ದೀಪಾವಳಿ ಹಬ್ಬಕ್ಕೆ ಹಣತೆ ಬೆಳಗ್ತೀರಾ; ಶಾಸ್ತ್ರದ ಪ್ರಕಾರ ದೀಪಕ್ಕೆ ಯಾವ ಎಣ್ಣೆ ಬಳಸುವುದು ಉತ್ತಮ ನೋಡಿ
ದೀಪಾವಳಿ ಬೆಳಕಿನ ಹಬ್ಬ. ಈ ಹಬ್ಬದಲ್ಲಿ ದೀಪ ಬೆಳಗುವ ಮೂಲಕ ಕತ್ತಲೆಯನ್ನ ದೂರ ಮಾಡಲಾಗುತ್ತದೆ. ದೀಪಾವಳಿಯಲ್ಲಿ ಬಹುತೇಕರು ಹಣತೆ ಬೆಳಗುತ್ತಾರೆ. ಹಣತೆಗೆ ಎಣ್ಣೆ ಹಾಕಿ ಬತ್ತಿ ಇಟ್ಟು ದೀಪ ಬೆಳಗುವುದು ವಾಡಿಕೆ. ಆದರೆ ಶಾಸ್ತ್ರದ ಪ್ರಕಾರ ದೀಪ ಬೆಳಗಲು ಎಲ್ಲಾ ಎಣ್ಣೆಗಳು ಸೂಕ್ತವಾಗುವುದಿಲ್ಲ. ಹಾಗಾದರೆ ದೀಪಕ್ಕೆ ಯಾವ ಎಣ್ಣೆ ಬಳಸಿದರೆ ಉತ್ತಮ ಎಂಬ ವಿವರ ಇಲ್ಲಿದೆ ನೋಡಿ.
ಭಾರತದಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ದೀಪಾವಳಿ ಹೆಸರೇ ಹೇಳುವಂತೆ ಇದು ದೀಪಗಳ ಹಬ್ಬ. ಈ ಹಬ್ಬದಂದು ಸಾಲು ಸಾಲು ದೀಪ ಬೆಳಗುವ ಮೂಲಕ ಮನೆಯನ್ನು ಸಿಂಗರಿಸಲಾಗುತ್ತದೆ. ಶ್ರೀರಾಮನ ವನವಾಸ ಮುಗಿಸಿ ಅಯೋಧ್ಯೆಗೆ ಹಿಂದಿರುಗಿದ ದಿನ ಅಯೋಧ್ಯೆ ವಾಸಿಗಳು ದೀಪ ಬೆಳಗುವ ಮೂಲಕ ರಾಮವನ್ನು ಸ್ವಾಗತಿಸುತ್ತಾರೆ. ಮುಂದೆ ಇದನ್ನು ದೀಪಾವಳಿ ಎಂದು ಆಚರಿಸಲಾಯಿತು ಎಂದು ಹೇಳಲಾಗುತ್ತದೆ.
ದೀಪಾವಳಿ ಮಾತ್ರವಲ್ಲದೆ ಹಿಂದೂ ಧರ್ಮದಲ್ಲಿ ದೇವರಿಗೆ ದೀಪ ಬೆಳಗುವುದಕ್ಕೆ ವಿಶೇಷ ಮಹತ್ವವಿದೆ. ದೀಪಾವಳಿಯಲ್ಲಿ ಕ್ಯಾಂಡಲ್ ಹಚ್ಚು ಅಭ್ಯಾಸವಿದ್ದರೂ ಬಹುತೇಕರು ಹಣತೆ ಬೆಳಗುತ್ತಾರೆ. ಹಣತೆಗೆ ಬತ್ತಿ, ಎಣ್ಣೆ ಹಾಕಿ ಬೆಳಗುವಂತೆ ಮಾಡುತ್ತಾರೆ. ಯಾವುದೇ ಎಣ್ಣೆ ಹಾಕಿದ್ರೂ ಬತ್ತಿ ಉರಿಯುತ್ತದೆ, ಆದರೆ ಹಿಂದೂ ಧರ್ಮದಲ್ಲಿ ಹಾಗೂ ಶಾಸ್ತ್ರಗಳ ಪ್ರಕಾರ ಕೆಲವು ಎಣ್ಣೆಯನ್ನು ಮಾತ್ರ ಬಳಸಬೇಕು. ಹಾಗಾದರೆ ದೀಪ ಹಚ್ಚಲು ಯಾವ ಎಣ್ಣೆ ಸೂಕ್ತ ಎಂಬ ವಿವರ ಇಲ್ಲಿದೆ.
