ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್, ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟಿದ್ದ ಈತ ಪಿಕೆಎಲ್ನಲ್ಲೂ ಅಬ್ಬರ
Sachin Tanwar: ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್, ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟಿದ್ದ ಸಚಿನ್ ತನ್ವರ್, ಪ್ರೊ ಕಬಡ್ಡಿ ಲೀಗ್ನಲ್ಲೂ ಮಿಂಚುತ್ತಿದ್ದಾರೆ. ಈತನ ಹಿನ್ನೆಲೆ ಏನು? ಎಲ್ಲಿಯವರು? ಪಿಕೆಎಲ್ನಲ್ಲಿ ಪ್ರಸ್ತುತ ಯಾವ ತಂಡದ ಪರ ಆಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಪ್ರೊ ಕಬಡ್ಡಿ ಲೀಗ್ ಸೀಸನ್ 11 ಅದ್ಧೂರಿ ಆರಂಭ ಪಡೆದುಕೊಂಡಿದೆ. ಎಲ್ಲಾ ತಂಡಗಳು ಅಬ್ಬರದ ಪ್ರದರ್ಶನ ನೀಡುತ್ತಿವೆ. ಆದರೆ ತಮಿಳ್ ತಲೈವಾಸ್ ತಂಡದ ಈ ಆಟಗಾರ ಎಲ್ಲರ ಗಮನ ಸೆಳೆದಿದ್ದಾರೆ. ಆತನ ಹೆಸರು ಸಚಿನ್ ತನ್ವರ್.. 2024ರ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ಇತಿಹಾಸ ಬರೆದಿದ್ದಾರೆ. ಆಗಸ್ಟ್ನಲ್ಲಿ ಜರುಗಿದ ಹರಾಜಿನಲ್ಲಿ ತಮಿಳ್ ತಲೈವಾಸ್ ತಂಡವು 2.15 ಕೋಟಿ ಸುರಿದಿದೆ. ಇದರೊಂದಿಗೆ ಪಿಕೆಎಲ್ ಇತಿಹಾಸದಲ್ಲಿ ಅತಿ ದುಬಾರಿ ಆಟಗಾರ ಅಂದರೆ ಪವನ್ ಸೆಹ್ರಾವತ್. ಈತ 2.60 ಕೋಟಿ ಪಡೆದಿದ್ದಾರೆ. ಸಚಿನ್ ಎರಡನೇ ಮೋಸ್ಟ್ ಎಕ್ಸ್ಪೆನ್ಸಿವ್ ಆಟಗಾರ.
11ನೇ ಆವೃತ್ತಿಯ ಪಿಕೆಎಲ್ನಲ್ಲಿ ಆಡಿರುವ 4 ಪಂದ್ಯಗಳಲ್ಲಿ 35 ರೇಡ್ ಅಂಕಗಳನ್ನು ಪಡೆದಿರುವ ಸಚಿನ್, ಶೇಕಡಾ 100 ರಷ್ಟು ಟ್ಯಾಕಲ್ ಸ್ಟ್ರೈಕ್ರೇಟ್ ಹೊಂದಿದ್ದಾರೆ. ಇಷ್ಟಕ್ಕೂ ಈತ ಯಾರು? ಇಲ್ಲಿದೆ ವಿವರ. ಭಾರತ ತಂಡದ ಸ್ಟಾರ್ ಆಟಗಾರನಾಗಿರುವ ಸಚಿನ್, ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್, ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟಿದ್ದರು. ಅಲ್ಲದೆ, ಈತ ಕ್ರೀಡಾ ಹಿನ್ನೆಲೆಯ ಕುಟುಂಬದಿಂದ ಬಂದವರು ಎಂಬುದು ಮತ್ತೊಂದು ವಿಶೇಷ.
ರಾಜಸ್ಥಾನದ ಸಚಿನ್ ಸನ್ವರ್…
ತನ್ವರ್ ಅವರು 19 ಜುಲೈ 1999 ರಂದು ರಾಜಸ್ಥಾನದ ಜುಂಜುನು ಜಿಲ್ಲೆಯ ಬದ್ಬಾರ್ ಗ್ರಾಮದಲ್ಲಿ ಜನಿಸಿದರು. ಪಿಕೆಎಲ್ನಲ್ಲಿ ತಮಿಳು ತಲೈವಾಸ್ ಪರ ಆಡುತ್ತಿರುವ ಸಚಿನ್, ಇದಕ್ಕೂ ಮುನ್ನ 2023ರಲ್ಲಿ ಪಾಟ್ನಾ ಪೈರೇಟ್ಸ್ ಪರ ಆಡಿದ್ದರು. ಭಾರತೀಯ ಕಬಡ್ಡಿ ಆಟಗಾರನೂ ಆಗಿರುವ ಸಚಿನ್, 2017ರಲ್ಲಿ ಚೊಚ್ಚಲ ಪ್ರವೇಶ ಮಾಡಿದ ನಂತರ ಲೀಗ್‌ನಲ್ಲಿ ತನ್ನ ಮೊದಲ 2 ಸೀಸನ್‌ಗಳಲ್ಲಿ ಅಗ್ರ 10 ರೇಡ್ ಪಾಯಿಂಟ್ ಸ್ಕೋರರ್‌ಗಳಲ್ಲಿ ಒಬ್ಬರಾಗಿದ್ದರು.
ತಲೈವಾಸ್ ತಂಡದ ತಾರೆ, ಕ್ರೀಡಾ ಕುಟುಂಬದಿಂದ ಬಂದವರು. ಅವರ ಹಿರಿಯ ಸಹೋದರ ದೀಪಕ್ ಮತ್ತು ಚಿಕ್ಕಪ್ಪ ರಾಕೇಶ್ ಎನ್ನುವವರು ಸಹ ಕಬಡ್ಡಿ ಆಟಗಾರರಾಗಿದ್ದರು. ಸಚಿನ್ ಅಂಡರ್-14 ಮತ್ತು ಅಂಡರ್-16 ಪಂದ್ಯಾವಳಿಗಳಲ್ಲಿ ಆಡಿದ್ದ 25 ವರ್ಷದ ಸ್ಟಾರ್ ಪ್ಲೇಯರ್, ಭಾರತ ರಾಷ್ಟ್ರೀಯ ತಂಡಕ್ಕೂ ಆಯ್ಕೆಯಾಗಿದ್ದಾರೆ. 2017 ರಲ್ಲಿ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಕಬಡ್ಡಿ ತಂಡಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲದೆ, ಈ ಟೂರ್ನಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2022ರ ಏಷ್ಯನ್ ಗೇಮ್ಸ್ ಕಬಡ್ಡಿ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದ ಭಾರತ ತಂಡದ ಭಾಗವಾಗಿದ್ದರು.
ತಂಡಗಳು | ಪಂದ್ಯ | ಗೆಲುವು | ಸೋಲು | ಟೈ | ಅಂಕ |
---|---|---|---|---|---|
ಪುಣೇರಿ ಪಲ್ಟನ್ | 4 | 3 | 1 | 0 | 16 |
ಯುಪಿ ಯೋಧಾಸ್ | 4 | 3 | 1 | 0 | 16 |
ತಮಿಳು ತಲೈವಾಸ್ | 4 | 2 | 1 | 1 | 14 |
ಜೈಪುರ ಪಿಂಕ್ ಪ್ಯಾಂಥರ್ಸ್ | 4 | 2 | 1 | 1 | 13 |
ದಬಾಂಗ್ ಡೆಲ್ಲಿ | 3 | 2 | 1 | 0 | 11 |
ಬೆಂಗಾಲ್ ವಾರಿಯರ್ಜ್ | 3 | 1 | 1 | 1 | 9 |
ಯು ಮುಂಬಾ | 3 | 1 | 1 | 1 | 8 |
ಗುಜರಾತ್ ಜೈಂಟ್ಸ್ | 3 | 1 | 2 | 0 | 7 |
ತೆಲುಗು ಟೈಟಾನ್ಸ್ | 4 | 1 | 3 | 0 | 6 |
ಹರಿಯಾಣ ಸ್ಟೀಲರ್ಸ್ | 2 | 1 | 1 | 0 | 5 |
ಪಾಟ್ನಾ ಪೈರೇಟ್ಸ್ | 2 | 1 | 1 | 0 | 5 |
ಬೆಂಗಳೂರು ಬುಲ್ಸ್ | 4 | 0 | 4 | 0 | 1 |