Garuda Purana: ಮನುಷ್ಯ ಮರಣ ಹೊಂದುವಾಗ ಕಣ್ಣುಗಳು ತೇಲುವುದೇಕೆ: ಗರುಡ ಪುರಾಣದಲ್ಲಿ ಇದರ ಬಗ್ಗೆ ಹೇಳಿರುವುದೇನು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Garuda Purana: ಮನುಷ್ಯ ಮರಣ ಹೊಂದುವಾಗ ಕಣ್ಣುಗಳು ತೇಲುವುದೇಕೆ: ಗರುಡ ಪುರಾಣದಲ್ಲಿ ಇದರ ಬಗ್ಗೆ ಹೇಳಿರುವುದೇನು?

Garuda Purana: ಮನುಷ್ಯ ಮರಣ ಹೊಂದುವಾಗ ಕಣ್ಣುಗಳು ತೇಲುವುದೇಕೆ: ಗರುಡ ಪುರಾಣದಲ್ಲಿ ಇದರ ಬಗ್ಗೆ ಹೇಳಿರುವುದೇನು?

Garuda Purana: ಮನುಷ್ಯ ಸತ್ತಾಗ ಕೆಲವರ ಕಣ್ಣು ಮುಚ್ಚುತ್ತದೆ, ಕೆಲವರ ಕಣ್ಣು ತೆರೆದಿರುತ್ತದೆ. ಆದರೆ ಸಾಯುವ ಸಮಯದಲ್ಲಿ ಕೆಲವರ ಕಣ್ಣು ತೇಲುತ್ತದೆ. ಇದಕ್ಕೆ ಕಾರಣ ಏನು ಎಂಬುದನ್ನು ಗರುಡ ಪುರಾಣದಲ್ಲಿ ವಿವರಿಸಲಾಗಿದೆ. ಭಗವಾನ್‌ ವಿಷ್ಣುವು ಈ ವಿಚಾರವನ್ನು ತನ್ನ ವಾಹನವಾದ ಗರುಡನಿಗೆ ಈ ವಿಚಾರವಾಗಿ ವಿವರಿಸುತ್ತಾನೆ.

ಗರುಡ ಪುರಾಣ
ಗರುಡ ಪುರಾಣ

Garuda Purana: ಹಿಂದೂ ಧರ್ಮದಲ್ಲಿ ಅನೇಕ ಪುರಾಣ ಕಥೆಗಳಿವೆ. ದೇವತೆಗಳು, ಧರ್ಮ, ಪೂಜೆ ಪುನಸ್ಕಾರ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಈ ಪುರಾಣಗಳಲ್ಲಿ ವಿವರಿಸಲಾಗಿದೆ. ಇದರಲ್ಲಿ ಗರುಡ ಪುರಾಣ ಕೂಡಾ ಒಂದು. ವಿಷ್ಣುವಿನ ವಾಹನ ಗರುಡನು ಸಾವು, ಯಮಲೋಕ, ಸ್ವರ್ಗ, ನರಕದ ಬಗ್ಗೆ ವಿಷ್ಣುವಿನಲ್ಲಿ ಕೇಳುತ್ತಾನೆ. ಗರುಡನ ಪ್ರಶ್ನೆಗಳಿಗೆ ವಿಷ್ಣುವು ಎಲ್ಲಾ ವಿವರವಾಗಿ ಉತ್ತರಿಸುತ್ತಾನೆ.

ಸಾಯುವಾಗ ಕಣ್ಣುಗಳು ಏಕೆ ತೇಲುತ್ತವೆ ಅನ್ನೋದು ಗರುಡನಿಗೆ ವಿಷ್ಣು ಹೇಳಿರುವ ವಿಚಾರಗಳಲ್ಲಿ ಒಂದು. ಮನುಷ್ಯ ಸಾಯುವಾಗ ದೇಹದಲ್ಲಿ ಅನೇಕ ಅಸಹಜ ಬದಲಾವಣೆಗಳು ಸಂಭವಿಸುತ್ತವೆ, ಅವುಗಳಲ್ಲಿ ಕಣ್ಣುಗಳು ತೇಲುವುದು ಅಥವಾ ಬಾಯಿ ವಕ್ರವಾಗುವುದು ಕೂಡಾ ಒಂದು. ಈ ರೀತಿ ಆಗಲು ಕಾರಣಗಳೇನು ಎಂದು ಗರುಡ ಪುರಾಣದಲ್ಲಿ ವಿವರಿಸಲಾಗಿದೆ. ಮರಣವು ಪ್ರತಿಯೊಬ್ಬ ವ್ಯಕ್ತಿಯು ಎದುರಿಸಬೇಕಾದ ಪ್ರಕ್ರಿಯೆ.

