Pushpa 2 the Rule: ದಾಖಲೆಯ 12 ಸಾವಿರ ಚಿತ್ರಮಂದಿರಗಳಲ್ಲಿ ‘ಪುಷ್ಪ 2’ ಬಿಡುಗಡೆ; ರಿಲೀಸ್‌ಗೂ ಮೊದಲೇ ಸಾವಿರ ಕೋಟಿಯ ಸರದಾರ
ಕನ್ನಡ ಸುದ್ದಿ  /  ಮನರಂಜನೆ  /  Pushpa 2 The Rule: ದಾಖಲೆಯ 12 ಸಾವಿರ ಚಿತ್ರಮಂದಿರಗಳಲ್ಲಿ ‘ಪುಷ್ಪ 2’ ಬಿಡುಗಡೆ; ರಿಲೀಸ್‌ಗೂ ಮೊದಲೇ ಸಾವಿರ ಕೋಟಿಯ ಸರದಾರ

Pushpa 2 the Rule: ದಾಖಲೆಯ 12 ಸಾವಿರ ಚಿತ್ರಮಂದಿರಗಳಲ್ಲಿ ‘ಪುಷ್ಪ 2’ ಬಿಡುಗಡೆ; ರಿಲೀಸ್‌ಗೂ ಮೊದಲೇ ಸಾವಿರ ಕೋಟಿಯ ಸರದಾರ

Pushpa 2 The Rule: ಇದುವರೆಗೂ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ದಾಖಲೆ ‘RRR’ ಹೆಸರಿನಲ್ಲಿದೆ. ಈ ಚಿತ್ರವು 10,200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು ಎಂದು ಹೇಳಲಾಗುತ್ತದೆ. ಈಗ ಆ ಚಿತ್ರದ ದಾಖಲೆಯನ್ನು ತೆಲುಗಿನ ಪುಷ್ಪ 2 ದಿ ರೂಲ್‌ ಸಿನಿಮಾ ಮುರಿದಿದೆ.

ರಿಲೀಸ್‌ಗೂ ಮೊದಲೇ ಸಾವಿರ ಕೋಟಿಯ ಸರದಾರನಾದ ಪುಷ್ಪ 2
ರಿಲೀಸ್‌ಗೂ ಮೊದಲೇ ಸಾವಿರ ಕೋಟಿಯ ಸರದಾರನಾದ ಪುಷ್ಪ 2

Pushpa 2 the Rule: ‘ಪುಷ್ಪ 2’ ಚಿತ್ರವು ಬಿಡುಡೆಗೂ ಮುನ್ನವೇ ಕೆಲವು ಹೆಗ್ಗಳಿಕೆಗಳಿಗೆ ಪಾತ್ರವಾಗಿದೆ. ಇದೀಗ ಇನ್ನೊಂದು ದೊಡ್ಡ ಮೈಲಿಗಲ್ಲು ಮುಟ್ಟಿದೆ. ಚಿತ್ರವು ಇದೇ ಮೊದಲ ಬಾರಿಗೆ ಜಗತ್ತಿನಾದ್ಯಂತ 12 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಡಿಸೆಂಬರ್‌ 5ರಂದು ಬಿಡುಗಡೆಯಾಗುತ್ತಿದೆ. ಈ ಕಾರಣಕ್ಕೆ ಪುಷ್ಪ 2 ಸಿನಿಮಾ ಸುದ್ದಿಯಲ್ಲಿದೆ. ಭಾರತೀಯ ಸಿನಿಮಾಗಳ ಪೈಕಿ ಬೇರಾವ ಸಿನಿಮಾ ಸಹ ಇಷ್ಟೊಂದು ಚಿತ್ರಮಂದಿರಗಳನ್ನು ಪಡೆದ ಉದಾಹರಣೆ ಈ ವರೆಗೂ ಇಲ್ಲ!

ಭಾರತೀಯ ಚಿತ್ರಗಳು ಜಗತ್ತಿನಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ, ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುವುದು ಹೊಸ ವಿಷಯವೇನಲ್ಲ. ಇದಕ್ಕೂ ಮೊದಲು ಶಾರೂಖ್‍ ಖಾನ್‍ ಅಭಿನಯದ ‘ಪಠಾಣ್‍’ 8000 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಭಾರತದಲ್ಲೇ 5000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿತ್ತು. ‘ಜವಾನ್‍’ ಚಿತ್ರವನ್ನು ಆ ದಾಖಲೆಯನ್ನು ಮುರಿದಿತ್ತು. ಚಿತ್ರವು ಜಗತ್ತಿನಾದ್ಯಂತ 10 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಆದರೆ, ಇದುವರೆಗೂ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ದಾಖಲೆ ‘RRR’ ಹೆಸರಿನಲ್ಲಿದೆ. ಈ ಚಿತ್ರವು 10,200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು ಎಂದು ಹೇಳಲಾಗುತ್ತದೆ. ಈಗ ಆ ದಾಖಲೆಯನ್ನು ತೆಲುಗಿನ ‘ಪುಷ್ಪ 2’ ಚಿತ್ರವು ಮುರಿಯುತ್ತಿದೆ. ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಸೇರಿದಂತೆ ಆರು ಭಾಷೆಗಳಲ್ಲಿ 12 ಸಾವಿರ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.

