Guinness World Records: ಫ್ರಾನ್ಸ್ ಹೊತ್ತಿ ಉರಿಯುತ್ತಿರುವುದರ ನಡುವೆಯೇ ಗಿನ್ನೆಸ್ ದಾಖಲೆ ಬರೆದ ಅದೇ ದೇಶದ ಅಗ್ನಿಶಾಮಕ ಸಿಬ್ಬಂದಿ
Jul 02, 2023 03:49 PM IST
ಗಿನ್ನೆಸ್ ದಾಖಲೆ ಬರೆದ ಅದೇ ದೇಶದ ಅಗ್ನಿಶಾಮಕ ಸಿಬ್ಬಂದಿ
- ಫ್ರಾನ್ಸ್‌ನ ಅಗ್ನಿಶಾಮಕದಳದ ಸಿಬ್ಬಂದಿ ದೇಹಕ್ಕೆ ಬೆಂಕಿ ಹಚ್ಚಿಕೊಂಡು 100 ಮೀಟರ್ ಓಟವನ್ನು ಕೇವಲ 17 ಸೆಕೆಂಡ್‌ಗಳಲ್ಲಿ ಪೂರೈಸಲಾಗಿದೆ. ಇದರೊಂದಿಗೆ ಅಗ್ನಿಶಾಮಕದಳದ ಸಿಬ್ಬಂದಿಯೊಬ್ಬರು ಎರಡು ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಫ್ರಾನ್ಸ್‌ನಲ್ಲಿ (France) ಹದಿಹರೆಯದ ಯುವಕನೊಬ್ಬನ ಸಾವಿನಿಂದ ಇಡೀ ಹೊತ್ತಿ ಉರಿಯುತ್ತಿದೆ. ಮೂರು ದಿನಗಳಿಂದ ಗಲಭೆಕೋರರು ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ವೇಳೆ ಕೈಗೆ ಸಿಕ್ಕಸಿಕ್ಕದ್ದನ್ನೆಲ್ಲ ಜನರು ಧ್ವಂಸ ಮಾಡಿದ್ದಾರೆ. ಒಂದೆಡೆ, ಫ್ರಾನ್ಸ್‌ನ ಹಲವು ಭಾಗದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದರೆ, ಮತ್ತೊಂದೆಡೆ ಇದೇ ಫ್ರಾನ್ಸ್‌ನಲ್ಲಿ ಅಗ್ನಿ ಶಾಮಕದಳದ ಸಿಬ್ಬಂದಿ, ದೇಹಕ್ಕೆ ಬೆಂಕಿ ಹಚ್ಚಿಕೊಂಡು 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು, ವಿಶ್ವದಾಖಲೆ ಬರೆದಿದ್ದಾರೆ.
17 ಸೆಕೆಂಡ್‌ಗಳಲ್ಲಿ 100 ಮೀಟರ್ ಓಟ
ಫ್ರಾನ್ಸ್‌ನಲ್ಲಿ ಅಗ್ನಿ ಶಾಮಕದಳದ ಸಿಬ್ಬಂದಿ ತಮ್ಮ ದೇಹಕ್ಕೆ ಬೆಂಕಿ ಹಚ್ಚಿಕೊಂಡು 100 ಮೀಟರ್ ಓಟದ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ಕೇವಲ 17 ಸೆಕೆಂಡ್‌ಗಳಲ್ಲಿ ಓಟ ಪೂರೈಸಿ ವಿಶ್ವದಾಖಲೆ ಬರೆದಿದ್ದಾರೆ. 39 ವರ್ಷದ ಜೊನಾಥನ್ ಎಂಬಾತ ಎರಡು ಗಿನ್ನೆಸ್ ದಾಖಲೆ ಬರೆದಿದ್ದಾರೆ. ಜೊನಾಥನ್ ವೆರೊ ಆಮ್ಲಜನಕವಿಲ್ಲದೆ ಅತಿ ಹೆಚ್ಚು ಓಡಿದ ಸಾಧನೆ ಮಾಡಿದ್ದಾರೆ.
ಒಂದು ವಿಭಾಗದಲ್ಲಿ ಆಮ್ಲಜನಕ ಇಲ್ಲದೆ 100 ಮೀಟರ್ ಓಟವನ್ನು 17 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದ್ದಾರೆ. ಮತ್ತೊಂದು ವಿಭಾಗದಲ್ಲಿ ದೇಹಕ್ಕೆ ಬೆಂಕಿ ಹಚ್ಚಿಕೊಂಡು 272.52 ಮೀಟರ್ ದೂರ ವೇಗವಾಗಿ ಓಡಿ ಅಪರೂಪದ ದಾಖಲೆ ಬರೆದಿದ್ದಾರೆ. ದೇಹ ಸುಡುತ್ತಿದ್ದರೂ ಓಟ ಪೂರ್ಣ ಗೊಳಿಸಿದ ದಾಖಲೆಯನ್ನ ಜೋನಾಥನ್ ಹೆಸರಿಗೆ ಬರೆದುಕೊಂಡಿದ್ದಾರೆ. ಅವರು ರಕ್ಷಣಾತ್ಮಕ ಸೂಟ್ ಧರಿಸಿದ್ದರು. ಜ್ವಾಲೆ ಇದ್ದರೂ 272.25 ಮೀಟರ್ (893 ಅಡಿ) ಓಡಿದರು. ಈ ಎರಡೂ ದಾಖಲೆಗಳು ಈ ಹಿಂದೆ ಆಂಟೋನಿ ಬ್ರಿಟನ್ (ಯುಕೆ) ಹೆಸರಿನಲ್ಲಿದ್ದವು.
ವೃತ್ತಿಪರ ಸ್ಟಂಟ್‌ಮ್ಯಾನ್
ಜೋನಾಥನ್ ಅವರು ವೃತ್ತಿಪರ ಸ್ಟಂಟ್‌ಮ್ಯಾನ್. ಚಿಕ್ಕಂದಿನಿಂದಲೂ ಬೆಂಕಿಯೊಂದಿಗೆ ಆಡುತ್ತಲೇ ಬೆಳೆದಿದ್ದಾರಂತೆ. ತನ್ನಗಿಷ್ಟವಾದ ಈ ಕ್ಷೇತ್ರದಲ್ಲಿ ಅಗ್ನಿಶಾಮಕದಳದಲ್ಲಿ ಹಲವು ಕ್ಲಿಷ್ಟಕರ ಘಟನೆಗಳನ್ನೂ ಎದುರಿಸಿದ್ದಾನೆ. ಬೆಂಕಿಯ ಶೋಗಳಲ್ಲಿ ಪಾಲ್ಗೊಂಡು ಬೆಂಕಿ ಜೊತೆ ಸರಸವಾಡಿದ್ದಾರೆ. ಬಾಯಲ್ಲಿ ಬೆಂಕಿ ಇಟ್ಟುಕೊಂಡು ಉಗುಳುವುದು ಸೇರಿದಂತೆ ಅಪಾಯಕಾರಿ ಸ್ಟಂಟ್‌ಗಳನ್ನು ಜೋನಾಥನ್ ಮಾಡಿದ್ದಾರೆ. ಈಗ ದೇಹಕ್ಕೆ ಬೆಂಚಿ ಹಚ್ಚಿಕೊಂಡು 100 ಮೀಟರ್ ಓಡಿ ಗಿನ್ನಿಸ್ ದಾಖಲೆಯ ಪುಟ ಸೇರಿಕೊಂಡಿದ್ದಾರೆ.
ಖುಷಿಯಾಯ್ತು ಎಂದ ಜೋನಾಥನ್
ಅಪಾಯಕಾರಿ ಸ್ಟಂಟ್ಗಳ ಮೂಲಕ ವಿಶ್ವ ದಾಖಲೆ ಬರೆದಿರುವ ಜೋನಾಥನ್, ತನ್ನ ಸಾಧನೆಯ ಕುರಿತು ಖುಷಿ ಹಂಚಿಕೊಂಡಿದ್ದಾರೆ. ಬೆಂಕಿ ಹಚ್ಚಿಕೊಂಡು 100 ಮೀಟರ್ ಓಟವು ಅತ್ಯಂತ ತೃಪ್ತಿ ನೀಡಿದೆ. ನಾನು ಅಗ್ನಿಶಾಮಕದಳದ ಸಿಬ್ಬಂದಿಯಾಗಿದ್ದು, ಅಗ್ನಿಶಾಮಕದಲ್ಲಿ ನೀಡಿರುವ ತರಬೇತಿಗಳಲ್ಲಿ ಇದೆಲ್ಲವನ್ನೂ ಕಲಿಯುತ್ತಾ ಬೆಳೆದಿದ್ದೇನೆ. ಈಗ ಅದೇ ವಿಭಾಗದಲ್ಲಿ ಸಾಧನೆ ಮಾಡಿದ್ದು ಖುಷಿ ನೀಡಿದೆ ಎಂದು ಜೋನಾಥನ್ ಹೇಳಿದ್ದಾರೆ.
ವಿಡಿಯೋ ವೈರಲ್
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಇಂತಹ ಆಟಗಳ ಮೂಲಕ ಬೆಂಕಿ ಹಚ್ಚಿಕೊಳ್ಳಲು ಪ್ರಚೋದನೆ ನೀಡುತ್ತಿರುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸಿದ್ದರೆ, ಮತ್ತೆ ಕೆಲವರು ನಮ್ಮ ಅಗ್ನಿ ಶಾಮಕದಳದ ಸಿಬ್ಬಂದಿಯಾಗಿರುವುದು ನಮಗೆ ಹೆಮ್ಮೆ ಎನ್ನುತ್ತಿದ್ದಾರೆ.
ಫ್ರಾನ್ಸ್ ಪ್ರತಿಭಟನೆಗೆ ಸಂಬಂಧಿಸಿದ ಸುದ್ದಿ
France Protest: ಹೊತ್ತಿ ಉರಿಯುತ್ತಿದೆ ಫ್ರಾನ್ಸ್; ಉಗ್ರ ಪ್ರತಿಭಟನೆ ಹುಟ್ಟುಹಾಕಿದ ನಹೆಲ್ ಸಾವು, ಯಾರೀತ? ಇಲ್ಲಿದೆ ಮಾಹಿತಿ
ಜೂನ್ 27 ರಂದು ನಹೆಲ್ ಎಂಬ ಹದಿಹರೆಯದ ಹುಡುಗನನ್ನು ಫ್ರಾನ್ಸ್ ರಾಜಧಾನಿಯಾದ ಪ್ಯಾರಿಸ್ನ ನಾಂಟೆರ್ರೆ ಎಂಬಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗುಂಡು ಹಾರಿಸಿ ಹತೈಗೈದಿದ್ದರು. ಟ್ರಾಫಿಕ್ ಸಿಗ್ನಲ್ನಲ್ಲಿ ವಾಹನ ನಿಲ್ಲಿಸದ ಕಾರಣ ಆತನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈತನ ಸಾವು ಇಡೀ ದೇಶದಲ್ಲಿ ಕಳೆದ ಮೂರು ದಿನಗಳಿಂದ ಉಗ್ರ ಪ್ರತಿಭಟನೆಯನ್ನು ಹುಟ್ಟುಹಾಕಿದೆ. ಪ್ರತಿಭಟನೆ ವೇಳೆ ಕೈಗೆ ಸಿಕ್ಕಸಿಕ್ಕದ್ದನ್ನೆಲ್ಲ ಜನರು ಧ್ವಂಸಮಾಡಿದ್ದಾರೆ. ಪ್ರತಿಭಟನೆ ನಿಯಂತ್ರಿಸಲು ಸುಮಾರು 45,000 ಪೊಲೀಸರನ್ನು ನಿಯೋಜಿಸಲಾಗಿದೆ. ಈ ಕುರಿತ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.