logo
ಕನ್ನಡ ಸುದ್ದಿ  /  ಕ್ರೀಡೆ  /  ರೋಹನ್ ಬೋಪಣ್ಣ ಹೊಸದಾಗಿ ಸೇರ್ಪಡೆ; ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಗೆದ್ದ ಭಾರತೀಯರ ಸಂಪೂರ್ಣ ಪಟ್ಟಿ

ರೋಹನ್ ಬೋಪಣ್ಣ ಹೊಸದಾಗಿ ಸೇರ್ಪಡೆ; ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಗೆದ್ದ ಭಾರತೀಯರ ಸಂಪೂರ್ಣ ಪಟ್ಟಿ

Prasanna Kumar P N HT Kannada

Jan 28, 2024 06:30 AM IST

google News

ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್.

    • Rohan Bopanna: ರೋಹನ್ ಬೋಪಣ್ಣ ಅವರು ಆಸ್ಟ್ರೇಲಿಯನ್ ಓಪನ್​​ನಲ್ಲಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಭಾರತೀಯರ ಪ್ರಸಿದ್ಧ ಪಟ್ಟಿಗೆ ಸೇರಿದ್ದಾರೆ.
ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್.
ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್. (AP)

ಮೆಲ್ಬರ್ನ್: ಶನಿವಾರ (ಜನವರಿ 27) ಮೆಲ್ಬರ್ನ್​​ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ 2024ರ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ರೋಹನ್ ಬೋಪಣ್ಣ ಅವರು ತಮ್ಮ ಪಾಲುದಾರ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಗೆದ್ದುಕೊಂಡರು. ಇಂಡೋ-ಆಸೀಸ್ ಜೋಡಿ, ಫೈನಲ್​​ನಲ್ಲಿ ಇಟಲಿಯ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಾಸ್ಸೊರಿ ಅವರನ್ನು 7-6 (0), 7-5 ಸೆಟ್​​ಗಳಿಂದ ಸೋಲಿಸಿತು.

ಮೊದಲ ಸೆಟ್​​ನಲ್ಲಿ ಬೋಪಣ್ಣ-ಎಬ್ಡೆನ್ ಜೋಡಿ ಟೈ ಬ್ರೇಕರ್​​ನಲ್ಲಿ ಮೇಲುಗೈ ಸಾಧಿಸಿತು. ನಂತರ ಎರಡನೇ ಸೆಟ್​​ನಲ್ಲಿ ಬೊಲೆಲ್ಲಿ-ವವಾಸ್ಸೊರಿ ಆರಂಭಿಕ ಮುನ್ನಡೆ ಸಾಧಿಸಿದರೂ ಬೋಪಣ್ಣ ಮತ್ತು ಅವರ ಪಾಲುದಾರರು ತಮ್ಮ ಶಾಂತತೆಯನ್ನು ಕಾಯ್ದುಕೊಂಡು ಐತಿಹಾಸಿಕ ಪ್ರಶಸ್ತಿಗೆ ಏರಿದರು.

43 ವರ್ಷ 329 ದಿನ ವಯಸ್ಸಿನ ಬೋಪಣ್ಣ ಓಪನ್ ಟೆನಿಸ್ ಟೂರ್ನಿಯಲ್ಲಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ರೋಹನ್ ಬೋಪಣ್ಣ ಪಾತ್ರರಾಗಿದ್ದಾರೆ. ಇದರೊಂದಿಗೆ ಬೋಪಣ್ಣ ಆಸ್ಟ್ರೇಲಿಯನ್ ಓಪನ್​​ನಲ್ಲಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಭಾರತೀಯರ ಪ್ರಸಿದ್ಧ ಪಟ್ಟಿಗೆ ಸೇರಿದ್ದಾರೆ. ಹಾಗಾದರೆ ಯಾರೆಲ್ಲಾ ಗ್ರ್ಯಾಂಡ್​ಸ್ಲಾಮ್ ಗೆದ್ದಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.

