logo
ಕನ್ನಡ ಸುದ್ದಿ  /  ಕ್ರೀಡೆ  /  Pakistan Cricket Team: ಏಷ್ಯಾಕಪ್, ಆಫ್ಘಾನಿಸ್ತಾನ ಸರಣಿಗೆ ಪಾಕಿಸ್ತಾನ ತಂಡ ಪ್ರಕಟ; ಮಸೂದ್ ಔಟ್, 2 ವರ್ಷಗಳ ಬಳಿಕ ಫಹೀಂ ತಂಡಕ್ಕೆ ವಾಪಸ್

Pakistan Cricket Team: ಏಷ್ಯಾಕಪ್, ಆಫ್ಘಾನಿಸ್ತಾನ ಸರಣಿಗೆ ಪಾಕಿಸ್ತಾನ ತಂಡ ಪ್ರಕಟ; ಮಸೂದ್ ಔಟ್, 2 ವರ್ಷಗಳ ಬಳಿಕ ಫಹೀಂ ತಂಡಕ್ಕೆ ವಾಪಸ್

Raghavendra M Y HT Kannada

Aug 09, 2023 09:52 PM IST

google News

ಮುಂಬರುವ ಏಷ್ಯಾ ಕಪ್‌ಗೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಶಾನ್ ಮಸೂದ್‌ರನ್ನ ತಂಡದಿಂದ ಕೈಬಿಡಲಾಗಿದ್ದು, 2 ವರ್ಷಗಳ ಬಳಿಕ ಫಹೀಮ್ ಅಶ್ರಫ್‌ಗೆ ಸ್ಥಾನ ನೀಡಲಾಗಿದೆ.

  • ಮುಂಬರುವ ಏಷ್ಯಾ ಕಪ್‌ಗೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಶಾನ್ ಮಸೂದ್‌ ಅವರನ್ನು ತಂಡದಿಂದ ಕೈಬಿಡಲಾಗಿದ್ದು, 2 ವರ್ಷಗಳ ಬಳಿಕ ಫಹೀಮ್ ಅಶ್ರಫ್‌ಗೆ ಸ್ಥಾನ ನೀಡಲಾಗಿದೆ.

ಮುಂಬರುವ ಏಷ್ಯಾ ಕಪ್‌ಗೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಶಾನ್ ಮಸೂದ್‌ರನ್ನ ತಂಡದಿಂದ ಕೈಬಿಡಲಾಗಿದ್ದು, 2 ವರ್ಷಗಳ ಬಳಿಕ ಫಹೀಮ್ ಅಶ್ರಫ್‌ಗೆ ಸ್ಥಾನ ನೀಡಲಾಗಿದೆ.
ಮುಂಬರುವ ಏಷ್ಯಾ ಕಪ್‌ಗೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಶಾನ್ ಮಸೂದ್‌ರನ್ನ ತಂಡದಿಂದ ಕೈಬಿಡಲಾಗಿದ್ದು, 2 ವರ್ಷಗಳ ಬಳಿಕ ಫಹೀಮ್ ಅಶ್ರಫ್‌ಗೆ ಸ್ಥಾನ ನೀಡಲಾಗಿದೆ.

ಮುಂಬೈ: ಐಸಿಸಿ ಏಕದಿನ ವಿಶ್ವಕಪ್‌ಗೂ (ICC ODI WORLD CUP) ಮುನ್ನ ನಡೆಯಲಿರುವ ಮಹತ್ವದ ಏಷ್ಯಾಕಪ್‌ಗೆ (Asia Cup 2023) ಪಾಕಿಸ್ತಾನ ತಂಡವನ್ನು (Pakistan Cricket Team) ಪ್ರಕಟಿಸಲಾಗಿದೆ. ಇದರ ಜೊತೆಗೆ ಅಫ್ಘಾನಿಸ್ತಾನ (Afghanistan) ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೂ ಪಾಕ್ ತಂಡವನ್ನು ಘೋಷಿಸಲಾಗಿದೆ.

