logo
ಕನ್ನಡ ಸುದ್ದಿ  /  ಕ್ರೀಡೆ  /  ಉತ್ತರ ಪ್ರದೇಶದಲ್ಲಿ ಟೇಕ್ವಾಂಡೋ ಆಟಗಾರನ ಶಿರಚ್ಛೇದ; ಮಗನ ಕತ್ತರಿಸಿದ ತಲೆ ಮಡಿಲಲ್ಲಿಟ್ಟು ರೋದಿಸಿದ ತಾಯಿ

ಉತ್ತರ ಪ್ರದೇಶದಲ್ಲಿ ಟೇಕ್ವಾಂಡೋ ಆಟಗಾರನ ಶಿರಚ್ಛೇದ; ಮಗನ ಕತ್ತರಿಸಿದ ತಲೆ ಮಡಿಲಲ್ಲಿಟ್ಟು ರೋದಿಸಿದ ತಾಯಿ

Prasanna Kumar P N HT Kannada

Oct 30, 2024 10:37 PM IST

google News

ಭೂ ವಿವಾದದಲ್ಲಿ ಟೇಕ್ವಾಂಡೋ ಆಟಗಾರನ ಶಿರಚ್ಛೇದ; ಮಗನ ಕತ್ತರಿಸಿದ ತಲೆ ಮಡಿಲಲ್ಲಿಟ್ಟು ರೋದಿಸಿದ ತಾಯಿ

    • Uttar Pradesh Crime: ಜಮೀನು ವಿವಾದಕ್ಕೆ ಸಂಬಂಧಿಸಿ ಟೇಕ್ವಾಂಡೋ ಆಟಗಾರ ಅನುರಾಗ್ ಯಾದವ್ ಶಿರಚ್ಛೇದ ಮಾಡಿರುವ ಘಟನೆ ಉತ್ತರ ಪ್ರದೇಶದ ಜೌನ್‌ಪುರ ಎಂಬಲ್ಲಿ ನಡೆದಿದೆ. ತಾಯಿ ಮಗನ ಕತ್ತರಿಸಿದ ತಲೆ ಮಡಿಲಲ್ಲಿಟ್ಟು ರೋದಿಸಿದ ದೃಶ್ಯ ಮನಕಲುಕುವಂತಿದೆ. 
ಭೂ ವಿವಾದದಲ್ಲಿ ಟೇಕ್ವಾಂಡೋ ಆಟಗಾರನ ಶಿರಚ್ಛೇದ; ಮಗನ ಕತ್ತರಿಸಿದ ತಲೆ ಮಡಿಲಲ್ಲಿಟ್ಟು ರೋದಿಸಿದ ತಾಯಿ
ಭೂ ವಿವಾದದಲ್ಲಿ ಟೇಕ್ವಾಂಡೋ ಆಟಗಾರನ ಶಿರಚ್ಛೇದ; ಮಗನ ಕತ್ತರಿಸಿದ ತಲೆ ಮಡಿಲಲ್ಲಿಟ್ಟು ರೋದಿಸಿದ ತಾಯಿ

ಉತ್ತರ ಪ್ರದೇಶ: ಜಮೀನು ವಿವಾದಕ್ಕೆ ಸಂಬಂಧಿಸಿ ಇಲ್ಲಿನ ಜೌನ್‌ಪುರದ ರಾಷ್ಟ್ರ ಮಟ್ಟದ ಟೇಕ್ವಾಂಡೋ ಆಟಗಾರ ಅನುರಾಗ್ ಯಾದವ್ (Anurag Yadav) ಅಲಿಯಾಸ್ ಛೋಟು (17) ಶಿರಚ್ಛೇದ ಮಾಡಲಾಗಿದೆ. ಗೌರಬಾದಶಹಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಬೀರುದ್ದೀನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ ನಾಲ್ಕು ದಶಕಗಳಿಂದ ಗ್ರಾಮಸ್ಥರಾದ ರಾಮ್‌ಜೀತ್ ಯಾದವ್ ಮತ್ತು ಲಾಲ್ಟಾ ಯಾದವ್ ಎರಡು ಕುಟುಂಬಗಳ ನಡುವೆ ಭೂ ವಿವಾದ ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿ ಬಾಲಕನನ್ನು ಆರೋಪಿಗಳು ಕೊಂದಿದ್ದಾರೆ. ಘಟನೆಯ ನಂತರ ಆರೋಪಿ ಲಾಲ್ಟಾ ಯಾದವ್​ ಬಂಧಿಸಲಾಗಿದೆ.

