20 ಕೋಟಿ ಬಹುಮಾನಕ್ಕೆ 200 ಕೋಟಿ ಖರ್ಚು ಮಾಡುವುದೇಕೆ ಐಪಿಎಲ್ ಫ್ರಾಂಚೈಸಿಗಳು? ಫ್ರೈಜ್ ಮನಿ ಒಂದು ಮೀನಷ್ಟೆ, ಆದಾಯ ತಿಮಿಂಗಿಲದಷ್ಟು!
ಕನ್ನಡ ಸುದ್ದಿ  /  ಕ್ರಿಕೆಟ್  /  20 ಕೋಟಿ ಬಹುಮಾನಕ್ಕೆ 200 ಕೋಟಿ ಖರ್ಚು ಮಾಡುವುದೇಕೆ ಐಪಿಎಲ್ ಫ್ರಾಂಚೈಸಿಗಳು? ಫ್ರೈಜ್ ಮನಿ ಒಂದು ಮೀನಷ್ಟೆ, ಆದಾಯ ತಿಮಿಂಗಿಲದಷ್ಟು!

20 ಕೋಟಿ ಬಹುಮಾನಕ್ಕೆ 200 ಕೋಟಿ ಖರ್ಚು ಮಾಡುವುದೇಕೆ ಐಪಿಎಲ್ ಫ್ರಾಂಚೈಸಿಗಳು? ಫ್ರೈಜ್ ಮನಿ ಒಂದು ಮೀನಷ್ಟೆ, ಆದಾಯ ತಿಮಿಂಗಿಲದಷ್ಟು!

How IPL Teams Owners Earn Money: ಐಪಿಎಲ್ ಟೂರ್ನಿಯಲ್ಲಿ 20 ಕೋಟಿ ಬಹುಮಾನಕ್ಕಾಗಿ ಪ್ರತಿ ಫ್ರಾಂಚೈಸಿಯು ಆಟಗಾರರ ಖರೀದಿಗೆ ಮತ್ತು ತಂಡದ ನಿರ್ವಹಣೆಗೆ ಬರೋಬ್ಬರಿ 200 ಕೋಟಿಗೂ ಹೆಚ್ಚು ಖರ್ಚು ಮಾಡುವುದೇಕೆ? ಇಲ್ಲಿದೆ ಉತ್ತರ.

20 ಕೋಟಿ ಬಹುಮಾನಕ್ಕೆ 200 ಕೋಟಿ ಖರ್ಚು ಮಾಡುವುದೇಕೆ ಐಪಿಎಲ್ ಫ್ರಾಂಚೈಸಿಗಳು? ಫ್ರೈಜ್ ಮನಿ ಒಂದು ಮೀನಷ್ಟೆ, ಆದಾಯ ತಿಮಿಂಗಿಲದಷ್ಟು!
20 ಕೋಟಿ ಬಹುಮಾನಕ್ಕೆ 200 ಕೋಟಿ ಖರ್ಚು ಮಾಡುವುದೇಕೆ ಐಪಿಎಲ್ ಫ್ರಾಂಚೈಸಿಗಳು? ಫ್ರೈಜ್ ಮನಿ ಒಂದು ಮೀನಷ್ಟೆ, ಆದಾಯ ತಿಮಿಂಗಿಲದಷ್ಟು!

