Viral Video: ಸೆಕ್ಯೂರಿಟಿ ಗಾರ್ಡ್‌ಗೆ ಬೈಕ್​ನಲ್ಲಿ ಲಿಫ್ಟ್ ಕೊಟ್ಟ ಮಾಹಿ; ದಟ್ ಈಸ್ ಧೋನಿ ಎಂದ ಫ್ಯಾನ್ಸ್, ಹಳೆಯ ವಿಡಿಯೋ ವೈರಲ್​
ಕನ್ನಡ ಸುದ್ದಿ  /  ಕ್ರೀಡೆ  /  Viral Video: ಸೆಕ್ಯೂರಿಟಿ ಗಾರ್ಡ್‌ಗೆ ಬೈಕ್​ನಲ್ಲಿ ಲಿಫ್ಟ್ ಕೊಟ್ಟ ಮಾಹಿ; ದಟ್ ಈಸ್ ಧೋನಿ ಎಂದ ಫ್ಯಾನ್ಸ್, ಹಳೆಯ ವಿಡಿಯೋ ವೈರಲ್​

Viral Video: ಸೆಕ್ಯೂರಿಟಿ ಗಾರ್ಡ್‌ಗೆ ಬೈಕ್​ನಲ್ಲಿ ಲಿಫ್ಟ್ ಕೊಟ್ಟ ಮಾಹಿ; ದಟ್ ಈಸ್ ಧೋನಿ ಎಂದ ಫ್ಯಾನ್ಸ್, ಹಳೆಯ ವಿಡಿಯೋ ವೈರಲ್​

MS Dhoni: ತಮ್ಮ ತೋಟದ ಮನೆಯ ಸೆಕ್ಯೂರಿಟಿ ಗಾರ್ಡ್‌ಗೆ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ ಎಂಎಸ್​ ಧೋನಿ ಅವರು ಬೈಕ್​ನಲ್ಲಿ ಲಿಫ್ಟ್ ಕೊಟ್ಟಿದ್ದಾರೆ. ಕೂಲ್​ ಕ್ಯಾಪ್ಟನ್​ರ ಈ ನಡೆದ ಇರುವುದೊಂದೇ ಹೃದಯ ಎಷ್ಟು ಸಲ ಗೆಲ್ತೀರಾ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ತಮ್ಮ ತೋಟದ ಮನೆಯ ಸೆಕ್ಯೂರಿಟಿ ಗಾರ್ಡ್‌ಗೆ ಬೈಕ್​ನಲ್ಲಿ ಲಿಫ್ಟ್ ಕೊಟ್ಟ ಮಾಹಿ
ತಮ್ಮ ತೋಟದ ಮನೆಯ ಸೆಕ್ಯೂರಿಟಿ ಗಾರ್ಡ್‌ಗೆ ಬೈಕ್​ನಲ್ಲಿ ಲಿಫ್ಟ್ ಕೊಟ್ಟ ಮಾಹಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರಿಗೆ ಸಂಬಂಧಿಸಿದ ಯಾವುದೇ ವಿಷಯವಾದರೂ ಸರಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ತುಂಬಾ ಸಮಯ ತೆಗೆದುಕೊಳ್ಳಲ್ಲ. ಯಶಸ್ಸಿನ ಸಂದರ್ಭದಲ್ಲಿ ಉಲ್ಲಾಸ ಮತ್ತು ಸೋಲಿನ ಸಂದರ್ಭದಲ್ಲಿ ಖಿನ್ನತೆಯ ಭಾವನೆ ಇರುವುದಿಲ್ಲ. ಈ ಗುಣವೇ ಧೋನಿಯನ್ನು ಹೆಚ್ಚು ಜನಪ್ರಿಯತೆಗೆ ಕಾರಣವಾಗಿದೆ.

