logo
ಕನ್ನಡ ಸುದ್ದಿ  /  ಕ್ರೀಡೆ  /  ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿ ಫುಟ್ಬಾಲ್ ಹುಡುಕಿದರೆ ನಿಮ್ಮಷ್ಟು ಬುದ್ದಿವಂತರು ಯಾರಿಲ್ಲ!

ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿ ಫುಟ್ಬಾಲ್ ಹುಡುಕಿದರೆ ನಿಮ್ಮಷ್ಟು ಬುದ್ದಿವಂತರು ಯಾರಿಲ್ಲ!

Prasanna Kumar P N HT Kannada

Jan 09, 2024 12:53 PM IST

google News

ಈ ಚಿತ್ರದಲ್ಲಿ ಫುಟ್ಬಾಲ್ ಹುಡುಕಿದರೆ ನಿಮ್ಮಷ್ಟು ಬುದ್ದಿವಂತರು ಯಾರಿಲ್ಲ!

    • Optical Illusion: ವೈರಲ್​​​ ಆದ ಚಿತ್ರದಲ್ಲಿ ತುಂಬಾ ವಾಹನಗಳಿಂದ ಆವೃತವಾಗಿರುವ ರಸ್ತೆಯನ್ನು ಕಾಣಬಹುದು. ಈ ದಟ್ಟಣೆಯಲ್ಲಿ ಫುಟ್ಬಾಲ್ ಮಾತ್ರ ಹುಡಕಬೇಕು. ಸವಾಲಿನ ಆಟದಲ್ಲಿ ಗೆಲ್ಲೋದು ಯಾರು?
ಈ ಚಿತ್ರದಲ್ಲಿ ಫುಟ್ಬಾಲ್ ಹುಡುಕಿದರೆ ನಿಮ್ಮಷ್ಟು ಬುದ್ದಿವಂತರು ಯಾರಿಲ್ಲ!
ಈ ಚಿತ್ರದಲ್ಲಿ ಫುಟ್ಬಾಲ್ ಹುಡುಕಿದರೆ ನಿಮ್ಮಷ್ಟು ಬುದ್ದಿವಂತರು ಯಾರಿಲ್ಲ!

ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ನಿರತರಾಗಿರುತ್ತಾರೆ. ಮನೆ, ಆಫೀಸ್, ಬಸ್, ವಾಕಿಂಗ್, ಪ್ರಯಾಣ.. ಹೀಗೆ ಎಲ್ಲೇ ಆಗಲಿ ಕನಿಷ್ಠ ಒಂದು ಸಲವಾದರೂ ಇನ್​ಸ್ಟಾಗ್ರಾಂ, ಫೇಸ್​ಬುಕ್​, ಟ್ವಿಟರ್​​.. ಸಾಮಾಜಿಕ ಮಾಧ್ಯಮಗಳನ್ನು ಸ್ಕ್ರಾಲ್ ಮಾಡುತ್ತಿರುತ್ತಾರೆ. ಇನ್ನೂ ಕೆಲವರಂತೂ ಇದೇ ಜೀವನ ಎನ್ನುವಂತೆ ಅದರಲ್ಲೇ ಬೆಳಿಗ್ಗೆಯಿಂದ ರಾತ್ರಿವರೆಗೂ ಮಗ್ನರಾಗಿರುತ್ತಾರೆ.

ಹೀಗೆ ಸ್ಕ್ರಾಲ್ ಮಾಡುವಾಗ ಕಣ್ಣಿಗೆ ಸವಾಲ್ ಎಸೆಯುವಂತಹ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಹಾಗೂ ಕಾಣ ಸಿಗುತ್ತವೆ. ಪ್ರಾಣಿ-ಪಕ್ಷಿ ಅಥವಾ ಏನಾದರೂ ಒಂದು ವಸ್ತುವಾಗಿರಬಹುದು ಅವುಗಳನ್ನು ಪತ್ತೆ ಹಚ್ಚಲು ಸೂಚಿಸಿರುತ್ತಾರೆ. ಇದು ನೆಟ್ಟಿಗರ ತಲೆಗೆ ಹುಳ ಬಿಡದೆ ಇರದು. ಇದೀಗ ಅಂತಹದ್ದೇ ಒಂದು ಫೋಟೋ ನೆಟ್​ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡಿರುವುದಂತೂ ಸುಳ್ಳಲ್ಲ.

