logo
ಕನ್ನಡ ಸುದ್ದಿ  /  Sports  /  Gujarat Giants Bring Laura Wolwaardt As Replacement For Injured Beth Mooney

Women's Premier League: ಗಾಯದಿಂದಾಗಿ ಲೀಗ್‌ನಿಂದಲೇ ಹೊರಬಿದ್ದ ಗುಜರಾತ್ ನಾಯಕಿ; ತಂಡಕ್ಕೆ ದಕ್ಷಿಣ ಆಫ್ರಿಕಾ ಹಿಟ್ಟರ್‌ ಎಂಟ್ರಿ

HT Kannada Desk HT Kannada

Mar 09, 2023 01:23 PM IST

ಗಾಯಾಳು ಬೆತ್‌ ಮೂನಿ

    • ಭಾರತಕ್ಕೆ ಬಂದು ಡಬ್ಲ್ಯೂಪಿಎಲ್‌ನಲ್ಲಿ ಆಡುತ್ತಿರುವ ಬಗ್ಗೆ ಮಾತನಾಡಿದ ವೊಲ್ವಾರ್ಡ್, “ಗುಜರಾತ್ ಜೈಂಟ್ಸ್‌ ತಂಡ ಸೇರಲು ನಾನು ತುಂಬಾ ಉತ್ಸುಕಳಾಗಿದ್ದೇನೆ. ಇದು ನಂಬಲಾಗದ ಅವಕಾಶ. ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡಲು ಸಾಧ್ಯವಾಗಿದ್ದಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ. ನಾನು ತಂಡವನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ. ನನ್ನಿಂದ ಹೆಚ್ಚು ಕಾಯಲು ಸಾಧ್ಯವಿಲ್ಲ,” ಎಂದು ಅವರು ಹೇಳಿದ್ದಾರೆ.
ಗಾಯಾಳು ಬೆತ್‌ ಮೂನಿ
ಗಾಯಾಳು ಬೆತ್‌ ಮೂನಿ (WPL)

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌(Women's Premier League)ನ ಉದ್ಘಾಟನಾ ಪಂದ್ಯದಲ್ಲಿ ಗಾಯಗೊಂಡ ಬೆತ್ ಮೂನಿ (Beth Mooney), ಲೀಗ್‌ನ ಉಳಿದ ಪಂದ್ಯಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಗುಜರಾತ್ ಜೈಂಟ್ಸ್‌(Gujarat Giants) ತಂಡವು ಬೆತ್‌ ಮೂನಿ ಬದಲಿಗೆ ಲಾರಾ ವೊಲ್ವಾರ್ಡ್ (Laura Wolvaardt) ಅವರನ್ನು ತಂಡಕ್ಕೆ ಕರೆತಂದಿದೆ.

ಟ್ರೆಂಡಿಂಗ್​ ಸುದ್ದಿ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿ ಬೆತ್ ಮೂನಿ ಅವರನ್ನು ಗುಜರಾತ್‌ ತಂಡವು ನಾಯಕಿಯಾಗಿ ನೇಮಿಸಿತ್ತು. ಆದರೆ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನ ಚೊಚ್ಚಲ ಪಂದ್ಯದಲ್ಲಿ ಅವರು ಕಾಲಿನ ಗಾಯದಿಂದಾಗಿ ಅರ್ಧದಿಂದಲೇ ಕ್ರೀಸ್‌ನಿಂದ ಹೊರನಡೆದಿದ್ದರು. ಹೀಗಾಗಿ ಮಹಿಳಾ ಪ್ರೀಮಿಯರ್ ಲೀಗ್‌ನ ಉಳಿದ ಪಂದ್ಯಗಳನ್ನು ಅವರು ಕಳೆದುಕೊಳ್ಳಲಿದ್ದಾರೆ. ಅವರ ಕಾಲಿನ ನೋವು ಶಮನವಾಗಲು ಆರು ವಾರಗಳ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಲೀಗ್‌ನ ಉಳಿದ ಪಂದ್ಯಗಳಿಂದ ಅವರು ಹೊರಬಿದ್ದಿದ್ದಾರೆ.

29 ವರ್ಷ ವಯಸ್ಸಿನ ಆಸೀಸ್‌ ಆಟಗಾರ್ತಿ, ಗುಜರಾತ್‌ ಆಡಿದ ಕೊನೆಯ ಎರಡು ಪಂದ್ಯಗಳನ್ನು ಕಳೆದುಕೊಂಡಿದ್ದರು. ಹೀಗಾಗಿ ಸ್ನೇಹಾ ರಾಣಾ ತಂಡವನ್ನು ಮುನ್ನಡೆಸಿದ್ದರು. ಇದೀಗ ಪುನರ್ವಸತಿಗಾಗಿ ಅವರು ತಮ್ಮ ಮನೆಗೆ ತೆರಳಲಿದ್ದಾರೆ. ಹೀಗಾಗಿ ಮೂನಿ ಬದಲಿಗೆ ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ ಗುಜರಾತ್ ತಂಡ ಸೇರಿಕೊಳ್ಳಲಿದ್ದಾರೆ.