ಆಸ್ಟ್ರೇಲಿಯನ್ ಓಪನ್​​ನಲ್ಲಿ ಗ್ರ್ಯಾಂಡ್ ಸ್ಲಾಮ್​ ಗೆದ್ದ ಭಾರತೀಯರ ಪಟ್ಟಿ

1. ಲಿಯಾಂಡರ್ ಪೇಸ್ ಮತ್ತು ಮಾರ್ಟಿನಾ ನವ್ರಾಟಿಲೋವಾ - ಮಿಶ್ರ ಡಬಲ್ಸ್‌ (2003)

2. ಮಹೇಶ್ ಭೂಪತಿ ಮತ್ತು ಮಾರ್ಟಿನಾ ಹಿಂಗಿಸ್ - ಮಿಶ್ರ ಡಬಲ್ಸ್ (2006)

3. ಮಹೇಶ್ ಭೂಪತಿ ಮತ್ತು ಸಾನಿಯಾ ಮಿರ್ಜಾ - ಮಿಶ್ರ ಡಬಲ್ಸ್‌ (2009)

4. ಲಿಯಾಂಡರ್ ಪೇಸ್ ಮತ್ತು ಕಾರಾ ಬ್ಲಾಕ್ - ಮಿಶ್ರ ಡಬಲ್ಸ್ (2010)

5. ಲಿಯಾಂಡರ್ ಪೇಸ್ ಮತ್ತು ರಾಡೆಕ್ ಸ್ಟೆಪನೆಕ್ - ಪುರುಷರ ಡಬಲ್ಸ್‌ (2012)

6. ಲಿಯಾಂಡರ್ ಪೇಸ್ ಮತ್ತು ಮಾರ್ಟಿನಾ ಹಿಂಗಿಸ್ - ಮಿಶ್ರ ಡಬಲ್ಸ್‌ (2015)

7. ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ - ಮಹಿಳೆಯರ ಡಬಲ್ಸ್‌ (2016)

8. ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ - ಪುರುಷರ ಡಬಲ್ಸ್‌ (2024)

ಇದು ಬೋಪಣ್ಣ ಅವರ ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. 2018 ರಲ್ಲಿ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು. ಪುರುಷರ ಡಬಲ್ಸ್​​ನಲ್ಲಿ ಭಾರತದ ಆಟಗಾರ ವಿಶ್ವದ ನಂ.1 ಆಟಗಾರನಾಗಿದ್ದಾರೆ. ಮೆಲ್ಬರ್ನ್​​ನಲ್ಲಿ ನಡೆದ ಪಂದ್ಯಾವಳಿಯ ಸಮಯದಲ್ಲಿ ಬೋಪಣ್ಣ ಅವರನ್ನು ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಗೆ ಹೆಸರಿಸಿತು.

ಪಂದ್ಯದ ನಂತರ ಟ್ರೋಫಿ ಪ್ರಸ್ತುತಿಯಲ್ಲಿ ಮಾತನಾಡಿದ ಭಾರತೀಯ ಟೆನಿಸ್ ತಾರೆ, ಮ್ಯಾಟ್ (ಮ್ಯಾಥ್ಯೂ ಎಬ್ಡೆನ್) ಹೇಳಿದಂತೆ, ನನ್ನ ವಯಸ್ಸು ಎಷ್ಟೆಂದು ನಿಮಗೆ ತಿಳಿದಿದೆ. ನಾನು ಅದನ್ನು ಸ್ವಲ್ಪ ಬದಲಾಯಿಸಿದ್ದೇನೆ ಮತ್ತು ನಾನು 43ನೇ ಲೆವೆಲ್​ನವನು, ವಯಸ್ಸು 43 ಅಲ್ಲ ಎಂದು ಹೇಳಿದ್ದಾರೆ. ನಿಸ್ಸಂಶಯವಾಗಿ ನನ್ನ ಪಕ್ಕದಲ್ಲಿ ಅದ್ಭುತ ಆಸೀಸ್ ಪಾಲುದಾರನಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಮ್ಯಾಟ್​ಗೆ ಧನ್ಯವಾದಗಳು ಎಂದು ಬೋಪಣ್ಣ ಹೇಳಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantime.com)

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