logo
ಕನ್ನಡ ಸುದ್ದಿ  /  ಕ್ರೀಡೆ  /  Pkl 11: ಪ್ರೊ ಕಬಡ್ಡಿ ಲೀಗ್‌ನ 11ನೇ ಸೀಸನ್‌ನಲ್ಲಿ ವಿಫಲರಾದ 3 ಸ್ಟಾರ್ ರೈಡರ್‌ಗಳು

PKL 11: ಪ್ರೊ ಕಬಡ್ಡಿ ಲೀಗ್‌ನ 11ನೇ ಸೀಸನ್‌ನಲ್ಲಿ ವಿಫಲರಾದ 3 ಸ್ಟಾರ್ ರೈಡರ್‌ಗಳು

Reshma HT Kannada

Nov 07, 2024 12:04 PM IST

google News

ಪ್ರೊ ಕಬಡ್ಡಿ ಲೀಗ್‌ನ 11ನೇ ಸೀಸನ್‌ನಲ್ಲಿ ವಿಫಲರಾದ 3 ಸ್ಟಾರ್ ರೈಡರ್‌ಗಳು

    • ಪ್ರೊ ಕಬಡ್ಡಿ ಲೀಗ್‌ನ 11 ನೇ ಸೀಸನ್‌ನ ಆರಂಭಕ್ಕೂ ಮುನ್ನ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಆ ಮೂವರು ರೈಡರ್‌ಗಳು ಇದೀಗ ಮಂಕಾಗಿದ್ದಾರೆ. ಈ ಆಟಗಾರರು ಇನ್ನೂ ಆ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗಿಲ್ಲ.
ಪ್ರೊ ಕಬಡ್ಡಿ ಲೀಗ್‌ನ 11ನೇ ಸೀಸನ್‌ನಲ್ಲಿ ವಿಫಲರಾದ 3 ಸ್ಟಾರ್ ರೈಡರ್‌ಗಳು
ಪ್ರೊ ಕಬಡ್ಡಿ ಲೀಗ್‌ನ 11ನೇ ಸೀಸನ್‌ನಲ್ಲಿ ವಿಫಲರಾದ 3 ಸ್ಟಾರ್ ರೈಡರ್‌ಗಳು

ಪ್ರೊ ಕಬಡ್ಡಿ ಲೀಗ್‌ನಲ್ಲಿ ರೈಡರ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪ್ರತಿಯೊಬ್ಬ ಅಭಿಮಾನಿಯು ರೈಡರ್ಸ್ ಮೇಲೆ ಹೆಚ್ಚಿನ ಗಮನವನ್ನು ಹೊಂದಿರುತ್ತಾನೆ. ಒಂದೇ ರೇಡ್‌ನಲ್ಲಿ 3-4 ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಪಂದ್ಯವನ್ನು ತಿರುಗಿಸಬಲ್ಲ ತಾಕತ್ತು ಈ ರೈಡರ್‌ಗಳಿಗೆ ಇರುತ್ತದೆ. ತನ್ನ ಒಂದು ದಾಳಿಯ ಮೂಲಕ ಇಡೀ ಪಂದ್ಯದ ಹಾದಿಯನ್ನು ಬದಲಾಯಿಸಬಹುದು. ಈ ಋತುವಿನ ಪ್ರೊ ಕಬಡ್ಡಿ ಲೀಗ್‌​ನಲ್ಲಿ ಅನೇಕ ರೈಡರ್‌ಗಳು ಉತ್ತಮ ಪ್ರದರ್ಶನ ನೀಡಿದರೆ, ಇನ್ನೂ ಕೆಲ ದೊಡ್ಡ ರೈಡರ್‌ಗಳು ಸಂಪೂರ್ಣ ವಿಫಲರಾಗಿದ್ದಾರೆ.

ಪ್ರೊ ಕಬಡ್ಡಿ ಲೀಗ್‌ನ 11ನೇ ಸೀಸನ್‌ನ ಆರಂಭಕ್ಕೂ ಮುನ್ನ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಆ ಮೂವರು ರೈಡರ್‌ಗಳು ಇದೀಗ ಮಂಕಾಗಿದ್ದಾರೆ. ಈ ಆಟಗಾರರು ಇನ್ನೂ ಆ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗಿಲ್ಲ.

3.ಗುಮನ್ ಸಿಂಗ್ (ಗುಜರಾತ್ ಜೈಂಟ್ಸ್)

ಪಿಕೆಎಲ್ ಹರಾಜಿನ ವೇಳೆ ಗುಜರಾತ್ ಜೈಂಟ್ಸ್ ಗುಮಾನ್ ಸಿಂಗ್ ಅವರನ್ನು 1 ಕೋಟಿ 97 ಲಕ್ಷ ರೂಪಾಯಿ ಬೃಹತ್ ಮೊತ್ತಕ್ಕೆ ಖರೀದಿಸಿತ್ತು. ಈ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿ ತಂಡವನ್ನು ಸತತ ಗೆಲುವಿನತ್ತ ಮುನ್ನಡೆಸುತ್ತಾರೆ ಎಂದು ಅವರಿಂದ ನಿರೀಕ್ಷಿಸಲಾಗಿತ್ತು. ಆದರೆ, ಇದುವರೆಗೆ ಗುಮಾನ್ ಸಿಂಗ್ 5 ಪಂದ್ಯಗಳಲ್ಲಿ 31 ಅಂಕ ಗಳಿಸಲು ಶಕ್ತರಾಗಿದ್ದಾರೆ. ಬೆಲೆ ಟ್ಯಾಗ್ ಅನ್ನು ಪರಿಗಣಿಸಿ ಈ ಕಾರ್ಯಕ್ಷಮತೆಯನ್ನು ಸಮರ್ಥಿಸಲಾಗುವುದಿಲ್ಲ. ಈ ಕಾರಣದಿಂದ ಗುಜರಾತ್ ತಂಡ ಇದುವರೆಗೆ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

2.ನವೀನ್ ಕುಮಾರ್ (ದಬಾಂಗ್ ಡೆಲ್ಲಿ)

ನವೀನ್ ಕುಮಾರ್ ಅವರನ್ನು ಸಾಮಾನ್ಯ ಆಟಗಾರನಾಗಿ ನೋಡಿದರೆ, ಈ ಋತುವಿನಲ್ಲಿ ಅವರ ಪ್ರದರ್ಶನವು ವಿಶೇಷತೆಯಿಂದ ಕೂಡಿಲ್ಲ. ಈ ಅವಧಿಯಲ್ಲಿ 4 ಪಂದ್ಯಗಳನ್ನು ಆಡಿರುವ ಅವರು ಕೇವಲ 24 ಅಂಕಗಳನ್ನು ಗಳಿಸಿದ್ದಾರೆ. ಇದಾದ ನಂತರ ಅವರೂ ಗಾಯಕ್ಕೆ ಬಲಿಯಾದರು. ಅವರ ಕಳಪೆ ಫಾರ್ಮ್‌ನ ಎಫೆಕ್ಟ್ ತಂಡದ ಮೇಲೂ ಕಾಣಿಸಿಕೊಂಡಿದ್ದು, ದಬಾಂಗ್ ಡೆಲ್ಲಿ ಅಂಕ ಪಟ್ಟಿಯಲ್ಲಿ ಸದ್ಯ 10ನೇ ಸ್ಥಾನದಲ್ಲಿದೆ.

1. ಪರ್ದೀಪ್ ನರ್ವಾಲ್ (ಬೆಂಗಳೂರು ಬುಲ್ಸ್)

ಪ್ರೊ ಕಬಡ್ಡಿ ಲೀಗ್‌ನ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ರೈಡರ್ ಆಗಿರುವ ಪರ್ದೀಪ್ ನರ್ವಾಲ್ ಅವರ ಪ್ರದರ್ಶನವೂ ಈ ಋತುವಿನಲ್ಲಿ ತೀರಾ ಕಳಪೆ ಆಗಿದೆ. ಈ ಅವಧಿಯಲ್ಲಿ ಅವರು 6 ಪಂದ್ಯಗಳನ್ನು ಆಡಿದ್ದಾರೆ ಮತ್ತು ಕೇವಲ 35 ಅಂಕಗಳನ್ನು ಗಳಿಸಿದ್ದಾರೆ. ಪರ್ದೀಪ್ ನರ್ವಾಲ್ ಅವರ ಹಿಂದಿನ ಸೀಸನ್​ಗಳನ್ನೆಲ್ಲ ಪರಿಗಣಿಸಿದರೆ, ಈ ಪ್ರದರ್ಶನವನ್ನು ಉತ್ತಮ ಎಂದು ಹೇಳಲಾಗುವುದಿಲ್ಲ. ಫಿಟ್‌ನೆಸ್ ಕಾರಣ ನೀಡಿ ಅವರನ್ನು ಕೊನೆಯ ಪಂದ್ಯದಿಂದ ಹೊರಗಿಡಲಾಗಿತ್ತು. ಇವರ ನೆರು ತಂಡಕ್ಕೆ ಇರದಿದ್ದರೆ ಬೆಂಗಳೂರು ಪುಟಿದೇಳುವುದು ಕಷ್ಟ.

ವರದಿ: ವಿನಯ್ ಭಟ್

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