ನಗದು ಸಮೃದ್ಧ ಲೀಗ್ ಐಪಿಎಲ್ (IPL) ಕಳೆದ 17 ವರ್ಷಗಳಿಂದ ಕ್ರಿಕೆಟ್​ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಲೀಗ್​ ಆಗಿ ಹೊರಹೊಮ್ಮಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಸೃಷ್ಟಿಸಿರುವ ಇಣಡಿಯನ್ ಪ್ರೀಮಿಯರ್ ಲೀಗ್ ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದೆ. ಎರಡು ತಿಂಗಳ ಕಾಲ ಜರುಗುವ ಮಿಲಿಯನ್ ಡಾಲರ್ ಟೂರ್ನಿಯ ಜನಪ್ರಿಯತೆ, ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ನಡೆದ ಮೆಗಾ ಹರಾಜು ಬಳಿಕ 18ನೇ ಆವೃತ್ತಿಯ ಐಪಿಎಲ್​ ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್​​ ಪಂದ್ಯಗಳಿಗೂ ಇರದ ಕ್ರೇಜ್​ ಅನ್ನು ಸಂಪಾದಿಸಿದೆ. ಆದರೆ ಈ ಟೂರ್ನಿಯಲ್ಲಿ 20 ಕೋಟಿ ಬಹುಮಾನಕ್ಕಾಗಿ ಪ್ರತಿ ಫ್ರಾಂಚೈಸಿಯು ಆಟಗಾರರ ಖರೀದಿಗೆ ಮತ್ತು ತಂಡದ ನಿರ್ವಹಣೆಗೆ ಬರೋಬ್ಬರಿ 200 ಕೋಟಿಗೂ ಹೆಚ್ಚು ಖರ್ಚು ಮಾಡುವುದೇಕೆ? ಪ್ರತಿ ತಂಡಕ್ಕೆ ಬರುವ ನಿಜವಾದ ಆದಾಯ ಎಷ್ಟು? ಇಲ್ಲಿದೆ ವಿವರ.

ಐಪಿಎಲ್​ನಿಂದಾಗಿ ದೇಶೀಯ ಕ್ರಿಕೆಟಿಗರು ಬೆಳಕಿಗೆ ಬರುತ್ತಿದ್ದಾರೆ. ಹಾಗಯೇ ಭಾರತ ತಂಡಕ್ಕೂ ಪದಾರ್ಪಣೆ ಮಾಡುತ್ತಿದ್ದಾರೆ. ಆದರೆ, ಜಗತ್ತಿನ ಅತಿದೊಡ್ಡ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್​ನಲ್ಲಿ ಅವಕಾಶ ನಿಜಕ್ಕೂ ಸುಲಭವಲ್ಲ. ಐಪಿಎಲ್​ನಲ್ಲಿ ಆಡಬೇಕೆಂದರೆ ದೇಶೀಯ ಕ್ರಿಕೆಟ್​ನಲ್ಲಿ ಅಬ್ಬರಿಸಿರಬೇಕು. ಇದೆಲ್ಲದರ ಹೊರತಾಗಿ ಬಿಸಿಸಿಐ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿರುವ ಐಪಿಎಲ್​ನಲ್ಲಿ ತಂಡ ನಿರ್ವಹಣೆ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ. ಒಂದು ಸೀಸನ್​ಗೆ 200 ಕೋಟಿಗೂ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಆಟಗಾರರ ಖರೀದಿ ಸೇರಿದಂತೆ ಅವರ ವಸತಿ, ಊಟ, ಫ್ಲೈಟ್... ಹೀಗೆ ಎಲ್ಲವನ್ನೂ ಫ್ರಾಂಚೈಸಿಗಳೇ ನೋಡಿಕೊಳ್ಳಲಿವೆ. ಇಷ್ಟು ಕೋಟಿಗಳು ಖರ್ಚು ಮಾಡುವ ಫ್ರಾಂಚೈಸಿಗಳು ಕೇವಲ 20ಕೋಟಿ ಬಹುಮಾನ ಮೊತ್ತಕ್ಕೆ ಆಸೆ ಪಡುತ್ತವೆಯೇ? ಚಾಂಪಿಯನ್ ತಂಡಕ್ಕೆ 20 ಕೋಟಿ, ರನ್ನರ್​ ಅಪ್ 13 ಕೋಟಿ, 3 ಮತ್ತು 4ನೇ ಸ್ಥಾನ ಪಡೆದ ತಂಡಗಳಿಗೆ ತಲಾ 6.5 ಕೋಟಿ ಬಹುಮಾನ ಸಿಗಲಿದೆ.

ಆದರೆ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ಅವರೇ ಬಹುಮಾನ ಮೊತ್ತ 20 ಕೋಟಿಗಿಂತ ಹೆಚ್ಚು ಮೊತ್ತ ಪಡೆದಿದ್ದಾರೆ ಎಂಬುದು ಅಚ್ಚರಿಯೂ ಹೌದು. ಅವರ ವೇತನವೇ 27 ಕೋಟಿ. ಹೀಗಿದ್ದಾಗ 200 ಕೋಟಿಗೂ ಅಧಿಕ ಮೊತ್ತವನ್ನು ಖರ್ಚು ಮಾಡುವ 10 ಫ್ರಾಂಚೈಸಿಗಳು 20 ಕೋಟಿಗೇಕೆ ಆಸೆ ಪಡುತ್ತಿವೆ ಎಂಬುದು ಎಲ್ಲರ ಪ್ರಶ್ನೆ. ಅಚ್ಚರಿ ಏನೆಂದರೆ ಐಪಿಎಲ್ ಪ್ರೈಜ್ ಮನಿ ಸಣ್ಣ ಮೀನಿಗೆ ಸಮ. ಆದರೆ ಫ್ರಾಂಚೈಸಿ ಮಾಲೀಕರಿಗೆ ಐಪಿಎಲ್​ನಿಂದ ಸಿಗುವ ಲಾಭ ತಿಮಿಂಗಲದಷ್ಟು! ಆರ್​ಸಿಬಿ, ಸಿಎಸ್​ಕೆ, ಮುಂಬೈ, ಎಸ್​ಆರ್​ಹೆಚ್​, ಡೆಲ್ಲಿ, ಕೆಕೆರ್​, ಪಂಜಾಬ್ ಸೇರಿದಂತೆ ಎಲ್ಲಾ 10 ತಂಡಗಳು ಹೇಗೆಲ್ಲಾ ಆದಾಯ ಪಡೆಯುತ್ತಾರೆ, ಒಂದು ಸೀಸನ್​ನಲ್ಲಿ ಎಷ್ಟೆಲ್ಲಾ ಆದಾಯ ಸಂಪಾದಿಸುತ್ತಾರೆ ಎನ್ನುವುದರ ವಿವರ ಈ ಮುಂದಿನಂತಿದೆ.

ಟೈಟಲ್​ ಸ್ಪಾನ್ಶರ್​ಶಿಪ್​

ಐಪಿಎಲ್​ ತಂಡಗಳಿಗೆ ಬರುವ ಆದಾಯದ ಮೂಲಗಳು ಹಲವು. ಈ ಪೈಕಿ ಟೈಟಲ್ ಸ್ಪಾನ್ಶರ್​ಶಿಪ್ ಒಂದು. ಐಪಿಎಲ್ ಲೋಗೋ ಮೇಲೆ ಟಾಟಾ ಎಂಬುದನ್ನು ನೀವು ನೋಡಿರುತ್ತೀರಿ. ಇದನ್ನೇ ಟೈಟಲ್ ಅಥವಾ ಶೀರ್ಷಿಕೆ ಪ್ರಾಯೋಜಕತ್ವ ಎನ್ನಲಾಗುತ್ತದೆ. ಟಾಟಾ ಕಂಪನಿ ಪ್ರತಿ ವರ್ಷದ ಟೈಟಲ್ ಸ್ಪಾನ್ಶರ್​​ಶಿಪ್​ಗೆ ಬಿಸಿಸಿಐ 330 ಕೋಟಿ ರೂಪಾಯಿ ಪಾವತಿಸುತ್ತದೆ. ಈ ಮೊತ್ತದಲ್ಲಿ ಶೇ 50ರಷ್ಟು ಬಿಸಿಸಿಐಗೆ, ಉಳಿದ ಶೇ 50ರಷ್ಟು ಉಳಿದ ಎಲ್ಲಾ ತಂಡಗಳಿಗೆ ಹಂಚಿಕೆ ಮಾಡಲಾಗುತ್ತದೆ. ಇದು ಆದಾಯದ ಮೊದಲ ಭಾಗ.

ಮ್ಯಾಚ್​ ಸ್ಪಾನ್ಶರ್​ಶಿಪ್​

ನೀವು ಪಂದ್ಯದ ವೇಳೆ ವಿವಿಧ ಉತ್ಪನ್ನಗಳ ಜಾಹೀರಾತುಗಳನ್ನು ನೋಡಿರುತ್ತೀರಿ. ಅದರಲ್ಲೂ ಮುಖ್ಯವಾಗಿ ಪಂದ್ಯಶ್ರೇಷ್ಠ ನೀಡುವ ವೇಳೆ ಗಮನಿಸಿರುತ್ತೀರಿ. ರೂಪೆ, ಪೆಟಿಎಂ, ಅಪ್​ಸ್ಟಾಕ್ಸ್​, ಅರಾಮ್ಕೋ, ಡ್ರೀಮ್ 11, ಟಾಟಾ ನ್ಯೂ, ಸಿಯಟ್ ಟೈಯರ್, ಕ್ರೆಡ್ ಪವರ್ ಸೇರಿ ಹಲವು ಪ್ರಾಯೋಜಕತ್ವ ಇರಲಿದೆ. ಪ್ರತಿಯೊಂದು ಜಾಹೀರಾತುದಾರರು, ಕನಿಷ್ಠ 25 ಕೋಟಿ ರೂಪಾಯಿ ನೀಡಲಿದ್ದಾರೆ. ಇದರಲ್ಲಿ ಶೇ 50 ರಷ್ಟು ಬಿಸಿಸಿಐಗೆ, ಉಳಿದದ್ದು ತಂಡಗಳ ಮಾಲೀಕರಿಗೆ.

ಪ್ರಸಾರದ ಹಕ್ಕು

ಐಪಿಎಲ್​ ಪ್ರಸಾರದ ಹಕ್ಕುಗಳನ್ನು ಪಡೆಯಲು ಟಿವಿ ಚಾನೆಲ್​​ಗಳು ಕೋಟಿ ಕೋಟಿ ಸುರಿಯುತ್ತವೆ. ಎಷ್ಟು ಕೋಟಿಯಾದರೂ ನೀಡಲು ಹಲವು ಚಾನೆಲ್​​ಗಳು ಸಿದ್ಧವಾಗಿವೆ. 2008 ರಿಂದ 2017ರ ತನಕ ಸೋನಿ ನೆಟ್‌ವರ್ಕ್ ಪ್ರಸಾರದ ಹಕ್ಕು ಪಡೆದಿತ್ತು. ವರ್ಷಕ್ಕೆ 820 ಕೋಟಿಯನ್ನು ಬಿಸಿಸಿಐಗೆ ಪಾವತಿಸುತ್ತಿತ್ತು. 2018ರಿಂದ 2022ರ ತನಕ 16,400 ಕೋಟಿಗೆ ಪ್ರಸಾರದ ಹಕ್ಕುಗಳನ್ನು ಸ್ಟಾರ್​ಸ್ಪೋರ್ಟ್ಸ್ ಖರೀದಿಸಿತ್ತು. ಆ ಬಳಿಕ 5 ವರ್ಷಗಳ ಅವಧಿಗೆ (2023 ರಿಂದ 2027) ಐಪಿಎಲ್ ಮಾಧ್ಯಮ ಹಕ್ಕು 48,390 ಕೋಟಿ ರೂ.ಗೆ ಮಾರಾಟವಾಗಿದೆ. ಜಿಯೋ ಸಿನಿಮಾ, ಡಿಸ್ನಿ + ಹಾಟ್​ಸ್ಟಾರ್​ ಕಂಪನಿ, ವಯೋಕಾಮ್-18 ಪ್ರಸಾರದ ಹಕ್ಕು ಪಡೆದಿವೆ. ಈ ಮೊತ್ತದಲ್ಲೂ 50-50 ಅನುಪಾತದಲ್ಲಿ ಹಂಚಿಕೆಯಾಗಲಿದೆ. ಆದರೆ ಚಾನೆಲ್​​ಗಳು 10 ಸೆಕೆಂಡ್​​ಗಳ ಜಾಹೀರಾತು ಸ್ಲಾಟ್​ಗೆ 15 ರಿಂದ 20 ಲಕ್ಷ ಚಾರ್ಚ್​ ಮಾಡುತ್ತವೆ. ಆ ಮೂಲಕ ಚಾನಲ್ಸ್​ ಆದಾಯ ಗಳಿಸುತ್ತವೆ.

