logo
ಕನ್ನಡ ಸುದ್ದಿ  /  Sports  /  Cricket News Virat Kohli Eye On Rahul Dravid And Virender Sehwag Records In Wtc Final 2023 Against Australia Jra

Virat Kohli: ಮಹತ್ವದ ಪಂದ್ಯದಲ್ಲಿ ವಿರಾಟ್ ನಿರ್ಮಿಸಬಹುದಾದ ದಾಖಲೆಗಳಿವು; ದ್ರಾವಿಡ್, ಸೆಹ್ವಾಗ್ ರೆಕಾರ್ಡ್ ಮೇಲೆ ಕೊಹ್ಲಿ ಕಣ್ಣು

Jayaraj HT Kannada

Jun 07, 2023 08:12 PM IST

ವಿರಾಟ್‌ ಕೊಹ್ಲಿ

    • WTC final 2023: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಮತ್ತೆ ಶತಕ ಸಿಡಿಸುವ ಭರವಸೆಯನ್ನು ಕೊಹ್ಲಿ ಮೂಡಿಸಿದ್ದಾರೆ. ಕ್ರಿಕೆಟ್‌ನ ಶ್ರೇಷ್ಠ ಆಟಗಾರ ಡಾನ್ ಬ್ರಾಡ್‌ಮನ್ ಹಾಗೂ ಪ್ರಸ್ತುತ ಭಾರತದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ದಾಖಲೆಯತ್ತ ಕೊಹ್ಲಿ ಕಣ್ಣಿಟ್ಟಿದ್ದಾರೆ.
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ (AP)

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ (World Test Championship final) ಪಂದ್ಯ ನಡೆಯುತ್ತಿದ್ದು, ಗೆಲುವಿಗಾಗಿ ಭಾರತ ತಂಡ ಹೋರಾಡಲಿದೆ. ಪಂದ್ಯದಲ್ಲಿ ಭಾರತವು ಮೊದಲು ಫೀಲ್ಡಿಂಗ್‌ ನಡೆಸುತ್ತಿದೆ. ಭಾರತದ ಬ್ಯಾಟಿಂಗ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ (Virat Kohli) ಆಟಕ್ಕೆ ಅಭಿಮಾನಿಗಳ ಕಾತರ ಹೆಚ್ಚಾಗಿದೆ.

ಟ್ರೆಂಡಿಂಗ್​ ಸುದ್ದಿ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಭರ್ಜರಿ ಫಾರ್ಮ್‌ಗೆ ಮರಳಿರುವ ವಿರಾಟ್‌, ಪ್ರಸಕ್ತ ಡಬ್ಲ್ಯೂಟಿಸಿ ಆವೃತ್ತಿಯಲ್ಲಿ ಹಲವು ದಾಖಲೆಗಳನ್ನು ಬರೆಯುವ ಸಾಧ್ಯತೆ ಇದೆ. ರಾಹುಲ್‌ ದ್ರಾವಿಡ್ ಅವರ ಬ್ಯಾಟಿಂಗ್ ದಾಖಲೆ ಸೇರಿದಂತೆ, ವಿರಾಟ್‌ ಬ್ರೇಕ್‌ ಮಾಡಬಹುದಾದ ಹಲವು ದಾಖಲೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ.

ಕಳೆದ ವರ್ಷ ನಡೆದ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಟಿ20 ಶತಕದೊಂದಿಗೆ ತಮ್ಮ ಅಂತಾರಾಷ್ಟ್ರೀಯ ಶತಕದ ಬರವನ್ನು ಕೊಹ್ಲಿ ನೀಗಿಸಿದರು. ಆ ಬಳಿಕ ಬಾಂಗ್ಲಾದೇಶದಲ್ಲಿ ನಡೆದ ಏಕದಿನ ಸರಣಿಯಲ್ಲಿಯೂ ಮೂರಂಕಿ ಗಡಿ ದಾಟಿದರು. ಬಾರ್ಡರ್ ಗವಾಸ್ಕರ್ ಸರಣಿಯ ಮೂಲಕ ಟೆಸ್ಟ್ ಸ್ವರೂಪದಲ್ಲಿಯೂ ಶತಕ ಸಿಡಿಸಿದ ಬಳಿಕ, ಐಪಿಎಲ್‌ನಲ್ಲಿಯೂ ಮೇಲಿಂದ ಮೇಲೆ ಎರಡು ಶತಕ ಸಿಡಿಸಿದರು.

ಬ್ರಾಡ್‌ಮನ್ ದಾಖಲೆ ಮುರಿಯುವ ಅವಕಾಶ

ಸದ್ಯ ಆರಂಭವಾಗಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಮತ್ತೆ ಶತಕ ಸಿಡಿಸುವ ಭರವಸೆಯನ್ನು ಕೊಹ್ಲಿ ಮೂಡಿಸಿದ್ದಾರೆ. ಕ್ರಿಕೆಟ್‌ನ ಶ್ರೇಷ್ಠ ಆಟಗಾರ ಡಾನ್ ಬ್ರಾಡ್‌ಮನ್ ಹಾಗೂ ಪ್ರಸ್ತುತ ಭಾರತದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ದಾಖಲೆಯತ್ತ ಕೊಹ್ಲಿ ಕಣ್ಣಿಟ್ಟಿದ್ದಾರೆ.

