ಕನಕದಾಸ ಜಯಂತಿ 2024: ಹರಿದಾಸ ಸಂತ, ದಾರ್ಶನಿಕ, ದಾಸಶ್ರೇಷ್ಠ ಕನಕದಾಸರ ಬಗ್ಗೆ ಈ 15 ವಿಚಾರಗಳು ನಿಮಗೆ ಗೊತ್ತೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನಕದಾಸ ಜಯಂತಿ 2024: ಹರಿದಾಸ ಸಂತ, ದಾರ್ಶನಿಕ, ದಾಸಶ್ರೇಷ್ಠ ಕನಕದಾಸರ ಬಗ್ಗೆ ಈ 15 ವಿಚಾರಗಳು ನಿಮಗೆ ಗೊತ್ತೆ?

ಕನಕದಾಸ ಜಯಂತಿ 2024: ಹರಿದಾಸ ಸಂತ, ದಾರ್ಶನಿಕ, ದಾಸಶ್ರೇಷ್ಠ ಕನಕದಾಸರ ಬಗ್ಗೆ ಈ 15 ವಿಚಾರಗಳು ನಿಮಗೆ ಗೊತ್ತೆ?

Kanaka Dasa Jayanti 2024: ನವೆಂಬರ್‌ 18, 2024ರಂದು ಕನಕದಾಸ ಜಯಂತಿ. ಹರಿದಾಸ ಸಂತ, ದಾರ್ಶನಿಕ, ದಾಸಶ್ರೇಷ್ಠ ಕನಕದಾಸರ ಜನ್ಮದಿನವನ್ನು ಕನಕದಾಸ ಜಯಂತಿ ಎಂದು ಆಚರಿಸಲಾಗುತ್ತದೆ. ಕನಕದಾಸರ ಜೀವನಚರಿತ್ರೆ ಇಲ್ಲಿದೆ.

ಕನಕದಾಸ ಜಯಂತಿ 2024: ಹರಿದಾಸ ಸಂತ, ದಾರ್ಶನಿಕ, ದಾಸಶ್ರೇಷ್ಠ ಕನಕದಾಸರ ಬಗ್ಗೆ 15 ವಿಚಾರಗಳು
ಕನಕದಾಸ ಜಯಂತಿ 2024: ಹರಿದಾಸ ಸಂತ, ದಾರ್ಶನಿಕ, ದಾಸಶ್ರೇಷ್ಠ ಕನಕದಾಸರ ಬಗ್ಗೆ 15 ವಿಚಾರಗಳು

ಕನಕದಾಸ ಜಯಂತಿ 2024: ನವೆಂಬರ್‌ 18ರಂದು ಕರ್ನಾಟಕದಲ್ಲಿ ಕನಕದಾಸ ಜಯಂತಿ ಆಚರಣೆ ನಡೆಯುತ್ತಿದೆ. ಕನಕದಾಸರ ಕರ್ನಾಟಕದಲ್ಲಿ 15-16ನೇ ಶತಮಾನದಲ್ಲಿ ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿದ್ದಾರೆ. ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಪುರಂದರದಾಸರೊಂದಿಗೆ ಕಾಣಿಕೆ ನೀಡಿದ್ದಾರೆ. ಕನಕದಾಸರು ಮೂಲತಃ ದಂಡನಾಯಕರಾಗಿದ್ದರು. ಯುದ್ಧವೊಂದರಲ್ಲಿ ಸೋತ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತರಾಗಿದ್ದರು ಎಂದು ಹೇಳಲಾಗುತ್ತದೆ. ಕರ್ನಾಟಕ ಸರ್ಕಾರ ಕನಕದಾಸರ ಜಯಂತಿ ಆಚರಣೆಯನ್ನು ಸರ್ಕಾರಿ ಆಚರಣೆಯನ್ನಾಗಿ 2008ರಲ್ಲಿ ಘೋಷಿಸಿತು. ಅಲ್ಲಿಂದೀಚೆಗೆ ಪ್ರತಿ ವರ್ಷ ಕನಕದಾಸ ಜಯಂತಿ ಅಧಿಕೃತವಾಗಿ ಸರ್ಕಾರವೇ ಆಚರಿಸುತ್ತ ಬಂದಿದೆ. ಈ ವರ್ಷ ನವೆಂಬರ್‌ 18ರಂದು ಕನಕದಾಸರ ಜಯಂತಿ ಬಂದಿದ್ದು, ಜಿಲ್ಲಾ, ತಾಲೂಕು ಮಟ್ಟದಲ್ಲೂ ಕಾರ್ಯಕ್ರಮ ನಡೆಯುತ್ತದೆ. ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಅಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದ ಕೊಡುಗೆಯನ್ನು ಮಂಡಿಗೆಗಳ ರೂಪದಲ್ಲೂ ಕೊಟ್ಟಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯ ಇವೆ.

ಕನಕದಾಸರ ಜೀವನಚರಿತ್ರೆ

(ಪ್ರಶ್ನೋತ್ತರ ಮಾದರಿಯಲ್ಲಿ ಕನಕದಾಸರ ಜೀವನ ಚರಿತ್ರೆ ತಿಳಿಯಿರಿ)

1. ಕನಕದಾಸರ ಜನ್ಮಸ್ಥಳ ಯಾವುದು?

