logo
ಕನ್ನಡ ಸುದ್ದಿ  /  ಕ್ರೀಡೆ  /  Explainer: ಒಲಿಂಪಿಕ್ಸ್ ಫೈನಲ್‌ನಿಂದ‌ ವಿನೇಶ್ ಫೋಗಟ್ ಅನರ್ಹಗೊಂಡಿದ್ದು ಯಾಕೆ; ಕುಸ್ತಿಯಲ್ಲಿ ತೂಕದ ನಿಯಮಗಳೇನು?

Explainer: ಒಲಿಂಪಿಕ್ಸ್ ಫೈನಲ್‌ನಿಂದ‌ ವಿನೇಶ್ ಫೋಗಟ್ ಅನರ್ಹಗೊಂಡಿದ್ದು ಯಾಕೆ; ಕುಸ್ತಿಯಲ್ಲಿ ತೂಕದ ನಿಯಮಗಳೇನು?

Jayaraj HT Kannada

Aug 07, 2024 01:50 PM IST

google News

ಒಲಿಂಪಿಕ್ಸ್ ಫೈನಲ್‌ನಿಂದ‌ ವಿನೇಶ್ ಫೋಗಟ್ ಅನರ್ಹಗೊಂಡಿದ್ದು ಯಾಕೆ; ಕುಸ್ತಿಯಲ್ಲಿ ತೂಕದ ನಿಯಮಗಳೇನು?

    • ಪ್ಯಾರಿಸ್ ಒಲಿಂಪಿಕ್ಸ್ 50 ಕೆಜಿ ಫ್ರೀಸ್ಟೈಲ್ ಕುಸ್ತಿ ಫೈನ‌ಲ್‌ ಪಂದ್ಯದಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ. ತೂಕ ಹೆಚ್ಚಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗಿದ್ದರೆ ಕುಸ್ತಿಯಲ್ಲಿ ತೂಕದಲ್ಲಿ ಇಷ್ಟು ಕಠಿಣ ನಿಯಮಗಳಿವೆಯೇ? ಇದಕ್ಕೆ ಉತ್ತರ ಈ ಸುದ್ದಿಯಲ್ಲಿದೆ.
ಒಲಿಂಪಿಕ್ಸ್ ಫೈನಲ್‌ನಿಂದ‌ ವಿನೇಶ್ ಫೋಗಟ್ ಅನರ್ಹಗೊಂಡಿದ್ದು ಯಾಕೆ; ಕುಸ್ತಿಯಲ್ಲಿ ತೂಕದ ನಿಯಮಗಳೇನು?
ಒಲಿಂಪಿಕ್ಸ್ ಫೈನಲ್‌ನಿಂದ‌ ವಿನೇಶ್ ಫೋಗಟ್ ಅನರ್ಹಗೊಂಡಿದ್ದು ಯಾಕೆ; ಕುಸ್ತಿಯಲ್ಲಿ ತೂಕದ ನಿಯಮಗಳೇನು? (PTI)

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಭಾರಿ ಆಘಾತಕಾರಿ ಸುದ್ದಿ ಸಿಕ್ಕಿದೆ. ಮಹಿಳೆಯರ 50 ಕೆಜಿ ಕುಸ್ತಿ ಫೈನಲ್‌ನಿಂದ ಭಾರತದ ದಿಟ್ಟ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡಿದ್ದಾರೆ. ರೋಚಕವಾಗಿ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದ ವಿನೇಶ್‌, ಖಚಿತವಾಗಿ ಬಂಗಾರ ಗೆಲ್ಲುವ ನಿರೀಕ್ಷೆ ಭಾರತೀಯರಿಗಿತ್ತು. ಆದರೆ, ಪದಕ ಸುತ್ತಿನ ಪಂದ್ಯಕ್ಕೂ ಮುನ್ನ ಇಂದು ತೂಕದಲ್ಲಿ ಕೇವಲ 100 ಗ್ರಾಂ ಅಧಿಕ ತೂಕವಿದ್ದ ಕಾರಣದಿಂದ, 29 ವರ್ಷದ ಕುಸ್ತಿಪಟುವನ್ನು ಫೈನಲ್‌ನಿಂದ ಅನರ್ಹಗೊಳಿಸಲಾಗಿದೆ. ಭಾರತದಲ್ಲಿ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾಗಿದ್ದ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ಬೀದಿಗಳಿದು ಪ್ರತಿಭಟಿಸಿದ್ದ ದಿಟ್ಟೆಯ ಈ ಆಘಾತಕಾರಿ ಸುದ್ದಿ ಭಾರತೀಯರಿಗೆ ಅಚ್ಚರಿ ತರಿಸಿದೆ.

ಹಾಗಿದ್ದರೆ ಕೇವಲ 100 ಗ್ರಾಂ ತೂಕ ಹೆಚ್ಚಿದ್ದ ಕಾರಣಕ್ಕೆ ವಿನೇಶ್‌ ಅವರನ್ನು ಅನರ್ಹಗೊಳಿಸಿದ್ದು ಸರಿಯೇ? ಕುಸ್ತಿಯಲ್ಲಿ ಇಂಥಾ ನಿಯಮಗಳು ಇವೆಯಾ? ಇಂಥಾ ಪ್ರಶೆಗಳು ಬಹುತೇಕ ಎಲ್ಲರ ಮನಸ್ಸಲ್ಲಿಯೂ ಕಾಡುತ್ತಿದೆ ಅದಕ್ಕೆಉತ್ತರ ಇಲ್ಲಿದೆ.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​ ಹೇಳಿದ್ದೇನು?

