ಇಲ್ಲ.
ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ
- ಮೊದಲ ಏಕದಿನ ಪಂದ್ಯ - ಸೆಪ್ಟೆಂಬರ್ 22, ಮೊಹಾಲಿ
- ಎರಡನೇ ಏಕದಿನ ಪಂದ್ಯ - ಸೆಪ್ಟೆಂಬರ್ 24, ಇಂದೋರ್
- ಮೂರನೇ ಏಕದಿನ ಪಂದ್ಯ - ಸೆಪ್ಟೆಂಬರ್ 27, ರಾಜ್‌ಕೋಟ್
ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ
- ಮೊದಲನೇ ಟಿ20 ಪಂದ್ಯ - 23 ನವೆಂಬರ್, ವಿಶಾಖಪಟ್ಟಣ
- ಎರಡನೇ ಟಿ20 ಪಂದ್ಯ - 26 ನವೆಂಬರ್, ತಿರುವನಂತಪುರ
- ಮೂರನೇ ಟಿ20 ಪಂದ್ಯ - 28 ನವೆಂಬರ್, ಗುವಾಹಟಿ
- ನಾಲ್ಕನೇ ಟಿ20 ಪಂದ್ಯ - 1 ಡಿಸೆಂಬರ್, ನಾಗ್ಪುರ
- ಐದನೇ ಟಿ20 ಪಂದ್ಯ - 3 ಡಿಸೆಂಬರ್, ಹೈದರಾಬಾದ್
ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿ
- ಮೊದಲ ಟಿ20 ಪಂದ್ಯ - 11 ಜನವರಿ 2024, ಮೊಹಾಲಿ
- ಎರಡನೇ ಟಿ20 ಪಂದ್ಯ - 14 ಜನವರಿ 2024, ಇಂದೋರ್
- ಮೂರನೇ ಟಿ20 ಪಂದ್ಯ - 17 ಜನವರಿ 2024, ಬೆಂಗಳೂರು
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ
- ಮೊದಲನೇ ಟೆಸ್ಟ್ ಪಂದ್ಯ - 25-29 ಜನವರಿ 2024, ಹೈದರಾಬಾದ್
- ಎರಡನೇ ಟೆಸ್ಟ್ ಪಂದ್ಯ - 2-6 ಫೆಬ್ರವರಿ 2024, ವಿಶಾಖಪಟ್ಟಣ
- ಮೂರನೇ ಟೆಸ್ಟ್ ಪಂದ್ಯ - 15-19 ಫೆಬ್ರವರಿ 2024, ರಾಜ್‌ಕೋಟ್
- ನಾಲ್ಕನೇ ಟೆಸ್ಟ್ ಪಂದ್ಯ - 23-27 ಫೆಬ್ರವರಿ 2024, ರಾಂಚಿ
- ಐದನೇ ಟೆಸ್ಟ್ ಪಂದ್ಯ - 7-11 ಮಾರ್ಚ್ 2024, ಧರ್ಮಶಾಲಾ