logo
ಕನ್ನಡ ಸುದ್ದಿ  /  ಕ್ರೀಡೆ  /  ಪ್ರೊ ಕಬಡ್ಡಿ ಲೀಗ್: 11ನೇ ಸೋಲು ಕಂಡ ಬೆಂಗಳೂರು ಬುಲ್ಸ್; ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಗೂಳಿಗಳು

ಪ್ರೊ ಕಬಡ್ಡಿ ಲೀಗ್: 11ನೇ ಸೋಲು ಕಂಡ ಬೆಂಗಳೂರು ಬುಲ್ಸ್; ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಗೂಳಿಗಳು

Jayaraj HT Kannada

Nov 22, 2024 08:55 AM IST

google News

ಪ್ರೊ ಕಬಡ್ಡಿ ಲೀಗ್: 11ನೇ ಸೋಲು ಕಂಡ ಬೆಂಗಳೂರು ಬುಲ್ಸ್; ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ

    • ಬೆಂಗಳೂರು ಬುಲ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ನಲ್ಲಿ 11ನೇ ಸೋಲು ಕಂಡಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿಯೂ ಕೊನೆಯ ಸ್ಥಾನಕ್ಕಿಳಿದಿದೆ. ಪಿಕೆಎಲ್ 11ರಲ್ಲಿ ಈವರೆಗೆ ಕೇವಲ 2 ಪಂದ್ಯಗಳಲ್ಲಿ ಗೆದ್ದಿರುವ ತಂಡ, ಮುಂದಿನ ಹಂತಕ್ಕೆ ಪ್ರವೇಶಿಸುವುದು ಬಹುತೇಕ ಅಸಾಧ್ಯ.
ಪ್ರೊ ಕಬಡ್ಡಿ ಲೀಗ್: 11ನೇ ಸೋಲು ಕಂಡ ಬೆಂಗಳೂರು ಬುಲ್ಸ್; ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ
ಪ್ರೊ ಕಬಡ್ಡಿ ಲೀಗ್: 11ನೇ ಸೋಲು ಕಂಡ ಬೆಂಗಳೂರು ಬುಲ್ಸ್; ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ

ಪ್ರೊ ಕಬಡ್ಡಿ ಲೀಗ್‌ ಸೀಸನ್ 11ರಲ್ಲಿ ಬೆಂಗಳೂರು ಬುಲ್ಸ್‌ ತಂಡವು ಕಳಪೆ ಪ್ರದರ್ಶನ ಮುಂದುವರೆಸಿದೆ. ಟೂರ್ನಿಯಲ್ಲಿ 11 ಸೋಲಿಗೆ ಶರಣಾಗಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕಿಳಿದಿದೆ. ಪಿಕೆಎಲ್ 11ರ 68ನೇ ಪಂದ್ಯದಲ್ಲಿಯೂ ಗೆಲುವು ಕಾಣಲು ವಿಫಲವಾದ ಗೂಳಿಗಳ ಬಳಗವು, ಹರಿಯಾಣ ಸ್ಟೀಲರ್ಸ್ ತಂಡಕ್ಕೆ ಗೆಲುವು ಬಿಟ್ಟುಕೊಟ್ಟಿದೆ. ಸ್ಟೀಲರ್ಸ್‌ ಪರ ಮಿಂಚಿದ ರೈಡರ್‌ ವಿನಯ್, ಸೂಪರ್ 10 ಪೂರ್ಣಗೊಳಿಸಿದರು. ಪಂದ್ಯವನ್ನು 26-32 ಅಂಕಗಳಿಂದ ವಶಪಡಿಸಿಕೊಂಡ ತಂಡ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಅತ್ತ ಬೆಂಗಳೂರು ಬುಲ್ಸ್‌ ತಂಡವು ಸತತ ಐದನೇ ಸೋಲು ಕಂಡಿತು.

ಬುಲ್ಸ್ ಪರ ಅಕ್ಷಿತ್‌ ಧುಲ್‌ ರೈಡಿಂಗ್‌ನಲ್ಲಿ 7 ಅಂಕ ಕಲೆ ಹಾಕಿದರು. ಟ್ಯಾಕಲ್‌ನಲ್ಲಿ ನಿತಿನ್‌ ರಾವಲ್‌ 4 ಪಾಯಿಂಟ್‌ ತಂದರು. ಪರ್ದೀಪ್ ನರ್ವಾಲ್ ಕೇವಲ 1 ಅಂಕ ಮಾತ್ರ ಗಳಿಸಿದರು. ಅತ್ತ ಹರಿಯಾಣವು ರೈಡಿಂಗ್‌ ಮತ್ತು ಡಿಫೆನ್ಸ್‌ ಎರಡರಲ್ಲೂ ಬುಲ್ಸ್‌ಗಿಂತ ಉತ್ತಮವಾಗಿ ಆಡಿತು. ಶಿವಂ ಪತಾರೆ ಅವರ ಐದು ಅಂಕಗಳು ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಎರಡು ಬಾರಿ ಬುಲ್ಸ್ ಬಳಗವನ್ನು ಆಲೌಟ್‌ ಮಾಡಿದ ತಂಡ, ಗೆಲುವಿನತ್ತ ಮುನ್ನುಗ್ಗಿತು.

ಬೆಂಗಳೂರು ಬುಲ್ಸ್ ತಂಡವು ಮೊದಲಾರ್ಧದ ಅಂತ್ಯಕ್ಕೆ 12-21 ಅಂಕಗಳೊಂದಿಗೆ ಒಂಬತ್ತು ಪಾಯಿಂಟ್‌ಗಳಿಂದ ಹಿಂದುಳಿದಿತ್ತು. ದ್ವಿತಿಯಾರ್ಧಕ್ಕೆ ತುಸು ಮೈಕೊಡವಿ ಆಡಿದ ತಂಡ, ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡಿತು.

ಪಿಕೆಎಲ್ 11ರಲ್ಲಿ ಬೆಂಗಳೂರು ಬುಲ್ಸ್ ಪ್ರದರ್ಶನ

  • ತೆಲುಗು ಟೈಟಾನ್ಸ್ ವಿರುದ್ಧ 37-29 ರಿಂದ ಸೋಲು
  • ಗುಜರಾತ್ ಜೈಂಟ್ಸ್ ವಿರುದ್ಧ 36-32 ರಿಂದ ಸೋಲು
  • ಯುಪಿ ಯೋಧಾಸ್ ವಿರುದ್ಧ 57-36 ರಿಂದ ಸೋಲು
  • ಪುಣೇರಿ ಪಲ್ಟನ್ ವಿರುದ್ಧ 22-36 ರಿಂದ ಸೋಲು
  • ದಬಾಂಗ್ ಡೆಲ್ಲಿ ವಿರುದ್ಧ 34-32 ರಿಂದ ಗೆಲುವು
  • ತೆಲುಗು ಟೈಟಾನ್ಸ್ ವಿರುದ್ಧ 35-38 ರಿಂದ ಸೋಲು
  • ತಮಿಳ್ ತಲೈವಾಸ್ ವಿರುದ್ಧ 36-32 ರಿಂದ ಗೆಲುವು
  • ಬೆಂಗಾಲ್ ವಾರಿಯರ್ಸ್ ವಿರುದ್ಧ 29-40 ರಿಂದ ಸೋಲು
  • ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 32-39 ರಿಂದ ಸೋಲು
  • ದಬಾಂಗ್ ಡೆಲ್ಲಿ ವಿರುದ್ಧ 35-25 ರಿಂದ ಸೋಲು
  • ಯು ಮುಂಬಾ ವಿರುದ್ಧ 37-38 ರಿಂದ ಸೋಲು
  • ಪಾಟ್ನಾ ಪೈರೇಟ್ಸ್‌ ವಿರುದ್ಧ 31-54 ರಿಂದ ಸೋಲು
  • ಹರಿಯಾಣ ಸ್ಟೀಲರ್ಸ್‌ ವಿರುದ್ಧ 26-32 ಅಂಕಗಳಿಂದ ಸೋಲು

ಇದನ್ನೂ ಓದಿ | ಅದೇ ರಾಗ ಅದೇ ತಾಳ; ಬೆಂಗಳೂರು ಬುಲ್ಸ್‌ಗೆ 10ನೇ ಸೋಲು; ಹೀಗಿದೆ ಪ್ರೊ ಕಬಡ್ಡಿ ಲೀಗ್ ಅಪ್ಡೇಟೆಡ್ ಅಂಕಪಟ್ಟಿ

ಪ್ರೊ ಕಬಡ್ಡಿ ಲೀಗ್ 2024 ಪಾಯಿಂಟ್ಸ್ ಟೇಬಲ್

1) ಹರಿಯಾಣ ಸ್ಟೀಲರ್ಸ್ - 41 ಅಂಕಗಳು

2) ತೆಲುಗು ಟೈಟಾನ್ಸ್ - 42 ಅಂಕಗಳು

3) ಯು ಮುಂಬಾ - 40 ಅಂಕಗಳು

4) ಪಾಟ್ನಾ ಪೈರೇಟ್ಸ್ - 38 ಅಂಕಗಳು

5) ಪುಣೇರಿ ಪಲ್ಟನ್ - 37 ಅಂಕಗಳು

6) ಜೈಪುರ ಪಿಂಕ್ ಪ್ಯಾಂಥರ್ಸ್ - 35 ಅಂಕಗಳು

7) ದಬಾಂಗ್ ದೆಹಲಿ KC - 35 ಅಂಕಗಳು

8) ತಮಿಳ್ ತಲೈವಾಸ್ - 28 ಅಂಕಗಳು

9) ಯುಪಿ ಯೋಧಾಸ್ - 28 ಅಂಕಗಳು

10) ಬೆಂಗಾಲ್ ವಾರಿಯರ್ಸ್ - 24 ಅಂಕಗಳು

11) ಗುಜರಾತ್ ಜೈಂಟ್ಸ್ - 15 ಅಂಕಗಳು

12) ಬೆಂಗಳೂರು ಬುಲ್ಸ್ - 15 ಅಂಕಗಳು

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