logo
ಕನ್ನಡ ಸುದ್ದಿ  /  ಕ್ರೀಡೆ  /  ಇಟಲಿಯಲ್ಲಿ ಹಣ ಕದ್ದು ಪರಾರಿಯಾದ ಪಾಕಿಸ್ತಾನದ ಬಾಕ್ಸರ್‌; ದೇಶಕ್ಕೆ ಅತ್ಯಂತ ಮುಜುಗರದ ಸಂಗತಿ ಎಂದ ಪಾಕ್

ಇಟಲಿಯಲ್ಲಿ ಹಣ ಕದ್ದು ಪರಾರಿಯಾದ ಪಾಕಿಸ್ತಾನದ ಬಾಕ್ಸರ್‌; ದೇಶಕ್ಕೆ ಅತ್ಯಂತ ಮುಜುಗರದ ಸಂಗತಿ ಎಂದ ಪಾಕ್

Jayaraj HT Kannada

Mar 05, 2024 03:00 PM IST

ಇಟಲಿಯಲ್ಲಿ ಹಣ ಕದ್ದು ಪರಾರಿಯಾದ ಪಾಕಿಸ್ತಾನದ ಬಾಕ್ಸರ್‌ ಜೊಹೈಬ್ ರಶೀದ್

    • ಒಲಿಂಪಿಕ್ ಅರ್ಹತಾ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಟಲಿಗೆ ತೆರಳಿದ್ದ ಪಾಕಿಸ್ತಾನದ ಬಾಕ್ಸರ್‌ ಜೊಹೈಬ್ ರಶೀದ್, ಅಲ್ಲಿ ತಂಡದ ಸಹ ಆಟಗಾರ್ತಿಯ ಬ್ಯಾಗ್‌ನಿಂದ ಹಣ ಕದ್ದು ಪರಾರಿಯಾಗಿದ್ದಾರೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಭಾರಿ ಮುಜುಗರ ತರಿಸಿದೆ.
ಇಟಲಿಯಲ್ಲಿ ಹಣ ಕದ್ದು ಪರಾರಿಯಾದ ಪಾಕಿಸ್ತಾನದ ಬಾಕ್ಸರ್‌ ಜೊಹೈಬ್ ರಶೀದ್
ಇಟಲಿಯಲ್ಲಿ ಹಣ ಕದ್ದು ಪರಾರಿಯಾದ ಪಾಕಿಸ್ತಾನದ ಬಾಕ್ಸರ್‌ ಜೊಹೈಬ್ ರಶೀದ್

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಜುಗರದ ಸನ್ನಿವೇಶ ಎದುರಾಗಿದೆ. ದೇಶದ ಖ್ಯಾತ ಬಾಕ್ಸರ್ ಒಬ್ಬರು, ತಂಡದ ಸಹ ಆಟಗಾರರೊಬ್ಬರ ಬ್ಯಾಗ್‌ನಿಂದ ಹಣ ಕದ್ದು ಪರಾರಿಯಾಗಿರುವ ಘಟನೆ ಇಟಲಿಯಲ್ಲಿ ನಡೆದಿದೆ. ಈ ಕುರಿತು ಪಾಕಿಸ್ತಾನ ಅಮೆಚೂರ್ ಬಾಕ್ಸಿಂಗ್ ಫೆಡರೇಶನ್ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಒಲಿಂಪಿಕ್ ಅರ್ಹತಾ ಪಂದ್ಯಾವಳಿಯಲ್ಲಿ ಭಾಗವಹಿಸುವ ಸಲುವಾಗಿ, ಪಾಕಿಸ್ತಾನದ ಬಾಕ್ಸರ್‌ ಜೊಹೈಬ್ ರಶೀದ್ (Zohaib Rasheed) ತಂಡದೊಂದಿಗೆ ಇಟಲಿಗೆ ತೆರಳಿದ್ದರು. ದೇಶದ ಒಟ್ಟು ಐವರು ಸದಸ್ಯರಲ್ಲಿ ರಶೀದ್ ಕೂಡಾ ಒಬ್ಬರು. ಅಲ್ಲಿ ಹಣ ಕದ್ದು ಓಡಿ ಹೋಗಿದ್ದಾರೆ.

ಫೆಡರೇಶನ್‌ನ ಹಿರಿಯ ಅಧಿಕಾರಿಯೊಬ್ಬರು ಇದನ್ನು ಇಟಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಘಟನೆ ಕುರಿತು ಪೊಲೀಸರಿಗೆ ವರದಿ ಸಲ್ಲಿಸಿದ್ದಾರೆ. “ಒಲಿಂಪಿಕ್ ಅರ್ಹತಾ ಪಂದ್ಯಾವಳಿಯಲ್ಲಿ ಭಾಗವಹಿಸಲು ಐದು ಸದಸ್ಯರ ತಂಡದೊಂದಿಗೆ ಇಟಲಿಗೆ ಹೋಗಿದ್ದ ಜೊಹೈಬ್ ರಶೀದ್ ವರ್ತನೆಯು, ಫೆಡರೇಶನ್ ಮತ್ತು ಪಾಕಿಸ್ತಾನ ದೇಶಕ್ಕೆ ಅತ್ಯಂತ ಮುಜುಗರವನ್ನುಂಟು ಮಾಡಿದೆ” ಎಂದು ರಾಷ್ಟ್ರೀಯ ಒಕ್ಕೂಟದ ಕಾರ್ಯದರ್ಶಿ ಕರ್ನಲ್ ನಾಸಿರ್ ಅಹ್ಮದ್ ಹೇಳಿದ್ದಾರೆ.

ಇದನ್ನೂ ಓದಿ | ಫುಟ್ಬಾಲ್​ಗೆ ಕ್ರಿಸ್ಟಿಯಾನೊ ರೊನಾಲ್ಡೊ ನಿವೃತ್ತಿ ಯಾವಾಗ; ಸಮಯ ಬಹಿರಂಗಪಡಿಸಿದ ಗೆಳತಿ ಜಾರ್ಜಿನಾ ರೊಡ್ರಿಗಸ್

ಮಹಿಳಾ ಬಾಕ್ಸರ್ ಲಾರಾ ಇಕ್ರಮ್ ತರಬೇತಿ ಸಲುವಾಗಿ ಹೊರಗೆ ಹೋಗಿದ್ದಾಗ, ರಶೀದ್ ಕಳ್ಳತನ ಮಾಡಿದ್ದಾರೆ. ಅವರ ಕೋಣೆಯ ಕೀಯನ್ನು ಪಡೆದು, ಲಾರಾ ಅವರ ಪರ್ಸ್‌ನಿಂದ ವಿದೇಶಿ ಕರೆನ್ಸಿಯನ್ನು ಕದ್ದಿದ್ದಾರೆ. ಬಳಿಕ ಹೋಟೆಲ್‌ನಿಂದ ಪರಾರಿಯಾಗಿದ್ದಾರೆ ಎಂದು ನಾಸಿರ್ ಹೇಳಿದ್ದಾರೆ.

ನಾಟ್‌ ರೀಚೇಬಲ್

ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಈಗ ಅವನನ್ನು ಹುಡುಕುತ್ತಿದ್ದಾರೆ. ಆದರೆ ಅವನು ಯಾರೊಂದಿಗೂ ಸಂಪರ್ಕದಲ್ಲಿಲ್ಲ, ಎಂದು ನಾಸಿರ್ ಹೇಳಿದ್ದಾರೆ.

ಇದನ್ನೂ ಓದಿ | ವರ್ಷದಿಂದ ವರ್ಷಕ್ಕೆ ಏರಿದೆ ಪ್ರೊ ಕಬಡ್ಡಿ ಲೀಗ್ ಪ್ರೈಜ್ ಮನಿ ಗ್ರಾಫ್; ಮೊದಲ ಆವೃತ್ತಿಯಲ್ಲಿ ಇದ್ದಿದ್ದೆಷ್ಟು, ಈಗಿರುವುದೆಷ್ಟು?

ಕಳೆದ ವರ್ಷ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಜೊಹೈಬ್, ಪಾಕಿಸ್ತಾನದ ಉದಯೋನ್ಮುಖ ಪ್ರತಿಭೆ ಎಂದೇ ಹೆಸರು ಮಾಡಿದ್ದಾರೆ. ಈ ನಡುವೆ ಈ ಘಟನೆಯು ಪಾಕಿಸ್ತಾನಕ್ಕೆ ಮುಜುಗರ ತರಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