ಒಲಿಂಪಿಕ್ಸ್​​ನ ಚಿನ್ನದ ಪದಕದ ಸ್ಪರ್ಧೆಗೂ ಮುನ್ನ ವಿನೇಶ್ ಫೋಗಟ್ ಅನರ್ಹ; ಭಾರತದ ಬಂಗಾರದ ಕನಸು ಭಗ್ನ
ಕನ್ನಡ ಸುದ್ದಿ  /  ಕ್ರೀಡೆ  /  ಒಲಿಂಪಿಕ್ಸ್​​ನ ಚಿನ್ನದ ಪದಕದ ಸ್ಪರ್ಧೆಗೂ ಮುನ್ನ ವಿನೇಶ್ ಫೋಗಟ್ ಅನರ್ಹ; ಭಾರತದ ಬಂಗಾರದ ಕನಸು ಭಗ್ನ

ಒಲಿಂಪಿಕ್ಸ್​​ನ ಚಿನ್ನದ ಪದಕದ ಸ್ಪರ್ಧೆಗೂ ಮುನ್ನ ವಿನೇಶ್ ಫೋಗಟ್ ಅನರ್ಹ; ಭಾರತದ ಬಂಗಾರದ ಕನಸು ಭಗ್ನ

Vinesh Phogat: ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅಧಿಕ ತೂಕದ ಕಾರಣಕ್ಕಾಗಿ ಮಹಿಳೆಯರ 50 ಕೆಜಿ ಕುಸ್ತಿಯಿಂದ ಅನರ್ಹಗೊಂಡಿದ್ದಾರೆ.

ಒಲಿಂಪಿಕ್ಸ್​​ನ ಚಿನ್ನದ ಪದಕದ ಸ್ಪರ್ಧೆಗೂ ಮುನ್ನ ವಿನೇಶ್ ಫೋಗಟ್ ಅನರ್ಹ; ಭಾರತದ ಬಂಗಾರದ ಕನಸು ಭಗ್ನ
ಒಲಿಂಪಿಕ್ಸ್​​ನ ಚಿನ್ನದ ಪದಕದ ಸ್ಪರ್ಧೆಗೂ ಮುನ್ನ ವಿನೇಶ್ ಫೋಗಟ್ ಅನರ್ಹ; ಭಾರತದ ಬಂಗಾರದ ಕನಸು ಭಗ್ನ

2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತದ ಚಿನ್ನದ ಕನಸೊಂದು ನುಚ್ಚು ನೂರಾಗಿದೆ. ಮಹಿಳೆಯರ ಕುಸ್ತಿಯಲ್ಲಿ ಫೈನಲ್​ಗೇರುವ ಮೂಲಕ ಐತಿಹಾಸಿಕ ಸಾಧನೆಯೊಂದಿಗೆ ಚಿನ್ನದ ಪದಕ ಗೆಲ್ಲುವ ತವಕದಲ್ಲಿದ್ದ ಭಾರತದ ಸ್ಟಾರ್​ ಕುಸ್ತಿಪಟು ವಿನೇಶ್ ಫೋಗಾಟ್​ ಅವರಿಗೆ ಆಘಾತವಾಗಿದೆ. ವಿನೇಶ್​ ಸ್ಪರ್ಧಿಸಿದ್ದ ತೂಕದ ವಿಭಾಗದಲ್ಲಿ 50 ಕೆಜಿಗಿಂತ 100 ಗ್ರಾಂ ಹೆಚ್ಚಿರುವ ಕಾರಣಕ್ಕೆ ಒಲಿಂಪಿಕ್ಸ್​ನ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ಸ್ಪರ್ಧೆಯ ಫೈನಲ್​ನಿಂದ ಅನರ್ಹ ಮಾಡಲಾಗಿದೆ ಎಂದು ಎಎನ್​ಐ ವರದಿ ಮಾಡಿದೆ.

ವಿನೇಶ್ ಅವರು ಇಂದು ರಾತ್ರಿ (ಆಗಸ್ಟ್ 7ರ ಬುಧವಾರ) 11.30ರ ಸುಮಾರಿಗೆ ಫೈನಲ್​​ನಲ್ಲಿ ಅಮೆರಿಕದ ಸೆರಾ ಹಿಲ್ದಿಬ್ರೇಟ್‌ ಅವರನ್ನು ಎದುರಿಸಬೇಕಿತ್ತು. ಇದೀಗ ಅನರ್ಹ ಬೆನ್ನಲ್ಲೇ ಭಾರತದ ನಿಯೋಗದಿಂದ ದೂರ ದಾಖಲಿಸಲಾಗಿದೆ. ವಿನೇಶ್ ಅವರು ಈ ಹಿಂದೆ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಆದರೆ, ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ತನ್ನ ತೂಕವನ್ನು 50 ಕೆಜಿಗೆ ಇಳಿಸಿದ್ದರು. ಆದಾಗ್ಯೂ, ಆಕೆಯ ತೂಕ ವಿಭಾಗದ 2ನೇ ದಿನದಂದು ವಿನೇಶ್ ಅವರು ಮಿತಿಗಿಂತ ಹೆಚ್ಚು ತೂಕ ಹೊಂದಿದ್ದರು.

