logo
ಕನ್ನಡ ಸುದ್ದಿ  /  ಕ್ರೀಡೆ  /  Asian Games: ಟೆನಿಸ್‌ ಮಿಶ್ರ ಡಬಲ್ಸ್‌ನಲ್ಲಿ ಬಂಗಾರ ಗೆದ್ದ ರೋಹನ್ ಬೋಪಣ್ಣ-ರುತುಜಾ ಭೋಸಲೆ ಜೋಡಿ

Asian Games: ಟೆನಿಸ್‌ ಮಿಶ್ರ ಡಬಲ್ಸ್‌ನಲ್ಲಿ ಬಂಗಾರ ಗೆದ್ದ ರೋಹನ್ ಬೋಪಣ್ಣ-ರುತುಜಾ ಭೋಸಲೆ ಜೋಡಿ

Jayaraj HT Kannada

Dec 22, 2023 05:35 PM IST

google News

ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ

    • ಏಷ್ಯನ್‌ ಗೇಮ್ಸ್‌ ಟೆನಿಸ್‌ನಲ್ಲಿ ಭಾರತವು ಎರಡನೇ ಪದಕ ಗೆದ್ದಿದೆ. ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಜೋಡಿ ಶನಿವಾರ ಚಿನ್ನ ಜಯಿಸಿದ್ದಾರೆ.
ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ
ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ (PTI)

ಏಷ್ಯನ್‌ ಗೇಮ್ಸ್‌ನಲ್ಲಿ (Asian Games) ಭಾರತೀಯರ ಪದಕ ಬೇಟೆ ಮುಂದುವರೆದಿದೆ. ಶನಿವಾರ ನಡೆದ ಟೆನಿಸ್‌ ಮಿಶ್ರ ಡಬಲ್ಸ್‌ ಫೈನಲ್‌ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ (Rohan Bopanna and Rutuja Bhosale) ಜೋಡಿ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಚೈನೀಸ್ ತೈಪೆಯ ಒಂಬತ್ತನೇ ಶ್ರೇಯಾಂಕದ ಜೋಡಿಯಾದ ತ್ಸುಂಗ್-ಹಾವೊ ಹುವಾಂಗ್ ಮತ್ತು ಎನ್-ಶುವೊ ಲಿಯಾಂಗ್ ಅವರನ್ನು ರೋಚಕ 2-6, 6-3 ಹಾಗೂ 10-4 ಸೆಟ್‌ಗಳಿಂದ ಸೋಲಿಸಿದ ಭಾರತೀಯರು ಬಂಗಾರಕ್ಕೆ ಕೊರಳೊಡ್ಡಿದ್ದಾರೆ. ಈ ಗೆಲುವಿನೊಂದಿಗೆ ಭಾರತವು ವಿಶೇಷ ದಾಖಲೆಯೊಂದನ್ನು ನಿರ್ಮಿಸಿದೆ. ಕಳೆದ ಆರು ಏಷ್ಯನ್ ಗೇಮ್ಸ್ ಆವೃತ್ತಿಗಳಲ್ಲಿ ಕನಿಷ್ಠ ಒಂದು ಟೆನಿಸ್‌ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದೆ.

ಚೊಚ್ಚಲ ಫೈನಲ್‌ ಪಂದ್ಯವಾಡಿದ ರುತುಜಾ, ಅನುಭವಿ ಬೋಪಣ್ಣ ಜೊತೆಗೂಡಿ ರೋಚಕ ಪೈಪೋಟಿ ನೀಡಿದರು. ಭಾರತವು ಆರಂಭಿಕ ಸೆಟ್‌ನಲ್ಲಿ ಕೇವಲ ಎರಡು ಪಾಯಿಂಟ್‌ ಗಳಿಸಲಷ್ಟೇ ಸಾಧ್ಯವಾಯ್ತು. ಅರ್ಧ ಗಂಟೆಯ ಹೋರಾಟದಲ್ಲಿ 2-6ರಿಂದ ಮೊದಲು ಹೋರಾಟದಲ್ಲಿ ಸೋತಿತು. ಅಲ್ಲಿಗೆ ಭಾರತೀಯರು ಪಂದ್ಯ ಕೈಚೆಲ್ಲಲಿಲ್ಲ. ಎರಡನೇ ಸೆಟ್‌ನಲ್ಲಿ ಪುಟಿದೆದ್ದು, ಆಕ್ರೋಶಭರಿತ ಆಟವಾಡಿದರು. ಅಂತಿಮವಾಗಿ ಎರಡನೇ ಸೆಟ್‌ನಲ್ಲಿ ಮೇಲುಗೈ ಸಾಧಿಸಿದ ಭಾರತವು, 6-3ರಿಂದ ಗೆದ್ದು ಟೈ ಬ್ರೇಕರ್‌ಗೆ ಪ್ರೇರೇಪಿಸಿತು. ಅಂತಿಮ ಹಣಾಹಣಿಯಲ್ಲಿ ರೋಚಕವಾಗಿ ಗೆದ್ದ ಭಾರತ ಚಿನ್ನಕ್ಕೆ ಮುತ್ತಿಟ್ಟಿತು.

ಜಕಾರ್ತಾದಲ್ಲಿ ನಡೆದ 2018ರ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ, ಬೋಪಣ್ಣ ಏಷ್ಯನ್‌ ಗೇಮ್ಸ್‌‌ನಲ್ಲಿ ಎರಡನೇ ಪದಕ ಗೆದ್ದುಕೊಂಡರು.

ಶುಕ್ರವಾರ ನಡೆದ ಪುರುಷರ ಡಬಲ್ಸ್‌ಲ್ಲಿ ರಾಮ್‌ಕುಮಾರ್ ರಾಮನಾಥನ್ ಮತ್ತು ಸಾಕೇತ್ ಮೈನೇನಿ ಜೋಡಿಯು ಚೈನೀಸ್ ತೈಪೆ ಜೋಡಿಯಾದ ಜೇಸನ್ ಜಂಗ್ ಮತ್ತು ಯು-ಹ್ಸಿಯು ಹ್ಸು ವಿರುದ್ಧ ಸೋತು ರಜತ ಪದಕ ಗೆದ್ದಿದ್ದರು. ಅದಾದ ಬಳಿಕ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಟೆನಿಸ್‌ನಲ್ಲಿ ಭಾರತಕ್ಕೆ ಇದು ಎರಡನೇ ಪದಕವಾಗಿದೆ.

ಭಾರತದ ಇತರ ಫಲಿತಾಂಶ

ಶೂಟಿಂಗ್: 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಫೈನಲ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ

ರೋಲರ್ ಸ್ಕೇಟಿಂಗ್: ಮಹಿಳೆಯರ 10000 ಮೀಟರ್ ಸ್ಪೀಡ್ ಸ್ಕೇಟಿಂಗ್ ಫೈನಲ್‌ನಲ್ಲಿ ಆರತಿ ರಾಜ್ 5ನೇ ಸ್ಥಾನ

ಪುರುಷರ 10000 ಮೀಟರ್ ಸ್ಪೀಡ್ ಸ್ಕೇಟಿಂಗ್ ಫೈನಲ್‌ನಲ್ಲಿ ಆನಂದ್‌ಕುಮಾರ್ ವೇಲ್‌ಕುಮಾರ್ 6ನೇ‌ ಸ್ಥಾನ, ಸಿದ್ಧಾಂತ್ ಕಾಂಬಳೆ 7ನೇ ಸ್ಥಾನ

ವಾಲಿಬಾಲ್: ಮಹಿಳೆಯರ ವಾಲಿಬಾಲ್ ಪ್ರಾಥಮಿಕ ಸುತ್ತಿನ ಪೂಲ್ ಎ ಪಂದ್ಯದಲ್ಲಿ ಭಾರತವು ದಕ್ಷಿಣ ಕೊರಿಯಾ ವಿರುದ್ಧ 1-3 ಅಂತರದಿಂದ ಸೋತಿತು.

ಟೇಬಲ್ ಟೆನಿಸ್: ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಕೊರಿಯಾ ವಿರುದ್ಧ ಸೋತಿದೆ.

ಮಣಿಕಾ ಬಾತ್ರಾ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ವಾಂಗ್ ಯಿದಿ ವಿರುದ್ಧ ಸೋತಿದ್ದಾರೆ.

ಬಾಕ್ಸಿಂಗ್: ಕಜಕಿಸ್ತಾನದ ಝೈನಾ ಶೆಕರ್ಬೆಕೋವಾ ಅವರನ್ನು ಸೋಲಿಸಿ ಭಾರತದ ಪ್ರೀತಿ ಪವಾರ್ ಮಹಿಳೆಯರ 54 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದರು.

ಲೊವ್ಲಿನಾ ಬೊರ್ಗೊಹೈನ್ ಅವರು ದಕ್ಷಿಣ ಕೊರಿಯಾದ ಸುಯೆನ್ ಸಿಯೊಂಗ್ ಅವರನ್ನು ಸೋಲಿಸಿ ಮಹಿಳೆಯರ 75 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

3x3 ಬ್ಯಾಸ್ಕೆಟ್‌ಬಾಲ್: ಭಾರತ ಮಹಿಳೆಯರ ತಂಡವು ಮಲೇಷ್ಯಾ ವಿರುದ್ಧ 16-6 ಅಂತರದಿಂದ ಗೆದ್ದು ಕ್ವಾರ್ಟರ್‌ಫೈನಲ್ ಸ್ಥಾನ ಕಾಯ್ದಿರಿಸಿದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