ಸಾಧಿಸುವ ಛಲವಿದ್ದರೆ ಯಾವುದೂ ಕಷ್ಟವಲ್ಲ ಎಂಬುದಕ್ಕೆ ಬೋಪಣ್ಣ ಸಾಧನೆಯೇ ಸಾಕ್ಷಿ; ಮೋದಿ, ಸಿದ್ದರಾಮಯ್ಯ ಅಭಿನಂದನೆ
- Rohan Bopanna: ಆಸ್ಟ್ರೇಲಿಯನ್ ಓಪನ್ನ ಡಬಲ್ಸ್ ವಿಭಾಗದ ಫೈನಲ್ನಲ್ಲಿ ಪ್ರಶಸ್ತಿ ಗೆದ್ದ ಕನ್ನಡಿಗ ರೋಹನ್ ಬೋಪಣ್ಣ ಜೋಡಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.
- Rohan Bopanna: ಆಸ್ಟ್ರೇಲಿಯನ್ ಓಪನ್ನ ಡಬಲ್ಸ್ ವಿಭಾಗದ ಫೈನಲ್ನಲ್ಲಿ ಪ್ರಶಸ್ತಿ ಗೆದ್ದ ಕನ್ನಡಿಗ ರೋಹನ್ ಬೋಪಣ್ಣ ಜೋಡಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.
(1 / 9)
ಆಸ್ಟ್ರೇಲಿಯನ್ ಓಪನ್ 2024ರಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ರೋಹನ್ ಬೋಪಣ್ಣ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿನಂದಿಸಿದ್ದಾರೆ.
(2 / 9)
ಫೈನಲ್ ಪಂದ್ಯದಲ್ಲಿ ಇಟಲಿಯ ಸಿಮೋನ್ ಬೊಲೆಲ್ಲಿ-ಆಂಡ್ರಿಯಾ ವವಾಸ್ಸೋರಿ ಅವರ ವಿರುದ್ಧ ಭಾರತದ ರೋಹನ್ ಬೋಪಣ್ಣ-ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ 7-6 (0), 7-5 ಸೆಟ್ಗಳಿಂದ ಗೆದ್ದು ಪುರುಷರ ಡಬಲ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.(REUTERS)
(3 / 9)
ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಗೆದ್ದು ರೋಹನ್ ಬೋಪಣ್ಣ ದಾಖಲೆ ಬರೆದಿದ್ದಾರೆ. 43ನೇ ವಯಸ್ಸಿನಲ್ಲಿ ಬೋಪಣ್ಣ ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.(AFP)
(4 / 9)
ನಂಬರ್ 1 ಶ್ರೇಯಾಂಕಿತ ಪುರುಷರ ಡಬಲ್ಸ್ ಆಟಗಾರನ ಕಠಿಣ ಪರಿಶ್ರಮವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಬೋಪಣ್ಣ ವಯಸ್ಸು ಅಡ್ಡಿಯಲ್ಲ ಎಂದು ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ ಎಂದು ಹೇಳಿದರು. (AFP)
(5 / 9)
ವಯಸ್ಸು ಯಾವುದೇ ಅಡ್ಡಿಯಿಲ್ಲ ಎಂದು ಅಸಾಧಾರಣ ಪ್ರತಿಭಾವಂತ ರೋಹನ್ ಬೋಪಣ್ಣ ಪದೇ ಪದೇ ತೋರಿಸುತ್ತಿದ್ದಾರೆ. ಐತಿಹಾಸಿಕ ಆಸ್ಟ್ರೇಲಿಯನ್ ಓಪನ್ ಗೆಲುವಿಗಾಗಿ ಅವರಿಗೆ ಅಭಿನಂದನೆಗಳು. ಅವರ ಉತ್ಸಾಹ, ಕಠಿಣ ಪರಿಶ್ರಮವನ್ನು ಮೆಚ್ಚಬೇಕು. ಬೋಪಣ್ಣರ ಮುಂದಿನ ಪ್ರಯತ್ನಗಳಿಗೆ ಶುಭವಾಗಲಿ ಎಂದು ಮೋದಿ ಪೋಸ್ಟ್ ಮಾಡಿದ್ದಾರೆ.(AFP)
(6 / 9)
ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡಿಗನ ಸಾಧನೆಯನ್ನು ಕೊಂಡಾಡಿದ್ದಾರೆ. ವಿಶ್ವ ಟೆನ್ನಿಸ್‌ನ ನಂ.1 ಡಬಲ್ಸ್ ಆಟಗಾರ, ಕನ್ನಡಿಗ ರೋಹನ್ ಬೋಪಣ್ಣ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ನಾಡಿಗೆ ಹೆಮ್ಮೆ ಮೂಡಿಸಿದ್ದಾರೆ. (AFP)
(7 / 9)
ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡಿಗನ ಸಾಧನೆಯನ್ನು ಕೊಂಡಾಡಿದ್ದಾರೆ. ವಿಶ್ವ ಟೆನ್ನಿಸ್‌ನ ನಂ.1 ಡಬಲ್ಸ್ ಆಟಗಾರ, ಕನ್ನಡಿಗ ರೋಹನ್ ಬೋಪಣ್ಣ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ನಾಡಿಗೆ ಹೆಮ್ಮೆ ಮೂಡಿಸಿದ್ದಾರೆ.
(8 / 9)
ರೋಹನ್ ಬೋಪಣ್ಣ ಮತ್ತು ಎಬ್ಡೆನ್ ಆಸ್ಟ್ರೇಲಿಯನ್ ಡಾಲರ್ 730,000 ಅಂದರೆ 4 ಕೋಟಿ ಬಹುಮಾನ ಮೊತ್ತವನ್ನು ಗೆದ್ದಿದ್ದಾರೆ. ರನ್ನರ್ಅಪ್ ಜೋಡಿಗೆ 2 ಕೋಟಿಗೂ ಹೆಚ್ಚು ಬಹುಮಾನ ಸಿಕ್ಕಿದೆ.(AFP)
ಇತರ ಗ್ಯಾಲರಿಗಳು