logo
ಕನ್ನಡ ಸುದ್ದಿ  /  ಕ್ರೀಡೆ  /  Modi Favourite Sports: ನಿಮ್ಮ ನೆಚ್ಚಿನ ಕ್ರೀಡೆ ಯಾವುದೆಂದು ಕೇಳಿದ ಕ್ರೀಡಾಪಟು; ಮೋದಿ ಉತ್ತರ ಹೀಗಿತ್ತು

Modi Favourite Sports: ನಿಮ್ಮ ನೆಚ್ಚಿನ ಕ್ರೀಡೆ ಯಾವುದೆಂದು ಕೇಳಿದ ಕ್ರೀಡಾಪಟು; ಮೋದಿ ಉತ್ತರ ಹೀಗಿತ್ತು

Meghana B HT Kannada

Aug 27, 2023 01:08 PM IST

google News

ಪ್ರಧಾನಿ ನರೇಂದ್ರ ಮೋದಿ

    • ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನ 104 ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇತ್ತೀಚೆಗೆ ಚೀನಾದಲ್ಲಿ ನಡೆದ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತದ ಕ್ರೀಡಾಪಟುಗಳನ್ನು ಅಭಿನಂದಿಸಿ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಕ್ರೀಡಾಪಟುವೊಬ್ಬ ನಿಮ್ಮ ನೆಚ್ಚಿನ ಕ್ರೀಡೆ ಯಾವುದು ಎಂದು ಮೋದಿಗೆ ಪ್ರಶ್ನೆ ಕೇಳಿದ್ದಾನೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಭಾರತದ ಕ್ರೀಡೆಗಳನ್ನು ಗೌರವಿಸುವ, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ, ದೇಶದ ಯುವಜನತೆಯನ್ನು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಪ್ರಧಾನಿ ನರೇಂದ್ರ ಮೋದಿ ಬಳಿ ವಿದ್ಯಾರ್ಥಿಯೂ ಆಗಿರುವ ಕ್ರೀಡಾಪಟುವೊಬ್ಬ ನಿಮ್ಮ ನೆಚ್ಚಿನ ಕ್ರೀಡೆ ಯಾವುದೆಂದು ಕೇಳಿದ್ದಾನೆ.

ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನ 104 ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇತ್ತೀಚೆಗೆ ಚೀನಾದಲ್ಲಿ ನಡೆದ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್‌ (World University Games) ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತದ ಕ್ರೀಡಾಪಟುಗಳನ್ನು ಅಭಿನಂದಿಸಿದರು. ಕ್ರೀಡೆಯು ನಮ್ಮ ಯುವಜನತೆ ನಿರಂತರವಾಗಿ ಹೊಸ ಯಶಸ್ಸನ್ನು ಸಾಧಿಸುತ್ತಿರುವ ಒಂದು ಕ್ಷೇತ್ರವಾಗಿದೆ. ಚೀನಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತವು ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ ಎಂದು ಹೇಳಿದರು.

ಇದೇ ವೇಳೆ ಕ್ರೀಡಾಪಟುಗಳೊಂದಿಗೆ ಸಂವಾದ ಕೂಡ ನಡೆಸಿದರು. ಅವರ ಅನುಭವಗಳನ್ನು ಕೇಳಿದರು. ಈ ಸಂದರ್ಭದಲ್ಲಿ ಕ್ರೀಡಾಪಟುವೊಬ್ಬ ನಿಮ್ಮ ನೆಚ್ಚಿನ ಕ್ರೀಡೆ ಯಾವುದು ಎಂದು ಮೋದಿಗೆ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, "ಭಾರತವು ಕ್ರೀಡಾ ಜಗತ್ತಿನಲ್ಲಿ ಉತ್ತಮ ಪ್ರಗತಿ ಸಾಧಿಸಬೇಕು ಮತ್ತು ಅದಕ್ಕಾಗಿಯೇ ನಾನು ಈ ವಿಷಯಗಳನ್ನು ಸಾಕಷ್ಟು ಪ್ರಚಾರ ಮಾಡುತ್ತಿದ್ದೇನೆ. ಆದರೆ, ಹಾಕಿ, ಫುಟ್ಬಾಲ್, ಕಬಡ್ಡಿ ಮತ್ತು ಖೋ-ಖೋ ನಮ್ಮ ಮಣ್ಣಿನೊಂದಿಗೆ ಬಾಂಧವ್ಯ ಹೊಂದಿದೆ. ಈ ಕ್ರೀಡೆಗಳಲ್ಲಿ ನಾವು ಎಂದಿಗೂ ಹಿಂದುಳಿಯಬಾರದು" ಎಂದರು.

"ನಮ್ಮ ಯುವಜನತೆ ಬಿಲ್ಲುಗಾರಿಕೆ ಮತ್ತು ಶೂಟಿಂಗ್‌ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದಾರೆ. ನಮ್ಮ ಕುಟುಂಬಗಳಲ್ಲಿಯೂ ಸಹ ಕ್ರೀಡೆಯ ಬಗೆಗಿನ ಮನೋಭಾವವು ಬದಲಾಗಿದೆ. ಮೊದಲು ಮಗು ಆಟವಾಡಲು ಹೋದಾಗ ಅವರ ಮನೆಯವರು ಅವನನ್ನು ತಡೆಯುತ್ತಿದ್ದರು. ಈಗ ಬಹಳಷ್ಟು ಬದಲಾಗಿದೆ ಮತ್ತು ನೀವು ಸಾಧಿಸುತ್ತಿರುವ ಯಶಸ್ಸು ಪ್ರತಿ ಕುಟುಂಬವನ್ನು ಪ್ರೇರೇಪಿಸುತ್ತದೆ" ಎಂದು ಹೇಳಿದರು.

ಇತ್ತೀಚೆಗೆ ಚೀನಾದಲ್ಲಿ ನಡೆದ ಎಫ್‌ಐಎಸ್‌ಯು ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಭಾರತವು 11 ಚಿನ್ನ ಸೇರಿದಂತೆ 26 ಪದಕಗಳನ್ನು ಗೆದ್ದಿದೆ. ಈ ಕ್ರೀಡಾಕೂಟದಲ್ಲಿ 1959 ರಿಂದ ಭಾರತ ಗೆದ್ದ ಒಟ್ಟು ಪದಕಗಳಿಗಿಂತ ಈ ಬಾರಿ ಗೆದ್ದ ಪದಕಗಳೇ ಹೆಚ್ಚಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