logo
ಕನ್ನಡ ಸುದ್ದಿ  /  ಕ್ರೀಡೆ  /  Jasprit Bumrah Injury Update: ನ್ಯೂಜಿಲ್ಯಾಂಡ್‌ನಲ್ಲಿ ಸ್ಟಾರ್ ಬೌಲರ್‌ಗೆ ಶಸ್ತ್ರಚಿಕಿತ್ಸೆ; ವಿಶ್ವಕಪ್ ಆಡೋದು ಅನುಮಾನ

Jasprit Bumrah injury update: ನ್ಯೂಜಿಲ್ಯಾಂಡ್‌ನಲ್ಲಿ ಸ್ಟಾರ್ ಬೌಲರ್‌ಗೆ ಶಸ್ತ್ರಚಿಕಿತ್ಸೆ; ವಿಶ್ವಕಪ್ ಆಡೋದು ಅನುಮಾನ

HT Kannada Desk HT Kannada

Mar 02, 2023 03:43 PM IST

google News

ಯಾರ್ಕರ್‌ ಸ್ಪೆಷಲಿಸ್ಟ್‌ ಚೇತರಿಕೆ ಇನ್ನಷ್ಟು ವಿಳಂಬ

    • ಭಾರತದ ವೇಗದ ಬೌಲರ್‌ ಜಸ್ಪ್ರೀತ್ ಬುಮ್ರಾ ಅವರು ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಲು ನ್ಯೂಜಿಲೆಂಡ್‌ಗೆ ಹಾರಲು ಸಿದ್ಧರಾಗಿದ್ದಾರೆ. ಅದರಿಂದ ಚೇತರಿಸಿಕೊಳ್ಳಲು ಅವರಿಗೆ ದೀರ್ಘಕಾಲದ ವಿಶ್ರಾಂತಿ ಅಗತ್ಯವಿದೆ.
ಯಾರ್ಕರ್‌ ಸ್ಪೆಷಲಿಸ್ಟ್‌ ಚೇತರಿಕೆ ಇನ್ನಷ್ಟು ವಿಳಂಬ
ಯಾರ್ಕರ್‌ ಸ್ಪೆಷಲಿಸ್ಟ್‌ ಚೇತರಿಕೆ ಇನ್ನಷ್ಟು ವಿಳಂಬ (PTI)

ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ, ಕನಿಷ್ಠ ಆರು ತಿಂಗಳ ಕಾಲ ಕ್ರಿಕೆಟ್‌ನಿಂದ ಹೊರಗುಳಿಯುವ ಸಾಧ್ಯತೆಯಿದೆ. ಹೀಗಾಗಿ ಈ ವರ್ಷ ನಡೆಯಲಿರುವ ಮಹತ್ವದ ಏಕದಿನ ವಿಶ್ವಕಪ್‌ನಿಂದಲೂ ಅವರು ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಐಪಿಎಲ್‌ನಿಂದ ಬುಮ್ರಾ ಹೊರಗುಳಿಯುವುದು ಖಚಿತವಾಗಿದ್ದು, ಮುಂದಿನ ವಿಶ್ವಕಪ್‌ಗೂ ಅವರು ಲಭ್ಯರಾಗುವ ಸಾಧ್ಯತೆ ಕಡಿಮೆಯಾಗಿದೆ.

ಈ ವರ್ಷದ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಭಾರತದಲ್ಲಿ 50 ಓವರ್‌ಗಳ ಪಂದ್ಯಾವಳಿ ನಡೆಯಲಿದ್ದು, 29 ವರ್ಷ ವಯಸ್ಸಿನ ಬೌಲರ್‌ ವಿಶ್ವಕಪ್‌ ತಂಡದಲ್ಲಿ ಉಳಿಯುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.

2022ರ ಸೆಪ್ಟೆಂಬರ್ 25ರಂದು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದ ಬಳಿಕ ಬುಮ್ರಾ ಭಾರತದ ಪರ ಆಡಿಲ್ಲ. ಅಲ್ಲದೆ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದ ಅವರು, ಮುಂಬರುವ ಐಪಿಎಲ್‌ ಹಾಗೂ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಗುಳಿದಿದ್ದಾರೆ.

