PKL 11: ಪ್ರೊ ಕಬಡ್ಡಿ ಲೀಗ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ 3 ತಂಡಗಳಿವು; ಎರಡಷ್ಟೇ 100 ದಾಟಿವೆ!
Oct 07, 2024 01:42 PM IST
ಪ್ರೊ ಕಬಡ್ಡಿ ಲೀಗ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ 3 ತಂಡಗಳಿವು
- PKL Season 11: ಕಬಡ್ಡಿ ಇತಿಹಾಸದಲ್ಲಿ ಅಂದರೆ ಕಳೆದ 10 ಆವೃತ್ತಿಗಳಲ್ಲೂ ಅತ್ಯಧಿಕ ಪಂದ್ಯ ಗೆದ್ದಿರುವ ಮೂರು ತಂಡಗಳು ಯಾವುವು? ಆದರೆ 100ಕ್ಕೂ ಅಧಿಕ ಪಂದ್ಯ ಗೆದ್ದಿರುವ ತಂಡಗಳು 2 ಮಾತ್ರ. ಹೀಗಿದೆ ನೋಡಿ ವಿವರ.
Pro Kabaddi League: ಪ್ರೊ ಕಬಡ್ಡಿ ಲೀಗ್ ಸೀಸನ್-11 ಅಕ್ಟೋಬರ್ 18 ರಿಂದ ಅದ್ಧೂರಿ ಆರಂಭ ಪಡೆಯಲಿದೆ. ಲೀಗ್‌ನ ಕಳೆದ 10 ಸೀಸನ್‌ಗಳಲ್ಲಿ ಒಟ್ಟು ಏಳು ತಂಡಗಳು ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿವೆ. ಆದರೆ ಉಳಿದ ತಂಡಗಳು ಹಲವು ಪ್ರಯತ್ನಗಳ ಹೊರತಾಗಿಯೂ ಒಮ್ಮೆಯೂ ಈ ಟ್ರೋಫಿ ಗೆದ್ದುಕೊಳ್ಳಲು ಸಾಧ್ಯವಾಗಲಿಲ್ಲ. ಪ್ರತಿ ಬಾರಿಯೂ ಹೋರಾಟ ನಡೆಸುತ್ತಿವೆಯಾದರೂ ಪ್ರಶಸ್ತಿ ಗೆಲ್ಲಲು ವಿಫಲವಾಗುತ್ತಿವೆ. ಕಬಡ್ಡಿ ಇತಿಹಾಸದಲ್ಲಿ ಅಂದರೆ ಕಳೆದ 10 ಆವೃತ್ತಿಗಳಲ್ಲೂ ಅತ್ಯಧಿಕ ಪಂದ್ಯ ಗೆದ್ದಿರುವ ಮೂರು ತಂಡಗಳು ಯಾವುವು? ಆದರೆ 100ಕ್ಕೂ ಅಧಿಕ ಪಂದ್ಯ ಗೆದ್ದಿರುವ ತಂಡಗಳು 2 ಮಾತ್ರ. ಹೀಗಿದೆ ನೋಡಿ ವಿವರ.