ಬಿಡುಗಡೆಗೂ ಮೊದಲೇ ಸಾವಿರ ಕೋಟಿ ಸರದಾರ

ಇನ್ನು, ಗಳಿಕೆ ವಿಚಾರದಲ್ಲಿ ‘ಪುಷ್ಪ 2’ ಚಿತ್ರವು ಬಿಡುಗಡೆಗೂ ಮೊದಲೇ 1000 ಕೋಟಿ ಕ್ಲಬ್‍ ಸೇರಿದೆ. ಚಿತ್ರದ ವಿತರಣೆ, ಡಿಜಿಟಲ್‍, ಸ್ಯಾಟಿಲೈಟ್‍ ಹಕ್ಕುಗಳಿಂದ 1000 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗಿದೆ. ಈ ಪೈಕಿ ವಿತರಣೆ ಹಕ್ಕುಗಳಿಂದ ಚಿತ್ರಕ್ಕೆ 640 ಕೋಟಿ ರೂ. ಬಂದರೆ, ಬೇರೆ ಹಕ್ಕುಗಳಿಂದ 425 ಕೋಟಿ ರೂ. ಗಳಿಕೆ ಎಂದು ಹೇಳಲಾಗುತ್ತಿದೆ. ಈ ಪೈಕಿ, ಚಿತ್ರದ ಡಿಜಿಟಲ್‍ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ 275 ಕೋಟಿ ರೂ.ಗಳಿಗೆ ಪಡೆದರೆ, ಸ್ಯಾಟಲೈಟ್‍ ಹಕ್ಕುಗಳು 85 ಕೋಟಿ ರೂ.ಗಳಿಗೆ ಮಾರಾಟವಾಗಿದೆಯಂತೆ. ಸಂಗೀತದ ಹಕ್ಕುಗಳು ದಾಖಲೆಯ 65 ಕೋಟಿ ರೂ.ಗಳಿಗೆ ಮಾರಾಟವಾಗಿದೆ ಎಂಬ ಸುದ್ದಿ ಇದೆ. ಇವೆಲ್ಲವನ್ನೂ ಒಟ್ಟುಗೂಡಿಸಿದರೆ, ಚಿತ್ರ ಬಿಡುಗಡೆಗೂ ಮೊದಲೇ 1000 ಕೋಟಿ ರೂ. ಕ್ಲಬ್‍ಗೆ ಸೇರ್ಪಡೆಯಾಗಿದೆ.

ದಿ ರೈಸ್‌ನ ಮುಂದುವರಿದ ಭಾಗ ದಿ ರೂಲ್

‘ಪುಷ್ಪ – ದಿ ರೂಲ್‍’ ಚಿತ್ರವನ್ನು ತೆಲುಗಿನ ಜನಪ್ರಿಯ ಚಿತ್ರ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಸುಕುಮಾರ್. ಈ ಚಿತ್ರವು ‘ಪುಷ್ಪ – ದಿ ರೈಸ್‍’ನ ಮುಂದುವರೆದ ಭಾಗವಾಗಿದ್ದು, ಪುಷ್ಪರಾಜ್‍ ಎಂಬ ಗ್ಯಾಂಗ್‍ಸ್ಟರ್‍ ಪಾತ್ರದಲ್ಲಿ ಅಲ್ಲು ಅರ್ಜುನ್‍ ನಟಿಸಿದ್ದಾರೆ. ಜೊತೆಗೆ ರಶ್ಮಿಕಾ ಮಂದಣ್ಣ, ಧನಂಜಯ್‍, ಫಹಾದ್‍ ಫಾಸಿಲ್‍, ಸುನೀಲ್, ಅನುಸೂಯ ಭಾರದ್ವಾಜ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

3 ಗಂಟೆ 20 ನಿಮಿಷದ ಸಿನಿಮಾ

‘ಪುಷ್ಪ 2’ ಚಿತ್ರದ ತೆಲುಗು ಅವತರಣಿಕೆಯು ಗುರುವಾರ ಸೆನ್ಸಾರ್ ಆಗಿದ್ದು, ಚಿತ್ರವು ಮೂರು ತಾಸು 20ನಿಮಿಷ ಮತ್ತು 38 ಸಕೆಂಡ್‍ಗಳ (200.38 ನಿಮಿಷ) ಅವಧಿಯದ್ದಾಗಿದೆ ಎಂದು ಹೇಳಲಾಗಿದೆ. ಚಿತ್ರದ ಅವಧಿಯು ಮೂರು ತಾಸಿಗಳಿಗೂ ಹೆಚ್ಚು ಇರಲಿದೆ ಎಂಬ ಸುದ್ದಿ ಮೊದಲೇ ಕೇಳಿಬಂದಿತ್ತು. ಅದೀಗ ನಿಜವಾಗಿದೆ. 2021ರಲ್ಲಿ ಬಿಡುಗಡೆಯಾದ ‘ಪುಷ್ಪ 1’ ಚಿತ್ರವು 179 ನಿಮಿಷಗಳ ಅವಧಿಯದ್ದಾಗಿತ್ತು. ಅದಕ್ಕೆ ಹೋಲಿಸಿದರೆ, ಈಗ ಎರಡನೆಯ ಭಾಗವು 21 ನಿಮಿಷಗಳನ್ನು ದೊಡ್ಡದಾಗಿದೆ ಎಂಬ ಮಾಹಿತಿ ಇದೆ.

Whats_app_banner