Tilak Varma: ಬಡತನ, ಕಷ್ಟ ಕಾರ್ಪಣ್ಯ ಮೆಟ್ಟಿನಿಂತ ಎಲೆಕ್ಟ್ರಿಷಿಯನ್ ಮಗ; ಐಪಿಎಲ್ನಲ್ಲಿ ಅಬ್ಬರಿಸಿ ಭಾರತ ತಂಡಕ್ಕೆ ಆಯ್ಕೆಯಾದ ತಿಲಕ್ ವರ್ಮಾ
Jul 06, 2023 08:49 AM IST
ಭಾರತ ತಂಡಕ್ಕೆ ಆಯ್ಕೆಯಾದ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ತಿಲಕ್ ವರ್ಮಾ.
- ಮುಂಬೈ ಇಂಡಿಯನ್ಸ್ (Mumbai Indians) ಪರ ಅಬ್ಬರಿಸಿದ್ದ ತಿಲಕ್ ವರ್ಮಾ (Tilak Varma), ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತ ಒಬ್ಬ ಪ್ರತಿಭಾವಂತ ಹುಡುಗ. ಪಟ್ಟ ಪರಿಶ್ರಮಕ್ಕೆ ಒಂದಲ್ಲ, ಒಂದು ದಿನ ಬೆಲೆ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ತಾಜಾ ಉದಾಹರಣೆ ಈ ಬಡ ಪ್ರತಿಭೆ. ಅವರ ಕುರಿತ ಸ್ಟೋರಿ ನೋಡೋಣ.
ಅಜಿತ್ ಅಗರ್ಕರ್ (Ajit Agarkar) ನೇತೃತ್ವದ ಸೆಲೆಕ್ಷನ್ ಕಮಿಟಿಯು ವೆಸ್ಟ್ ಇಂಡೀಸ್ ಟಿ20 ಸರಣಿಗೆ ಟೀಮ್ ಇಂಡಿಯಾ (India vs West Indies) ಪ್ರಕಟವಾಗಿದೆ. ಟೆಸ್ಟ್ ಮತ್ತು ಏಕದಿನ ಸರಣಿ ಬಳಿಕ ಆಗಸ್ಟ್ 3ರಿಂದ ಶುರುವಾಗಲಿರುವ ಟಿ20 ಸರಣಿಗೆ 15 ಸದಸ್ಯರ ಭಾರತದ ಯುವ ತಂಡವನ್ನು ಕಟ್ಟಲಾಗಿದೆ. ಚೊಚ್ಚಲ ಟಾಸ್ಕ್ನಲ್ಲೇ ಪೂರ್ಣ ಅಂಕ ಪಡೆದಿರುವ ಅಗರ್ಕರ್, ಕೆರಿಬಿಯನ್ನರ ವಿರುದ್ಧ ಸಮರಕ್ಕೆ ಯುವ ಸೇನೆಯನ್ನೇ ಕಟ್ಟಿದ್ದಾರೆ.
ಹಾರ್ದಿಕ್ ಪಾಂಡ್ಯ (Hardik Pandya) ಮುಂದಾಳತ್ವ ವಹಿಸಿರುವ ಈ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹಿರಿಯ ಆಟಗಾರರಿಗೆ ಮಣೆ ಹಾಕಿಲ್ಲ. ಅಚ್ಚರಿ ನಿರ್ಧಾರಗಳನ್ನೂ ಕೈಗೊಳ್ಳಲಾಗಿದೆ. ಐಪಿಎಲ್ನಲ್ಲಿ ಆರ್ಭಟಿಸಿ ಆಯ್ಕೆಯ ನಿರೀಕ್ಷೆಯಲ್ಲಿದ್ದ ಯಂಗ್ಸ್ಟರ್ಸ್ಗೆ ನಿರಾಸೆಯೂ ಆಗಿದೆ. ಇನ್ನೂ ಕೆಲ ಪ್ರತಿಭಾವಂತ ಕ್ರಿಕೆಟಿಗರಿಗೆ ಅದೃಷ್ಟ ಒಲಿದು ಬಂದಿದೆ. ಅದರಲ್ಲಿ ತಿಲಕ್ ವರ್ಮಾ ಕೂಡ ಒಬ್ಬ.
ಆದರೆ, ಮುಂಬೈ ಇಂಡಿಯನ್ಸ್ (Mumbai Indians) ಪರ ಅಬ್ಬರಿಸಿದ್ದ ತಿಲಕ್ ವರ್ಮಾ (Tilak Varma), ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತ ಒಬ್ಬ ಪ್ರತಿಭಾವಂತ ಹುಡುಗ. ಪಟ್ಟ ಪರಿಶ್ರಮಕ್ಕೆ ಒಂದಲ್ಲ, ಒಂದಲ್ಲ, ಒಂದು ದಿನ ಬೆಲೆ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ತಾಜಾ ಉದಾಹರಣೆ ಈ ಬಡ ಪ್ರತಿಭೆ. ಐಪಿಎಲ್ನಲ್ಲಿ ಅಬ್ಬರಿಸಿದ ಇದೀಗ ರಾಷ್ಟ್ರೀಯ ಸೇವೆಗೂ ಸಜ್ಜಾಗಿರುವ ಈ ಹೈದರಾಬಾದ್ ಯುವಕನ, ಕಷ್ಟ ಜೀವನವನ್ನೊಮ್ಮೆ ನೋಡೋಣ.
ಮಧ್ಯಮ ವರ್ಗದ ಕುಟುಂಬ
ಪೂರ್ಣ ಹೆಸರು ನಂಬೂರಿ ಠಾಕೂರ್ ತಿಲಕ್ ವರ್ಮಾ. ಹುಟ್ಟಿದ್ದು ಹೈದರಾಬಾದ್‌ನಲ್ಲಿ. ನವೆಂಬರ್ ನವೆಂಬರ್ 8, 2002. ಅವರ ತಂದೆ ನಂಬೂರಿ ನಾಗರಾಜು ವರ್ಮಾ, ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ತಾಯಿ ಗಾಯತ್ರಿ ದೇವಿ ಗೃಹಿಣಿ. ತರುಣ್ ವರ್ಮಾ ಎಂಬ ಅಣ್ಣ ಇದ್ದಾರೆ. ಮಧ್ಯಮ ವರ್ಗದ ಕುಟುಂಬ ಇವರದ್ದಾಗಿತ್ತು. ಚಿಕ್ಕಿಂದಿನಿಂದಲೇ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದ ತಿಲಕ್, ತೆಲಂಗಾಣದ ಲೀಗಲಾ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡರು.
ತಿಲಕ್ ಟೆನಿಸ್ ಬಾಲ್ ಆಟ ಶಾಕ್ ಆಗಿದ್ರು
ಆದರೆ, ಆರಂಭದಲ್ಲಿ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ ತಂದೆ ನಾಗರಾಜು ತಮ್ಮ ಆರ್ಥಿಕ ಪರಿಸ್ಥಿತಿಯಿಂದ ಮಗನನ್ನು ಕ್ರಿಕೆಟ್ ತರಬೇತಿ ಹಿಂಜರಿಯುತ್ತಿದ್ದರು. ಒಂದು ಸಂಜೆ, ಕೋಚ್ ಬಯಾಶ್ ಅವರು ತನ್ನ ಸ್ನೇಹಿತರೊಂದಿಗೆ ಟೆನಿಸ್ ಕ್ರಿಕೆಟ್ ಆಡುತ್ತಿದ್ದ ತಿಲಕ್ ಬ್ಯಾಟಿಂಗ್ ಬ್ಯಾಟಿಂಗ್ ಶೈಲಿ ಕಂಡು ವಿಸ್ಮಯಗೊಂಡರು. ತಕ್ಷಣವೇ ಸಮಯ ವ್ಯರ್ಥ ಮಾಡದೆ, ತರಬೇತಿ ಎಲ್ಲಿ ಪಡೆಯುತ್ತೀಯಾ ಎಂದು ಕೇಳಿದ್ದು ಸಲಾಮ್ ಬಶಾಯ್.
ಅದಕ್ಕೆ ಉತ್ತರಿಸಿದ ತಿಲಕ್, ನಾನು ಈ ಮೈದಾನದಲ್ಲಿ ಮಾತ್ರ ಆಡುತ್ತೇನೆ. ಬಳಿಕ ಅವರ ತಂದೆಗೆ ಕರೆ ಮಾಡಿದ್ದ ಬಯಾಶ್, ತಿಲಕ್ರಲ್ಲಿ ಅಪಾರ ಕ್ರಿಕೆಟ್ ಕೌಶಲ್ಯವಿದೆ. ಹಾಗಾಗಿ ಕ್ರಿಕೆಟ್ ಅಕಾಡೆಮಿಗೆ ಸೇರಿಸಲು ವಿನಂತಿಸಿದ್ದರು. ಆರ್ಥಿಕ ಪರಿಸ್ಥಿತಿ ಅಷ್ಟಾಗಿ ಇಲ್ಲದ ಕಾರಣ, ತಿಲಕ್ ತಂದೆ ಒಪ್ಪಿರಲಿಲ್ಲ. ಅಲ್ಲದೆ, ತನ್ನ ಮನೆಯಿಂದ ಕ್ರಿಕೆಟ್ ಅಕಾಡೆಮಿ 40 ಕಿಲೋಮೀಟರ್ ದೂರದಲ್ಲಿತ್ತು.
ತಿಲಕ್ ಜವಾಬ್ದಾರಿ ವಹಿಸಿಕೊಂಡ ಕೋಚ್
ಆದರೆ, ಸಲಾಮ್ ಬಶಾಯ್, ಓಡಾಡುವ ಖರ್ಚು, ಕ್ರಿಕೆಟ್ ಅಕಾಡೆಮಿಯ ಶುಲ್ಕ ಎಲ್ಲವೂ ನನ್ನದೇ ಜವಾಬ್ದಾರಿ ಎಂದು ನಾಗರಾಜ್ ಅವರನ್ನು ಒಪ್ಪಿಸಿದ್ದರು. ಹೈದರಾಬಾದ್‌ನ ಲಿಂಗಂಪಲ್ಲಿಯಲ್ಲಿ ಕ್ರಿಕೆಟ್ ಅಕಾಡೆಮಿಗೆ ಇದ್ದರೆ, ಹಳೆಯ ನಗರವಾದ ಚಂದ್ರಯಾನ್ ಗುಟ್ಟಾದಲ್ಲಿ ತಿಲಕ್ ಮನೆಯಿತ್ತು. ಬಯಾಶ್ ಮನೆಗೂ ತಿಲಕ್ ಮನೆಗೂ 2 ಕಿಲೋ ದೂರವಿತ್ತು. ಬೆಳಿಗ್ಗೆ 5 ಗಂಟೆಗೆ ಪ್ರತಿದಿನ ವರ್ಮಾರನ್ನು ಬಯಾಶ್ ಕರೆದೊಯುತ್ತಿದ್ದರು. ಕೆಲವೊಮ್ಮೆ ಬೈಕ್ನಲ್ಲೇ ಈ ಯುವ ಆಟಗಾರ ನಿದ್ದೆಗೆ ಜಾರಿದ್ದೂ ಇದೆ.
ತಂದೆಗೂ ಕೆಲಸ ಕೊಡಿಸಿದ್ದ ಬಯಾಶ್
ಮತ್ತೊಂದು ವಿಷಯವೆಂದರೆ, ಬಯಾಶ್ ಅವರು, ತಿಲಕ್ ತಂದೆಗೆ ಅಕಾಡೆಮಿಯಲ್ಲೇ ಕೆಲಸ ಕೊಡಿಸಿದರು. ಬಳಿಕ ಅಕಾಡೆಮಿಯ ಹತ್ತಿರವೇ ವಾಸಕ್ಕೆ ಬಂದರು. ಸರಿಯಾದ ಕ್ರಿಕೆಟ್ ಕಿಟ್ ಆತನಲ್ಲಿ ಇರಲಿಲ್ಲ. ಎರವಲು ಪಡೆದ ಬ್ಯಾಟ್‌ನಿಂದ ತಮ್ಮ ಮೊದಲ ಶತಕ ಸಿಡಿಸಿದ್ದರು. ಒಂದು ಉತ್ತಮ ಬ್ಯಾಟ್ ಖರೀದಿಸಲು 4-5 ಸಾವಿರ ಬೇಕಾಗಿತ್ತು. ಹಾಗಾಗಿ ಬಯಾಶ್, ತಿಲಕ್ಗೆ ಒಂದು ಸಲಹೆ ನೀಡಿದ್ದರು. ಮುಂಬರುವ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿ, ಶತಕಗಳನ್ನು ಗಳಿಸಿದರೆ, ನಾನು ನಿನಗೆ ಬ್ಯಾಟ್ ಕೊಡಿಸುತ್ತೇನೆ ಎಂದಿದ್ದರು.
ಒಂದೇ ವರ್ಷ ಮೂರು ಫಾರ್ಮೆಟ್ಗೂ ಡೆಬ್ಯೂ
ನಾಲ್ಕು ವರ್ಷಗಳ ನಂತರ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಹೈದರಾಬಾದ್‌ಗಾಗಿ 900ಕ್ಕೂ ಹೆಚ್ಚು ರನ್ ಗಳಿಸಿದರು. ಹೈದರಾಬಾದ್ ರಣಜಿ ಟ್ರೋಫಿ ಸಂಭವನೀಯ ತಂಡಕ್ಕೆ ಆಯ್ಕೆಯಾದರು. ವರ್ಷದ ನಂತರ 2019ರ ಜನವರಿ 2ರಂದು ಅದೇ ತಂಡಕ್ಕೆ ರಣಜಿ ಟ್ರೋಫಿಗೆ ಪದಾರ್ಪಣೆ, 28 ಫೆಬ್ರವರಿ 2019ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಪದಾರ್ಪಣೆ, 2019ರ ಸೆಪ್ಟೆಂಬರ್ 28ರಂದು ಹೈದರಾಬಾದ್ ಪರ ವಿಜಯ್ ಹಜಾರೆ ಟ್ರೋಫಿಗೂ ಡೆಬ್ಯೂ ಮಾಡಿದರು.
ಅಂಡರ್-19, ಐಪಿಎಲ್ ಪ್ರವೇಶ
2020ರ ಅಂಡರ್-19 ಕ್ರಿಕೆಟ್ ವಿಶ್ವಕಪ್‌ಗಾಗಿ ಭಾರತದ ತಂಡದಲ್ಲೂ ತಿಲಕ್ ವರ್ಮಾ ಹೆಸರು ಪಡೆದರು. 2022ರ ಫೆಬ್ರವರಿಯಲ್ಲಿ ಮುಂಬೈ ಇಂಡಿಯನ್ಸ್ ಐಪಿಎಲ್ ಹರಾಜಿನಲ್ಲಿ 1.70 ಕೋಟಿಗೆ ಖರೀದಿಸಿತು. 2020ರ ಅಂಡರ್-19 ವಿಶ್ವಕಪ್ ರನ್ನರ್ ಅಪ್ ತಂಡದ ಭಾಗವಾಗಿದ್ದ ತಿಲಕ್ ವರ್ಮಾ, ಜೊತೆಗಿದ್ದ ಹಲವು ಆಟಗಾರರಿಗೆ ಐಪಿಎಲ್ನಲ್ಲಿ ಅವಕಾಶ ಸಿಕ್ಕಿತ್ತು. 2020 ಮತ್ತು 2021ರಲ್ಲಿ ತಿಲಕ್ಗೆ ಅವಕಾಶ ಸಿಗದ ಕಾರಣ, ಕುಟುಂಬಸ್ಥರು ದುಃಖಕ್ಕೀಡಾಗಿದ್ರು. ಬಳಿಕ ಅದೃಷ್ಟದ ಬಾಗಿಲು ತೆರೆಯಿತು.
ಕೋಚ್ ಬಗ್ಗೆ ಬರೆಯಿರಿ ಎಂದಿದ್ದ ತಂದೆ
ಈ ಖುಷಿಯನ್ನು ಹಂಚಿಕೊಂಡಿದ್ದ ತಿಲಕ್ ವರ್ಮಾ ತಂದೆ, ನನ್ನ ಮಗನ ಬಗ್ಗೆ ಬರೆಯದಿದ್ದರೂ ಪರವಾಗಿಲ್ಲ. ಆದರೆ ಕೋಚ್ ಸಲಾಮ್ ಬಶಾಯ್ ಬಗ್ಗೆ ಬರೆಯಬೇಕು ಎಂದು ಮಾಧ್ಯಮದವರಿಗೆ ಹೇಳಿದ್ದರು. ಅವರಿಂದಲೇ ನನ್ನ ಈ ಮಟ್ಟಕ್ಕೆ ಬೆಳೆದಿದ್ದಾರೆ ಎಂದಿದ್ದರು. ಪ್ರಸಕ್ತ ವರ್ಷ ಮುಗಿದ ಐಪಿಎಲ್ನಲ್ಲಿ 11 ಪಂದ್ಯಗಳಲ್ಲಿ 343 ರನ್, 2022ರ ಐಪಿಎಲ್ನಲ್ಲಿ 14 ಪಂದ್ಯಗಳಲ್ಲಿ 397 ರನ್ ಗಳಿಸಿದ್ದರು.
ಟಿ20 ಸರಣಿಗೆ ಭಾರತ ತಂಡ ಪ್ರಕಟ
ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಷರ್ ಪಟೇಲ್, ಯುಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಆರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಆವೇಶ್ ಖಾನ್, ಮುಕೇಶ್ ಕುಮಾರ್.