logo
ಕನ್ನಡ ಸುದ್ದಿ  /  ಕ್ರೀಡೆ  /  ತೆಲುಗು ಟೈಟಾನ್ಸ್ ಮಣಿಸಿ ಅಂಕಪಟ್ಟಿಯಲ್ಲಿ ಟಾಪರ್ ಆದ ಪುಣೇರಿ ಪಲ್ಟನ್; ಪವನ್‌ ಪಡೆಗೆ ಮತ್ತೊಂದು ಹೀನಾಯ ಸೋಲು

ತೆಲುಗು ಟೈಟಾನ್ಸ್ ಮಣಿಸಿ ಅಂಕಪಟ್ಟಿಯಲ್ಲಿ ಟಾಪರ್ ಆದ ಪುಣೇರಿ ಪಲ್ಟನ್; ಪವನ್‌ ಪಡೆಗೆ ಮತ್ತೊಂದು ಹೀನಾಯ ಸೋಲು

Jayaraj HT Kannada

Jan 31, 2024 05:45 AM IST

google News

ತೆಲುಗು ಟೈಟಾನ್ಸ್ ವಿರುದ್ಧ ಗೆದ್ದ ಪುಣೇರಿ ಪಲ್ಟನ್

    • Puneri Paltan: ಮೊದಲಾರ್ಧದಲ್ಲಿ 10 ನಿಮಿಷಗಳ ಕಾಲ ಕಬಡ್ಡಿ ಕೋರ್ಟ್‌ನಿಂದ ಹೊರಗುಳಿದಿದ್ದ ತೆಲುಗು ಟೈಟಾನ್ಸ್ ನಾಯಕ ಪವನ್ ಸೆಹ್ರಾವತ್‌, ತಮ್ಮ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು. ಅಲ್ಲದೆ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡಲು ಅವರಿಂದ ಸಾಧ್ಯವಾಗಲಿಲ್ಲ.
ತೆಲುಗು ಟೈಟಾನ್ಸ್ ವಿರುದ್ಧ ಗೆದ್ದ ಪುಣೇರಿ ಪಲ್ಟನ್
ತೆಲುಗು ಟೈಟಾನ್ಸ್ ವಿರುದ್ಧ ಗೆದ್ದ ಪುಣೇರಿ ಪಲ್ಟನ್

ಪ್ರೊ ಕಬಡ್ಡಿ ಲೀಗ್‌ನಲ್ಲಿ (Pro Kabaddi League) ತೆಲುಗು ಟೈಟಾನ್ಸ್ ಸೋಲಿನ ಸರಪಳಿ ಮುಂದುವರೆದಿದೆ. ಮತ್ತೊಂದೆಡೆ ಪುಣೇರಿ ಪಲ್ಟನ್ (Puneri Paltan vs Telugu Titan) ಮತ್ತೆ ಗೆಲುವಿನ ಹಳಿಗೆ ಮರಳಿದ್ದು, ಪವನ್‌ ಸೆಹ್ರಾವತ್‌ ಬಳಗವನ್ನು 60-29 ಅಂಕಗಳ ಅಂತರದಿಂದ ಸೋಲಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿದೆ.

11 ರೈಡ್ ಪಾಯಿಂಟ್‌ ಗಳಿಸಿದ ಆಕಾಶ್ ಶಿಂಧೆ, ಪಂದ್ಯದ ಟಾಪ್‌ ಸ್ಕೋರರ್‌ ಆಗಿ ಹೊರಹೊಮ್ಮಿದರು. ಮೊಹಮ್ಮದ್ರೇಜಾ ಶಾಡ್ಲೋಯಿ‌ 7 ಅಂಕ ಕಲೆ ಹಾಕಿದರೆ, ಅಭಿನೇಶ್ ನಟರಾಜನ್ 5 ಟ್ಯಾಕಲ್ ಪಾಯಿಂಟ್‌ ತಮ್ಮದಾಗಿಸಿಕೊಂಡರು. ಆ ಮೂಲಕ ಪಲ್ಟನ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪುಣೇರಿ ಪಲ್ಟಾನ್ ತಂಡವು ಸತತ ಎರಡು ಪಂದ್ಯಗಳಲ್ಲಿ ಟೈ ಬಳಿಕ, ಈ ಪಂದ್ಯದಲ್ಲಿ ಭರ್ಜರಿ ಅಂತರದೊಂದಿಗೆ ಗೆಲುವು ಸಾಧಿಸಿತು. ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ತಂಡ, ಕೇವಲ ಆರು ನಿಮಿಷಗಳಲ್ಲಿ ಎದುರಾಳಿಯನ್ನು ಆಲ್ ಔಟ್ ಮಾಡಿ 11-2ರಿಂದ ಮುನ್ನಡೆ ಸಾಧಿಸಿತು.‌