ದ್ವಿತೀಯ ಪಿಯುಸಿ ಓದುತ್ತಿದ್ದ ಅನುರಾಗ್, ನಿಪುಣ ಟೇಕ್ವಾಂಡೋ ಆಟಗಾರನಾಗಿದ್ದ. 17 ವರ್ಷದ ಈತ ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಪದಕಗಳನ್ನೂ ಗೆದ್ದಿದ್ದಾನೆ. ಅನುರಾಗ್ ಚಂದೌಲಿಯಲ್ಲಿ ನಡೆದ ಇಂಡೋ-ನೇಪಾಳ ಅಂತರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ಕಂಚಿನ ಪದಕ, ನೋಯ್ಡಾದಲ್ಲಿ ನಡೆದ ಓಪನ್ ನ್ಯಾಷನಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ. ಅಕ್ಟೋಬರ್​ 30ರ ಬುಧವಾರ ಬೆಳಿಗ್ಗೆ ಅನುರಾಗ್ ತನ್ನ ಮನೆಯ ಹೊರಗೆ ಹಲ್ಲುಜ್ಜುತ್ತಿದ್ದ ವೇಳೆ, ಆತನ ನೆರೆಹೊರೆಯವರು ಮತ್ತು ಆರೋಪಿ ಲಾಲ್ಟಾ ಯಾದವ್ ಹಿಂದಿನಿಂದ ಬಂದು ಕತ್ತಿಯಿಂದ ಬಾಲಕನ ಶಿರಚ್ಛೇದ ಮಾಡಿದ್ದಾನೆ.

ತಲೆಯನ್ನು ಮಡಿಲಲ್ಲಿಟ್ಟುಕೊಂಡು ತಾಯಿ ರೋದನೆ

ಕತ್ತಿಯಿಂದ ಬಲವಾಗಿ ಬೀಸಿದ ಹೊಡೆತಕ್ಕೆ ಅನುರಾಗ್ ರುಂಡ-ಮುಂಡ ಬೇರ್ಪಡೆಯಾಗಿವೆ. ಘಟನೆಯ ನಂತರ ತಮ್ಮ ಮಗನ ಕತ್ತರಿಸಿದ ತಲೆಯನ್ನು ಗಂಟೆಗಟ್ಟಲೆ ತನ್ನ ಮಡಿಲಲ್ಲಿ ಇಟ್ಟುಕೊಂಡು ರೋದಿಸಿದ ದೃಶ್ಯ ಕಲ್ಲು ಹೃದಯವನ್ನೂ ಕರಗಿಸುತ್ತದೆ. ಲಾಲ್ಟಾ ಯಾದವ್ ಅವರ ಪುತ್ರ ರಮೇಶ್ ಯಾದವ್ ಅವರು ಇಂದು ಬೆಳಿಗ್ಗೆ ವಿವಾದಿತ ಭೂಮಿ ತೆರವುಗೊಳಿಸಲು ಪ್ರಾರಂಭಿಸಿದರು. ಇದು ಉದ್ವಿಗ್ನತೆ ಉಲ್ಬಣಕ್ಕೆ ಕಾರಣವಾಯಿತು. ಘರ್ಷಣೆಯಲ್ಲಿ ರಾಮ್‌ಜೀತ್ ಮಗ ಅನುರಾಗ್ ಮೇಲೆ ರಮೇಶ್ ಕತ್ತಿಯಿಂದ ದಾಳಿ ನಡೆಸಿ ಶಿರಚ್ಛೇದ ಮಾಡಿದ್ದಾರೆ. ಲಾಲ್ಟಾ ಯಾದವ್ ಪುತ್ರ ಪರಾರಿಯಾಗಿದ್ದು, ಶೋಧ ನಡೆಯುತ್ತಿದೆ.

ಅಕ್ಕಪಕ್ಕದ ಎರಡು ಕುಟುಂಬಗಳ ನಡುವೆ 40 ವರ್ಷಗಳಿಂದ ಜಮೀನು ವಿವಾದ ನಡೆಯುತ್ತಿದ್ದು, ಅನುರಾಗ್‌ನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಅಜಯ್ ಪಾಲ್ ಶರ್ಮಾ ಹೇಳಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ವಿವಾದ ಉಂಟಾಗಿರುವುದು ಕಡಿಮೆ ವಿಸ್ತೀರ್ಣದ ಭೂಮಿಯಿಂದ. ಇದು ಜಿಲ್ಲಾ ನ್ಯಾಯಾಲಯದಲ್ಲಿ ಈ ಪ್ರಕರಣ ಇದೆ. ಪ್ರಸ್ತುತ ಈ ವಿವಾದದ ಕುರಿತು ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರನ್ನು ತನಿಖೆಗೆ ನಿಯೋಜಿಸಿ ಸೂಚಿಸಲಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ರಮದ ಭರವಸೆ ನೀಡಿದ ಜಿಲ್ಲಾಧಿಕಾರಿ

2 ಕಕ್ಷಿದಾರರ ನಡುವಿನ ಜಮೀನು ವಿವಾದಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿನೇಶ್ ಚಂದ್ರ ಭರವಸೆ ನೀಡಿದ್ದಾರೆ. ಈ ಬಗ್ಗೆ ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸಲಾಗುವುದು. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಣಕಾಸು ಮತ್ತು ಕಂದಾಯ ಅವರಿಗೆ ತನಿಖೆಯ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಚಂದ್ರ ಹೇಳಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