Wimbledon 2023: ನಿಶ್ಯಬ್ದ ಕೊಠಡಿಗಳನ್ನು ಲೈಂಗಿಕತೆಗೆ ಬಳಸಬೇಡಿ; ಆಟಗಾರರು, ಪ್ರೇಕ್ಷಕರಿಗೆ ವಿಂಡಲ್ಡನ್ ಅಧಿಕಾರಿಗಳಿಂದ ಖಡಕ್ ಎಚ್ಚರಿಕೆ
Jul 04, 2023 09:43 PM IST
ನಿಶ್ಯಬ್ದ ಕೊಠಡಿಗಳನ್ನು ಲೈಂಗಿಕತೆಗೆ ಬಳಸಬಾರದು ಎಂದು ಎಚ್ಚರಿಸಿದ ವಿಂಡಲ್ಡನ್ ಅಧಿಕಾರಿಗಳು.
- Wimbledon 2023: ವಿಂಬಲ್ಡನ್ 'ಸ್ತಬ್ಧ ಕೊಠಡಿ'ಯನ್ನು (Quite Rooms) ಪ್ರಾರ್ಥನೆಗೆ ಮೀಸಲಿಡಲಾಗಿದೆ. ಧ್ಯಾನಕ್ಕಾಗಿ ಮೀಸಲಿಟ್ಟ ಕೋಣೆಯನ್ನು ಲೈಂಗಿಕತೆಗೆ ಮತ್ತು ಆತ್ಮೀಯವಾಗಿರಲು ಬಳಸಬಾರದು ಎಂದು ಆಟಗಾರರು ಮತ್ತು ಪ್ರೇಕ್ಷಕರಿಗೆ ಟೂರ್ನಮೆಂಟ್ ಉನ್ನತ ಮಟ್ಟದ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಟೆನಿಸ್ ಕ್ಯಾಲೆಂಡರ್ನಲ್ಲಿ ವಿಂಬಲ್ಡನ್ ಎಂಬುದು ಗ್ರಾಂಡ್ ಸ್ಲಾಮ್. ಇದು ಸಂಪ್ರದಾಯವನ್ನು ಬಹಳ ಕಟ್ಟುನಿಟ್ಟಾಗಿ ಅನುಸರಿಸುತ್ತದೆ. 2023ರ ಗ್ರ್ಯಾನ್ ಸ್ಲಾಮ್ ಸೋಮವಾರದಿಂದ (ಜುಲೈ 3) ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಶಾಂತಿಯುತ ಅಥವಾ ಸ್ತಬ್ದ ಕೊಠಡಿಗಳನ್ನು ದಂಪತಿಗಳು ಲೈಂಗಿಕತೆಗೆ ಬಳಬಾರದು ಎಂದು ಅಧಿಕಾರಿಗಳು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ವಿಂಬಲ್ಡನ್ 'ಸ್ತಬ್ಧ ಕೊಠಡಿ'ಯನ್ನು (Quite Rooms) ಪ್ರಾರ್ಥನೆಗೆ ಮೀಸಲಿಡಲಾಗಿದೆ. ಧ್ಯಾನಕ್ಕಾಗಿ ಮೀಸಲಿಟ್ಟ ಕೋಣೆಯನ್ನು ಲೈಂಗಿಕತೆಗೆ ಮತ್ತು ಆತ್ಮೀಯವಾಗಿರಲು ಬಳಸಬಾರದು ಎಂದು ಆಟಗಾರರು ಮತ್ತು ಪ್ರೇಕ್ಷಕರಿಗೆ ಟೂರ್ನಮೆಂಟ್ ಉನ್ನತ ಮಟ್ಟದ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಅದು ಪವಿತ್ರ ಸ್ಥಳ
ಕಳೆದ ವರ್ಷ ಕೆಲವರ ದೃಷ್ಕೃತ್ಯಗಳು ಟೆನಿಸ್ ಕಣ್ತುಂಬಿಕೊಳ್ಳಲು ಬಂದವರನ್ನು ಬೆಚ್ಚಿ ಬೀಳಿಸಿತ್ತು. ಕೋರ್ಟ್-12ರ ಸಮೀಪದಲ್ಲಿದ್ದ ಕ್ವೈಟ್ ರೂಮ್ ಅನ್ನು ಶೃಂಗಾರಕ್ಕೆ ಬಳಸಲಾಗಿತ್ತು. ಇದೇ ಕಾರಣಕ್ಕೆ ಈ ಬಾರಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ (AELTC) ಮುಖ್ಯ ಕಾರ್ಯನಿರ್ವಾಹಕ ಸ್ಯಾಲಿ ಬೋಲ್ಟನ್ ಅವರು ಮಾತನಾಡಿ, 'ಸ್ಯಾಂಚುರಿ' ಒಂದು ಪ್ರಮುಖ ಮತ್ತು ಪವಿತ್ರ ಸ್ಥಳ. ಅದನ್ನು ಗೌರವಿಸುವಂತೆ ಒತ್ತಾಯಿಸಿದ್ದಾರೆ.