16ನೇ ಆವೃತ್ತಿಯ ಐಪಿಎಲ್ (IPL)​ ಬಳಿಕ​ ಧೋನಿ, ಫುಲ್​ ರಿಲ್ಯಾಕ್ಸ್​ ಮೂಡ್​ಗೆ ಜಾರಿದ್ದಾರೆ. ಸದ್ಯ ತಮ್ಮ ಫಾರ್ಮ್​ಹೌಸ್​​ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಧೋನಿ, ತೋಟದ ಮನೆಯ ಸೆಕ್ಯೂರಿಟಿ ಗಾರ್ಡ್​​ಗೆ ಲಿಫ್ಟ್​ ನೀಡಿದ ವಿಡಿಯೋ ಸಖತ್​ ವೈರಲ್ ಆಗುತ್ತಿದೆ. ಸೆಕ್ಯೂರಿಟಿ ಗಾರ್ಡ್​ರನ್ನು ತನ್ನ ಬೈಕ್​ನಲ್ಲಿ ಕೂರಿಸಿಕೊಂಡು ಗೇಟಿನ ಬಳಿ ಡ್ರಾಪ್ ಮಾಡಿದ್ದಾರೆ. ಗೇಟಿನ ಹೊರಗೆ ನಿಂತಿದ್ದ ಅಭಿಮಾನಿಗಳು ಈ ವಿಡಿಯೋ ಸೆರೆ ಹಿಡಿದಿದ್ದಾರೆ. ಗಾಳಿಯಂತೆ ವೇಗವಾಗಿ ಈ ವಿಡಿಯೋ ವೈರಲ್ ಆಗಿದೆ.

ನೆಟ್ಟಿಗರು ಪ್ರಶಂಸೆಯ ಸುರಿಮಳೆ

ಧೋನಿಯ ಈ ನಡೆಗೆ ನೆಟ್ಟಿಗರು ಮತ್ತು ಅಭಿಮಾನಿಗಳು ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಧೋನಿಯಷ್ಟು ಸರಳತೆ, ಮಾನವೀಯತೆ ಯಾವ ಕ್ರಿಕೆಟಿಗನಲ್ಲೂ ನೋಡಿಲ್ಲ ಎಂದು ಕೊಂಡಾಡುತ್ತಿದ್ದಾರೆ. ಆದರೆ ಈ ವಿಡಿಯೋ ಹಳೆಯದ್ದು ಎಂದು ಹೇಳಲಾಗುತ್ತಿದೆ. ಐದು ವರ್ಷಗಳ ಹಿಂದಿನ ವಿಡಿಯೋ ಎಂದು ಮಾಧ್ಯಮಗಳು ವರದಿ ಮಾಡಿವೆ. ಆ ಸಂದರ್ಭದಲ್ಲಿ ಬೆಳಕಿಗೆ ಬಾರದ ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ ಎಂಬುದಾಗಿಯೂ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಧೋನಿ ತನ್ನ ಸುತ್ತಲಿನ ಜನರನ್ನು ಸದಾ ಗೌರವಿಸಲು ಇಚ್ಛಿಸುತ್ತಾರೆ. ಅದು ಕುಟುಂಬದ ಸದಸ್ಯರು, ಮನೆಯ ಸಹಾಯಕರು, ಹೊರಗಿನವರಾದರೂ ಸರಿ. ಅದು ಯಾರೇ ಆಗಿರಬಹುದು, ಸಹಾಯ ಹಸ್ತ ಚಾಚಲು ಮುಂದಿರುತ್ತಾರೆ. ಹಾಗೆಯೇ ಎಲ್ಲರನ್ನೂ ಗೌರವಿಸುತ್ತಾರೆ. ಸದ್ಯ ಮಿಸ್ಟರ್ ಕೂಲ್ ಧೋನಿ ಅವರ ಸೆಕ್ಯುರಿಟಿ ಗಾರ್ಡ್​ ಡ್ರಾಪ್​ ಮಾಡುತ್ತಿರುವ ವಿಡಿಯೋ ನೆಟ್ಸ್​ನಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ಫಾರ್ಮ್​​ಹೌಸ್​​​ನಲ್ಲೇ ಹೆಚ್ಚು ಸಮಯ

ರಾಂಚಿಯಲ್ಲಿ ದೊಡ್ಡ ಫಾರ್ಮ್ ಹೌಸ್ ಹೊಂದಿರುವ, ಧೋನಿ ತಮ್ಮ ಬಿಡುವಿನ ವೇಳೆಯನ್ನು ಅಲ್ಲಿಯೇ ಕಳೆಯುತ್ತಾರೆ. ಐಪಿಎಲ್ ಹೊರತುಪಡಿಸಿ ಉಳಿದ ಸಮಯವನ್ನು ಅವರು ಇಲ್ಲೇ ಕಳೆಯುತ್ತಾರೆ. ಕುಟುಂಬ, ವ್ಯವಸಾಯ, ವಿವಿಧ ಬ್ರಾಂಡ್‌ಗಳ ಜಾಹೀರಾತು ಸೇರಿದಂತೆ ಉಳಿದ ಕೆಲಸಗಳಿಗೂ ಸಮಯ ನೀಡುತ್ತಾರೆ. ಫಾರ್ಮ್​​ಹೌಸ್​ನ ಮುಖ್ಯ ಗೇಟ್​ನಿಂದ ಮನೆಗೆ ಬಹಳ ದೂರ ನಡೆಯಬೇಕು.