ಭೂಮಿಯಲ್ಲಿ ಹುಟ್ಟಿದ ಪ್ರತಿ ಜೀವಿಯ ಮರಣ ನಿಶ್ಚಿತ. ಮನುಷ್ಯ ಭೂಮಿಯ ಮೇಲೆ ಹುಟ್ಟುವ ರೀತಿ, ಅವನ ಸಾವು ಅದಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಮಗು ಜನಿಸಿದಾಗ, ಅವನು ಅಳುತ್ತಾ ಭೂಮಿಗೆ ಬರುತ್ತಾನೆ ಮತ್ತು ಸಾಯುವ ಸಮಯದಲ್ಲಿ ಅವನ ಉಸಿರಾಟವು ನಿಲ್ಲುತ್ತದೆ. ಇದರೊಂದಿಗೆ, ಸಾವಿನ ಸಮಯದಲ್ಲಿ ದೇಹದಲ್ಲಿ ಇಂತಹ ಅನೇಕ ಅಸಾಮಾನ್ಯ ಬದಲಾವಣೆಗಳು ಕಂಡುಬರುತ್ತವೆ, ಇದು ನಿಮಗೆ ಆಶ್ಚರ್ಯ ಎನಿಸಿದರೂ ಸತ್ಯ.

ಪಾಪ ಕರ್ಮಗಳ ಅನುಸಾರ ಯಾತನೆ ಅನುಭವಿಸುವ ಮನುಷ್ಯ

ಸಾವಿನ ಸಮಯದಲ್ಲಿ ಕೆಲವರ ಕಣ್ಣುಗಳು ತೇಲುವುದನ್ನು ನೀವು ನೋಡಿರಬಹುದು ಅಥವಾ ಕೇಳಿರಬಹುದು. ಆದರೆ ಇದು ಏಕೆ ಸಂಭವಿಸುತ್ತದೆ? ಈ ರಹಸ್ಯವನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ. ಸರಳವಾಗಿ ಹೇಳುವುದಾದರೆ, ಸಾವಿನ ಸಮಯದಲ್ಲಿ ಆತ್ಮವು ದೇಹವನ್ನು ತೊರೆಯುವುದರಿಂದ ಈ ಅಸಹಜ ಸಂಗತಿಗಳು ಸಂಭವಿಸುತ್ತವೆ. ಆದರೆ ಪ್ರಶ್ನೆಯೆಂದರೆ, ಸಾವಿನ ಸಮಯದಲ್ಲಿ ಆತ್ಮವು ಪ್ರತಿಯೊಬ್ಬ ವ್ಯಕ್ತಿಯ ದೇಹವನ್ನು ಬಿಟ್ಟು ಹೋಗುತ್ತದೆ. ಆದರೆ ಕೆಲವರಿಗೆ ಈ ರೀತಿ ಸಂಭವಿಸುವುದಿಲ್ಲ.

ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಮಾಡಿದ ಪಾಪ ಕರ್ಮಗಳ ಅನುಸಾರವಾಗಿ ಆತನಿಗೆ ಸಾವಿನ ಸಮಯದಲ್ಲಿ ಯಾತನೆ ಉಂಟಾಗುತ್ತದೆ. ಈ ಸಮಯದಲ್ಲಿ ಸಾಯುವ ವ್ಯಕ್ತಿಯು ತನ್ನನ್ನು ಕರೆದೊಯ್ಯಲು ಬರುವ ಯಮದೂತರಿಗೆ ಏನನ್ನೋ ಹೇಳಲು ಬಯಸುತ್ತಾನೆ ಆದರೆ ಅದು ಸಾಧ್ಯವಾಗುವುದಿಲ್ಲ. ಯಾವ ವ್ಯಕ್ತಿ ಭ್ರಮೆಯಲ್ಲೇ ಜೀವನದ ಉದ್ದಕ್ಕೂ ಬದುಕುವನೋ. ತಮ್ಮ ಕುಟುಂಬ ಅಥವಾ ಪ್ರೀತಿಪಾತ್ರರೊಂದಿಗೆ ಹೆಚ್ಚು ಮೋಹ ಹೊಂದಿರುವವನೋ ಅಂತಹ ವ್ಯಕ್ತಿಯ ಕಣ್ಣುಗಳು ಅಂತಿಮವಾಗಿ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಅವರಿಗೆ ಸಾಯುವ ಸಮಯದಲ್ಲಿ ಕಿವಿ ಕೇಳುವುದಿಲ್ಲ ಮತ್ತು ಅವರ ಗಂಟಲು ಕೂಡಾ ಮಾತನಾಡದಂತೆ ನಿಂತು ಹೋಗುತ್ತದೆ. ಯಮದೂತರು ದೇಹದಿಂದ ಆತ್ಮವನ್ನು ಬಲವಾಗಿ ಬೇರ್ಪಡಿಸುತ್ತಾರೆ. ಅಂತವರ ದೇಹದಿಂದ ಆತ್ಮವು ಹೊರಬಂದ ತಕ್ಷಣ, ಅವರ ಕಣ್ಣುಗಳು ತೇಲುತ್ತವೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.