100 ಗ್ರಾಂ ಇಳಿಸಲು ವಿನೇಶ್ ಫೋಗಟ್ ರಾತ್ರಿಯೆಲ್ಲಾ ಹೆಣಗಾಡಿದ್ದರಂತೆ. ಆಗಸ್ಟ್​ 6ರ ಪಂದ್ಯಗಳಿಗೆ ಯಶಸ್ವಿಯಾಗಿ ತೂಕವನ್ನು ಗಳಿಸಿದ್ದರು. ಫೈನಲ್​ನಲ್ಲೂ ಅಷ್ಟೇ ತೂಕದಲ್ಲಿ ಉಳಿಯಬೇಕಿತ್ತು. ಅದಕ್ಕಾಗಿ ಮಂಗಳವಾರ ರಾತ್ರಿ ಆಕೆ ಸುಮಾರು 2 ಕಿಲೋ ಮೀಟರ್ ಓಡಿದ್ದರು. ರಾತ್ರಿ ಜಾಗಿಂಗ್, ಸ್ಕಿಪ್ಪಿಂಗ್ ಮತ್ತು ಸೈಕ್ಲಿಂಗ್ ಕೂಡ ಮಾಡಿದ್ದಾರೆ. ಆದರೆ 100 ಗ್ರಾಂ ಕಳೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ವರದಿಗಳು ಹೇಳುತ್ತಿವೆ.

ಫೈನಲ್​ನಲ್ಲಿ ಚಿನ್ನದ ಪದಕ ಯಾರಿಗೆ?

ಸ್ಪರ್ಧೆಯ ನಿಯಮಗಳ ಪ್ರಕಾರ, ವಿನೇಶ್ ಅವರು ಅನರ್ಹಗೊಂಡ ಬೆನ್ನಲ್ಲೇ 50 ಕೆಜಿ ವಿಭಾಗದಲ್ಲಿ ಚಿನ್ನ ಮತ್ತು ಕಂಚಿನ ವಿಜೇತರಿಗೆ ಪದಕಗಳನ್ನು ವಿತರಿಸಲಾಗುತ್ತದೆ. ಫೈನಲ್​ನಲ್ಲಿ ವಿನೇಶ್ ಆಡಲು ಸಾಧ್ಯವಾಗದ ಕಾರಣ ಎದುರಾಳಿ ಕುಸ್ತಿಪಟು ಅಮೆರಿಕದ ಸೆರಾ ಹಿಲ್ದಿಬ್ರೇಟ್‌ ಅವರನ್ನು ಚಿನ್ನದ ಪದಕ ವಿಜೇತರೆಂದು ನಿರ್ಧರಿಸಲಾಗುತ್ತದೆ. ಹೀಗಾಗಿ ಬೆಳ್ಳಿ ಪದಕಕ್ಕೆ ಯಾರೂ ಅರ್ಹರಾಗಿರುವುದಿಲ್ಲ. ಆದರೆ ಒಲಿಂಪಿಕ್ಸ್​ ಈ ನಿರ್ಧಾರಕ್ಕೆ ಭಾರತದ ಕ್ರೀಡಾ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿನೇಶ್ ಸೆಮಿಫೈನಲ್ ತಲುಪಲು ಸತತ 2 ಅಸಾಧ್ಯವಾದ ಗೆಲುವುಗಳನ್ನು ದಾಖಲಿಸಿದ್ದರು. 16ನೇ ಸುತ್ತಿನಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಜಪಾನ್‌ನ ಯುಯಿ ಸುಸಾಕಿಯನ್ನು ಸೋಲಿಸಿದರು. ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಉಕ್ರೇನ್‌ನ 8ನೇ ಶ್ರೇಯಾಂಕದ ಒಕ್ಸಾನಾ ಲಿವಾಚ್ ಅವರನ್ನು ಸೋಲಿಸಿದರು. ಸೆಮಿಫೈನಲ್​ನಲ್ಲಿ ಕೂಬಾದ ಯುಸ್ನಿಲಿಸ್ ಗುಜ್ಮಾನ್ ಅವರನ್ನು 5-0 ಅಂತರದಿಂದ ಸೋಲಿಸಿ ಫೈನಲ್​ಗೆ ಅರ್ಹತೆ ಪಡೆದುಕೊಂಡಿದ್ದರು. ಇದೀಗ ಅವರ ಪದಕದ ಕನಸು ನುಚ್ಚು ನೂರಾಗಿದೆ.

ವಿನೇಶ್ ಅವರು ರಿಯೊ-2016 ಮತ್ತು ಟೊಕಿಯೊ-2020 ಒಲಿಂಪಿಕ್ಸ್​​ಗಳಲ್ಲಿ ಕ್ವಾರ್ಟರ್-ಫೈನಲ್​ನಲ್ಲಿ ನಿರ್ಗಮಿಸಿದ್ದರು. ವಿನೇಶ್ ಕಾಮನ್​ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಎರಡರಲ್ಲೂ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.