ಕ್ರಿಕ್‌ಬಜ್‌ ವರದಿಯ ಪ್ರಕಾರ, ಭಾರತದ ವೇಗದ ಬೌಲರ್‌ ಜಸ್ಪ್ರೀತ್ ಬುಮ್ರಾ ಅವರು ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಲು ನ್ಯೂಜಿಲೆಂಡ್‌ಗೆ ಹಾರಲು ಸಿದ್ಧರಾಗಿದ್ದಾರೆ. ಅದರಿಂದ ಚೇತರಿಸಿಕೊಳ್ಳಲು ಅವರಿಗೆ ದೀರ್ಘಕಾಲದ ವಿಶ್ರಾಂತಿ ಅಗತ್ಯವಿದೆ. ಬಿಸಿಸಿಐನ ವೈದ್ಯಕೀಯ ತಂಡ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮ್ಯಾನೇಜರ್‌ಗಳು ಬುಮ್ರಾ ಅವರ ಬೆನ್ನುಮೂಳೆಯ ತೊಂದರೆಗೆ ಚಿಕಿತ್ಸೆ ನೀಡಲು ನ್ಯೂಜಿಲ್ಯಾಂಡ್‌ನ ಶಸ್ತ್ರಚಿಕಿತ್ಸಕರನ್ನು ಗುರುತಿಸಿದ್ದಾರೆ. ಆ ತಜ್ಞರು ಈ ಹಿಂದೆ ಇಂಗ್ಲಿಷ್ ವೇಗಿ ಜೋಫ್ರಾ ಆರ್ಚರ್ ಅವರೊಂದಿಗೆ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.

ಸದ್ಯದ ಲೆಕ್ಕಾಚಾರಗಳ ಪ್ರಾಕಾರ, ವೇಗಿಯ ಚೇತರಿಕೆಗೆ ಕನಿಷ್ಠ 20 ರಿಂದ 24 ವಾರಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಸರಿಸುಮಾರು ಐದೂವರೆ ತಿಂಗಳುಗಳು ಅವರು ಮೈದಾನಕ್ಕೆ ಇಳಿಯುವಂತಿಲ್ಲ. ಹೀಗಾಗಿ ಸುದೀರ್ಘ ವಿಶ್ರಾಂತಿ ಸೆಪ್ಟೆಂಬರ್‌ನಲ್ಲಿ ಅವರು ಚೇತರಿಸಿಕೊಳ್ಳುವ ಸಾಧ್ಯತೆಯಿದೆ.

ಬುಮ್ರಾ ಅವರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲು ಬಿಸಿಸಿಐ ಎದುರು ನೋಡುತ್ತಿದೆ. ಹೀಗಾಗಿ ಅದಕ್ಕೂ ಮುನ್ನ ಅವರು ಚೇತರಿಸಿಕೊಳ್ಳುವಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ಹೀಗಾಗಿ ಬಿಸಿಸಿಐ ಮತ್ತು ಎನ್‌ಸಿಎ ಬುಮ್ರಾ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಸೂಚಿಸಿವೆ. ಈ ಹಿಂದೆ ಜೋಫ್ರಾ ಆರ್ಚರ್ ಮತ್ತು ಶೇನ್ ಬಾಂಡ್ ಅವರೊಂದಿಗೆ ಕೆಲಸ ಮಾಡಿದ ವೈದ್ಯರೇ ಬುಮ್ರಾ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ.‌ ಹೀಗಾಗಿ ಅವರು ಕಿವೀಸ್‌ ನಾಡಿಗೆ ಹಾರಲಿದ್ದಾರೆ.

ಕೆಲ ದಿನಗಳ ಹಿಂದೆ ಗಾಯದಿಂದ ಗುಣಮುಖರಾಗಿ ಮೈದಾನಕ್ಕಿಳಿಯುವ ಶುಭ ಸುದ್ದಿ ನೀಡಿದ್ದ ಬುಮ್ರಾ ಅವರ ಗಾಯ ಮತ್ತಷ್ಟು ಗಂಭೀರವಾಗಿದೆ. ಹೀಗಾಗಿ ಇದೇ ತಿಂಗಳು ಮಾರ್ಚ್​ 31ರಿಂದ ಆರಂಭವಾಗಲಿರುವ ಐಪಿಎಲ್​​ ಟೂರ್ನಿಯಿಂದ ಯಾರ್ಕರ್​ ಸ್ಪೆಷಲಿಸ್ಟ್​​​ ಹೊರಬಿದ್ದಿದ್ದಾರೆ. ಮುಂಬೈ ತಂಡದ ಬೌಲಿಂಗ್​​ ಬೆನ್ನೆಲುಬಾಗಿದ್ದ ಬುಮ್ರಾ, ವಿಕೆಟ್​​ ಬೇಟೆಯಾಡುತ್ತಿದ್ದರು. ಕ್ಷಣಾರ್ಧದಲ್ಲಿ ಪಂದ್ಯ ದಿಕ್ಕು ಬದಲಿಸುವ ಸಾಮರ್ಥ್ಯ ಹೊಂದಿದ್ದ ಆಟಗಾರ ಈ ಬಾರಿ ಆಡದೇ ಇರುವುದು ಮುಂಬೈ ತಂಡದ​ ಚಿಂತೆ ಹೆಚ್ಚಿಸಿದೆ. ಅಲ್ಲದೆ ಭಾರತ ತಂಡಕ್ಕೂ ಅವರು ಲಭ್ಯರಾಗುವ ಸಾಧ್ಯತೆ ಮತ್ತೆ ಮತ್ತೆ ವಿಳಂಬವಾಗಿರುವುದು ಬಿಸಿಸಿಐ ಚಿಂತೆ ಹೆಚ್ಚಿಸಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