ಮಹಿಳಾ ಲೀಗ್ ಪ್ರದರ್ಶನ ಪಂದ್ಯಗಳಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಬಂದಿದ್ದ ವೊಲ್ವಾರ್ಡ್ ಅವರನ್ನು ಅವರ ತಂಡ ಸೂಪರ್ ವುಮೆನ್(Super Women) ಬಿಡುಗಡೆ ಮಾಡಿದೆ. ಹೀಗಾಗಿ ಅವರು ಭಾರತಕ್ಕೆ ಬರಲಿದ್ದಾರೆ.

“ನಾನು WPLನ ಉದ್ಘಾಟನಾ ಸೀಸನ್‌ನಲ್ಲಿ ಆಡಲು ನಿಜವಾಗಿಯೂ ಎದುರು ನೋಡುತ್ತಿದ್ದೆ. ಆದರೆ, ದುರದೃಷ್ಟವಶಾತ್ ಗಾಯಗಳು ಕ್ರೀಡೆಯ ಭಾಗವಾಗಿದೆ. ಹೀಗಾಗಿ ಉಳಿದಿರುವ ಪಂದ್ಯಗಳನ್ನು ನಾನು ಕಳೆದುಕೊಳ್ಳುತ್ತಿದ್ದೇನೆ” ಎಂದು ಗುಜರಾತ್ ಜೈಂಟ್ಸ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಮೂನಿ ಹೇಳಿದ್ದಾರೆ.

“ನಾನು ದೂರದಿಂದಲೇ ತಂಡದ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಪ್ರತಿ ದಿನವೂ ತಂಡಕ್ಕಾಗಿ ಸಲಹೆ ನೀಡುತ್ತೇನೆ” ಎಂದು ಅವರು ಹೇಳಿದ್ದಾರೆ. ಸದ್ಯ ಐದು ತಂಡಗಳ ಲೀಗ್‌ನಲ್ಲಿ ಒಂದು ಗೆಲುವು ಮತ್ತು ಎರಡು ಸೋಲಿನ ಬಳಿಕ ಗುಜರಾತ್‌ ನಾಲ್ಕನೇ ಸ್ಥಾನದಲ್ಲಿದೆ.

2023ರ ಋತುವಿಗೆ ಗುಜರಾತ್‌ ತಂಡಕ್ಕೆ ಬದಲಿಯಾಗಿ ಬಂದ ವೂಲ್ವಾರ್ಟ್, ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವನಿತೆಯರ ತಂಡಕ್ಕೆ ಅಮೋಘ ಕೊಡುಗೆ ನೀಡಿದ್ದರು. ಆರು ಪಂದ್ಯಗಳಲ್ಲಿ ಮೂರು ಅರ್ಧ ಶತಕಗಳೊಂದಿಗೆ ಹರಿಣಗಳ ಪರ ಅಗ್ರ ಸ್ಕೋರರ್ ಆಗಿದ್ದರು. ಅವರ ಅಮೋಘ ಕೊಡುಗೆಯಿಂದಾಗಿ ದಕ್ಷಿಣ ಆಫ್ರಿಕಾ ತಂಡವು ಫೈನಲ್‌ಗೆ ಲಗ್ಗೆ ಇಟ್ಟಿತು. ಆದರೆ, ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಫೈನಲ್‌ ಪಂದ್ಯದಲ್ಲಿ ಹರಿಣಗಳು ಸೋತರು.

ಭಾರತಕ್ಕೆ ಬಂದು ಡಬ್ಲ್ಯೂಪಿಎಲ್‌ನಲ್ಲಿ ಆಡುತ್ತಿರುವ ಬಗ್ಗೆ ಮಾತನಾಡಿದ ವೊಲ್ವಾರ್ಡ್, “ಗುಜರಾತ್ ಜೈಂಟ್ಸ್‌ ತಂಡ ಸೇರಲು ನಾನು ತುಂಬಾ ಉತ್ಸುಕಳಾಗಿದ್ದೇನೆ. ಇದು ನಂಬಲಾಗದ ಅವಕಾಶ. ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡಲು ಸಾಧ್ಯವಾಗಿದ್ದಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ. ನಾನು ತಂಡವನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ. ನನ್ನಿಂದ ಹೆಚ್ಚು ಕಾಯಲು ಸಾಧ್ಯವಿಲ್ಲ,” ಎಂದು ಅವರು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು