Ganesha Chaturthi Puja Time: ಯಾವ ಸಮಯಕ್ಕೆ ಗಣೇಶ ಚತುರ್ಥಿ ಪೂಜೆ ಮಾಡಬೇಕು? ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳ ವಿವರ ಇಲ್ಲಿದೆ-devotional culture ganesha chaturthi 2024 puja time details of major cities including bangalore rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ganesha Chaturthi Puja Time: ಯಾವ ಸಮಯಕ್ಕೆ ಗಣೇಶ ಚತುರ್ಥಿ ಪೂಜೆ ಮಾಡಬೇಕು? ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳ ವಿವರ ಇಲ್ಲಿದೆ

Ganesha Chaturthi Puja Time: ಯಾವ ಸಮಯಕ್ಕೆ ಗಣೇಶ ಚತುರ್ಥಿ ಪೂಜೆ ಮಾಡಬೇಕು? ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳ ವಿವರ ಇಲ್ಲಿದೆ

Vinayaka Chaturthi Puja Time: ಗಣೇಶ ಚತುರ್ಥಿಯನ್ನು ಗಣೇಶನ ಜನ್ಮದಿನವೆಂದು ಆಚರಿಸಲಾಗುತ್ತದೆ. ಈ ವರ್ಷ ಗಣೇಶ ಚತುರ್ಥಿಯಂದು ಅನೇಕ ಶುಭ ಯೋಗಗಳು ಸಂಭವಿಸುತ್ತಿವೆ. ಇದರಿಂದ ವಿನಾಯಕನ ಮಹತ್ವ ಹೆಚ್ಚಲಿದೆ. ಚತುರ್ಥಿಯಂದು ಪೂಜೆ ಮಾಡಲು ಯಾವುದು ಸೂಕ್ತ ಸಮಯ ಎಂಬುದನ್ನು ಪ್ರಮುಖ ನಗರವಾರು ತಿಳಿಯಿರಿ.

ಸೆಪ್ಟೆಂಬರ್ 7 ರ ಗಣೇಶ ಚತುರ್ಥಿಯಂದು ಪೂಜಾ ಸಮಯ ಯಾವುದು ಎಂಬುದನ್ನು ಬೆಂಗಳೂರು ಸೇರಿ ನಗರವಾಗರು ತಿಳಿಯಿರಿ.
ಸೆಪ್ಟೆಂಬರ್ 7 ರ ಗಣೇಶ ಚತುರ್ಥಿಯಂದು ಪೂಜಾ ಸಮಯ ಯಾವುದು ಎಂಬುದನ್ನು ಬೆಂಗಳೂರು ಸೇರಿ ನಗರವಾಗರು ತಿಳಿಯಿರಿ.

Vinayaka Chaturthi Puja Time: ಹಿಂದೂ ಧರ್ಮದಲ್ಲಿ ಗಣೇಶ ಚತುರ್ಥಿಗೆ ವಿಶೇಷ ಮಹತ್ವವಿದೆ. ಗಣೇಶ ಚತುರ್ಥಿಯಂದು ಭಕ್ತರು ಸಂಕಷ್ಟ ಹರ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. 10 ದಿನಗಳ ಕಾಲ ನಡೆಯುವ ಉತ್ಸವವು ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತದೆ. ಚತುರ್ದಶಿಯಂದು ಗಣೇಶಯನ್ನು ಅದ್ಧೂರಿ ಮೆರವಣಿಗೆ ಮೂಲಕ ನಿಮಜ್ಜನ ಮಾಡಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಗಣೇಶ ಚತುರ್ಥಿ ಯಾವಾಗ, ಪೂಜಾ ಸಮಯಗಳು ಮತ್ತು ನಗರವಾರು ಪೂಜಾ ಸಮಯವನ್ನು ತಿಳಿಯಿರಿ

ದೃಕ್ ಪಂಚಾಂಗದ ಪ್ರಕಾರ, ವಿನಾಯಕ ಚತುರ್ಥಿಯಂದು ಬ್ರಹ್ಮ, ಸರ್ವಾರ್ಥ ಸಿದ್ಧಿ ಯೋಗ ಮತ್ತು ಇಂದ್ರ ಯೋಗದೊಂದಿಗೆ ಚಿತ್ರ ಮತ್ತು ಸ್ವಾತಿ ನಕ್ಷತ್ರಗಳು ರೂಪುಗೊಳ್ಳುತ್ತವೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಗಣಪತಿಯು ಮಧ್ಯಾಹ್ನ ಜನಿಸಿದನು. ಅದಕ್ಕಾಗಿಯೇ ಗಣೇಶ ಪೂಜೆಗೆ ಮಧ್ಯಾಹ್ನವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ದೃಕ್ ಪಂಚಾಂಗದ ಪ್ರಕಾರ, ಸೆಪ್ಟೆಂಬರ್ 7 ರಂದು ಮಧ್ಯಾಹ್ನ ಗಣೇಶ ಪೂಜೆ ಮುಹೂರ್ತವು 11:03 AM ನಿಂದ 01:34 PM ವರೆಗೆ ಇರುತ್ತದೆ. ಇದರ ಅವಧಿ - 02 ಗಂಟೆ 31 ನಿಮಿಷಗಳು. ಇದೇ ವೇಳೆ ಸೆಪ್ಟೆಂಬರ್ 17ರಂದು ಗಣೇಶನ ನಿಮಜ್ಜನ ನಡೆಯಲಿದೆ.