1. ಪಾಟ್ನಾ ಪೈರೇಟ್ಸ್ (Patna Pirates)
ಪಿಕೆಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವ ಪಾಟ್ನಾ ಪೈರೇಟ್ಸ್, ಈವರೆಗೆ 4 ಬಾರಿ ಲೀಗ್ ಫೈನಲ್ ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ ತಂಡ ಪಿಕೆಎಲ್ 3 ಮತ್ತು 4 ಮತ್ತು 5ರಲ್ಲಿ ಸತತ 3 ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪಿಕೆಎಲ್ ಇತಿಹಾಸದಲ್ಲಿ ಪಾಟ್ನಾ ಪೈರೇಟ್ಸ್ ಇದುವರೆಗೆ ಒಟ್ಟು 204 ಪಂದ್ಯಗಳನ್ನು ಆಡಿದೆ. ಈ ಪೈಕಿ 107 ಪಂದ್ಯಗಳಲ್ಲಿ ತಂಡ ಯಶಸ್ವಿಯಾಗಿದೆ. ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದಿರುವ ತಂಡ ಮತ್ತು ಅತಿ ಹೆಚ್ಚು ಪಂದ್ಯಗಳನ್ನು ಆಡಿದ ತಂಡ ಎಂಬ ದಾಖಲೆಗೆ ಪಾಟ್ನಾ ಪೈರೇಟ್ಸ್ ಪಾತ್ರವಾಗಿದೆ. 10ನೇ ಆವೃತ್ತಿಯಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಸೋಲೊಪ್ಪಿಕೊಂಡಿತ್ತು.
2. ಯು ಮುಂಬಾ (U Mumba)
ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ 2ನೇ ತಂಡ ಯು ಮುಂಬಾ. ಪಿಕೆಎಲ್ನ ಮೊದಲ 3 ಸೀಸನ್‌ಗಳಲ್ಲಿ ಸತತ ಫೈನಲ್‌ಗೆ ತಲುಪಿದ್ದ ಯು ಮುಂಬಾ, ಈ ಪೈಕಿ 2 ಪ್ರಶಸ್ತಿ ಗೆದ್ದಿತು. ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಒಟ್ಟು 197 ಪಂದ್ಯಗಳನ್ನು ಆಡಿರುವ ಯು ಮುಂಬಾ 104 ಪಂದ್ಯಗಳನ್ನು ಜಯಿಸಿದೆ. 10ನೇ ಆವೃತ್ತಿಯಲ್ಲಿ ಯು ಮುಂಬಾ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. 22 ಪಂದ್ಯಗಳಲ್ಲಿ ಕೇವಲ 6ರಲ್ಲಿ ಗೆದ್ದಿದ್ದು, 13 ಪಂದ್ಯ ಸೋಲು, 3 ಡ್ರಾ ಸಾಧಿಸಿದೆ. ಕೇವಲ 45 ಅಂಕ ಪಡೆದು 10 ಸ್ಥಾನ ಪಡೆದಿತ್ತು.
3.ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers)
ಪಿಕೆಎಲ್ 1 ಮತ್ತು ಪಿಕೆಎಲ್ 9ನೇ ಸೀಸನ್ನಲ್ಲಿ ಪ್ರಶಸ್ತಿ ಗೆದ್ದಿರುವ ಜೈಪುರ ಪಿಂಕ್ ಪ್ಯಾಂಥರ್ಸ್, 4ನೇ ಆವೃತ್ತಿಯಲ್ಲಿ ಫೈನಲ್ಗೇರಿದ್ದರೂ ಚಾಂಪಿಯನ್ ಆಗುವಲ್ಲಿ ವಿಫಲವಾಯಿತು. ಇದೀಗ 11ನೇ ಆವೃತ್ತಿಗೆ ಸಜ್ಜಾಗಿರುವ ಪ್ಯಾಂಥರ್ಸ್, ಕಳೆದ 10 ಸೀಸನ್‌ಗಳಲ್ಲಿ ಇದುವರೆಗೆ ಒಟ್ಟು 195 ಪಂದ್ಯಗಳನ್ನು ಆಡಿದೆ. ಅದರಲ್ಲಿ ತಂಡವು 97 ಪಂದ್ಯ ಗೆದ್ದಿದೆ. ಈ ಬಾರಿ 3 ಪಂದ್ಯಗಳಲ್ಲಿ ಜಯಿಸಿದರೆ 100 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಕಳೆದ ಬಾರಿ ಅಂಕ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿತ್ತು. ಅಲ್ಲದೆ, ಸೆಮಿಫೈನಲ್ನಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಸೋತು ಹೊರಬಿದ್ದಿತ್ತು.