ಸತತ ಎರಡು ಬಾರಿ ಆಲೌಟ್

ಪುಣೇರಿ ಪಲ್ಟನ್‌ ಬಳಗದ ರೈಡಿಂಗ್‌ ಅಸ್ತ್ರಗಳಾದ ಅಸ್ಲಾಮ್ ಇನಾಮ್ದಾರ್, ಮೋಹಿತ್ ಗೋಯತ್ ಮತ್ತು ಆಕಾಶ್, 14ನೇ ನಿಮಿಷದಲ್ಲಿ ಎರಡನೇ ಬಾರಿಗೆ ಟೈಟಾನ್ಸ್‌ ಬಳಗವನ್ನು ಮತ್ತೊಮ್ಮೆ ಆಲ್ ಔಟ್ ಮಾಡಿತು. ಆ ಮೂಲಕ ಪಂದ್ಯದಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿತು. ಮೊದಲಾರ್ಧದ ಅಂತ್ಯಕ್ಕೆ 29-6ರ ದಾಖಲೆಯ ಅಂತರದೊಂದಿಗೆ ಪುಣೇರಿ ಪಲ್ಟನ್ ಮುನ್ನಡೆಯಿತು.

ಇದನ್ನೂ ಓದಿ | ಗಾಯಗೊಂಡು ಎನ್‌ಸಿಎ ತಲುಪಿದ ರವೀಂದ್ರ ಜಡೇಜಾ; ಇಂಗ್ಲೆಂಡ್ ಸರಣಿಯ ಉಳಿದ ಪಂದ್ಯಗಳಿಗೆ ಮರಳೋದು ಡೌಟ್

ಮೊದಲಾರ್ಧದಲ್ಲಿ 10 ನಿಮಿಷಗಳ ಕಾಲ ಕಬಡ್ಡಿ ಕೋರ್ಟ್‌ನಿಂದ ಹೊರಗುಳಿದಿದ್ದ ತೆಲುಗು ಟೈಟಾನ್ಸ್ ನಾಯಕ ಪವನ್ ಸೆಹ್ರಾವತ್‌, ತಮ್ಮ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು. ಅಲ್ಲದೆ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡಲು ಅವರಿಂದ ಸಾಧ್ಯವಾಗಲಿಲ್ಲ.

ಆಕಾಶ್ ಶಿಂಧೆ ಅಮೋಘ ಸೂಪರ್ ರೈಡ್‌ನೊಂದಿಗೆ ಎದುರಾಳಿಯನ್ನು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿಸಿದರು. ಅಂತಿಮವಾಗಿ 28ನೇ ನಿಮಿಷದಲ್ಲಿ ಟೈಟಾನ್ಸ್ ಮತ್ತೊಮ್ಮೆ ಆಲ್ ಔಟ್‌ ಆಯ್ತು. ಅಭಿನೇಶ್ ನಟರಾಜನ್ ಮತ್ತು ಶಾಡ್ಲೋಯಿ ಇಬ್ಬರೂ ಹೈ 5 ಪೂರ್ಣಗೊಳಿಸಿದರು.

ಇದನ್ನೂ ಓದಿ | ಪ್ರೊ ಕಬಡ್ಡಿ: ಹರಿಯಾಣ, ಪಾಟ್ನಾಗೆ ಸುಲಭ ಗೆಲುವು; ಬೆಂಗಳೂರು ಬುಲ್ಸ್ ಪ್ಲೇ‌ ಆಫ್ ಹಾದಿ ಕಠಿಣ

ತೆಲುಗು ಟೈಟಾನ್ಸ್ ತಂಡವು ಕೊನೆಯ ಐದು ನಿಮಿಷಗಳಲ್ಲಿ ಉತ್ತಮ ಪ್ರದರ್ಶನ ನೀಡಿತು. ಸಂಜೀವಿ ಅವರು ಸೂಪರ್ ರೈಡ್‌ನೊಂದಿಗೆ ಎದುರಾಳಿಯನ್ನು ಮೊದಲ ಬಾರಿಗೆ ಆಲ್ ಔಟ್ ಮಾಡಿದರು. ಆದರೂ ಮುನ್ನಡೆ ಸಾಧಿಸಲು ತಂಡದಿಂದ ಸಾಧ್ಯವಾಗಲಿಲ್ಲ. ಅಂತಿಮವಾಗಿ ಪುಣೇರಿ ಪಲ್ಟಾನ್ 31 ಪಾಯಿಂಟ್‌ಗಳ ಭಾರಿ ಅಂತರದಿಂದ ಪಂದ್ಯ ಗೆದ್ದಿತು.

(This copy first appeared in Hindustan Times Kannada website. To read more like this please logon to kannada.hindustantime.com)

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