ಫಾರ್ಮ್‌ ಹೌಸ್‌ನಲ್ಲಿರುವ ಭದ್ರತಾ ಸಿಬ್ಬಂದಿಗೆ ಕೆಲಸ ಮುಗಿಯುತ್ತಿದ್ದಂತೆ, ಬೈಕ್‌ನಲ್ಲಿ ಮುಖ್ಯ ಗೇಟ್‌ವರೆಗೂ ಲಿಫ್ಟ್​ ನೀಡಿದ್ದಾರೆ. ವಿಡಿಯೋದಲ್ಲಿ ಸೆಕ್ಯುರಿಟಿ ಗಾರ್ಡ್‌ನನ್ನು ಗೇಟ್ ಮುಂದೆ ಬಿಟ್ಟು, ಮತ್ತೆ ತಮ್ಮ ತೋಟದ ಮನೆ ಕಡೆ ಬೈಕ್ ಓಡಿಸಿಕೊಂಡು ಹೋಗಿದ್ದನ್ನು ಕಾಣಬಹುದು. ಹೊರಡುವ ಮುನ್ನ ಅಭಿಮಾನಿಗಳತ್ತ ಕೈ ಬೀಸಿದರು. ಮಹಿಯಾಂಕ್ ಎಂಬ ಹೆಸರಿನ ಟ್ವಿಟರ್ ಖಾತೆಯಿಂದ ಈ ವಿಡಿಯೋವನ್ನು ಟ್ವೀಟ್ ಮಾಡಲಾಗಿದೆ. ಆ ಸೆಕ್ಯೂರಿಟಿಗಾರ್ಡ್ ತುಂಬಾ ಅದೃಷ್ಟಶಾಲಿ" ಎಂದು ಶೀರ್ಷಿಕೆ ಬರೆದಿದ್ದಾರೆ.

ಧೋನಿಗೆ ಬೈಕ್​ ಅಂದರೆ ಅಚ್ಚುಮೆಚ್ಚು

ಧೋನಿಗೆ ಬೈಕ್​ ಅಂದರೆ ಪಂಚಪ್ರಾಣ. ಬೈಕ್​ನಲ್ಲಿ ಒಬ್ಬರೇ ಪ್ರಯಾಣಿಸಿದ ವಿಡಿಯೋ ವೈರಲ್​ ಆಗಿತ್ತು. ಬೈಕ್​ ರೈಡಿಂಗ್​​ಗಾಗಿಯೇ​ ರಾಂಚಿಯಲ್ಲಿರುವ ತಮ್ಮ ನಿವಾಸದಲ್ಲಿ ಬೈಕ್​ ಟ್ರ್ಯಾಕ್​ ಕೂಡ ನಿರ್ಮಿಸಿದ್ದಾರೆ. ಲಾಕ್​ಡೌನ್​​ನಲ್ಲೂ​ ಮಗಳು ಝೀವಾ ಜತೆ ಬೈಕ್​ನಲ್ಲಿ ಸುತ್ತಾಟ ನಡೆಸಿದ್ದರು. ಈ ವಿಡಿಯೋಗಳನ್ನು ಹಂಚಿಕೊಂಡಿದ್ದರು.

ಚೆನ್ನೈ ಚಾಂಪಿಯನ್​

16ನೇ ಆವೃತ್ತಿಯ ಐಪಿಎಲ್​ನಲ್ಲಿ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್,​ ಐದನೇ ಬಾರಿ ಪ್ರಶಸ್ತಿ ಗೆದ್ದಿತ್ತು. ಸದ್ಯ ತಮ್ಮ ನಿವೃತ್ತಿ ನಿರ್ಧಾರವನ್ನು ಮುಂದೂಡಿರುವ ಮಾಹಿ, ಮುಂದಿನ ಆವೃತ್ತಿಯಲ್ಲಿ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸದ್ಯ ಅವರ ಮೊಣಕಾಲಿಗೆ ಶಸ್ತ್ರಚಿಕಿತ್ಸೆಯಾಗಿದ್ದು, ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.