“ಮಹಿಳಾ ಕುಸ್ತಿ 50 ಕೆಜಿ ವಿಭಾಗದಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಕುರಿತು ಪ್ಯಾರಿಸ್‌ನಲ್ಲಿರುವ ಭಾರತೀಯ ತುಕಡಿಯು ವಿಷಾದದ ಸುದ್ದಿ ಹಂಚಿಕೊಂಡಿದೆ. ರಾತ್ರಿಯಿಡೀ ತಂಡದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರು ಇಂದು ಬೆಳಗ್ಗೆ ನಿಗದಿತ 50 ಕೆಜಿಗಿಂತ ಕೆಲವು ಗ್ರಾಂ ಹೆಚ್ಚುವರಿ ತೂಕವನ್ನು ಹೊಂದಿದ್ದರು. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈ ಸಮಯದಲ್ಲಿ ತಂಡವು ವಿನೇಶ್ ಅವರ ಗೌಪ್ಯತೆಯನ್ನು ಗೌರವಿಸುವಂತೆ ವಿನಂತಿಸುತ್ತದೆ” ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​ಹೇಳಿಕೆಯಲ್ಲಿ ತಿಳಿಸಿದೆ.

ಕುಸ್ತಿ ನಿಯಮಗಳು ಹೇಳುವುದೇನು?

ಕುಸ್ತಿ ಆಟಕ್ಕೆ ಅದರದ್ದೇ ಆದ ನಿಯಮಗಳಿವೆ. ಪುರುಷ ಅಥವಾ ಮಹಿಳಾ ಕುಸ್ತಿಯನ್ನು ಕುಸ್ತಿಪಟುಗಳ ತೂಕದ ಆಧಾರದ ಮೇಲೆ ವಿವಿಧ ವರ್ಗಗಳಲ್ಲಿ ನಡೆಸಲಾಗುತ್ತದೆ. ಇದರಲ್ಲಿ ವಿನೇಶ್‌ ಫೋಗಟ್‌ 50 ಕೆಜಿ ವಿಭಾಗದಲ್ಲಿ ಆಡುತ್ತಾರೆ. ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕುಸ್ತಿಪಟುಗಳನ್ನು ಅವರ ಪಂದ್ಯಗಳು ಇರುವ ದಿನ ಬೆಳಗ್ಗೆ ತೂಕಪರೀಕ್ಷೆ ನಡೆಸಲಾಗುತ್ತದೆ. ಪ್ರತಿ ತೂಕದ ವಿಭಾಗಗಳಲ್ಲೂ ತೂಕ ನಡೆಸಿದ ಎರಡು ದಿನಗಳಲ್ಲಿ ಪಂದ್ಯಾವಳಿ ಪೂರ್ಣಗೊಳ್ಳುತ್ತದೆ. ಅಷ್ಟರವರೆಗೂ ಅದೇ ತೂಕವನ್ನು ಅವರು ಕಾಯ್ದುಕೊಳ್ಳಬೇಕು. ಫೈನಲ್‌ ಪಂದ್ಯದಲ್ಲಿ ಕಾಣಿಸಿಕೊಳ್ಳಬೇಕಿದ್ದರೆ, ಕುಸ್ತಿಪಟುಗಳು ಎರಡೂ ದಿನಗಳಲ್ಲಿ ಅದೇ ತೂಕವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ತೂಕ ಮಾತ್ರವಲ್ಲದೆ ಸಾಂಕ್ರಾಮಿಕ ರೋಗಗಳನ್ನು ಕೂಡಾ ಪರೀಕ್ಷಿಸಲಾಗುತ್ತದೆ.

ಯುನೈಟೆಡ್ ವರ್ಲ್ಡ್ ರಸ್ಲಿಂಗ್ ನಿಯಮಗಳ ಪ್ರಕಾರ, ಒಬ್ಬ ಕ್ರೀಡಾಪಟು ಕುಸ್ತಿಗೂ ಮುನ್ನ ತೂಕ ಪರೀಕ್ಷೆಯಲ್ಲಿ ಭಾಗವಹಿಸದಿದ್ದರೆ ಅಥವಾ ಸರಿಯಾದ ತೂಕ ಇರುವಲ್ಲಿ ವಿಫಲವಾದರೆ, ಅವರನ್ನು ಸ್ಪರ್ಧೆಯಿಂದ ಎಲಿಮನೇಟ್‌ ಮಾಡಲಾಗುತ್ತದೆ. ಅಲ್ಲದೆ ಅವರಿಗೆ ಯಾವುದೇ ಶ್ರೇಯಾಂಕ ನೀಡಲಾಗುವುದಿಲ್ಲ. ತೂಕ ಸರಿಯಾಗಿಲ್ಲ ಎಂಬ ಕಾರಣದಿಂದ ಫೈನಲ್‌ನಿಂದ ಅನರ್ಹಗೊಂಡ ಮೊದಲ ಕ್ರೀಡಾಪಟು ವಿನೇಶ್ ಫೋಗಟ್.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