ಇಂದಿನಿಂದ ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತಕ್ಕೆ ಮಲೇಷ್ಯಾ ಎದುರಾಳಿ; ವೇಳಾಪಟ್ಟಿ-ಲೈವ್ ಸ್ಟ್ರೀಮಿಂಗ್ ವಿವರ
Nov 11, 2024 09:53 AM IST
ಇಂದಿನಿಂದ ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ; ವೇಳಾಪಟ್ಟಿ-ಲೈವ್ ಸ್ಟ್ರೀಮಿಂಗ್ ವಿವರ
- ನೂತನ ನಾಯಕಿ ಸಲೀಮಾ ಟೆಟೆ ನೇತೃತ್ವದ ಭಾರತ ತಂಡ ನವೆಂಬರ್ 11ರಂದು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಲೇಷ್ಯಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಭಾರತೀಯ ಮಹಿಳಾ ಹಾಕಿ ತಂಡವು ಇತ್ತೀಚಿನ ದಿನಗಳಲ್ಲಿ ಮಲೇಷ್ಯಾ ವಿರುದ್ಧ ಉತ್ತಮ ದಾಖಲೆ ಹೊಂದಿದೆ.
ಭಾರತವು ವನಿತೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಗೆ ಆತಿಥ್ಯ ನೀಡುತ್ತಿದೆ. ಇಂದಿನಿಂದ (ನವೆಂಬರ್ 11) ನವೆಂಬರ್ 20ರವರೆಗೆ) ಬಿಹಾರದಲ್ಲಿ ಮೊದಲ ಅಂತಾರಾಷ್ಟ್ರೀಯ ಹಾಕಿ ಪಂದ್ಯಾವಳಿ ನಡೆಯಲಿದ್ದು, ನೂತನ ನಾಯಕಿ ಸಲೀಮಾ ಟೆಟೆ ನೇತೃತ್ವದ ಭಾರತ ಮಹಿಳಾ ಹಾಕಿ ತಂಡ ಪ್ರಶಸ್ತಿ ಉಳಿಸಿಕೊಳ್ಳುವ ತವಕದಲ್ಲಿದೆ. ಪಂದ್ಯಾವಳಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ತಂಡವಾದ ಚೀನಾ ಸೇರಿದಂತೆ ಜಪಾನ್, ಕೊರಿಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್ ತಂಡಗಳು ಭಾಗವಹಿಸುತ್ತಿವೆ. ಬಿಹಾರದ ರಾಜ್ಗಿರ್ ಹಾಕಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತಿದ್ದು, ಉದ್ಘಾಟನಾ ದಿನವಾದ ಇಂದು 3 ಪಂದ್ಯಗಳು ನಡೆಯಲಿದೆ.
ನಾಯಕಿ ಸಲೀಮಾ ಟೆಟೆ ಮತ್ತು ಉಪನಾಯಕಿ ನವನೀತ್ ಕೌರ್ ನೇತೃತ್ವದ ಭಾರತ ತಂಡ ನವೆಂಬರ್ 11ರಂದು ನಡೆಯುತ್ತಿರುವ ದಿನದ ಮೂರನೇ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಭಾರತೀಯ ಮಹಿಳಾ ಹಾಕಿ ತಂಡವು ಇತ್ತೀಚಿನ ದಿನಗಳಲ್ಲಿ ಮಲೇಷ್ಯಾ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿದೆ.
2023ರಲ್ಲಿ ರಾಂಚಿಯಲ್ಲಿ ನಡೆದ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲು ಭಾರತವು ಮಲೇಷ್ಯಾವನ್ನು 5-0 ಅಂತರದಿಂದ ಸೋಲಿಸಿತ್ತು. ಏಷ್ಯನ್ ಗೇಮ್ಸ್ 2022ರಲ್ಲಿ 6-0 ಅಂತರದಿಂದ ಮಣಿಸಿತ್ತು. ಅದಕ್ಕೂ ಮುನ್ನ 2022ರ ಮಹಿಳಾ ಏಷ್ಯಾಕಪ್‌ನಲ್ಲಿ ಮಲೇಷ್ಯಾ ವಿರುದ್ಧ ಭಾರತ 9-0 ಅಂತರದ ಗೆಲುವು ದಾಖಲಿಸಿತ್ತು. ಹೀಗಾಗಿ ಭಾರತದ ಆತ್ಮವಿಶ್ವಾಸ ಹೆಚ್ಚಿದೆ.