ಓವಲ್‌ ಮೈದಾನದಲ್ಲಿ ಕೊಹ್ಲಿ ಒಂದು ಶತಕ ಗಳಿಸಿದರೆ, ಅವರ ವೃತ್ತಿಜೀವನದಲ್ಲಿ 29ನೇ ಟೆಸ್ಟ್ ಶತಕವಾಗಲಿದೆ. ಇದು ಬ್ರಾಡ್‌ಮನ್ ಅವರ ದಾಖಲೆಯನ್ನು ಸರಿಗಟ್ಟಲಿದೆ. ಸಕ್ರಿಯ ಕ್ರಿಕೆಟಿಗರಲ್ಲಿ, 30 ಶತಕಗಳೊಂದಿಗೆ ಆಸ್ಟ್ರೇಲಿಯದ ಸ್ಟೀವ್ ಸ್ಮಿತ್ ಅಗ್ರಸ್ಥಾನದಲ್ಲಿದ್ದಾರೆ. ಇದೇ ವೇಳೆ ಜೋ ರೂಟ್ 29 ಶತಕಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ದ್ರಾವಿಡ್‌ ದಾಖಲೆ ಬ್ರೇಕ್‌ ಮಾಡ್ತಾರಾ ಕೊಹ್ಲಿ

ಇದೇ ವೇಳೆ, ಆಸ್ಟ್ರೇಲಿಯಾ ವಿರುದ್ಧ ದ್ರಾವಿಡ್ ಅವರ ದಾಖಲೆಯನ್ನು ಬ್ರೇಕ್‌ ಮಾಡುವ ಅವಕಾಶ ಕೊಹ್ಲಿಗಿದೆ. ದಿ ಗ್ರೇಟ್‌ ವಾಲ್‌, ಆಸೀಸ್ ವಿರುದ್ಧ ಉತ್ತಮ ದಾಖಲೆ ಹೊಂದಿದ್ದರು. ಸದ್ಯ ಕಾಂಗರೂಗಳ ವಿರುದ್ಧ 24 ಪಂದ್ಯಗಳಲ್ಲಿ ಆಡಿರುವ ಕೊಹ್ಲಿ, 48.26 ಸರಾಸರಿಯಲ್ಲಿ 1979 ರನ್ ಗಳಿಸಿದ್ದಾರೆ. ಒಂದು ವೇಳೆ ಕೊಹ್ಲಿಯು ಡಬ್ಲ್ಯೂಟಿಸಿ ಫೈನಲ್‌ನ ಎರಡೂ ಇನ್ನಿಂಗ್ಸ್‌ಗಳು ಸೇರಿ ಒಟ್ಟು 188 ರನ್ ಗಳಿಸಿದರೆ, ಅವರು ಆಸ್ಟ್ರೇಲಿಯಾ ವಿರುದ್ಧ ದ್ರಾವಿಡ್ ಗಳಿಸಿರುವ 2166 ರನ್‌ಗಳ ದಾಖಲೆಯನ್ನು ಹಿಂದಿಕ್ಕಬಹುದು. ಆ ಮೂಲಕ ತೆಂಡೂಲ್ಕರ್ (3630 ರನ್) ಮತ್ತು ವಿವಿಎಸ್ ಲಕ್ಷ್ಮಣ್ (2434‌ ರನ್) ಬಳಿಕ ಆಸೀಸ್‌ ವಿರುದ್ಧ ಮೂರನೇ ಅತಿ ಹೆಚ್ಚು ರನ್‌ ಗಳಿಸಿರುವ ಭಾರತ ಬ್ಯಾಟರ್ ಎಂಬ ಸಾಧನೆ ಮಾಡಬಹುದು.

ಸೆಹ್ವಾಗ್‌ ಹಿಂದಿಕ್ಕುವ ಸಾಧ್ಯತೆ

ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ಟೆಸ್ಟ್ ಕ್ರಿಕೆಟ್‌ನಲ್ಲಿ 8586 ರನ್‌ ಗಳಿಸಿದ್ದಾರೆ. ಇತ್ತ, 108 ಪಂದ್ಯಗಳಲ್ಲಿ 8416 ರನ್ ಗಳಿಸಿರುವ ಕೊಹ್ಲಿ, ಸೆಹ್ವಾಗ್‌ ದಾಖಲೆಯನ್ನು ಬ್ರೇಕ್‌ ಮಾಡಬಹುದು. 170 ರನ್‌ಗಳ ಅಂತರದಿಂದ ಹಿಂದಿರುವ ವಿರಾಟ್ ಈ ಫೈನಲ್‌ ಪಂದ್ಯದಲ್ಲಿ ಎರಡು ಶತಕ ಸಿಡಿಸುವ ಮೂಲಕ ಸೆಹ್ವಾಗ್‌ ಹಿಂದಿಕ್ಕಬಹುದು. ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ತೆಂಡೂಲ್ಕರ್ 15921‌ ರನ್‌ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಆ ಬಳಿಕ ದ್ರಾವಿಡ್ (13288), ಸುನಿಲ್ ಗವಾಸ್ಕರ್ (10122), ಮತ್ತು ಲಕ್ಷ್ಮಣ್ (8781) ನಂತರದ ಸ್ಥಾನಗಳಲ್ಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು