ಕನ್ನಡ ಸುದ್ದಿ  /  Sports  /  Cristiano Ronaldos Girlfriend Georgina Rodriguez Drops Bombshell Reveals Portugal Football Legends Retirement Date Prs

ಫುಟ್ಬಾಲ್​ಗೆ ಕ್ರಿಸ್ಟಿಯಾನೊ ರೊನಾಲ್ಡೊ ನಿವೃತ್ತಿ ಯಾವಾಗ; ಸಮಯ ಬಹಿರಂಗಪಡಿಸಿದ ಗೆಳತಿ ಜಾರ್ಜಿನಾ ರೊಡ್ರಿಗಸ್

Cristiano Ronaldo : ಫುಟ್ಬಾಲ್ ಕ್ಷೇತ್ರದ ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಯಾವಾಗ ನಿವೃತ್ತಿಯಾಗುತ್ತಾರೆ ಎಂಬುದಕ್ಕೆ ಸಂಬಂಧಿಸಿ ಆತನ ಗೆಳತಿ ಜಾರ್ಜಿನಾ ರೊಡ್ರಿಗಸ್ ಅವರು ಸಮಯವನ್ನು ಬಹಿಂರಗಪಡಿಸಿದ್ದಾರೆ.

ಫುಟ್ಬಾಲ್​ಗೆ ಕ್ರಿಸ್ಟಿಯಾನೊ ರೊನಾಲ್ಡೊ ನಿವೃತ್ತಿ ಯಾವಾಗ; ಸಮಯ ಬಹಿರಂಗಪಡಿಸಿದ ಗೆಳತಿ ಜಾರ್ಜಿನಾ ರೊಡ್ರಿಗಸ್
ಫುಟ್ಬಾಲ್​ಗೆ ಕ್ರಿಸ್ಟಿಯಾನೊ ರೊನಾಲ್ಡೊ ನಿವೃತ್ತಿ ಯಾವಾಗ; ಸಮಯ ಬಹಿರಂಗಪಡಿಸಿದ ಗೆಳತಿ ಜಾರ್ಜಿನಾ ರೊಡ್ರಿಗಸ್

ಕ್ರಿಸ್ಟಿಯಾನೊ ರೊನಾಲ್ಡೊ ಕಳೆದ ಎರಡು ದಶಕಗಳಿಂದ ಫುಟ್ಬಾಲ್ ಜಗತ್ತನ್ನು ಬೆಳಗಿದ ಮತ್ತು ಅಭೂತಪೂರ್ವ ಎತ್ತರವನ್ನು ತಲುಪಿದ ಹೆಸರು. 2004ರಲ್ಲಿ ಯೂರೋಸ್‌ನಲ್ಲಿ ಅವರ ಅದ್ಭುತ ಅಭಿಯಾನದ ನಂತರ, ರೊನಾಲ್ಡೊ 20 ವರ್ಷಗಳ ನಂತರವೂ ವಿಶ್ವ ಫುಟ್ಬಾಲ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನಕಾರರಲ್ಲಿ ಒಬ್ಬರಾಗಿ ಮುಂದುವರೆದಿದ್ದಾರೆ. ಸದ್ಯ ಅಂತಹ ಆಟಗಾರನ ನಿವೃತ್ತಿಯ ಕುರಿತು ಚರ್ಚೆಯಾಗುತ್ತಿದೆ. ರೊನಾಲ್ಡೊ ವಿದಾಯದ ಕುರಿತು ಆತನ ಗೆಳತಿ ಬಹಿರಂಗಪಡಿಸಿದ್ದಾರೆ.

ಈ ಪೀಳಿಗೆಯ ಫುಟ್ಬಾಲ್ ಅನ್ನು ಕ್ರಿಸ್ಟಿನಾ ರೊನಾಲ್ಡೊ ವರ್ಸಸ್ ಲಿಯೋನೆಲ್ ಮೆಸ್ಸಿ ಎಂಬ ಚರ್ಚೆಯಿಂದಲೇ ವ್ಯಾಖ್ಯಾನಿಸಲಾಗಿದೆ. ಫಿಟ್ನೆಸ್, ಆಕ್ರಮಣಕಾರಿ ಆಟದ ಮೂಲಕವೇ ಆಟವನ್ನು ಉನ್ನತ ಹಂತಕ್ಕೆ ಕೊಂಡೊಯ್ದ ಸೂಪರ್ ಸ್ಟಾರ್ ಫುಟ್ಬಾಲರ್​, ಸಕ್ರಿಯ ಆಟಗಾರರಲ್ಲಿ ಹೆಚ್ಚು ಅಂತಾರಾಷ್ಟ್ರೀಯ ಫುಟ್ಬಾಲ್ ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫುಟ್ಬಾಲ್​ನ ಅಪರೂಪದ ವ್ಯಕ್ತಿಯೂ ಹೌದು.

20 ವರ್ಷಗಳ ಕಾಲ ಫುಟ್ಬಾಲ್ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಿದ ಅವರು ಅದೆಷ್ಟೋ ಕೋಟ್ಯಂತರ ಯುವಕರಿಗೆ ರೋಲ್ ಮಾಡೆಲ್ ಆಗಿದ್ದಾರೆ. 128 ಅಂತಾರಾಷ್ಟ್ರೀಯ ಗೋಲುಗಳನ್ನು ಗಳಿಸಿರುವ ರೊನಾಲ್ಡೊ ಅವರು, ತಮ್ಮ ವೃತ್ತಿಜೀವನದ ಅವಧಿಯಲ್ಲಿ ಪ್ರತಿಷ್ಠಿತ ಬ್ಯಾಲನ್ ಡಿ'ಓರ್ ಪ್ರಶಸ್ತಿಗಳನ್ನು 5 ಬಾರಿ ಗೆದ್ದಿದ್ದಾರೆ. ಫುಟ್ಬಾಲ್ ಇತಿಹಾಸದಲ್ಲಿ ಈ ಪ್ರಶಸ್ತಿಯನ್ನು ಅಧಿಕ ಬಾರಿ ಗೆದ್ದ 2ನೇ ಆಟಗಾರ. ಲಿಯೊನೆಲ್ ಮೆಸ್ಸಿ (8) ಹೆಚ್ಚು ಬಾರಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ರೊನಾಲ್ಡೊ ಗೆಳತಿ ಹೇಳಿದ್ದೇನು?

ರೊನಾಲ್ಡೊ ಅವರಿಗೆ ವಯಸ್ಸಾಗಿದೆ ಎಂದು ಊಹಿಸಲು ಸಾಧ್ಯವಿಲ್ಲ. ಏಕೆಂದರೆ ಫುಟ್ಬಾಲ್ ದಿಗ್ಗಜನಿಗೆ ವಯಸ್ಸು 39 ಆಗಿದ್ದರೂ, ಇನ್ನೂ ಐದಾರು ವರ್ಷಗಳ ಕಾಲ ಮೈದಾನದಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಸದ್ಯ ಅವರ ನಿವೃತ್ತಿ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಪೋರ್ಚುಗಲ್​ನ ಫುಟ್ಬಾಲ್ ದೊರೆ ಫುಟ್ಬಾಲ್​ಗೆ ವಿದಾಯ ಹೇಳುವುದು ಯಾವಾಗ ಎಂದು ಸುದ್ದಿಗಳು ಹರಿದಾಡುತ್ತಿವೆ. ಇದರ ನಡುವೆ ಆತನ ಗೆಳತಿ ಜಾರ್ಜಿನಾ ರೊಡ್ರಿಗಸ್ ಅವರು ರೊನಾಲ್ಡೊ ನಿವೃತ್ತಿ ಕುರಿತು ಅಪ್ಡೇಟ್ ನೀಡಿದ್ದಾರೆ.

ಗೆಳತಿ ಜಾರ್ಜಿನಾ ರೊಡ್ರಿಗಸ್ ಅವರು ಪೋರ್ಚುಗೀಸ್ ತಾರೆ ರೊನಾಲ್ಡೊ ಅವರು ಕ್ರೀಡೆಯಿಂದ ಯಾವಾಗ ನಿವೃತ್ತರಾಗುತ್ತಾರೆ ಎಂಬುದರ ಕುರಿತು ಪ್ರಮುಖ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ ಅವರು ಒಂದು ಅಥವಾ ಎರಡು ವರ್ಷಗಳಲ್ಲಿ ಫುಟ್ಬಾಲ್ ಕ್ರೀಡೆಯಿಂದ ಹಿಂದೆ ಸರಿಯಲಿದ್ದಾರೆ. ರೊಡ್ರಿಗಸ್ ಅವರ ಮಾತುಗಳ ಪ್ರಕಾರ ಪೋರ್ಚುಗಲ್ ತಾರೆ 2026ರ ಫಿಫಾ ವಿಶ್ವಕಪ್ ನಂತರ ವಿದಾಯ ಹೇಳುವ ಸಾಧ್ಯತೆ ಇದೆ.

ಕ್ರಿಸ್ಟಿಯಾನೊ ರೊನಾಲ್ಡೊ ಇನ್ನೂ ಒಂದು ವರ್ಷ, ಬಹುಶಃ ಎರಡು ವರ್ಷ. ಅಲ್ಲಿಗೆ ಕ್ರೀಡೆಗೆ ಫುಲ್​ಸ್ಟಾಪ್ ಇಡಲಿದ್ದಾರೆ. ಫುಟ್ಬಾಲ್ ವೃತ್ತಿ ಜೀವನಕ್ಕೆ ಅಂತ್ಯವಾಡುವ ಸಾಧ್ಯತೆ ಇದೆ. ಆದರೆ ನನಗೆ ಗೊತ್ತಿಲ್ಲ ಎಂದು ರೊಡ್ರಿಗಸ್, ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಸೆರೆಹಿಡಿಯಲಾದ ವಿಡಿಯೋದಲ್ಲಿ ಹೇಳಿದ್ದಾರೆ. ಅಲ್ಲಿ ಅವರು ಫುಟ್‌ಬಾಲ್ ದಂತಕಥೆಗೆ ಅದ್ಭುತವಾದ ಗೌರವವನ್ನು ಸಲ್ಲಿಸಿದರು. ರೊನಾಲ್ಡೊ ಪ್ರಸ್ತುತ ಸೌದಿ ಲೀಗ್‌ನಲ್ಲಿ ಅಲ್ ನಾಸರ್​ ತಂಡದ ಪರ ಅಡುತ್ತಿದ್ದಾರೆ.