ಅಂಕೆ-ಸಂಖ್ಯೆಗಳ ಆಟ; ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಈ ನಂಬರ್ ಗೇಮ್ ಮಜವಾಗಿದೆ ನೋಡಿ
Jul 24, 2024 07:25 PM IST
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಈ ನಂಬರ್ ಗೇಮ್ ಮಜವಾಗಿದೆ ನೋಡಿ
- 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು 16 ವಿಭಾಗಗಳಲ್ಲಿ ಒಟ್ಟು 117 ಕ್ರೀಡಾಪಟುಗಳು ಪ್ರತಿನಿಧಿಸುತ್ತಿದ್ದಾರೆ. ಇವರಲ್ಲಿ ಯಾವ ವಿಭಾಗದಲ್ಲಿನ ಎಷ್ಟು ಆಟಗಾರರಿದ್ದಾರೆ? ಅನಭವಿ ಆಟಗಾರರು ಎಷ್ಟು ಮಂದಿ? ಅಂಕೆ-ಸಂಖ್ಯೆಗಳ ನಂಬರ್ ಗೇಮ್ ಇಲ್ಲಿದೆ.
ಪ್ರೇಮನಗರಿ ಪ್ಯಾರಿಸ್‌ನ ಒಲಿಂಪಿಕ್ ಕ್ರೀಡಾ ಗ್ರಾಮದಲ್ಲಿ ಜಾಗತಿಕ ಕ್ರೀಡಾಪಟುಗಳು ಸೇರುತ್ತಿದ್ದಾರೆ. ಚತುರ್ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆಗಾಗಿ ವಿಶ್ವವೇ ಕಾತರದಿಂದ ಕಾಯುತ್ತಿದೆ. ಉದ್ಘಾಟನಾ ಸಮಾರಂಭವು ಜುಲೈ 26ರ ಶುಕ್ರವಾರ ನಡೆಯುತ್ತಿದೆ. ಭಾರತದಿಂದ 117 ಆಟಗಾರರು ಕೂಟದಲ್ಲಿ ಪಾಲ್ಗೊಂಡಿದ್ದಾರೆ. 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಗಳಿಕೆ ಏಳು. ಈ ಬಾರಿ ಅದಕ್ಕೂ ಹೆಚ್ಚು ಮೆಡಲ್ ಗೆಲ್ಲುವುದು ಭಾರತದ ಗುರಿ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳ ಸಂಖ್ಯೆ 117. ಈ ಸಂಖ್ಯೆಯ ಆಧಾರದ ಮೇಲೆ ಭಾರತೀಯ ತಂಡದ ಕೆಲವು ಪ್ರಮುಖ ಸಂಖ್ಯೆಗಳನ್ನು ನಾವು ಇಲ್ಲಿ ನೋಡೋಣ. ಈ ನಂಬರ್ ಗೇಮ್ ರೋಚಕವಾಗಿದೆ.
- 124 - ಕಳೆದ ಬಾರಿಯ ಟೋಕಿಯೊ ಗೇಮ್ಸ್‌ನಲ್ಲಿ ಭಾರತದ 124 ಕ್ರೀಡಾಪಟುಗಳು ಭಾಗವಹಿಸಿದ್ದರು. ಅದಕ್ಕಿಂತ ಈ ಬಾರಿಯ ಸಂಖ್ಯೆ ಕಡಿಮೆ.
- 117 - ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳ ಸಂಖ್ಯೆ.
- 95 - ಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಸ್ಪರ್ಧಿಸಲಿರುವ ಒಟ್ಟು ಪದಕಗಳ ಸಂಖ್ಯೆ.
- 69 - ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯರು ಸ್ಪರ್ಧಿಸಲಿರುವ ಸ್ಪರ್ಧೆ ಅಥವಾ ಈವೆಂಟ್‌ಗಳ ಸಂಖ್ಯೆ.
- 61 - ಪ್ಯಾರಿಸ್‌ನಲ್ಲಿ ಒಲಿಂಪಿಕ್‌ಗೆ ಪದಾರ್ಪಣೆ ಮಾಡುವ ಭಾರತೀಯ ಕ್ರೀಡಾಪಟುಗಳ ಶೇಕಡಾವಾರು ಪ್ರಮಾಣ. ಒಟ್ಟು 72 ಭಾರತೀಯರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಆಡುತ್ತಿದ್ದಾರೆ..
- 44 - ಅತ್ಯಂತ ಹಿರಿಯ ಭಾರತೀಯ ಕ್ರೀಡಾಪಟುವಿನ ವಯಸ್ಸು. ಟೆನಿಸ್ ದಂತಕತೆ ರೋಹನ್ ಬೋಪಣ್ಣ ಒಲಿಂಪಿಕ್ಸ್‌ನಲ್ಲಿ ಮೂರನೇ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
- 29 - ಪ್ಯಾರಿಸ್‌ನಲ್ಲಿ ಭಾರತ ದೇಶದಿಂದ ಪ್ರತಿನಿಧಿಸುತ್ತಿರುವ ಅಥ್ಲೀಟ್‌ಗಳ ಸಂಖ್ಯೆ.
ಇದನ್ನೂ ಓದಿ | ಪ್ಯಾರಿಸ್‌ನಲ್ಲಿ ಕನ್ನಡದ ಕಂಪು; ರಘು ದೀಕ್ಷಿತ್-ಭಾವನಾ ಪ್ರದ್ಯುಮ್ನ ತಂಡದಿಂದ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
- 21 - ಭಾರತದ ಶೂಟಿಂಗ್ ತಂಡದಲ್ಲಿರುವ ಆಟಗಾರರ ಸಂಖ್ಯೆ. ಕ್ರೀಡಾಕೂಟಕ್ಕೆ ಹೋಗುವ ದಾಖಲೆ ಸಂಖ್ಯೆಯ ಕೋಟಾಗಳನ್ನು ಭಾರತ ಗೆದ್ದಿದೆ. ಭಾರತದ ಶೂಟರ್‌ಗಳು ಪ್ರತಿ ವಿಭಾಗದಲ್ಲೂ ಕಣಕ್ಕಿಳಿಯುತ್ತಿರುವುದು ಇದೇ ಮೊದಲು.
- 16 - ಭಾರತೀಯ ಕ್ರೀಡಾಪಟುಗಳು ಸ್ಪರ್ಧಿಸುವ ಕ್ರೀಡಾ ವಿಭಾಗಗಳ ಸಂಖ್ಯೆ.
- 14 - ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಅತ್ಯಂತ ಕಿರಿಯ ಭಾರತೀಯ ಕ್ರೀಡಾಪಟುವಿನ ವಯಸ್ಸು. ಕರ್ನಾಟಕದ ಈಜುಪಟು ಧಿನಿಧಿ ದೇಸಿಂಘು 1952ರಿಂದ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಅತ್ಯಂತ ಕಿರಿಯ ಭಾರತೀಯರಾಗಿದ್ದಾರೆ.
- 8 - ಒಟ್ಟು 16 ಕ್ರೀಡೆಗಳಲ್ಲಿ ಭಾರತಕ್ಕೆ ಪದಕಗಳನ್ನು ತಂದುಕೊಟ್ಟ ಕ್ರೀಡೆಗಳು.
- 5 - ಈಗಾಗಲೇ ಒಲಿಂಪಿಕ್ಸ್ ಪದಕ ಗೆದ್ದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆಡುತ್ತಿರುವ ಕ್ರೀಡಾಪಟುಗಳ ಸಂಖ್ಯೆ. ನೀರಜ್ ಚೋಪ್ರಾ (ಜಾವೆಲಿನ್), ಪಿವಿ ಸಿಂಧು (ಬ್ಯಾಡ್ಮಿಂಟನ್), ಮೀರಾಬಾಯಿ ಚಾನು (ವೇಟ್ ಲಿಫ್ಟಿಂಗ್), ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್) ಮತ್ತು ಭಾರತೀಯ ಪುರುಷರ ಹಾಕಿ ತಂಡ.
- 2 - ಒಂದಕ್ಕಿಂತ ಹೆಚ್ಚು ವೈಯಕ್ತಿಕ ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿರುವ ಕ್ರೀಡಾಪಟುಗಳ ಸಂಖ್ಯೆ. ಮಹಿಳೆಯರ 5000 ಮೀಟರ್ ಓಟ ಮತ್ತು 3000 ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಪಾರುಲ್ ಚೌಧರಿ, ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು 25 ಮೀಟರ್ ಪಿಸ್ತೂಲ್‌ನಲ್ಲಿ ಮನು ಭಾಕರ್ ಸ್ಪರ್ಧಿಸಲಿದ್ದಾರೆ.
- 1- ಅಮನ್ ಶೆಹ್ರಾವತ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಪುರುಷ ಕುಸ್ತಿಪಟು.
- 1- ಪಿವಿ ಸಿಂಧು ಮಾತ್ರ ಭಾರತೀಯ ತಂಡದಲ್ಲಿ ಒಂದಕ್ಕಿಂತ ಹೆಚ್ಚು ವೈಯಕ್ತಿಕ ಒಲಿಂಪಿಕ್ ಪದಕಗಳನ್ನು ಗೆದ್ದ ಕ್ರೀಡಾಪಟು. ಸತತ ಮೂರು ಒಲಿಂಪಿಕ್ಸ್‌ಗಳಲ್ಲಿ ವೈಯಕ್ತಿಕ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಅವರು ಎದುರು ನೋಡುತ್ತಿದ್ದಾರೆ.
ಇನ್ನಷ್ಟು ಒಲಿಂಪಿಕ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಪದಕ ಗೆದ್ದ ಭಾರತೀಯರಿವರು; ಅವಿಸ್ಮರಣೀಯ ಗೆಲುವಿನ ಕ್ಷಣದ ಚಿತ್ರಗುಚ್ಛ