ತಂಡದ ಜಾಹೀರಾತು

ತಂಡದ ಮಾಲೀಕರಿಗೆ ಆದಾಯದ ಮತ್ತೊಂದು ಮಾರ್ಗ ಏನೆಂದರೆ, ಜೆರ್ಸಿ ಪ್ರಾಯೋಜಕತ್ವ. ಆಯಾ ತಂಡಗಳ ಮಾಲೀಕರು ತಂಡದ ಜೆರ್ಸಿಯಲ್ಲಿ ವಿವಿಧ ಜಾಹೀರಾತು ಕಂಪನಿಗಳ ಲೋಗೋಗಳು ಇರುತ್ತವೆ. ಮುಂಭಾಗ ಜಾಹೀರಾತು ಪ್ರಕಟಿಸಲು 30 ಕೋಟಿ, ಹಿಂಭಾಗ ಪ್ರಕಟಿಸಲು 15 ಕೋಟಿ ಚಾರ್ಚ್ ಮಾಡಲಾಗುತ್ತದೆ. ಈ ಬಾರಿ ಹೆಚ್ಚಾದರೂ ಅಚ್ಚರಿ ಇಲ್ಲ.

ಟಿಕೆಟ್​ ಮಾರಾಟದಲ್ಲಿ ಶೇ 80ರಷ್ಟು

ಐಪಿಎಲ್ ಪಂದ್ಯದ ಟಿಕೆಟ್​ಗಳ ಮಾರಾಟದಲ್ಲೂ ಮಾಲೀಕರಿಗೆ ಶೇರು ಬರಲಿದೆ. ಆಯಾ ತಂಡಗಳ ತವರು ಮೈದಾನಗಳಲ್ಲಿ ನಡೆಯುವ ಪಂದ್ಯಗಳ ಟಿಕೆಟ್ ಬೆಲೆಯಲ್ಲಿ ಶೇ 80ರಷ್ಟು ಮೊದಲ ಆಯಾ ತಂಡದ ಮಾಲೀಕರಿಗೆ ಸಿಗಲಿದೆ. ಶೇ 20ರಷ್ಟು ರಾಜ್ಯ ಕ್ರಿಕೆಟ್ ಮಂಡಳಿಗೆ ಸಿಗಲಿದೆ.

ತಮ್ಮ ಆ್ಯಪ್​ನಲ್ಲಿ ಸರುಕು ಮಾರಾಟ

ಫ್ರಾಂಚೈಸಿಗಳ ಮಾಲೀಕರು ತಮ್ಮ ತಂಡಗಳ ಸರುಕುಗಳನ್ನು ಮಾರಾಟ ಮಾಡುವ ಮೂಲಕ ದೊಡ್ಡ ಮೊತ್ತದಲ್ಲಿ ಆದಾಯ ಗಳಿಸುತ್ತಾರೆ. ತಮ್ಮ ತಂಡದ ಜೆರ್ಸಿ, ಲೋಗೋಗಳು, ಕ್ಯಾಪ್ ಸೇರಿದಂತೆ ಹಲವು ಸರುಕುಗಳನ್ನು ಮಾರಾಟ ಮಾಡುವ ಮೂಲಕ ಮಾಲೀಕರು ಉತ್ತಮ ಆದಾಯ ಗಳಿಸುತ್ತಾರೆ.

ಬಹುಮಾನದ ಮೊತ್ತದಲ್ಲೂ ಆದಾಯ

ಇದೆಲ್ಲದರ ಜೊತೆಗೆ ಬಹುಮಾನ ರೂಪದಲ್ಲೂ ಆದಾಯ ಗಳಿಸುತ್ತಾರೆ. ಆದರೆ ಬಹುಮಾನ ಪಡೆಯುವ ಹಣದಲ್ಲಿ ಅರ್ಧದಷ್ಟು ಮೊತ್ತ ಮಾಲೀಕರ ಖಾತೆಗೆ ಹೋಗುತ್ತದೆ. ಉಳಿದ ಮೊತ್ತದಲ್ಲಿ ಆಟಗಾರರು ಮತ್ತು ಕೋಚ್​ಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ. ಏನಿಲ್ಲವೆಂದರೂ ಒಂದು ಫ್ರಾಂಚೈಸಿಯು 500 ಕೋಟಿಗಿಂತ ಹೆಚ್ಚು ಆದಾಯ ಗಳಿಸುತ್ತವೆ. ಆರ್​ಸಿಬಿ, ಸಿಎಸ್​ಕೆ, ಮುಂಬೈ ತಂಡಗಳು 700 ಕೋಟಿಗೂ ಹೆಚ್ಚು ಸಂಪಾದಿಸುತ್ತವೆ.

Whats_app_banner