ಉತ್ತರ: ಬಾಡ, ಹಾವೇರಿ ಜಿಲ್ಲೆ

2. ಕನಕದಾಸರ ಹೆತ್ತವರ ಹೆಸರೇನು?

ಕನಕದಾಸರ ತಂದೆಯ ಹೆಸರು ಬೀರಪ್ಪ, ತಾಯಿಯ ಹೆಸರು ಬಚ್ಚಮ್ಮ.

3. ಕನಕದಾಸರ ಜೀವಿತಕಾಲ ವರ್ಷ ಯಾವುವು?

1495-1502

4. ಕನಕದಾಸರ ಅಂಕಿತನಾಮವೇನು?

ಆದಿಕೇಶವ

5. ಕನಕದಾಸರ ಲಭ್ಯ ಕೀರ್ತನೆಗಳ ಸಂಖ್ಯೆ ಎಷ್ಟು?

316

6. ಕನಕದಾಸರ ಗುರುವಿನ ಹೆಸರೇನು?

ಪ್ರಾರಂಭದಲ್ಲಿ ಶ್ರೀ ವೈಷ್ಣವ ಗುರು ತಾತಾಚಾರ್ಯ ತುವಾಯ ಮಧ್ವಗುರು ಸವ್ಯಾಸರಾಯ ವ್ಯಾಸರಾಜರು ಕನಕದಾಸರ ಗುರುವಾಗಿದ್ದರು.

7. ಕನಕದಾಸರಿಗೆ ಆಶ್ರಯ ನೀಡಿದ ರಾಜ ಯಾರು?

ಆಶ್ರಯ : ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಯ ಆಶ್ರಯ ದೊರಕಿತ್ತು.

8. ಕನಕದಾಸರ ಪೂರ್ವಾಶ್ರಮದ ಹೆಸರೇನು?

ಕನಕ, ಕನಕಪ್ಪ ( ತಿಮ್ಮಪ್ಪ ನಾಯಕ ಎಂದೂ ಹೇಳಲಾಗುತ್ತದೆ. ಆದರೆ, ಕೀರ್ತನೆಗಳಲ್ಲಿ ಕನಕ, ಕನಕಪ್ಪ ಎಂಬ ಹೆಸರುಗಳೇ ಬಳಕೆಯಲ್ಲಿವೆ)

9. ಕನಕದಾಸರಿಗೆ ಮಕ್ಕಳಿದ್ದಾರೆಯೇ?

ಒಂದು ಗಂಡುಮಗುವಾಗಿ ಅನತಿಕಾಲದಲ್ಲಿಯೇ ತೀರಿಕೊಂಡಿತು ಎಂದು ಪ್ರತೀತಿ ಇದೆ.

10. ಕನಕದಾಸರ ಕೀರ್ತನೆಗಳಲ್ಲದೆ ಇತರ ಲಭ್ಯ ಕೃತಿಗಳು ಯಾವುವು?

1. ಮೋಹನ ತರಂಗಿಣಿ (ಸಾಂಗತ್ಯ ಕೃತಿ)

2. ರಾಮಧಾನ್ಯ ಚರಿತ್ರೆ (ಷಟ್ಪದಿ ಕಾವ್ಯ)

3. ಹರಿಭಕ್ತಿಸಾರ (ಷಟ್ಪದಿ ಕಾವ್ಯ)

4. ನೃಸಿಂಹಸ್ತವ (ಅನುಪಲ್ಲಭ)

11. ಕನಕದಾಸರ ಪತ್ನಿಯ ಹೆಸರೇನು?

ಲಕ್ಷ್ಮೀದೇವಿ

12. ಕನಕದಾಸರ ಮೊದಲ ವೃತ್ತಿ ಯಾವುದು?

ದಂಡನಾಯಕ ಸಾಮಂತರಾಜ

13. ಕನಕದಾಸರು ಕಾಲವಾದ ಸ್ಥಳ ಯಾವುದು?

ಕಾಗಿನೆಲೆ.

14. ಕನಕದಾಸರ ಮೋಹನತರಂಗಿಣಿ ಕುರಿತು ಮಾಹಿತಿ

ಮೋಹನತರಂಗಿಣಿಯು 42 ಸಂಧಿಗಳಿಂದ ಕೂಡಿದ್ದು ಸಾಂಗತ್ಯದಲ್ಲಿ ರಚಿತವಾಗಿರುವ 2798 ಪದ್ಯಗಳಿವೆ. ಮೋಹನತರಂಗಿಣಿಯಲ್ಲಿ ಕನಕದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ.

15. ಕನಕದಾಸರ ನಳಚರಿತ್ರೆಯಲ್ಲಿ ಎಷ್ಟು ಪದ್ಯಗಳಿವೆ?

ನಳಚರಿತ್ರೆಯು 9 ಸಂಧಿಗಳಿಂದ ಕೂಡಿದ್ದು ಭಾಮಿನೀ ಷಟ್ಪದಿಯಲ್ಲಿ ರಚನೆಯಾಗಿರುವ 481 ಪದ್ಯಗಳಿವೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.