ದೇಸಿ ತುಪ್ಪ
ತುಪ್ಪದ ದೀಪ ಹಚ್ಚುವುದು ಬಹಳ ವಿಶೇಷ. ಅದರಲ್ಲೂ ಮನೆಯಲ್ಲೇ ಮಾಡಿದ ದೇಸಿ ತುಪ್ಪದಿಂದ ದೀಪ ಬೆಳಗುವುದು ಉತ್ತಮ. ಇದಕ್ಕೆ ಮೊದಲ ಪ್ರಾಶಸ್ತ್ಯ. ತುಪ್ಪದ ದೀಪವು ಧನಾತ್ಮಕ ಶಕ್ತಿಯೊಂದಿಗೆ ಆಧ್ಯಾತ್ಮಿಕವಾಗಿ ಶಕ್ತಿಯುತವಾಗುತ್ತದೆ. ಅಗ್ನಿಪುರಾಣವು ತುಪ್ಪದ ದೀಪವು ಉತ್ತಮ ಎಂದು ಹೇಳುತ್ತದೆ. ಹಸುವಿನ ತುಪ್ಪದಿಂದ ದೀಪವನ್ನು ಬೆಳಗಿಸುವುದರಿಂದ ಸುತ್ತಮುತ್ತಲಿನ ವಾತಾವರಣದಲ್ಲಿನ ಎಲ್ಲಾ ಸಕಾರಾತ್ಮಕ ಕಂಪನಗಳನ್ನು ಆಕರ್ಷಿಸುತ್ತದೆ. ಇದರಿಂದ ಬಡತನ ಕಡಿಮೆಯಾಗುತ್ತದೆ. ಕುಟುಂಬದಲ್ಲಿ ಸಂಪತ್ತು, ಆರೋಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯೂ ಇದೆ.
ಪಂಚ ದೀಪ ಎಣ್ಣೆ
ಪಂಚ ದೀಪದ ಎಣ್ಣೆಯು ದೀಪ ಬೆಳಗಲು ಅತ್ಯುತ್ತಮ ಎಂದು ಹೇಳಲಾಗುತ್ತದೆ. ಇದು ಮನೆಗೆ ಜ್ಞಾನ, ಆರೋಗ್ಯ ಮತ್ತು ಸಂಪತ್ತನ್ನು ತರುತ್ತದೆ. ಪಂಚ ದೀಪ ಎಣ್ಣೆ ಹೆಸರೇ ಹೇಳುವಂತೆ ಇದು 5 ಎಣ್ಣೆಗಳ ಮಿಶ್ರಣವಾಗಿದೆ. ಪಂಚ ದೀಪದ ಎಣ್ಣೆಯಿಂದ ದೀಪಗಳನ್ನು ಹಚ್ಚುವುದರಿಂದ ನಿಮ್ಮ ಮನೆಗೆ ಸಂತೋಷ, ಆರೋಗ್ಯ, ಸಂಪತ್ತು, ಕೀರ್ತಿ ಮತ್ತು ಸಮೃದ್ಧಿಯನ್ನು ತರುತ್ತದೆ. ತೆಂಗಿನೆಣ್ಣೆ, ಹಸುವಿನ ತುಪ್ಪ, ಮಹುವಾ ಎಣ್ಣೆ, ಹರಳೆಣ್ಣೆ, ಬೇವಿನ ಎಣ್ಣೆ ಈ 5 ಎಣ್ಣೆಗಳ ಮಿಶ್ರಣವಾಗಿದೆ. ಹಸುವಿನ ತುಪ್ಪದ ನಂತರ ದೀಪ ಬೆಳಗಲು ಇದು ಅತ್ಯುತ್ತಮವಾಗಿದೆ.
