ಪ್ರಧಾನಿ ನರೇಂದ್ರ ಮೋದಿ ಕನಸಿನ ಸಾಕಾರಕ್ಕೆ ಮಹತ್ವದ ಹೆಜ್ಜೆ; ಭಾರತದಲ್ಲಿ 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಮಹತ್ವದ ಹೆಜ್ಜೆ
Nov 06, 2024 09:13 AM IST
ಭಾರತದಲ್ಲಿ 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಮಹತ್ವದ ಹೆಜ್ಜೆ
- 2036 Olympics: 2036ರ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಆಸಕ್ತಿ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಲವು ಸಂದರ್ಭಗಳಲ್ಲಿ ಹೇಳಿದ್ದರು. ಇದೀಗ ಭಾರತದ ಕನಸಿಗೆ ರೆಕ್ಕೆ-ಪುಕ್ಕಗಳು ಚಿಗುರುತ್ತಿವೆ. ಒಲಂಪಿಕ್ಸ್ ಆತಿಥ್ಯಕ್ಕೆ ಭಾರತ ದೊಡ್ಡ ಹೆಜ್ಜೆ ಇಟ್ಟಿದ್ದು, IOCಗೆ ಈ ಬಗ್ಗೆ ಪತ್ರ ಸಲ್ಲಿಸಿದೆ.
ಭಾರತವನ್ನು ಕ್ರೀಡಾ ಶಕ್ತಿ ಕೇಂದ್ರವನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಗೆ ನಿರ್ಣಾಯಕ ಹೆಜ್ಜೆ ಇಡಲಾಗಿದೆ. ಇದರ ಭಾಗವಾಗಿ, ಭಾರತದಲ್ಲಿ ಒಲಿಂಪಿಕ್ಸ್ ಆಯೋಜಿಸಲು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಸಿದ್ಧವಾಗಿದೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOC) ಅಂತಾರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಷನ್ನ ಭವಿಷ್ಯದ ಆತಿಥೇಯ ಆಯೋಗಕ್ಕೆ ಆಶಯ ಪತ್ರವನ್ನು ಕಳುಹಿಸಿದೆ. ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಆಸಕ್ತಿ ತೋರಿಸುತ್ತಿದೆ ಎಂದು ಇದರಲ್ಲಿ ಬರೆಯಲಾಗಿದೆ.
ಪ್ಯಾರಾಲಿಂಪಿಕ್ಸ್ 2036 ರಲ್ಲಿ ನಡೆಯಲಿದೆ ಎಂದು ತಿಳಿದಿದೆ. ಈ ಮೂಲಕ 2036 ರಲ್ಲಿ ಭಾರತದಲ್ಲಿ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪಕ್ಕೆ ನಿರ್ಣಾಯಕ ಹೆಜ್ಜೆಯನ್ನು ಇಟ್ಟಂತೆ ತೋರುತ್ತದೆ. ಇದು ಸಂಭವಿಸಿದರೆ, ದೇಶದಾದ್ಯಂತ ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ ಮತ್ತು ಯುವಕರ ಸಬಲೀಕರಣವನ್ನು ಹೆಚ್ಚಿಸಬಹುದು.
2036ರ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಆಸಕ್ತಿ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಲವು ಸಂದರ್ಭಗಳಲ್ಲಿ ವ್ಯಕ್ತಪಡಿಸಿರುವುದು ಗೊತ್ತೇ ಇದೆ. ಇದಕ್ಕೆ ಪೂರಕವಾಗಿ ಗುಜರಾತ್ನ ಅಹಮದಾಬಾದ್ ನಗರದಲ್ಲಿ ಒಲಿಂಪಿಕ್ ಗುಣಮಟ್ಟದ ಕ್ರೀಡಾ ಸಂಕೀರ್ಣ ಕೂಡಾ ನಿರ್ಮಾಣವಾಗುತ್ತಿದೆ. ನವದೆಹಲಿಯ ತಮ್ಮ ನಿವಾಸದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ನ ಅಥ್ಲೀಟ್ಗಳೊಂದಿಗೆ ಸಂವಾದದಲ್ಲಿ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. 2036ರಲ್ಲಿ ಒಲಿಂಪಿಕ್ಸ್ ಆತಿಥ್ಯ ವಹಿಸಲು ಸಿದ್ಧತೆ ನಡೆಸುವಂತೆ ಐಒಒ ಹಾಗೂ ಆಟಗಾರರನ್ನು ಪ್ರಧಾನಿ ಮೋದಿ ಕೋರಿದ್ದರು.
“ಭಾರತವು 2036ರ ಒಲಿಂಪಿಕ್ಸ್ಗೆ ಆತಿಥ್ಯ ವಹಿಸಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ, ಹಿಂದಿನ ಒಲಿಂಪಿಕ್ಸ್ನಲ್ಲಿ ಆಡಿದ ಕ್ರೀಡಾಪಟುಗಳ ಉಲ್ಲೇಖಗಳು ನಿರ್ಣಾಯಕವಾಗಿವೆ. ನೀವೆಲ್ಲರೂ ಅನೇಕ ವಿಷಯಗಳನ್ನು ಗಮನಿಸಿದ್ದೀರಿ. ನಾವು ಅವುಗಳನ್ನು ದಾಖಲಿಸಲು ಮತ್ತು ಅವುಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ. 2036ರ ಒಲಿಂಪಿಕ್ಸ್ ಆಯೋಜನೆಗೆ ತಯಾರಿಯಲ್ಲಿ ನಾವು ಯಾವುದೇ ಸಣ್ಣ ವಿಷಯವನ್ನು ಕೂಡ ಕಳೆದುಕೊಳ್ಳಲು ಬಯಸುವುದಿಲ್ಲ,” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕಳೆದ ವರ್ಷ ಮುಂಬೈನಲ್ಲಿ ನಡೆದ 141ನೇ ಐಒಸಿ ಅಧಿವೇಶನದಲ್ಲಿ, 1.4 ಬಿಲಿಯನ್ ಭಾರತೀಯರು ಕ್ರೀಡಾಕೂಟವನ್ನು ಆಯೋಜಿಸಲು ಬದ್ಧರಾಗಿದ್ದಾರೆ ಮತ್ತು 2036ರಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ಭಾರತ ಎದುರು ನೋಡುತ್ತಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದರು.
ಅಹಮದಾಬಾದ್ನಲ್ಲಿ ಕ್ರೀಡಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ
ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಕೂಡ ಪ್ರಧಾನಿ ಮಾತನ್ನು ಬೆಂಬಲಿಸಿದ್ದಾರೆ. ಭಾರತ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ಸಿದ್ಧವಾಗಿದೆ ಎಂದು ಅವರು ಕೂಡ ಹೇಳಿದರು. ಭಾರತದಲ್ಲಿ ಒಲಿಂಪಿಕ್ಸ್ ನಡೆಯುವುದಾದರೆ ಗುಜರಾತ್ನ ಅಹಮದಾಬಾದ್ ಆತಿಥೇಯ ನಗರವಾಗಿರಲಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಹಾಲಿ ಕೇಂದ್ರ ಸರ್ಕಾರ ಮತ್ತು ಗುಜರಾತ್ ಸರ್ಕಾರ ಅಹಮದಾಬಾದ್ನಲ್ಲಿ ವಿವಿಧ ಕ್ರೀಡಾ ಮತ್ತು ಮೂಲ ಸೌಕರ್ಯಗಳನ್ನು ಈಗಾಗಲೆ ಅಭಿವೃದ್ಧಿಪಡಿಸುತ್ತಿದೆ.
ಹಲವು ದೇಶಗಳ ಆಸಕ್ತಿ
2036ರ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ಆಸಕ್ತಿ ವ್ಯಕ್ತಪಡಿಸಿದ 10 ದೇಶಗಳಲ್ಲಿ ಭಾರತವೂ ಸೇರಿದೆ. ಇದರಲ್ಲಿ ಭಾರತ ಜೊತೆ ಮೆಕ್ಸಿಕೋ (ಮೆಕ್ಸಿಕೋ ಸಿಟಿ, ಗ್ವಾಡಲಜರಾ-ಮಾಂಟೆರೆ-ಟಿಜುವಾನಾ), ಇಂಡೋನೇಷ್ಯಾ (ನುಸಂತಾರಾ), ಟರ್ಕಿ (ಇಸ್ತಾನ್ಬುಲ್), ಭಾರತ (ಅಹಮದಾಬಾದ್), ಪೋಲೆಂಡ್ (ವಾರ್ಸಾ, ಕ್ರಾಕೋವ್), ಈಜಿಪ್ಟ್, ದಕ್ಷಿಣ ಕೊರಿಯಾ (ಸಿಯೋಲ್-ಇಂಚಿಯಾನ್) ಸಹ ಇದೆ.
ವರದಿ : ವಿನಯ್ ಭಟ್
ಇದನ್ನೂ ಓದಿ | ಐಪಿಎಲ್ 2025 ಆಟಗಾರರ ಹರಾಜಿಗೆ ದಿನಾಂಕ ನಿಗದಿ: ಸೌದಿ ಅರೇಬಿಯಾದ ಜೆದ್ದಾದಲ್ಲಿ ಆಕ್ಷನ್, 1574 ಆಟಗಾರರು ನೋಂದಣಿ