logo
ಕನ್ನಡ ಸುದ್ದಿ  /  ಕ್ರೀಡೆ  /  ಹೇಳಿದ್ದೇ ಬೇರೆ ಉಲ್ಲೇಖಿಸಿದ್ದೇ ಬೇರೆ, ನಾನಿನ್ನೂ ನಿವೃತ್ತಿ ಘೋಷಿಸಿಲ್ಲ; ಬಾಕ್ಸರ್​ ಮೇರಿಕೋಮ್ ಸ್ಪಷ್ಟನೆ

ಹೇಳಿದ್ದೇ ಬೇರೆ ಉಲ್ಲೇಖಿಸಿದ್ದೇ ಬೇರೆ, ನಾನಿನ್ನೂ ನಿವೃತ್ತಿ ಘೋಷಿಸಿಲ್ಲ; ಬಾಕ್ಸರ್​ ಮೇರಿಕೋಮ್ ಸ್ಪಷ್ಟನೆ

Prasanna Kumar P N HT Kannada

Jan 25, 2024 10:38 AM IST

ನಿವೃತ್ತಿ ಕುರಿತು ಬಾಕ್ಸರ್​ ಮೇರಿ ಕೋಮ್ ಸ್ಪಷ್ಟನೆ.

    • Mary Kom Announces Retirement: ಬಾಕ್ಸಿಂಗ್​ಗೆ ನಿವೃತ್ತಿ ಘೋಷಿಸಿದ್ದಾರೆ ಎಂಬ ಸುದ್ದಿಗಳನ್ನು ಭಾರತದ ಪ್ರಸಿದ್ಧ ಬಾಕ್ಸರ್​ ಮೇರಿಕೋಮ್ ತಳ್ಳಿ ಹಾಕಿದ್ದಾರೆ. ನಾನಿನ್ನೂ ನಿವೃತ್ತಿ ಘೋಷಿಸಿಲ್ಲ ಎಂದು ಹೇಳಿದ್ದಾರೆ.
ನಿವೃತ್ತಿ ಕುರಿತು ಬಾಕ್ಸರ್​ ಮೇರಿ ಕೋಮ್ ಸ್ಪಷ್ಟನೆ.
ನಿವೃತ್ತಿ ಕುರಿತು ಬಾಕ್ಸರ್​ ಮೇರಿ ಕೋಮ್ ಸ್ಪಷ್ಟನೆ.

ಬಾಕ್ಸಿಂಗ್​ಗೆ ವಿದಾಯ ಘೋಷಿಸಿದ್ದಾರೆ ಎಂಬ ವರದಿಗಳನ್ನು ಆರು ಬಾರಿಯ ವಿಶ್ವ ಚಾಂಪಿಯನ್ ಮತ್ತು 2012ರ ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್ (Mary Kom Retirement) ತಳ್ಳಿ ಹಾಕಿದ್ದಾರೆ. ನಾನು ನಿವೃತ್ತಿ ನೀಡಿರುವಂತೆ ಸುಳ್ಳು ಸುದ್ದಿಗಳನ್ನು ಪ್ರಕಟಿಸಲಾಗಿದೆ. ಆದರೆ ನಾನು ನಿವೃತ್ತಿ ಘೋಷಿಸಿಲ್ಲ. ಒಂದು ವೇಳೆ ಅಂತಹ ನಿರ್ಧಾರ ತೆಗೆದುಕೊಂಡರೆ ನಾನೇ ನಿಮಗೆ ತಿಳಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಭಾರತದ ಹಲವು ಮಾಧ್ಯಮಗಳು ಬುಧವಾರ (ಜನವರಿ 24) ಮೇರಿ ಕೋಮ್​ ಅವರು ಬಾಕ್ಸಿಂಗ್​ಗೆ ನಿವೃತ್ತಿ ಘೋಷಿಸಿರವುದಾಗಿ ವರದಿ ಮಾಡಿವೆ. ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್​​ ನಿಯಮ ಪ್ರಕಾರ ಪುರುಷ ಮತ್ತು ಮಹಿಳಾ ಬಾಕ್ಸರ್​ಗಳು 40 ವರ್ಷ ವಯಸ್ಸಿನವರೆಗೆ ಮಾತ್ರ ಎಲೈಟ್​ ಮಟ್ಟದಿಂದ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆ. ಹೀಗಾಗಿ 41 ವರ್ಷ ಮೇರಿ ವಿದಾಯ ಹೇಳಿದ್ದಾರೆ ಎಂದು ವರದಿ ಮಾಡಲಾಗಿತ್ತು.

ನಿವೃತ್ತಿ ತಳ್ಳಿ ಹಾಕಿದ ಮೇರಿ ಕೋಮ್

ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ತನ್ನ ನಿವೃತ್ತಿ ಕುರಿತ ಸುದ್ದಿಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಾನು ಇನ್ನೂ ನಿವೃತ್ತಿ ಘೋಷಿಸಿಲ್ಲ. ಈ ಕುರಿತು ತಪ್ಪಾಗಿ ಉಲ್ಲೇಖಿಸಲಾಗಿದೆ. ನಾನು ನಿವೃತ್ತಿ ಘೋಷಿಸಲು ಬಯಸಿದಾಗ ವೈಯಕ್ತಿಕವಾಗಿ ಮಾಧ್ಯಮಗಳ ಮುಂದೆ ಬರುತ್ತೇನೆ ಎಂದ ಅವರು, ನನ್ನ ನಿವೃತ್ತಿ ಕುರಿತ ಸುದ್ದಿಗಳು ಶುದ್ದ ಸುಳ್ಳು ಎಂದು ಚಾಂಪಿಯನ್ ಆಟಗಾರ್ತಿ ಸ್ಪಷ್ಟನೆ ನೀಡಿದ್ದಾರೆ.

ನಾನು 24 ಜನವರಿ 2024 ರಂದು ದಿಬ್ರುಗಢ್‌ನಲ್ಲಿ ಶಾಲಾ ಕಾರ್ಯಕ್ರಮಕ್ಕೆ ಹಾಜರಾಗಿದ್ದೆ. ಆಗ ನನಗೆ ಇನ್ನೂ ಕ್ರೀಡೆಯಲ್ಲಿ ಸಾಧನೆ ಮಾಡುವ ಹಸಿವಿದೆ. ಆದರೆ ಒಲಿಂಪಿಕ್ಸ್‌ನಲ್ಲಿನ ವಯಸ್ಸಿನ ಮಿತಿ ನಿಮಯದ ಕಾರಣ ನನಗೆ ಭಾಗವಹಿಸಲು ಅವಕಾಶ ಇಲ್ಲ. ನನ್ನ ಕ್ರೀಡೆಯೊಂದಿಗೆ ನಾನು ಇನ್ನೂ ನನ್ನ ಫಿಟ್ನೆಸ್ ಮೇಲೆ ಕೇಂದ್ರೀಕರಿಸುತ್ತಿದ್ದೇನೆ ಎಂದು ಹೇಳಿದ್ದೆ. ಅದನ್ನೇ ನಿವೃತ್ತಿ ಎಂದು ಭಾವಿಸಲಾಗಿದೆ. ನಾನು ನಿವೃತ್ತಿ ಘೋಷಿಸಿದಾಗ ನಾನು ಎಲ್ಲರಿಗೂ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.

ಚಾಂಪಿಯನ್ ಆಟಗಾರ್ತಿ ಮೇರಿ ಕೋಮ್

ಬಾಕ್ಸಿಂಗ್ ಇತಿಹಾಸದಲ್ಲಿ ಆರು ವಿಶ್ವ ಪ್ರಶಸ್ತಿಗಳನ್ನು ಗೆದ್ದ ಮೊದಲ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಮೇರಿ ಕೋಮ್ ಪಾತ್ರರಾಗಿದ್ದಾರೆ. ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಅವರು, 2014ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದ ಭಾರತದ ಮೊದಲ ಮಹಿಳಾ ಬಾಕ್ಸರ್ ಕೂಡ ಆಗಿದ್ದಾರೆ. ಅನುಭವಿ ಆಟಗಾರ್ತಿ ಲಂಡನ್ 2012ರ ಒಲಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನೂ ಗೆದಿದ್ದರು. 18ನೇ ವಯಸ್ಸಿನಲ್ಲಿ ಪೆನ್ಸಿಲ್ವೇನಿಯಾದ ಸ್ಕ್ರಂಟನ್‌ನಲ್ಲಿ ನಡೆದ ಉದ್ಘಾಟನಾ ವಿಶ್ವಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿ ವಿಶ್ವಕ್ಕೆ ಪರಿಚಯವಾದರು.

ಚಿನ್ನದ ಪದಕ; ಮೂವರು ಮಕ್ಕಳಿಗೆ ತಾಯಿ

ದಿಗ್ಗಜ ಆಟಗಾರ್ತಿ ಎಐಬಿಎ (AIBA) ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನಿಸಿದ್ದಾರೆ. 2005, 2006, 2008 ಮತ್ತು 2010ರ ಸೀಸನ್​ಗಳಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದರು. 2008ರಲ್ಲಿ ಪ್ರಶಸ್ತಿ ಗೆದ್ದ ನಂತರ ಮೇರಿ ತನ್ನ ಅವಳಿ ಮಕ್ಕಳ ತಾಯಿಯಾದರು. ಇದರಿಂದ ಕೆಲ ಕಾಲ ಬಾಕ್ಸಿಂಗ್​ನಿಂದ ಹೊರಗುಳಿದರು. 2012ರ ಒಲಿಂಪಿಕ್ ಪದಕ ಜಯಿಸಿದ ಮೇರಿ ತನ್ನ ಮೂರನೇ ಮಗುವಿಗೆ ಜನ್ಮ ನೀಡಿದರು. ಆಗ ಮತ್ತೊಮ್ಮೆ ವಿಶ್ರಾಂತಿ ಪಡೆದರು.

ಮೇರಿ ಕೋಮ್ ಸಿನಿಮಾ

ಇದಾದ ನಂತರ ಬಾಕ್ಸಿಂಗ್​ಗೆ ಮರಳಿದ ಮೇರಿ ಮತ್ತೆ ಮಿಂಚು ಹರಿಸಿದರು. 2018ರ ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಸ್ಥಾನ ಪಡೆದು ಉಕ್ರೇನ್​ನ ಹನ್ನಾ ಒಖೋಟಾ ವಿರುದ್ಧ 5-0 ಅಂತರದ ಗೆಲುವು ಸಾಧಿಸಿ 6ನೇ ಬಾರಿಗೆ ವಿಶ್ವ ಚಾಂಪಿಯನ್​ ಆದರು. ಇದಾದ 1 ವರ್ಷದ ನಂತರ ತಮ್ಮ ಎಂಟನೇ ವಿಶ್ವ ಪದಕಕ್ಕೆ ಮುತ್ತಿಕ್ಕಿದರು. ಅನೇಕರಿಗೆ ಮಾದರಿಯಾಗಿರುವ ಅವರ ಸಾಧನೆ ಸಾರುವ ಸಿನಿಮಾ ಕೂಡ ಜನಪ್ರಿಯವಾಗಿತ್ತು. ಮೇರಿ ಪಾತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದರು.

ಪ್ರಶಸ್ತಿಗಳು

ಪದ್ಮವಿಭೂಷಣ (2020), ಪದ್ಮಭೂಷಣ (2013), ಮೇಜರ್ ಧ್ಯಾನ ಚಂದ್ ಖೇಲ್ ರತ್ನ ಅವಾರ್ಡ್ (2009), ಪದ್ಮಶ್ರೀ (2006), ಅರ್ಜನ್ ಅವಾರ್ಡ್ (2003).

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