Brain Teaser: ಪಾಂಡಗಳ ರಾಶಿಯ ನಡುವೆ ನಾಯಿಯೊಂದು ಅವಿತಿದೆ, ಅದು ಎಲ್ಲಿದೆ? 10 ಸೆಕೆಂಡ್ ಒಳಗೆ ಹುಡುಕಿ, ನಿಮ್ಮ ಕಣ್ಣಿಗೊಂದು ಸವಾಲ್
ಶನಿವಾರದ ಹೊತ್ತು ಖಾಲಿ ಕೂತು ಬೇಸರ ಆಗಿದ್ರೆ ಮೆದುಳು, ಕಣ್ಣಿಗೆ ಸ್ವಲ್ಪ ಕೆಲಸ ಕೊಡಿ. ಈ ಬ್ರೈನ್ ಟೀಸರ್ ಗಮನಿಸಿ. ಇದರಲ್ಲಿ ನಿಮಗೆ ಪಾಂಡಗಳ ರಾಶಿಯೇ ಕಾಣಿಸಬಹುದು. ಇದರ ನಡುವೆ ಅಡಗಿರುವ ನಾಯಿಯನ್ನು ನೀವು ಹುಡುಕಬೇಕು. ನಿಮಗಿರೋದು 10 ಸೆಕೆಂಡ್ ಸಮಯ ಮಾತ್ರ. ನಿಮ್ಮ ಸಮಯ ಈಗ ಶುರು.
ಬ್ರೈನ್ ಟೀಸರ್ ಎಂದರೆ ಮೆದುಳಿಗಷ್ಟೇ ಅಲ್ಲ, ಕಣ್ಣಿಗೂ ಸವಾಲು ಹಾಕುವಂತಹ ಚಿತ್ರಗಳು. ಇದರಲ್ಲಿ ಗಣಿತ ಸೂತ್ರ, ವ್ಯತ್ಯಾಸ ಗುರುತಿಸುವುದು, ಲಾಜಿಕಲ್ ಥಿಂಕಿಂಗ್ ಪ್ರಶ್ನೆಗಳಂತಹ ಹಲವು ವಿಭಿನ್ನ ಸವಾಲುಗಳಿರುತ್ತವೆ. ಜೊತೆಗೆ ಇದಕ್ಕೆ ನೀವು ನಿರ್ದಿಷ್ಟ ಸಮಯದ ಒಳಗೆ ಉತ್ತರ ಹೇಳಬೇಕು. ಇದು ನಿಮ್ಮ ಐಕ್ಯೂ ಪರೀಕ್ಷೆ ಮಾಡುವ ಚಿತ್ರವೂ ಹೌದು.
ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡುವುದರಿಂದ ನಮ್ಮ ಮೆದುಳು ಚುರುಕಾಗುತ್ತದೆ. ಇದರಿಂದ ನಮ್ಮಲ್ಲಿ ಯೋಚನಾಶಕ್ತಿ ವೃದ್ಧಿಯಾಗುತ್ತದೆ. ನಮ್ಮಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಬ್ರೈನ್ ಟೀಸರ್‌ಗಳು ಮನಸ್ಸಿಗೆ ಖುಷಿ ಕೊಡುತ್ತವೆ. ಇದು ನಮ್ಮ ಒತ್ತಡ ದೂರ ಮಾಡುವ ತಂತ್ರವೂ ಹೌದು. ಯಾಕೆಂದರೆ ಈ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವಾಗ ನಾವು ಬೇರೆನೂ ಯೋಚಿಸಿದೇ ಅದರ ಬಗ್ಗೆ ಯೋಚಿಸುತ್ತೇವೆ. ಈ ಪ್ರಶ್ನೆಗಳು ಮೆದುಳಿಗೆ ಹುಳ ಬಿಡುವಂತಿರುವ ಕಾರಣ ಉತ್ತರ ಕಂಡುಕೊಳ್ಳುವವರೆಗೆ ಬಿಡಲು ಸಾಧ್ಯವಾಗುವುದಿಲ್ಲ.
ಇಂದಿನ ಬ್ರೈನ್ ಟೀಸರ್‌ನಲ್ಲಿ ನಾಯಿ ಹುಡುಕುವುದು ನಿಮಗಿರುವ ಕೆಲಸ. ಅಂದರೆ ಈ ಚಿತ್ರದಲ್ಲಿ ನಿಮಗೆ ನೂರಾರು ಪಾಂಡಗಳು ಕಾಣಿಸಬಹುದು. ಎಲ್ಲವೂ ಒಂದಕ್ಕಿಂತ ಒಂದು ಮುದ್ದಾಗಿರುವ ಪಾಂಡಗಳಾಗಿವೆ. ಇವುಗಳ ನಡುವೆ ಒಂದು ನಾಯಿ ಅವಿತಿದೆ. ಆ ನಾಯಿ ಎಲ್ಲಿದೆ ಎಂದು ನೀವು 10 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ಇದು ನಿಮ್ಮಿಂದ ಸಾಧ್ಯವಾಯ್ತು ಎಂದರೆ ಖಂಡಿತ ನಿಮ್ಮ ಐಕ್ಯೂ ಲೆವೆಲ್ ಹೈ ಇದೆ ಎಂದರ್ಥ. ಯಾಕೆಂದರೆ ಈ ಚಿತ್ರದಲ್ಲಿ ನಾಯಿಯನ್ನು ಹುಡುಕುವುದು ಖಂಡಿತ ಸುಲಭದ ಮಾತಲ್ಲ. ಯಾಕೆಂದರೆ ಈ ನಾಯಿ ಕೂಡ ಪಾಂಡದಂತೆ ಕಪ್ಪು ಬಿಳುಪು ಬಣ್ಣವನ್ನು ಹೊಂದಿದೆ.
ಚಿತ್ರವನ್ನು ಸರಿಯಾಗಿ ಗಮನಿಸಿ, ಎಡದಿಂದ, ಬಲದಿಂದ, ಉದ್ದದಿಂದ, ಅಡ್ಡದಿಂದ ಮದ್ಯದಲ್ಲಿ ಎಲ್ಲಾ ಕಡೆ ಗಮನಿಸಿ. ಇದರಲ್ಲಿ ನಾಯಿ ಖಂಡಿತ ಇದೆ. ಅದು ಕಣ್ಣಿಗೆ ಕಾಣುತ್ತಿಲ್ಲ ಅಷ್ಟೇ.
ಈ ಚಿತ್ರದಲ್ಲಿ ನಾಯಿ ಎಲ್ಲಿದೆ ಎಂದು ನಿಮಗೆ ಗುರುತಿಸಲು ಸಾಧ್ಯವಾದರೇ ಈ ಬ್ರೈನ್ ಟೀಸರ್ ಅನ್ನು ನಿಮ್ಮ ಆತ್ಮೀಯರು, ಸ್ನೇಹಿತರಿಗೂ ಶೇರ್ ಮಾಡಿ. ಅವರಿಗೂ ಬ್ರೈನ್ ಟೀಸರ್‌ನಲ್ಲಿ ನಾಯಿ ಹುಡುಕುವ ಚಾಲೆಂಜ್ ನೀಡಿ. ಅವರಿಂದ ನಾಯಿಯನ್ನು ಹುಡುಕಲು ಸಾಧ್ಯವಾಗುತ್ತದಾ, ಅದರಲ್ಲೂ ನೀವು ನೀಡಿದ ಸಮಯದೊಳಗೆ ಹುಡುಕುತ್ತಾರಾ ಗಮನಿಸಿ.
ಈ ಬ್ರೈನ್ ಟೀಸರ್ ಅನ್ನೂ ಓದಿ
Brain Teaser: ಈ ಇಬ್ಬರಲ್ಲಿ ಬಡವ ಯಾರು? ನಿಮ್ಮ ಗಮನಶಕ್ತಿ ಅದ್ಭುತವಾಗಿದೆ ಅಂದ್ರೆ 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ನಿಮ್ಮ ಗಮನಶಕ್ತಿ ಸೂಪರ್ ಆಗಿದೆ ಎಂದು ನಿಮಗೆ ಅನ್ನಿಸುತ್ತಾ, ಹಾಗಾದರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಇಲ್ಲಿರುವ ಒಬ್ಬರು ವ್ಯಕ್ತಿಗಳಲ್ಲಿ ಯಾರು ಬಡವರು ಎಂದು ನೀವು ಕಂಡುಹಿಡಿಯಬೇಕು. ಇದು ನಿಮಗಿರುವ ಚಾಲೆಂಜ್. ನಿಮ್ಮ ಐಕ್ಯೂ ಲೆವೆಲ್ ಎಷ್ಟಿದೆ ಪರೀಕ್ಷೆ ಮಾಡೋಣ.