ಮಾಸ ಶಿವರಾತ್ರಿ ಯಾವಾಗ? ಶುಭ ಸಮಯ, ಪೂಜಾ ವಿಧಾನ, ಸಾಮಗ್ರಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ -Masa Shivaratri
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಾಸ ಶಿವರಾತ್ರಿ ಯಾವಾಗ? ಶುಭ ಸಮಯ, ಪೂಜಾ ವಿಧಾನ, ಸಾಮಗ್ರಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ -Masa Shivaratri

ಮಾಸ ಶಿವರಾತ್ರಿ ಯಾವಾಗ? ಶುಭ ಸಮಯ, ಪೂಜಾ ವಿಧಾನ, ಸಾಮಗ್ರಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ -Masa Shivaratri

Masa Shivaratri 2024: ಮಾಸ ಶಿವರಾತ್ರಿಯ ರಾತ್ರಿ ಪೂಜೆಗೆ ವಿಶೇಷ ಮಹತ್ವವಿದೆ. ಮಾಸ ಶಿವರಾತ್ರಿಯಂದು ಶಿವನನ್ನು ಪೂಜಿಸುವ ಮೂಲಕ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಹಾಗೂ ಶಿವನ ವಿಶೇಷ ಅನುಗ್ರಹವನ್ನು ಪಡೆಯಲಾಗುತ್ತದೆ. ಮಾಸ ಶಿವರಾತ್ರಿ ಯಾವಾಗ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾಸ ಶಿವರಾತ್ರಿಯ ದಿನಾಂಕ, ಶುಭ ಸಮಯ ಮತ್ತು ಪೂಜಾ ವಿಧಾನವನ್ನು ತಿಳಿಯಿರಿ
ಮಾಸ ಶಿವರಾತ್ರಿಯ ದಿನಾಂಕ, ಶುಭ ಸಮಯ ಮತ್ತು ಪೂಜಾ ವಿಧಾನವನ್ನು ತಿಳಿಯಿರಿ

Masa Shivaratri: ಹಿಂದೂ ಧರ್ಮದ ಪ್ರಕಾರ ಮಾಸ ಶಿವರಾತ್ರಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮಾಸ ಶಿವರಾತ್ರಿ ಹಬ್ಬವು ಶಿವನಿಗೆ ಸಮರ್ಪಿತವಾಗಿದೆ. ಈ ವಿಶೇಷ ದಿನದಂದು ರಾತ್ರಿ ಪೂಜೆಗೆ ವಿಶೇಷ ಮಹತ್ವವಿದೆ. ಮಾಸ ಶಿವರಾತ್ರಿಯಂದು ಭಗವಾನ್ ಶಂಕರನನ್ನು ಪೂಜಿಸುವ ಮೂಲಕ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಶಿವನ ವಿಶೇಷ ಅನುಗ್ರಹವನ್ನು ಪಡೆಯಲಾಗುತ್ತದೆ ಎಂಬ ನಂಬಿಕೆ ಭಕ್ತರಿಗಿದೆ. ಮಾಸ ಶಿವರಾತ್ರಿಯನ್ನು ಪ್ರತಿ ತಿಂಗಳು ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಆಚರಿಸಲಾಗುತ್ತದೆ. ಈ ಸಮಯದಲ್ಲಿ, ಭಾದ್ರಪದ ತಿಂಗಳು ನಡೆಯುತ್ತಿದೆ. ಭಾದ್ರಪದ ಮಾಸದ ಮಾಸಿಕ ಶಿವರಾತ್ರಿ 2024ರ ಸೆಪ್ಟೆಂಬರ್ 1 ಭಾನುವಾರ ನಡೆಯಲಿದೆ. ಮಾಸ ಶಿವರಾತ್ರಿ ಪೂಜೆ, ವಿಧಿ-ವಿಧಾನ, ಶುಭ ಮುಹೂರ್ತ ಹಾಗೂ ಪೂಜೆಗೆ ಬೇಕಾಗುವ ಪದಾರ್ಥಗಳ ಸಂಪೂರ್ಣ ಪಟ್ಟಿಯನ್ನು ತಿಳಿದುಕೊಳ್ಳೋಣ.

ಮಾಸ ಭವಿಷ್ಯ ದಿನಾಂಕ, ಸಮಯ ಹಾಗೂ ಶುಭ ಮುಹೂರ್ತ ಹೀಗಿದೆ

ಭಾದ್ರಪದ, ಕೃಷ್ಣ ಚತುರ್ದಶಿ ಪ್ರಾರಂಭದ ಸಮಯ: ಸೆಪ್ಟೆಂಬರ್ 1 ರ ಬೆಳಿಗ್ಗೆ 03:40

ಭಾದ್ರಪದ, ಕೃಷ್ಣ ಚತುರ್ದಶಿ ಕೊನೆಗೊಳ್ಳುವ ಸಮಯ: ಸೆಪ್ಟೆಂಬರ್ 2 ರ ಬೆಳಗ್ಗೆ 5.21

ಶುಭ ಪೂಜಾ ಮುಹೂರ್ತ: ಸೆಪ್ಟೆಂಬರ್ 1 ರ ರಾತ್ರಿ 11:58 ರಿಂದ 12:44 ರವರೆಗೆ

ಮಾಸ ಶಿವರಾತ್ರಿ ಪೂಜಾ ವಿಧಿ

ಈ ಶುಭ ದಿನದಂದು ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿಕೊಂಡ ನಂತರ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಮನೆಯ ದೇವರ ಕೋಣೆಯಲ್ಲಿ ದೀಪವನ್ನು ಬೆಳಗಿಸಿಬೇಕು. ಇದೇ ವೇಳೆ ಶಿವಲಿಂಗವನ್ನು ಗಂಗಾ ನೀರು, ಹಾಲು ಇತ್ಯಾದಿಗಳಿಂದ ಅಭಿಷೇಕ ಮಾಡಬೇಕು.ಶಿವನೊಂದಿಗೆ ಪಾರ್ವತಿ ದೇವಿಯನ್ನು ಪೂಜಿಸಿ. ಗಣೇಶನನ್ನು ಪೂಜಿಸಲು ಮರೆಯದಿರಿ. ಯಾವುದೇ ಶುಭ ಕಾರ್ಯಕ್ಕೂ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಸಾಧ್ಯವಾದಷ್ಟು ಭೋಲೆನಾಥನ ಬಗ್ಗೆ ಧ್ಯಾನ ಮಾಡಿ. ಈ ವೇಳೆ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಪಠಿಸಿ. ಭಗವಾನ್ ಶಿವನಿಗೆ ಇಷ್ಟದ ಆಹಾರವನ್ನು ಅರ್ಪಿಸಿ. ಸಾತ್ವಿಕ ವಸ್ತುಗಳನ್ನು ಮಾತ್ರ ದೇವರಿಗೆ ಅರ್ಪಿಸಬೇಕು. ಕೊನೆಯಲ್ಲಿ ದೇವರ ಆರತಿ ಮಾಡಲು ಮರೆಯಬೇಡಿ.

ಮಾಸ ಶಿವರಾತ್ರಿ ಪೂಜೆಗೆ ಬೇಕಿರುವ ಸಾಮಗ್ರಿಗಳು

ಮಾಸ ಶಿವರಾತ್ರಿಯ ದಿನದಂದು ಮಾಡುವ ಪೂಜೆಗೆ ಹೂವುಗಳು, ಪಂಚ ಹಣ್ಣುಗಳು, ರತ್ನ, ಚಿನ್ನ, ಬೆಳ್ಳಿ, ದಕ್ಷಿಣೆ, ಪೂಜಾ ಪಾತ್ರೆಗಳು, ಕುಶಾಸನ, ಮೊಸರು, ಶುದ್ಧ ದೇಸಿ ತುಪ್ಪ, ಜೇನುತುಪ್ಪ, ಗಂಗಾ ನೀರು, ಪವಿತ್ರ ನೀರು, ಪಂಚ ರಸ, ಸುಗಂಧ ದ್ರವ್ಯ, ಗಂಧ ರೋಲಿ, ಮೌಲಿ ಜಾನು, ಪಂಚ ಸಿಹಿತಿಂಡಿಗಳು, ಬಿಲ್ವಪತ್ರೆ, ತುಳಸಿ, ಮಂದಾರ್ ಪುಷ್ಪ್, ಹಸುವಿನ ಹಾಲು, ಕರ್ಪೂರ, ಧೂಪದ್ರವ್ಯ, ದೀಪ, ಹತ್ತಿ, ಮಲಯಗಿರಿ, ಶ್ರೀಗಂಧ, ಶಿವ ಮತ್ತು ಪಾರ್ವತಿ ದೇವಿಯ ಮೇಕಪ್ ವಸ್ತುಗಳು ಇತ್ಯಾದಿ.

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಶಿವನು ಚತುರ್ದಶಿಯ ರಾತ್ರಿ ಪಾರ್ವತಿಯನ್ನು ಮದುವೆಯಾಗಿದ್ದಾನೆ. ಇದೇ ಕಾರಣಕ್ಕಾಗಿ ಮಾಸ ಶಿವರಾತ್ರಿಯ ರಾತ್ರಿ ಶಿವನಿಗೆ ಪೂಜೆ ಮಾಡುವುದು ಶುಭಕರ ಎಂದು ಹೇಳಲಾಗುತ್ತದೆ. ಮಾಸಿಕ ಶಿವರಾತ್ರಿಯ ಉಪವಾಸ ಮಾಡುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ಉಪವಾಸದ ವಿಶೇಷ ಪೂಜೆಯಿಂದ ಶಿವನು ಸಂತೋಷಗೊಳ್ಳುತ್ತಾನೆ ಎಂಬ ನಂಬಿಕೆ ಇಂದಿಗೂ ಹಲವರಲ್ಲಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.