ಭರ್ಜರಿ ಫಾರ್ಮ್‌ನಲ್ಲಿ ಬಾಬರ್ ಅಜಮ್ (Babar Azam) ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರೀಮಿಯಲ್ ಆಲ್ ರೌಂಡರ್‌ ಆಗಿರುವ ಶಾದಾಬ್ ಖಾನ್ ಬಾಬರ್‌ ಉಪ ನಾಯಕರಾಗಿದ್ದಾರೆ. ಮೊಹಮ್ಮದ್ ರಿಜ್ವಾನ್ ಮತ್ತು ಮೊಹಮ್ಮದ್ ಹ್ಯಾರಿಸ್ ಇಬ್ಬರನ್ನೂ ವಿಕೆಟ್‌ ಕೀಪರ್‌ಗಳನ್ನು ನೇಮಿಸಿದೆ.

ಆದರೆ ಶಾನ್ ಮಸೂದ್‌ ಅವರನ್ನು ತಂಡದಿಂದ ಕೈಬಿಡಲಾಗಿದ್ದು, 2 ವರ್ಷಗಳ ಬಳಿಕ ಫಹೀಮ್ ಅಶ್ರಫ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. 2021ರ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಅಶ್ರಫ್ ಕೊನೆಯ ಏಕದಿನ ಸರಣಿ ಆಡಿದ್ದರು. ಶಾಹೀನ್ ಅಫ್ರಿದಿ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಹ್ಯಾರಿಸ್ ರೌಫ್, ಮೊಹಮ್ಮದ್ ವಾಸೀಂ ಜೂನಿಯರ್ ಹಾಗೂ ನಸೀಮ್ ಶಾ ಅವರು ಅಫ್ರಿದಿ ಸಾಥ್‌ ನೀಡಲಿದ್ದಾರೆ.

ಆಗಸ್ಟ್ 22 ರಿಂದ 26 ರವರೆಗೆ ಶ್ರೀಲಂಕಾದಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೂ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ ಎಂದು ಪಿಸಿಬಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ತಯ್ಯಬ್ ತಾಹೀರ್, ಫಹೀಮ್ ಅಶ್ರಫ್ ಹಾಗೂ ಸೌದ್ ಶಕೀಲ್ ಆಫ್ಘಾನ್ ವಿರುದ್ಧದ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಪಾಕಿಸ್ತಾನ ತಂಡವು ಆಗಸ್ಟ್ 18 ರಂದು ಹಂಬಂಟೋಟಾಗೆ ಆಗಸಲಿದ್ದು, ಪ್ರಸ್ತುತ ಪಾಕ್‌ನಲ್ಲಿ ಆಟಗಾರರು ಆಗಸ್ಟ್ 17 ರಂದು ಶ್ರೀಲಂಕಾಗೆ ತೆರಳುವ ಮುನ್ನ ಅಂದರೆ ಆಗಸ್ಟ್ 14, 15 ಹಾಗೂ 16 ರಂದು ಮೂರು ದಿನಗಳ ಕಾಲ ಲಾಹೋರ್‌ನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುವ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

ಪಾಕ್‌ನ ಕೆಲವು ಆಟಗಾರರು ಲಂಕಾ ಪ್ರೀಮಿಯರ್ ಲೀಗ್ ಮತ್ತು ದಿ ಹಂಡ್ರೆಡ್‌ನಲ್ಲಿ ಭಾಗವಹಿಸಿದ್ದು, ಅವರೆಲ್ಲಾ ಆಗಸ್ಟ್ 18 ರಂದು ಶ್ರೀಲಂಕಾದಲ್ಲಿ ನೇರವಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ.

ಏಷ್ಯಾಕಪ್ ಮತ್ತು ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿಗೆ ಪಾಕಿಸ್ತಾನ ತಂಡ

ಅಬ್ದುಲ್ಲಾ ಶಫೀಕ್, ಫಖರ್ ಜಾಮಾನ್, ಇಮಾಮ್-ಉನ್-ಹಕ್, ಬಾಬರ್ ಅಜಮ್(ನಾಯಕ), ಸಲ್ಮಾನ್ ಅಲಿ ಅಘಾ, ಇಫ್ತೀಕರ್ ಅಹ್ಮದ್, ತಯ್ಯಬ್ ತಾಹೀರ್, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್, ಮೊಹಮ್ ಮೊಹಮ್ಮದ್ ಹ್ಯಾರಿಸ್, ಶಾದಾಬ್ ಖಾನ್ (ಉಪ ನಾಯಕ), ಮೊಹಮ್ಮದ್ ನವಾಜ್, ಉಸಾಮಾ ಮಿರ್, ಫಹೀಮ್ ಅಶ್ರಪ್, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ ಹಾಗೂ ಶಾಹೀನ್ ಅಫ್ರಿದಿ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