ವೇಳಾಪಟ್ಟಿ
ನವೆಂಬರ್ 11
- 12:15 - ಜಪಾನ್ ವಿರುದ್ಧ ಕೊರಿಯಾ
- 14:30 - ಚೀನಾ ವಿರುದ್ಧ ಥೈಲ್ಯಾಂಡ್
- 16:45 - ಭಾರತ ವಿರುದ್ಧ ಮಲೇಷ್ಯಾ
ನವೆಂಬರ್ 12
- 12:15 - ಥೈಲ್ಯಾಂಡ್ ವಿರುದ್ಧ ಜಪಾನ್
- 14:30 - ಚೀನಾ ವಿರುದ್ಧ ಮಲೇಷ್ಯಾ
- 16:45 - ಭಾರತ ವಿರುದ್ಧ ಕೊರಿಯಾ
ನವೆಂಬರ್ 14
- 12:15 - ಕೊರಿಯಾ ವಿರುದ್ಧ ಮಲೇಷ್ಯಾ
- 14:30 - ಜಪಾನ್ ವಿರುದ್ಧ ಚೀನಾ
- 16:45 - ಥೈಲ್ಯಾಂಡ್ ವಿರುದ್ಧ ಭಾರತ
ನವೆಂಬರ್ 16
- 12:15 - ಮಲೇಷ್ಯಾ ವಿರುದ್ಧ ಜಪಾನ್
- 14:30 - ಕೊರಿಯಾ ವಿರುದ್ಧ ಥೈಲ್ಯಾಂಡ್
- 16:45 - ಭಾರತ ವಿರುದ್ಧ ಚೀನಾ
ನವೆಂಬರ್ 17
- 12:15 - ಮಲೇಷ್ಯಾ ವಿರುದ್ಧ ಥೈಲ್ಯಾಂಡ್
- 14:30 - ಚೀನಾ ವಿರುದ್ಧ ಕೊರಿಯಾ
- 16:45 - ಜಪಾನ್ ವಿರುದ್ಧ ಭಾರತ
ನವೆಂಬರ್ 19
- 14:15 - ಸೆಮಿಫೈನಲ್ 1 (ಪೂಲ್‌ನಲ್ಲಿ 2ನೇ ಮತ್ತು ಪೂಲ್‌ನಲ್ಲಿ 3ನೇ ಸ್ಥಾನ ಪಡೆದ ತಂಡಗಳು)
- 16:45 - ಸೆಮಿಫೈನಲ್ 2 (ಪೂಲ್‌ನಲ್ಲಿ 1 ನೇ ಮತ್ತು ಪೂಲ್‌ನಲ್ಲಿ 4ನೇ ಸ್ಥಾನ ಪಡೆದ ತಂಡಗಳು)
ನವೆಂಬರ್ 20:
- 16:45 - ಫೈನಲ್
ಲೈವ್ ಸ್ಟ್ರೀಮಿಗ್ ವಿವರ
ಮಹಿಳಾ ಚಾಂಪಿಯನ್ಸ್ ಟ್ರೋಫಿ 2024ರ ಎಲ್ಲಾ ಪಂದ್ಯಗಳು ಸೋನಿ ಸ್ಪೋರ್ಟ್ಸ್ ಟೆನ್ 1 ಎಸ್‌ಡಿ ಮತ್ತು ಎಚ್‌ಡಿ ಚಾನೆಲ್‌ಗಳಲ್ಲಿ ನೇರಪ್ರಸಾರವಾಗಲಿದೆ. ಇದೇ ವೇಳೆ ಸೋನಿ LIV ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಲಾಗುತ್ತದೆ.
ಭಾರತ ಹಾಕಿ ತಂಡ
ಸವಿತಾ, ಬಿಚು ದೇವಿ ಖರಿಬಮ್, ಉದಿತಾ, ಜ್ಯೋತಿ, ವೈಷ್ಣವಿ ವಿಠ್ಠಲ್ ಫಾಲ್ಕೆ, ಸುಶೀಲಾ ಚಾನು ಪುಖ್ರಂಬಮ್, ಇಶಿಕಾ ಚೌಧರಿ, ಮಿಡ್ಫೀಲ್ಡರ್ಸ್, ನೇಹಾ, ಸಲೀಮಾ ಟೆಟೆ, ಶರ್ಮಿಳಾ ದೇವಿ, ಮನೀಶಾ ಚೌಹಾಣ್, ಸುನೆಲಿಟಾ ಟೊಪ್ಪೊ, ಲಾಲ್ರೆಮ್ಸಿಯಾಮಿ, ನವನೀತ್ ಕೌರ್, ಪ್ರೀತಿ ದುಬೆ, ಸಂಗೀತಾ ಕುಮಾರಿ, ದೀಪಿಕಾ, ಬ್ಯೂಟಿ ಡಂಗ್‌ಡಂಗ್.
ವಿಭಾಗ