ಚತುರ್ಥಿ ತಿಥಿ ಎಷ್ಟು ದಿನ?

ಪಂಚಾಂಗದ ಪ್ರಕಾರ, ಚತುರ್ಥಿ ತಿಥಿಯು 2024ರ ಸೆಪ್ಟೆಂಬರ್ 6 (ಗುರುವಾರ) ರಂದು ಮಧ್ಯಾಹ್ನ 3:01 ಕ್ಕೆ ಪ್ರಾರಂಭವಾಗುತ್ತದೆ. ಮರು ದಿನ ಅಂದರೆ ಸೆಪ್ಟೆಂಬರ್ 7 (ಶುಕ್ರವಾರ) ರ ಸಂಜೆ 05:37 ಕ್ಕೆ ಮುಕ್ತಾಯವಾಗುತ್ತದೆ.

ನಗರವಾರು ಗಣೇಶ ಚತುರ್ಥಿ ಪೂಜಾ ಮುಹೂರ್ತ

11:04 AM ನಿಂದ 01:31 PM- ಬೆಂಗಳೂರು
11:18 AM ನಿಂದ 01:47 PM - ಪುಣೆ
11:03 AM ನಿಂದ 01:34 PM- ದೆಹಲಿ
10:53 AM ನಿಂದ 01:21 PM- ಚೆನ್ನೈ
11:09 AM ನಿಂದ 01:40 PM- ಜೈಪುರ
11:00 AM ನಿಂದ 01:28 PM- ಹೈದರಾಬಾದ್
11:04 AM ನಿಂದ 01:35 PM- ಗುರುಗ್ರಾಮ್
11:05 AM ನಿಂದ 01:36 PM- ಚಂಡೀಗಢ
10:20 AM ನಿಂದ 12:49 PM- ಕೋಲ್ಕತ್ತಾ
11:22 AM ನಿಂದ 01:51 PM- ಮುಂಬೈ
11:23 AM ನಿಂದ 01:52 PM- ಅಹಮದಾಬಾದ್
11:03 AM ನಿಂದ 01:33 PM- ನೋಯ್ಡಾ

ನೀವು ಗಣೇಶನ ವಿಗ್ರಹವನ್ನು ಮನೆಗೆ ತರುತ್ತಿದ್ದರೆ ವಿಗ್ರಹವನ್ನು ಸ್ಥಾಪಿಸಲು ನಿಖರವಾದ ದಿಕ್ಕನ್ನು ನೆನಪಿಡಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವರ ವಿಗ್ರಹವನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸ್ಥಾಪಿಸುವುದು ಬಹಳ ಮುಖ್ಯ ಎಂಬುದನ್ನು ಗಮನದಲ್ಲಿರಲಿ. ವಾಸ್ತು ಶಾಸ್ತ್ರದ ಪ್ರಕಾರ ಗಣೇಶನ ವಿಗ್ರಹವನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಪ್ರತಿಷ್ಠಾಪಿಸಬೇಕು. ಈಶಾನ್ಯ ಮೂಲೆಯಲ್ಲಿ ಜಾಗವಿಲ್ಲದಿದ್ದರೆ ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲೂ ವಿಗ್ರಹವನ್ನು ಇಡಬಹುದು.

ಮಹಾರಾಷ್ಟ್ರದಲ್ಲಿ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಗಣೇಶ ಚತುರ್ಥಿ ದಿನದಂದು ಜನರು ಗಣೇಶನ ಮೂರ್ತಿಯನ್ನು ಸಂಗೀತ ವಾದ್ಯಗಳೊಂದಿಗೆ ಮನೆಗೆ ತರುತ್ತಾರೆ. ವಿನಾಯಕನ ಮೂರ್ತಿ ಪ್ರತಿಷ್ಠಾಪನೆ ಮಾಡುವವರೆಗೂ ಉಪವಾಸ ಆಚರಿಸಲಾಗುತ್ತದೆ. ಈ ಹಬ್ಬವು 10 ದಿನಗಳ ಕಾಲ ನಡೆಯುತ್ತದೆ. ಗಣೇಶನನ್ನು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಅನಂತ ಚತುರ್ದಶಿಯಂದು ನಿಮಜ್ಜನ ನಡೆಯುತ್ತದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.