ಜಾಲತಾಣದಲ್ಲಿ ದೃಷ್ಟಿ ಭ್ರಮೆ ಅಥವಾ ಅಫ್ಟಿಕ್ ಇಲ್ಯೂಷನ್ ಸಖತ್ ಪ್ರಸಿದ್ಧಿ ಪಡೆದುಕೊಂಡಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಚಾಲೆಂಜ್​​ಗಳನ್ನು ಸ್ವೀಕರಿಸಿದ್ದಾರೆ. ಹಲವರು ಗೆದ್ದಿದ್ದೂ ಇದೆ. ಇನ್ನೂ ಕೆಲವರು ಸೋತಿದ್ದೂ ಇದೆ. ಆದರೆ ಈ ಸವಾಲು ಸ್ವೀಕರಿಸಿದನ್ನು ಸಾಕಷ್ಟು ಮಂದಿ ಆನಂದಿಸುತ್ತಾರೆ. ಹೆಚ್ಚೆಚ್ಚು ಮನರಂಜಿಸುವ ಮಾರ್ಗ ಇದಾಗಿದೆ. ಬುದ್ದಿವಂತಿಕೆ ಪ್ರದರ್ಶಿಸಲು ಸಾಕಷ್ಟು ಮಂದಿ ಪ್ರಯತ್ನಿಸುತ್ತಾರೆ.

ಫುಟ್ಬಾಲ್ ಹುಡುಕಿ..

ಇದೆಲ್ಲದರ ಹೊರತಾಗಿ ಕೌಶಲ ಮತ್ತು ಏಕಾಗ್ರತೆ ಸುಧಾರಿಸಲು ಆಪ್ಟಿಕಲ್ ಇಲ್ಯೂಷನ್ ಪ್ರಯೋಜನಕಾರಿ. ಸದ್ಯ ವೈರಲ್​​​ ಆದ ಚಿತ್ರದಲ್ಲಿ ತುಂಬಾ ವಾಹನಗಳಿಂದ ಆವೃತವಾಗಿರುವ ರಸ್ತೆಯನ್ನು ಕಾಣಬಹುದು. ಈ ದಟ್ಟಣೆಯಲ್ಲಿ ಫುಟ್ಬಾಲ್ ಮಾತ್ರ ಹುಡಕಬೇಕು. ಸವಾಲಿನ ಆಟದಲ್ಲಿ ಗೆಲ್ಲೋದು ಯಾರು? ಆದರೆ ಪತ್ತೆ ಹಚ್ಚುವುದು ನೀವಂದುಕೊಂಡಷ್ಟು ಸುಲಭವಲ್ಲ. ಕಣ್ಣಿಗೆ ಸಲೀಸಾಗಿ ಕಾಣುವುದಿಲ್ಲ. ನಿಮಗೆ ಕೊಡುವ ಸಮಯ 10 ಸೆಕೆಂಡ್ ಮಾತ್ರ.

ಪತ್ತೆ ಹಚ್ಚಿದ್ರಾ? ಈ 10 ಸೆಕೆಂಡ್​​ಗಳಲ್ಲಿ ನೀವು ಫೋಟೋದಲ್ಲಿ ಫುಟ್ಬಾಲ್ ಗುರುತಿಸಿದ್ದೇ ಆದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ನಿಮ್ಮ ಬುದ್ದಿವಂತಿಕೆಗೆ ನೀವೇ ಫುಲ್ ಮಾರ್ಕ್ಸ್​ ಕೊಟ್ಬಿಡಿ. ಒಂದು ಇನ್ನೂ ಸಿಗಲಿಲ್ಲ ಎಂದರೆ ಈ ಕೆಳಗೆ ಫುಟ್ಬಾಲ್ ಗುರುತಿಸಿರುವ ಚಿತ್ರವನ್ನು ಕೊಡಲಾಗಿದೆ. ನಿಮಗೆ ಉತ್ತರ ಸಿಗಲಿದೆ. ನಿಮ್ಮ ಫ್ರೆಂಡ್ಸ್​​ಗೂ ಈ ಸುದ್ದಿ ಶೇರ್​ ಮಾಡಿ, ಅವರಿಗೂ ಸವಾಲ್ ಸ್ವೀಕರಿಸುವಂತೆ ತಿಳಿಸಿ.

ಇಲ್ಲಿದೆ ನೋಡಿ ಫುಟ್ಬಾಲ್..
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