ಚಿಕಿತ್ಸೆ ಇಲ್ಲದೆ ರೋಗ ಕಡಿಮೆ ಮಾಡುವ ವಿಧಾನ; ಏನಿದು ರೇಖಿ ಹೀಲಿಂಗ್? ಅಧ್ಯಾತ್ಮಿಕ ಥೆರಪಿಯ ಮಹತ್ವ ತಿಳಿಯಿರಿ
ಶತಮಾನಗಳ ಇತಿಹಾಸ ಇರುವ ರೇಖಿ ಹೀಲಿಂಗ್ ವಿಶ್ವಾದ್ಯಂತ ಖ್ಯಾತಿ ಗಳಿಸುತ್ತಿದೆ. ಮನುಷ್ಯನ ಒಟ್ಟಾರೆ ಆರೋಗ್ಯ ಸುಧಾರಿಸಲು ಇದು ನೈಸರ್ಗಿಕವಾಗಿ ಮಾರ್ಗವಾಗಿದೆ. ಹಳೆಯ ಅಭ್ಯಾಸಗಳಿಗೆ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ. ಏನಿದು ರೇಖಿ ಹೀಲಿಂಗ, ಥೆರಪಿ ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ, ಇದರ ಮಹತ್ವವನ್ನು ತಿಳಿಯಿರಿ.
ಯಾವುದೇ ರೀತಿಯ ರೋಗಗಳಿಗೆ ಅಧ್ಯಾತ್ಮಿಕತೆಯಲ್ಲಿ ಪರಿಹಾರವಿದೆ ಎಂದು ಹೇಳಲಾಗುತ್ತದೆ. ಅಧ್ಯಾತ್ಮಿಕತೆಯಿಂದ ಶಾಂತಿ, ನೆಮ್ಮದಿ ಸಿಗುತ್ತದೆ. ಔಷಧವನ್ನ ನೀಡದೆ ರೋಗದ ಪ್ರಮಾಣವನ್ನು ಕಡಿಮೆ ಮಾಡುವ ಶಕ್ತಿ ಅಧ್ಯಾತ್ಮಿಕತೆಗೆ ಇದೆ ಅನ್ನೋದು ಕೂಡ ದಶಕಗಳ ಹಿಂದೆಯೇ ಸಾಬೀತಾಗಿದೆ. ನೇರ ಚಿಕಿತ್ಸೆ ನೀಡದೆಯೇ ರೋಗದ ಪ್ರಮಾಣವನ್ನು ಕಡಿಮೆ ಮಾಡಬಹುದು. ಅದುವೇ ರೇಖಿ ಹೀಲಿಂಗ್ (Reiki Healing) ಮೂಲಕ. ರೇಖಿ ಎಂದರೇನು ರೇಖಿ ಹೀಲಿಂಗ್ ಹೇಗೆ ಕೆಲಸ ಮಾಡುತ್ತೆ ಅನ್ನೋದರ ಉಪಯುಕ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ರೇಖಿ ಜಪಾನೀಸ್ ಹೀಲಿಂಗ್ ವಿಧಾನವನ್ನು ಉಲ್ಲೇಖಿಸುತ್ತೆ. ಇದು ದೇಹದ ಶಕ್ತಿಯನ್ನು ಸಮತೋಲನಗೊಳಿಸಲು ತರಬೇತಿ ಪಡೆದ ವೈದ್ಯರಿಂದ ಕೈ ಚಲನೆಗಳನ್ನು ಬಳಸಲಾಗುತ್ತದೆ. ಇದು ಕಲ್ಪನೆಯನ್ನು ಸರಳವಾಗಿಸಿ, ವಿಶ್ರಾಂತಿಯನ್ನು ಉತ್ತೇಜಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯವನ್ನು ಸುಧಾರಿಸುವಂತೆ ಮಾಡುತ್ತದೆ.
ರೇಖಿ ಹೀಲಿಂಗ್ ಎಂದರೇನು?
ರೇಖಿ ಎಂಬ ಪದವು ಎರಡು ಜಪಾನೀ ಪದಗಳಿಂದ ಬಂದಿದೆ. ರೇ ಎಂದರೆ ದೇವರ ಬುದ್ಧಿವಂತಿಕೆ ಅಥವಾ ಉನ್ನತ ಶಕ್ತಿ ಎಂದರ್ಥ. ಇನ್ನ ಕಿ ಎಂದರೆ ಜೀವನ ಶಕ್ತಿ. ಈ ಕಲಾ ಪ್ರವಾಕರ 1900 ರ ದಶಕದ ಆರಂಭದಿಂದ ತನ್ನ ಬೇರುಗಳನ್ನು ಗುರುತಿಸುತ್ತದೆ. ಸಾವಿರಾರು ವರ್ಷಗಳಿಂದ ಇತರ ಸಂಸ್ಕೃತಿಗಳಲ್ಲಿ ಇದೇ ರೀತಿಯ ತಂತ್ರಗಳನ್ನು ಬಳಸಲಾಗಿದೆ.
ರೇಖಿ ಹೀಲಿಂಗ್ ಹೇಗೆ ಕೆಲಸ ಮಾಡುತ್ತದೆ ಅನ್ನೋದರ ವಿವರ ಇಲ್ಲಿದೆ
ರೇಖಿ ಶಕ್ತಿಯ ವರ್ಗಾವಣೆಯ ಮೂಲಕ ರೋಗ ಗುಣವಾಗುತ್ತದೆ. ಇಲ್ಲಿ ವೈದ್ಯನು ರೋಗಿಗೆ ಜೀವ ಶಕ್ತಿಯ ಚಾಲನ್ ಆಗಿ ಕಾರ್ಯನಿರ್ವಹಿಸುತ್ತಾನೆ. ವೈದ್ಯನು ಗುಣಪಡಿಸುವಿಕೆಯನ್ನು ಉಂಟುಮಾಡುವುದಿಲ್ಲ. ಅಥವಾ ಗುಣಪಡಿಸುವ ಶಕ್ತಿಯ ಮೂಲವೂ ಅಲ್ಲ. ದೇಹದ ಕೆಲವು ಬಿಂದುಗಳಲ್ಲಿ ತಮ್ಮ ಕೈಗಳನ್ನು ಇರಿಸಿ ರೋಗಿದ ದೇಹದಲ್ಲಿ ಸಮತೋಲನವನ್ನು ತರಲು ಪ್ರಯತ್ನಿಸುತ್ತಾರೆ. ಇದೊಂದು ನೈಸರ್ಗಿಕವಾಗಿ ರೋಗವನ್ನು ಗುಣಪಡಿಸುವ ವಿಧಾನವಾಗಿದೆ.
ರೇಖಿ ಹೀಲಿಂಗ್ ಆರೋಗ್ಯ ಪ್ರಯೋಜನಗಳು
1. ದೈಹಿಕ ಯೋಗಕ್ಷೇಮ - ನೋವು, ಆತಂಕ ಮತ್ತು ಆಯಾಸವನ್ನು ನಿವಾರಿಸಲು ರೇಖಿ ಹೀಲಿಂಗ್ ಸಹಾಯ ಮಾಡುತ್ತದೆ. ದೇಹದ ಶಕ್ತಿಯ ಹರಿವನ್ನು ಸಮತೋಲನಗೊಳಿಸುವುದು ದೈಹಿಕ ಪರಿಹಾರಕ್ಕೆ ಕಾರಣವಾಗಬಹುದು. ಶಸ್ತ್ರಚಿಕಿತ್ಸೆಯ ನಂತರ ಅಥವಾ ದೀರ್ಘಕಾಲದ ನೋವು ನಿರ್ವಹಣೆಯ ಸಮಯದಲ್ಲಿ ನೋವು ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಮೂಲಕ ರೇಖಿ ಚಿಕಿತ್ಸೆಗಳು ಪ್ರಯೋಜನಕಾರಿ ಎಂದು ಕೆಲವು ಅಧ್ಯಯನಗಳು ಹೇಳಿವೆ.
2. ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮ - ಖಿನ್ನತೆಯ ವಿರುದ್ಧ ಹೋರಾಟಲು ಇದು ಸಹಾಯ ಮಾಡುತ್ತದೆ. ಮನಸ್ಥಿತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ರೇಖಿ ಹೀಲಿಂಗ್‌ನಲ್ಲಿ ಖಿನ್ನತೆಯ ಲಕ್ಷಣಗಳನ್ನು ಸೋಲಿಸಲು ಸಹಾಯ ಮಾಡುವ ಮೂಲಕ ನಿದ್ರೆಯ ಗುಣಮಟ್ಟನ್ನು ಸುಧಾರಿಸುತ್ತದೆ. ಹತಾಶೆಯ ಭಾವನೆಗಳನ್ನು ದೂರ ಮಾಡಿ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ.
3. ಅಧ್ಯಾತ್ಮಿಕ ಮತ್ತು ವೈಯಕ್ತಿಕ ಬೆಳವಣಿಗೆ - ವಿಶ್ರಾಂತಿ ಮತ್ತು ಸಾವಧಾನತೆಯನ್ನು ಇದು ಉತ್ತೇಜಿಸುತ್ತದೆ. ರೇಖಿ ಹೀಲಿಂಗ್ ಆಳವಾದ ವಿಶ್ರಾಂತಿಯನ್ನು ಉತ್ತೇಜಿಸುತ್ತದೆ. ಜೀವನದ ಒತ್ತಡಗಳನ್ನು ಬಿಡುಗಡೆ ಮಾಡಿ ವೈಯಕ್ತಿಕ ಸಂಪರ್ಕ ಬೆಳವಣಿಗೆ ಮತ್ತು ಅಧ್ಯಾತ್ಮಿಕ ಬದಲಾವಣೆಗೆ ಕಾರಣವಾಗಬಹುದು. ಪ್ರಜ್ಞೆಯನ್ನು ಉತ್ತೇಜಿಸುತ್ತದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)