‘ಅನೈತಿಕ ಕೃತ್ಯಗಳ ತಡೆಯುತ್ತೇವೆ’
ಇದು ನಿಜವಾಗಿಯೂ ಪ್ರಮುಖ ಸ್ಥಳ. ನಾವು ಅದನ್ನು ಪವಿತ್ರವಾಗಿಡಲು ಬಯಸುತ್ತೇವೆ. ಜನರು ಅದನ್ನು ಸರಿಯಾದ ರೀತಿಯಲ್ಲಿ ಬಳಸಬೇಕೆಂಬುದು ನಮ್ಮ ಆಶಯ ಎಂದು ಯುಕೆಯಲ್ಲಿನ ದಿ ಟೆಲಿಗ್ರಾಫ್ ಪತ್ರಿಕೆಯು ಉಲ್ಲೇಖಿಸಿದೆ. 'ನಿಶ್ಯಬ್ದ ಕೊಠಡಿ'ಯು ಜನರು ಪ್ರಾರ್ಥನೆ ಮಾಡಬೇಕಾದ ಸ್ಥಳ. ತಾಯಿ ತನ್ನ ಮಕ್ಕಳಿಗೆ ಹಾಲುಣಿಸುವ ಸ್ಥಳವೂ ಹೌದು. ಇಂತಹ ಜಾಗದಲ್ಲಿ ಅನೈತಿಕ ಕೃತ್ಯಗಳು ನಡೆಯದಂತೆ ನೋಡಿಕೊಳ್ಳುತ್ತೇವೆ' ಎಂದು ಹೇಳಿದ್ದಾರೆ.
ಈ ಹಿಂದೆ ದೃಷ್ಕೃತ್ಯ ನಡೆದಿತ್ತು
2022ರಲ್ಲಿ ಕೋರ್ಟ್ 12ರ ಹಿಂದಿನ ಕೋಣೆಯಲ್ಲಿ ದಂಪತಿಗಳು ಅನ್ಯೋನ್ಯವಾಗಿರುವುದರ ಕುರಿತು ವರದಿಯಾಗಿತ್ತು. ಒಬ್ಬ ವ್ಯಕ್ತಿ, ಮಹಿಳೆಯರು ಜೋರಾಗಿ ನಗುತ್ತಾ ಕೊಠಡಿಯಿಂದ ಹೊರ ಹೋಗುವುದನ್ನು ನೋಡಿದ್ದೇನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು. ಆಕೆ ತುಂಬಾ ತುಂಡುಗೆಯಲ್ಲಿದ್ದಳು. ಅವರು ಒಳಗೆ ಏನು ಮಾಡಿದರು ಎಂಬುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದರು.
ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು
ಟೂರ್ನಮೆಂಟ್ನಲ್ಲಿ ಎರಡು ಕೋಣೆಗಳನ್ನು ರಚಿಸಲಾಗಿದೆ. ಒಂದನ್ನು ಸುರಕ್ಷಿತ ಸ್ಥಳವೆಂದು ಗುರುತಿಸಲಾಗಿದೆ. ಜನದಟ್ಟಣೆಯಿಂದ ತಪ್ಪಿಸಿಕೊಳ್ಳುವ ಜನರು ಅಲ್ಲಿಗೆ ಹೋಗಬಹುದು. ಆದರೆ, ಮತ್ತೊಂದು ಕೊಠಡಿಯಲ್ಲಿ ರೊಮ್ಯಾನ್ಸ್ ಮಾಡುವ ಶಬ್ದ ಕೇಳಿ ಬಂದಿತ್ತು ಎಂದು ವರದಿಗಾರರೊಬ್ಬರು ವರದಿ ಮಾಡಿದ್ದರು. ಆ ಸಮಯದಲ್ಲಿ ವಿಂಬಲ್ಡನ್ ಅಧಿಕಾರಿಗಳು, ಈ ಕೊಠಡಿಗಳನ್ನು ಪ್ರಾರ್ಥನೆ, ಧ್ಯಾನ, ಹಾಲುಣಿಸಲು ಮಾತ್ರ ಬಳಸಬೇಕು ಎಂದು ಸೂಚಿಸಿದ್ದರು.
ಈ ಕೊಠಡಿಗಳನ್ನು ಲೈಂಗಿಕತೆಗೆ ಬಳಸಿಕೊಂಡಿದ್ದಕ್ಕೆ ಅಧಿಕಾರಿಯೊಬ್ಬರು ವಿಂಬಲ್ಡನ್ ಹೈ ಕ್ಲಬ್ ಎಂದು ವ್ಯಗ್ಯವಾಡಿದ್ದರು. 2012ರ ಲಂಡನ್ ಕ್ರೀಡಾಕೂಟದಲ್ಲಿ ಆಂಡಿ ಮುರ್ರೆ ತನ್ನ ಮೊದಲ ಒಲಿಂಪಿಕ್ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದು ಇಲ್ಲಿಯೇ. ಅವರು 2013ರಲ್ಲಿ ಆಲ್ ಇಂಗ್ಲೆಂಡ್ ಕ್ಲಬ್ ಪ್ರಶಸ್ತಿಯನ್ನು ಗೆದ್ದರು. ಈ ಮೂಲಕ 77 ವರ್ಷಗಳಲ್ಲಿ ಈ ಪ್ರಶಸ್ತಿಯನ್ನು ಗೆದ್ದ ಮೊದಲ ಬ್ರಿಟಿಷರು ಎನಿಸಿಕೊಂಡರು.
ಕ್ರೀಡೆಗೆ ಸಂಬಂಧಿಸಿದ ಸುದ್ದಿ
Viral Video: ಸೆಕ್ಯೂರಿಟಿ ಗಾರ್ಡ್‌ಗೆ ಬೈಕ್ನಲ್ಲಿ ಲಿಫ್ಟ್ ಕೊಟ್ಟ ಮಾಹಿ; ದಟ್ ಈಸ್ ಧೋನಿ ಎಂದ ಫ್ಯಾನ್ಸ್, ಹಳೆಯ ವಿಡಿಯೋ ವೈರಲ್
16ನೇ ಆವೃತ್ತಿಯ ಐಪಿಎಲ್ (IPL) ಬಳಿಕ ಧೋನಿ, ಫುಲ್ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದಾರೆ. ಸದ್ಯ ತಮ್ಮ ಫಾರ್ಮ್ಹೌಸ್ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಧೋನಿ, ತೋಟದ ಮನೆಯ ಸೆಕ್ಯೂರಿಟಿ ಗಾರ್ಡ್‌ಗೆ ಲಿಫ್ಟ್ ನೀಡಿದ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಸೆಕ್ಯೂರಿಟಿ ಗಾರ್ಡ್ರನ್ನು ತನ್ನ ಬೈಕ್ನಲ್ಲಿ ಕೂರಿಸಿಕೊಂಡು ಗೇಟಿನ ಬಳಿ ಡ್ರಾಪ್ ಮಾಡಿದ್ದಾರೆ. ಗೇಟಿನ ಹೊರಗೆ ನಿಂತಿದ್ದ ಅಭಿಮಾನಿಗಳು ಈ ವಿಡಿಯೋ ಸೆರೆ ಹಿಡಿದಿದ್ದಾರೆ. ಗಾಳಿಯಂತೆ ವೇಗವಾಗಿ ಈ ವಿಡಿಯೋ ವೈರಲ್ ಆಗಿದೆ. ಈ ಕುರಿತ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ವಿಭಾಗ