ಎಳ್ಳೆಣ್ಣೆ
ಭಾರತದಲ್ಲಿ ಬಹುಶಃ ದೀಪ ಹಚ್ಚಲು ಅತಿ ಹೆಚ್ಚು ಬಳಸುವ ಎಣ್ಣೆಗಳಲ್ಲಿ ಎಳ್ಳೆಣ್ಣೆಯು ಒಂದು. ಇದರಿಂದ ದೀಪ ಬೆಳಗಿಸುವುದು ದೋಷ ನಿವಾರಣೆಯಾಗಿ, ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸಬಹುದು ಎಂದು ಹೇಳಲಾಗುತ್ತದೆ. ಎಳ್ಣೆಣ್ಣೆಯಿಂದ ದೀಪ ಬೆಳಗುವುದರಿಂದ ದೀರ್ಘಾವಧಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದು ಪಂಚ ದೀಪದ ಎಣ್ಣೆಗಿಂತ ಅಗ್ಗವಾಗಿದೆ, ಆದರೆ ಸಾಸಿವೆ ಎಣ್ಣೆಗಿಂತ ದುಬಾರಿಯಾಗಿದೆ.
ಸಾಸಿವೆ ಎಣ್ಣೆ
ಸಾಸಿವೆ ಎಣ್ಣೆಯು ದೀಪಗಳನ್ನು ಬೆಳಗಿಸಲು ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ, ಅದು ಎಲ್ಲೆಡೆ ಸುಲಭವಾಗಿ ಲಭ್ಯವಿರುತ್ತದೆ. ಇದರ ಬೆಲೆಯು ಕಡಿಮೆ. ಸಾಸಿವೆ ಎಣ್ಣೆಯನ್ನು ದೀಪಾಲಂಕಾರಕ್ಕೆ ಬಳಸುವುದರಿಂದ ಶನಿ ಗ್ರಹಕ್ಕೆ ಸಂಬಂಧಿಸಿದ ದೋಷಗಳಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ.
ತೆಂಗಿನೆಣ್ಣೆ
ತೆಂಗಿನ ಎಣ್ಣೆಯು ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯವಾದ ಎಣ್ಣೆಯಾಗಿದೆ. ಇದನ್ನು ಪೂಜೆಯ ದೀಪಗಳಲ್ಲಿ ಬಳಸುವುದರಿಂದ ಗಣೇಶನಿಗೆ ಪ್ರಸನ್ನವಾಗುತ್ತದೆ ಎಂದು ಹೇಳಲಾಗುತ್ತದೆ. ಶುದ್ಧ ತೆಂಗಿನೆಣ್ಣೆಯನ್ನು ದೀಪ ಹಚ್ಚಲು ಬಳಸಬಹುದು.
ಇತರ ಎಣ್ಣೆಗಳು
ಬೇವು, ಮಹುವಾ, ಹರಳೆಣ್ಣೆ, ಮಲ್ಲಿಗೆ ಎಣ್ಣೆ ಇತ್ಯಾದಿಗಳು ದೀಪ ಬೆಳಗಿಸಲು ಬಳಸುವ ಕಡಿಮೆ ಬಳಸಲಾಗುತ್ತದೆ. ಆದರೆ ಇವುಗಳನ್ನು ಬಳಸಬಹುದು.
ಯಾವ ಎಣ್ಣೆಯಿಂದ ದೀಪ ಹಚ್ಚಬಾರದು
ಕಡಲೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ತಾಳೆ ಎಣ್ಣೆ, ಸಸ್ಯಜನ್ಯ ಎಣ್ಣೆಗಳು, ರೈಸ್ ಬ್ರಾನ್ ಆಯಿಲ್, ಸಿಂಥೆಟಿಕ್ ಎಣ್ಣೆಗಳು, ಹತ್ತಿ ಬೀಜದ ಎಣ್ಣೆಗಳನ್ನು ಯಾವುದೇ ಕಾರಣಕ್ಕೂ ದೀಪ ಹಚ್ಚಲು ಬಳಸಬೇಡಿ.
(ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ)